Home Loan: ಪ್ರತಿಯೊಬ್ಬರಿಗೂ ಸ್ವಂತ ಮನೆ ತಮ್ಮ ಇಷ್ಟದ ಮನೆ ಕನಸಿನ ಮನೆ ಹೀಗೆ ಇರಬೇಕು ಆಗೇ ಇರಬೇಕು ಅನ್ನುವ ಆಸೆ ಇದ್ದೆ ಇರುತ್ತೆ. ಅದ್ರಲ್ಲೂ ಈ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಕೂಡ ಸ್ವಂತ ಮನೆಯ ಕನಸ್ಸನ್ನ ಕಂಡಿರುತ್ತಾರೆ. ಅದಕ್ಕಾಗಿ ಕೆಲವೊಂದಷ್ಟು ಉಳಿತಾಯ ಕೂಡ ಮಾಡುತ್ತಿರುತ್ತಾರೆ. ಆದ್ರೆ ಆ ಉಳಿತಾಯದ ಹಣದಲ್ಲೇ ಈಗೀನ ಜಮಾನದಲ್ಲಿ ಮನೆ ಕಟ್ಟುವುದು ಬಹಳಷ್ಟು ಕಷ್ಟ. ಹೀಗಾಗಿ ಸಾಕಷ್ಟು ಜನ ಹೋಮ್ ಲೋನ್ ನತ್ತ ಗಮನಕೊಡುತ್ತಾರೆ. ಅಲ್ಲದೇ ಸಮಯಕ್ಕೆ ಸರಿಯಾಗಿ ಹಣ ಕೈ ಸೇರುತ್ತೆ ಅಂದ್ರೆ ಅದು ಹೋಮ್ ಲೋನ್ ನಲ್ಲಿ ಮಾತ್ರ ಅಂತ ಬಹಳಷ್ಟು ಜನ ನಂಬಿದ್ದಾರೆ.
ಹೌದು ತಿಂಗಳ ಸಂಬಳದಲ್ಲಿ ಇಂತೀಷ್ಟು ಹಣ ಅಂತ ಕಟ್ಟಿದರೆ ಆಯ್ತು ಬಿಡು ಹೇಗೋ ತಿರುತ್ತೇನೆ ಅನ್ನೋದು ಕೆಲವರ ಲೆಕ್ಕಾಚಾರ. ಆದ್ರೆ ನಮ್ಮ ಲೆಕ್ಕಾಚಾರದಿಂದ ಬ್ಯಾಂಕ್ ನವರಿಗೆ ನಾವೇಸ್ಟು ಲಾಭ ಮಾಡಿಕೊಡುತ್ತಿದ್ದೇವೆ ಅನ್ನೋದು ಹಲವರಿಗೆ ಗೊತ್ತಿಲ್ಲ. 25-30 ಲಕ್ಷ ಸಾಲ ಪಡೆದು 60-70ಲಕ್ಷದವರೆಗೂ ಮರುಪಾವತಿ ಮಾಡಿರುವ ಅದೆಷ್ಟು ಉದಾಹರಣೆಗಳಿವೆ. ಹೌದು ಸಮಯಕ್ಕೆ ಸರಿಯಾಗಿ ಕೆಲವೊಂದಷ್ಟು ದಾಲಲೆಗಳನ್ನ ಕೊಟ್ಟರೆ ಸಾಕು ನಮಗೆ ನಮ ಕನಸ್ಸಿನ ಮನೆ ಕಟ್ಟಿಕೊಳ್ಳಲ್ಲೂ ಸಾಧ್ಯವಾಗುತ್ತೆ ಅಂತ ಅದೆಷ್ಟೋ ಮಧ್ಯಮವರ್ಗದ ಕುಟುಂಬಗಳು ನಂಬಿ ಬ್ಯಾಂಕ್ ಗಳ ಮೊರೆ ಹೋದ್ರೆ ಬ್ಯಾಂಕ್ ನವ್ರು ಕೊಟ್ಟು ಕಿತ್ತುಕೊಳ್ಳುವಂತೆ ಮಾಡುತ್ತಾರೆ. ಖಂಡಿತಾವಾಗಿಯೂ ಒಂದಕ್ಕೆ ಎರಡು ಪಟ್ಟು ಮೂರು ಪಟ್ಟಿನಷ್ಟು ಅತೀ ಹೆಚ್ಚು ಹಣವನ್ನ ನೀವು ಕಟ್ಟಬೇಕಾಗುತ್ತೆ ಎಚ್ಚರ ಹೀಗಾಗಿ ಈ ಸಣ್ಣ ವಿಚಾರವನ್ನ ಒಮ್ಮೆ ತಿಳಿದುಕೊಂಡು ಲೋನ್ ತೆಗೆದುಕೊಳ್ಳಬೇಕಾ ಬೇಡ್ವಾ ಅಂತ ನೀವೇ ನಿರ್ಧಾರ ಮಾಡಿ.
ಬಡ್ಡಿದರದ ಹೆಸರಲ್ಲಿ ಹಾಕ್ತಾರೆ ಮಕ್ಮೇಲೆ ಟೋಪಿ..
ನಾವು ಸಾಮಾನ್ಯವಾಗಿ ಕೈ ಸಾಲ ಮಾಡಿ ಮೈ ಸುಟ್ಟುಕೊಳ್ಳೋದು ಬೇಡ ಅಂತ ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳ ಮೂಲಕ ಸಾಲವನ್ನ ಪಡೆದುಕೊಳ್ಳೋಣ ಅಂದುಕೊಳ್ಳುತ್ತೇವೆ. ಆದರೆ ಇಲ್ಲೇ ನೋಡಿ ನಾವು ಮೋಸ ಹೋಗೋದು, ದುಪ್ಪಟ್ಟು ವಸೂಲಿಗೆ ಸಿಕ್ಕಿ ಹಾಕಿಕೊಳ್ಳುತ್ತೇವೆ. ಕೈ ಸಲ ತೆಗೆದುಕೊಂಡ್ರೆ ಬಡ್ಡಿ ಕಟ್ಟೋದು ನಮಗೆ ಜಾಸ್ತಿ ಅನ್ಸುತ್ತೆ ಆದ್ರೆ ಬ್ಯಾಂಕ್ ನವರು EMI ಹೆಸರಲ್ಲಿ ಮೂರೂಪಟ್ಟು ಹಣವನ್ನ ಬಡ್ಡಿಯ ಜೊತೆಗೆ ಕಟ್ಟಿಸಿಕೊಂಡಿರುತ್ತಾರೆ. ಹೌದು ಪ್ರಸ್ತುತ ಅಂದ್ರೆ ಸದ್ಯಕ್ಕೆ ಗೃಹಸಾಲದ ಮೇಲಿನ ಬಡ್ಡಿಯ ದರ 8.5% -10.25% ರವರೆಗಿದೆ. ಅಂದ್ರೆ ಸದ್ಯಕ್ಕೆ ನೀವು ಒಂದು 30ಲಕ್ಷ ಸಾಲವನ್ನ ಗೃಹಸಾಲದ ಅಡಿಯಲ್ಲಿ ತೆಗೆದುಕೊಂಡಾಗ, ನಿಮಗೆ ತಿಂಗಳಿಗೆ ಬರುವ ಸಂಬಳ, ಮನೆಯ ನಿರ್ವಹಣೆ, ಸಣ್ಣ ಪುಟ್ಟ ಖರ್ಚು, ಮಕ್ಕಳ ವಿದ್ಯಾಭ್ಯಾಸ ಹೀಗೆ ಸಾಕಷ್ಟಿರುತ್ತೆ ಇದೆಲ್ಲವನ್ನ ಗಮನದಲ್ಲಿಟ್ಟುಕೊಂಡು EMI ಎಷ್ಟು ಕಟ್ಟಬಹುದು ಅಂತ ನಿರ್ಧಾರ ಮಾಡ್ತೀರಾ ಬ್ಯಾಂಕ್ ನವರು ಕೂಡ 2ವರ್ಷದಿಂದ ಹಿಡಿದು 40ವರ್ಷದವರೆಗೂ ನಿಮಗೆ ಸಲ ಮರುಪಾವತಿಗೆ ಕಲಾವಕಾಶವನ್ನ ಕೊಡುತ್ತಾರೆ.
ಅಂದಹಾಗೆ ಅದು ಕೂಡ ಹಣ ಕಟ್ಟುವುದರ ಮೇಲೆ ನಿರ್ಧಾರವಾಗುತ್ತೆ. ಉದಾಹರಣೆಗೆ 30ಲಕ್ಷ ಸಾಲಕ್ಕೆ 40ವರ್ಷಗಳ ಕಾಲವಾಧಿಗೆ ನೀವು ತಿಂಗಳಿಗೆ 12ಸಾವಿರ ಹಣವನ್ನ ಕಟ್ಟುತ್ತಿದ್ರೆ 40 ವರ್ಷಕ್ಕೆ ಬ್ಯಾಂಕ್ ಗೆ ನೀವು ಕಟ್ಟುವ ಹಣ ಬರೋಬ್ಬರಿ 60ಲಕ್ಷದಷ್ಟಿರುತ್ತೆ. ಅದೇ ರೀತಿ ಕಡಿಮೆ ವರ್ಷಕ್ಕೆ EMI ತೆಗೆದುಕೊಳ್ಳೋಣ ಅಂತ EMI ಹಣವನ್ನ ಹೆಚ್ಚಿಗೆ ಕಟ್ಟಿದ್ರು ಕೂಡ ಅಲ್ಲಿಯೂ ನೀವು ದುಪ್ಪಟ್ಟು ಹಣವನ್ನ ಕಟ್ಟಿರುತ್ತೀರಾ. ಹೌದು ಇದೆ 30ಲಕ್ಷಕ್ಕೆ 20 ವರ್ಷದ ಸಮಯದಲ್ಲಿ ತಿಂಗಳಿಗೆ ಕನಿಷ್ಠ ಅಂದ್ರು 25ಸಾವಿರ ಕಟ್ಟಿದರೆ ಇಲ್ಲಿಯೂ ಸಹ 60ಲಕ್ಷ ಹಾಸುಪಾಸಿನಷ್ಟು ಹಣವನ್ನ ಕಟ್ಟಬೇಕು. ಹೀಗಾಗಿ ಒಮ್ಮೆ ಯೋಚಿಸಿ ನಂತರ ಗೃಹ ಸಾಲವನ್ನ ಪಡೆಯಬೇಕಾ ಬೇಡ್ವಾ ಅಂತ ನಿರ್ಧಾರ ಮಾಡೋದು ತುಂಬಾ ಒಳ್ಳೆಯದು ಏನಂತೀರಾ??
ಇದನ್ನೂ ಓದಿ: ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ! ಹೀಗಿದೆ ನೋಡಿ ಹಿಂದಿನ ಚಿನ್ನ & ಬೆಳ್ಳಿಯ ದರ
ಇದನ್ನೂ ಓದಿ: ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ನಟ ಪ್ರಥಮ್.. ಹುಡುಗಿ ಯಾರು ನೋಡಿ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram