gruhalakshmi Yojana: ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಮಹಿಳೆಯರನ್ನ ಸಶಕ್ತರನ್ನಾಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರಕಾರವು ಗೃಹಲಕ್ಷ್ಮಿ ಯೋಜನೆ ಆರಂಭಿಸಿದೆ. ಈ ಯೋಜನೆಯು ಜುಲೈ 19ರಿಂದ ಜಾರಿಗೆ ಬಂದಿದ್ದು, ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಹೌದು ಈ ಯೋಜನೆಗೆ ಸಂಬಂಧಪಟ್ಟಂತೆ ಸಹಾಯವಾಣಿಯೂ ಲಭ್ಯವಿದ್ದು, ಸಹಾಯವಾಣಿ ಮೂಲಕ ಹೆಚ್ಚಿನ ವಿವರ ಪಡೆಯಬಹುದು. ಮನೆಯ ನಿರ್ವಹಣೆಗೆ ಅನುಕೂಲವಾಗಲೆಂದು ಕರ್ನಾಟಕ ಸರಕಾರವು ಮನೆಯ ಯುಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿ ಜಮಾ ಮಾಡಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜುಲೈ 19ರಿಂದ ಆರಂಭವಾಗಿದೆ.
ಆದ್ರೆ ಆರಂಭದಲ್ಲೇ ವಿಘ್ನ ಎಂಬಂತೆ ಸಾಕಷ್ಟು ಸಮಸ್ಯೆಗಳು ಉದ್ಭವ ಆಗಿದ್ದು ನಿಜ. ಸರ್ವರ್ ಸಮಸ್ಯೆ, ಜೊತೆಗೆ ನೀಡಿದ್ದ ಸಹಾಯವಾಣಿ ಕೆಲಸ ಮಾಡ್ತಿಲ್ಲ, ನಮಗೆ ಮೆಸೇಜ್ ಬರುತ್ತಿಲ್ಲ ಅಂತ ಜನ ಇದ್ರೆ ಮೆಸೇಜ್ ಬಂದ ನಂತರ ಸಂಬಂಧ ಪಟ್ಟ ಕೇಂದ್ರಗಳಿಗೆ ಬಂದು ಅರ್ಜಿ ಸಲ್ಲಿಸಿ, ಇಲ್ಲ ನಾವೇ ಕರೆ ಮಾಡಿ ದಿನಾಂಕ ಮತ್ತು ಸಮಯ ನಿಗಧಿ ಮಾಡ್ತೇವೆ ಹೀಗೆ ಸಾಕಷ್ಟು ಗೊಂದಲಗಳ ಮಧ್ಯೆ ಮನೆಯ ಯಜಮಾನಿಯೇ ಹೋಗಿ ಅರ್ಜಿ ಸಲ್ಲಿಸಬೇಕಾ ಅನ್ನೋ ಗೊಂದಲ ಹೆಚ್ಚಾಗಿದ್ದು, ಮನೆಯ ಯಜಮಾನಿಯೇ ಹೋಗಬೇಕಾ ಅಥವಾ ಹೋಗಬಾರದು ಅಂದ್ರೆ ಏನಾದ್ರು ಕಂಡೀಷನ್ ಅಪ್ಲೈ ಆಗುತ್ತಾ??? ಏನ್ ಮಾಡಬೇಕು ಹೇಗೆ ಅರ್ಜಿ ಸಲ್ಲಿಸಬೇಕು ಯಾರಿಗೆ ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕು, ಕುಟುಂಬದ ಯಜಮಾನಿ ಸಾವನ್ನಪ್ಪಿದ್ರೆ ಏನ್ ಮಾಡಬೇಕು ಇದೆಲ್ಲವನ್ನ ನೋಡೋಣ
ಮೊದಲಿಗೆ ಅರ್ಜಿಯನ್ನ ಯಾರು ಸಲ್ಲಿಸಬೇಕು ಅನ್ನೋ ಗೊಂದಲ ಇತ್ತು ಅದಕ್ಕೆ ರಾಜ್ಯ ಸರ್ಕಾರ ಸ್ಪಷ್ಟವಾಗಿ ಮನೆಯ ಯಜಮಾನಿ ಮಹಿಳೆ ಯಾರು ಇರ್ತಾರೋ ಅವ್ರು ಅವ್ರ ಹೆಸರಿನಲ್ಲಿ ಅರ್ಜಿಯನ್ನ ಸಲ್ಲಿಸಬೇಕು ಅನ್ನೋದನ್ನ ಬಹಳ ಸ್ಪಷ್ಟವಾಗಿ ಹೇಳಿತ್ತು ಅಲ್ದೇ ಹಣ ಯಾರ ಖಾತೆಗೆ ಬರಬೇಕು ಅನ್ನೋದನ್ನ ಮನೆಯವರೇ ಕೂತು ನಿರ್ಧಾರ ಮಾಡಬೇಕು ಅಂತ ಪ್ರತಿಯೊಂದು ನಿರ್ಧಾರವನ್ನು ಕೂಡ ಬಹಳ ಯೋಚಿಸಿ ತೆಗೆದುಕೊಳ್ಳಿ ಅಂತ ಜನರ ಮೇಲೆ ಬಿಟ್ಟಿತ್ತು. ಇದೆಲ್ಲವೂ ಮುಗಿತು ಎಲ್ಲ ನಿರ್ಧಾರ ಮಾಡಿ ಅರ್ಜಿ ಸಲ್ಲಿಸಲು ಹೋದಾಗ ಅಲ್ಲಿ ಸರ್ವರ್ ಸಮಸ್ಯೆ ಅಥವಾ ಫಲಾನುಭವಿಗಳ ನಂಬರ್ ಗೆ ಯಾವುದೇ ಮೆಸೇಜ್ ಬಂದಿಲ್ಲ, ಮೆಸೇಜ್ ಬಂದ ನಂತರ ಅರ್ಜಿ ಸಲ್ಲಿಸಬೇಕು ಅಂತ ಒಂದೆರೆಡು ದಿನ ವಾತಾವರಣ ಗೊಂದಲದ ಗೂಡಾಗಿತ್ತು.
ಮತ್ತೆ ನಿರ್ಧಾರದಲ್ಲಿ ಬದಲಾವಣೆ ಮಾಡಿದ ಸರ್ಕಾರ ಸಂದೇಶ ಬಂದಿಲ್ಲ ಅಂದ್ರು ಪರ್ವಾಗಿಲ್ಲ ಅರ್ಜಿಯನ್ನ ಸಲ್ಲಿಸಬಹುದು ಅಂತ ಹೇಳಿತ್ತು. ಇದರ ಮಧ್ಯೆ ಮತ್ತೊಂದು ಗೊಂದಲ ಜನರನ್ನ ಕಾಡಿತ್ತು ಏನಪ್ಪಾ ಅಂದ್ರೆ ಮನೆಯ ಯಜಮಾನಿಯೇ ಹೋಗಿ ಅರ್ಜಿ ಸಲ್ಲಿಸಬೇಕಾ? ಇಲ್ಲ ಅವ್ರ ಗಂಡ ಮಕ್ಕಳು ಹೋಗಿ ಅರ್ಜಿ. ಹಾಕೋಕೆ ಬರೋದಿಲ್ವ,ನಮ್ಮ ಮನೆಯ ಯಜಮಾನಿ ನಮ್ಮ ಅಜ್ಜಿ ಅಥವಾ ಮತ್ತೊಬ್ಬರು ಅವ್ರಿಗೆ ನಡೆಯೋದಕ್ಕೂ ಆಗಲ್ಲ ಹೊರಗಡೆ ಬರೋದು ಕಷ್ಟ ಅಂತ ಸಂದರ್ಭದಲ್ಲಿ ಏನ್ ಮಾಡಬೇಕು, ಇಲ್ಲ ನಮ್ಮ ಮನೆ ಯಜಮಾನಿ ಮೊನ್ನೆಯಷ್ಟೇ ತೀರಿಕೊಂಡಿದ್ದಾರೆ ನಾವೇನ್ ಮಾಡೋದು ಹೀಗೆ ಹತ್ತು ಹಲವು ಪ್ರಶ್ನೆಗಳು ಜನರನ್ನ ಕಾಡ್ತಿವೆ.
ಇದನ್ನೂ ಓದಿ: ಹೆಬ್ಬುಲಿ ಹೇರ್ ಕಟ್ ಮಾಡಿಸಿದ್ರೆ ಶಾಲೆಗೆ ಮಕ್ಕಳು ನೋ ಎಂಟ್ರಿ!ಕಟ್ಟಿಂಗ್ ಶಾಪ್ ನವರಿಗೆ ಮುಖ್ಯೋಪಾಧ್ಯಾಯರಿಂದ ಪತ್ರ
ಏನೆಲ್ಲಾ ಕಂಡೀಷನ್ ಅಪ್ಲೈ ಆಗುತ್ತೆ ಏನ್ ಮಾಡ್ಬೇಕು ಗೊತ್ತಾ?
ಇದಕ್ಕೆ ಉತ್ತರ ಏನಪ್ಪಾ ಅಂದ್ರೆ ಕೆಲವೊಂದಷ್ಟು ಸಂದರ್ಭದಲ್ಲಿ ಮನೆಯ ಯಜಮಾನಿಯೇ ಹೋಗಿ ಅರ್ಜಿ ಸಲ್ಲಿಸೋದಕ್ಕೆ ಆಗೋದಿಲ್ಲ. ಅಂತಹ ಸಂದರ್ಭದಲ್ಲಿ ಆಕೆಯ ಪತಿ ಅಥವಾ ಮಕ್ಕಳು ಮತ್ಯಾರೋ ಸಂಬಂಧಿಕರು ಬಂದು ಕೂಡ ಅರ್ಜಿಯನ್ನ ಮನೆಯ ಯಜಮಾನಿಯ ಅನುಪಸ್ಥಿತಿಯಲ್ಲಿ ಹಾಕಬಹುದು. ಆದರೆ ಷರತ್ತುಗಳು ಅನ್ವಯವಾಗುತ್ತೆ. ಹೌದು ಹೀಗಾಗ್ಲೇ ಸರ್ಕಾರ ಸ್ಪಷ್ಟವಾಗಿ ಹೇಳಿದೆ ಆಧಾರ್ ಕಾರ್ಡ್ ಲಿಂಕ್ ಮಾಡಿರುವ ಮೊಬೈಲ್ ನಂಬರ್ ಮತ್ತು ರೇಷನ್ ಕಾರ್ಡ್ ನ್ನ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತೆಗೆದುಕೊಂಡು ಹೋಗಬೇಕು ಅಂತ. ಯಾಕಂದ್ರೆ ಯಾವ ಮೊಬೈಲ್ ನಂಬರ್ ಲಿಂಕ್ ಆಗಿರುತ್ತೋ ಆ ನಂಬರ್ ಓಟಿಪಿ ಬರುತ್ತೆ ಆ ಓಟಿಪಿ ಹೇಳುದ್ರೆ ಮಾತ್ರ ನೀವು ಅರ್ಜಿಯನ್ನ ಸಲ್ಲಿಸಲು ಸಾಧ್ಯವಾಗ್ತಿದೆ.
ಇಲ್ಲವಾದ್ರೆ ಅರ್ಜಿಯನ್ನ ಸಲ್ಲಿಸೋದು ಕಷ್ಟ. ಹೀಗೆಯೇ ಮನೆಯ ಯಜಮಾನಿಯ ಅನುಪಸ್ಥಿತಿಯಲ್ಲಿ ಅರ್ಜಿ ಸಲ್ಲಿಸುವವರು ಕೂಡ ಆಧಾರ್ ಗೆ ಲಿಂಕ್ ಆಗಿರೋ ಮನೆಯ ಯಜಮಾನಿಯ ಮೊಬೈಲ್ ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀವು ಓಟಿಪಿ ಹೇಳಬೇಕು ನೆನಪಿಡಿ ಮೊಬೈಲ್ ತೆಗೆದುಕೊಂಡು ಹೋಗಿಲ್ಲ ಅಂದ್ರೆ ಕೆಲಸ ಆಗಲ್ಲ. ನಾವು ಫೋನ್ ಮಾಡಿ ಕೇಳ್ಕೊಂಡು ಓಟಿಪಿ ಹೇಳ್ತಿವಿ ಅಂದ್ರೆ ಅದು ಕೂಡ ಸಾಧ್ಯವಾಗಲ್ಲ ಕಾರಣ ಬರುವಂತಹ ಓಟಿಪಿ 30ಸೆಕೆಂಡ್ಸ್ ಗೆ ಮಾತ್ರ ಸೀಮಿತವಾಗಿರುತ್ತದೆ. ಹಾಗಾಗಿ ಮೊಬೈಲ್ ತೆಗೆದುಕೊಂಡು ಹೋಗುವುದು ಅವಶ್ಯಕ ಮತ್ತು ಅನಿವಾರ್ಯ. ಇನ್ನು ಮನೆಯ ಯಜಮಾನಿ ಇಲ್ಲ ತೀರಿಕೊಂಡಿದ್ದಾರೆ, ಹೀಗಾಗಿ ಅವ್ರ ಹೆಸರಲ್ಲಿ ನಾವು ಅರ್ಜಿ ಹಾಕಬಹುದಾ? ಅಂದ್ರೆ ಅದು ಕೂಡ ಸಾಧ್ಯ ಇಲ್ಲ. ಸತ್ತವರನ್ನ ಕಾರ್ಡ್ ನಿಂದ ತೆಗಿಸಿ ನಂತರ ನೀವು ಹೊಸ ಕಾರ್ಡ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ನಿರ್ದೇಶಕನ ಜೊತೆ ಪ್ರೀತಿಯಲ್ಲಿ ಬಿದ್ದ ನಟಿ ಜ್ಯೋತಿ ರೈ! ಗಂಡನಿಂದ ದೂರಾದ್ರಾ ನಟಿ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram