RBI Ban Rs2000 Note: 2 ಸಾವಿರ ನೋಟು ಬ್ಯಾನ್! ನಿಮ್ಮತ್ರ 2000 ನೋಟಿದ್ದರೆ ಏನು ಮಾಡಬೇಕು? ಚಲಾವಣೆ ಸ್ಥಗಿತಗೊಳಿಸಿ ಆದೇಶ ಹೊರಡಿಸಿದ RBI

RBI Ban Rs2000 Note: 2016ನೇ ಇಸವಿಯಲ್ಲಿ ದೇಶಕ್ಕೆ ಒಂದು ದೊಡ್ಡ ಶಾಕ್ ಎದುರಾಗಿತ್ತು. ಅದೇನಪ್ಪ ಅಂದ್ರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡೋ ಆದೇಶ ಹೊರಡಿಸಿತ್ತು. ಹೌದು 2016ರಲ್ಲಿ 500 ಹಾಗೂ 1000 ಮುಖಬೆಲೆಯ ನೋಟು ಅಮಾನ್ಯೀಕರಣ ಮಾಡಲಾಗಿತ್ತು. ಅದಾದ ನಂತರ ಹೊಸದಾಗಿ 2000 ರೂಪಾಯಿ ಮುಖ ಬೆಳೆಯ ನೋಟುಗಳನ್ನು ಹೊಸದಾಗಿ ಪರಿಚಯಿಸಿತ್ತು. ಇದೀಗ 2ಸಾವಿರ ಮುಖ ಬೆಲೆಯ ನೋಟುಗಳ ಚಲಾವಣೆ ನಿಲ್ಲಿಸಿ ವಾಪಸ್ ಪಡೆಯುವುದಾಗಿ ಆರ್‌ಬಿಐ ತಿಳಿಸಿದೆ. 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ವಾಪಸ್‌ ಪಡೆದಿದೆ. ಇನ್ಮುಂದೆ ಗ್ರಾಹಕರಿಗೆ 2,000 ರೂ. ಮುಖಬೆಲೆಯ ನೋಟುಗಳನ್ನು ನೀಡದಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಬ್ಯಾಂಕ್‌ಗಳಲ್ಲಿ 2000 ರೂ. ನೋಟ್ ಬದಲಿಸಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಅವಕಾಶವಿದ್ದು, ಅಕ್ಟೋಬರ್ 1ರಿಂದ ನೋಟ್ ಚಲಾವಣೆಯನ್ನು ಸಂಪೂರ್ಣ ಬ್ಯಾನ್ ಮಾಡಲಾಗುವುದು ಎಂದು ಆರ್‌ಬಿಐ ಹೇಳಿದೆ.

WhatsApp Group Join Now
Telegram Group Join Now

ನಿಮ್ಮ ಬಳಿ ಎರಡು ಸಾವಿರ ನೋಟುಗಳು ಇದ್ದಾರೆ ಏನು ಮಾಡಬೇಕು?

ಸದ್ಯ ದೇಶದಲ್ಲಿ ಚಲಾವಣೆಯಲ್ಲಿರುವ 2,000 ರೂ. ಮುಖಬೆಲೆಯ ನೋಟುಗಳಲ್ಲಿ ಶೇ.89ರಷ್ಟು ನೋಟುಗಳು 2017ರ ಮಾರ್ಚ್​ಗೆ ಮುಂಚೆ ಮುದ್ರಿಸಿ ಬಿಡುಗಡೆ ಮಾಡಿದವುಗಳಾಗಿವೆ. ಹೀಗಾಗಿ 2,000 ರೂ. ನೋಟುಗಳ ಕಾಲಾವಧಿಯು 4-5 ವರ್ಷ ಮಾತ್ರ ಇತ್ತು. ಹೀಗಾಗಿ, ಈ ನೋಟುಗಳನ್ನು ಹಿಂಪಡೆಯಲಾಗುತ್ತಿದೆ. ಹೀಗಾಗಿ ಗ್ರಾಹಕರು ಕೂಡ ಆತಂಕ ಪಡುವ ಅಗತ್ಯವಿಲ್ಲ,ನಿಮ್ಮಲ್ಲಿರುವ 2000 ಮುಖ ಬೆಳೆಯ ನೋಟುಗಳನ್ನ ನೋಟು ಬದಲಾಯಿಸಿಕೊಳ್ಳಲು ಸೆಪ್ಟೆಂಬರ್ 30 ರವರೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ಸೆಪ್ಟೆಂಬರ್ 30ರ ಒಳಗಾಗಿ ನೀವು ನಿಮ್ಮಲ್ಲಿ 2000 ಮುಖ ಬೆಲೆಯ ನೋಟುಗಳಿದ್ರೆ ಬದಲಾಯಿಸಿಕೊಳ್ಳಬಹುದು ಮತ್ತು ದಿನಕ್ಕೆ 20ಸಾವಿರದವರೆಗೆ ಮಾತ್ರ ನೀವು ನೋಟುಗಳನ್ನ ಬದಲಾಯಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಅತೀ ಹೆಚ್ಚು 2ಸಾವಿರ ಮುಖ ಬೆಲೆಯ ನೋಟುಗಳನ್ನ ಹೊಂದಿರುವವರು, ಸ್ವಲ್ಪ ಸ್ವಲ್ಪವಾಗಿಯೇ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಪಿಂಕ್ ಸುಂದರಿಯನ್ನ ಬ್ಯಾನ್ ಮಾಡಿದ ಆರ್ ಬಿಐ

ಹೌದು ದೇಶದಲ್ಲಿ ಕಪ್ಪುಹಣ ತಡೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಜೊತೆಗೆ ಖೋಟಾ ನೋಟುಗಳನ್ನ ತಡೆಗಟ್ಟಲು ಇದೀಗ RBI ಒಂದು ಹೆಜ್ಜೆ ಮುಂದೆ ಹೋಗಿ ಇದೀಗ ಪಿಂಕ್ ಸುಂದರಿಯನ್ನೇ ಬ್ಯಾನ್ ಮಾಡಿ ಆದೇಶವನ್ನ ಹೊರಡಿಸಿದ್ದಾರೆ. ದೇಶದಲ್ಲಿ ಈಗಾಗ್ಲೇ 2ಸಾವಿರ ಮುಖ ಬೆಲೆ ಖೋಟಾ ನೋಟುಗಳು ಹೆಚ್ಚಾಗಿದ್ದು ಇವುಗಳಿಗೆ ಕಡಿವಾಣ ಹಾಕಿ ಆರ್ಥಿಕತೆಯನ್ನ ಹತೋಟಿಗೆ ತರುವ ಉದ್ದೇಶವನ್ನ ಹೊಂದಿರುವ RBI ನೋಟು ಅಮಾನೀಕರಣಕ್ಕೆ ಮುಂದಾಗಿದೆ. ಅಲ್ದೇ ಈ ಹಿಂದಿನ ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ಆದ ತೊಂದರೆಗಳು ಸಾವು ನೋವುಗಳು ಸಂಭವಿಸದಂತೆ ಎಚ್ಚರವಹಿಸಿರುವ RBI ಅಗತ್ಯ ಮುಂಜಾಗ್ರತಾ ಕ್ರಮವನ್ನ ವಹಿಸಿದ್ದು, ಇದನ್ನ ದೇಶದ ಜನ ಯಾವ ರೀತಿ ಸ್ವೀಕರಿಸುತ್ತಾರೋ ಅಥವಾ ಪಾಲಿಸುತ್ತಾರೋ ಕಾದು ನೋಡಬೇಕಿದೆ..

ಇದನ್ನೂ ಓದಿ: ರಾಜ್ಯದಲ್ಲಿ ಸಿ.ಎಂ ಸಿದ್ದರಾಮಯ್ಯ ಆಗುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಬಾರಿ ಕುಸಿತ.!! ಎಷ್ಟಿದೆ ಇಂದಿನ ಚಿನ್ನದ ಬೆಲೆ? 

ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಬೇಕು ಈ ಕಾರ್ಡ್! 2ಸಾವಿರ ಪ್ರತಿ ತಿಂಗಳು ನಿಮ್ಮ ಅಕೌಂಟ್ ಗೆ ಬರ್ಬೇಕು ಅಂದ್ರೆ ಏನ್ ಮಾಡ್ಬೇಕು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram