SSLC ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಾಗಬೇಕು ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಡಲಾಗಬಾರದು ಎಂಬ ನಿಟ್ಟಿನಲ್ಲಿ ಈ ಬಾರಿ ಕೆಲವು ಪರೀಕ್ಷೆಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲಾಗಿತ್ತು. ಆದರೂ ಸಹ ರಾಜ್ಯದಲ್ಲಿ ಈ ಬಾರಿ ಫಲಿತಾಂಶ ನಿರೀಕ್ಷೆಯ ಮಟ್ಟ ತಲುಪದೇ ಇರುವುದು ಸರ್ಕಾರಕ್ಕೆ ಬೇಸರ ತಂದಿದೆ. ಇದರಿಂದ ಈಗ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ವರ್ಷದಿಂದ ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ಕೊಡದಿರಲು ಸೂಚನೆ ನೀಡಿದ್ದಾರೆ.
ರಾಜ್ಯಾದ್ಯಂತ ಚರ್ಚೆ ಆಗುತ್ತಿದೆ ಈ ಬಾರಿಯ ಫಲಿತಾಂಶ :- ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ನೀಡಿದರೂ ಸಹ ರಾಜ್ಯದಲ್ಲಿ ಈ ಬಾರಿಯ ಫಲಿತಾಂಶ ಕಡಿಮೆ ಆಗಿದ್ದು ರಾಜ್ಯ ಸರ್ಕಾರದ ವೈಫಲ್ಯ ಎಂದು ಹೇಳುತ್ತಿದ್ದಾರೆ. ಇದು ಸರ್ಕಾರಕ್ಕೆ ಮುಜುಗರ ಉಂಟಾಗಿದೆ.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಿಎಂ :- ಈ ವರ್ಷ SSLC ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ ನೀಡಿರುವ ಬಗ್ಗೆ ಸಿಎಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ವಿದ್ಯಾರ್ಥಿಗಳಿಗೆ 20 ಗ್ರೇಸ್ ಮಾರ್ಕ್ಸ್ ನೀಡಿರುವ ಕಾರಣ ಮತ್ತು ಉದ್ದೇಶದ ಬಗ್ಗೆ ವಿವರಣೆಯನ್ನು ಕೇಳಿದರು. ಅಧಿಕಾರಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ನಿಮಗೆ ಯಾರು ಹೇಳಿದ್ದು ಎಂದು ಪ್ರಶ್ನೆ ಮಾಡಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅಧಿಕಾರಗಳ ಉತ್ತರ ಏನು?: ಸಿಎಂ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿದ ಅಧಿಕಾರಿಗಳು ಈ ಹಿಂದೆ ಕೋವಿಡ್ ಸಮಯದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಸಲುವಾಗಿ 5 ರಿಂದ 10 ಗ್ರೇಸ್ ಮಾರ್ಕ್ಸ್ ನೀಡಲಾಗುತ್ತಿತ್ತು. ಈಗ ಅದೇ ನಿಯಮವನ್ನು ಮುಂದುವರೆಸಿದ್ದೇವೆ ಎಂದು ಸ್ಪಷ್ಟಪಡಿಸಿದರು. ಆದರೆ ಈಗ ಕೋವಿಡ್ ಇಲ್ಲ ಮತ್ತೇಕೆ ಗ್ರೇಸ್ ಮಾರ್ಕ್ಸ್ ನೀಡಿದ್ದೀರಿ ಎಂದು ಮತ್ತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಇಬ್ಬರು ಮಕ್ಕಳಿದ್ದಾರಾ? ಈ ಅಂಚೆ ಇಲಾಖೆಯ ಯೋಜನೆಯಿಂದ 6 ಲಕ್ಷ ರೂ. ಪಡೆಯಿರಿ!
ಈ ಬಾರಿ ಎಷ್ಟು ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲಾಗಿದೆ :-
ಇನ್ನೂ ಈ ಬಾರಿಯ SSLC ಮಕ್ಕಳಿಗೇ ರಾಜ್ಯದಲ್ಲಿ ಒಟ್ಟು 1.70 ಲಕ್ಷ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಲಾಗಿದೆ ಎಂಬುದನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟಪಡಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೋವಿಡ್ ಸಮಯದಲ್ಲಿ ಪಾಸಿಂಗ್ ಮಾರ್ಕ್ಸ್ ಅನ್ನು 35 ರಿಂದ 25 ಕ್ಕೆ ಇಳಿಕೆ ಮಾಡಲಾಗಿತ್ತು. ಈಗಲೂ ಅದೇ ನಿಯಮ ಮುಂದುವರೆದಿದೆ. ಈ ಬಾರಿ ನಾವು ಗ್ರೇಸ್ ಮಾರ್ಕ್ಸ್ ನೀಡದೆ ಇದ್ದದ್ದಾರೆ ರಾಜ್ಯದಲ್ಲಿ ಫಲಿತಾಂಶ ಇನ್ನು ಕಡಿಮೆ ಆಗುತ್ತಿತ್ತು ಎಂದು ಮಂಡಳಿ ತಿಳಿಸಿದೆ. ಗ್ರೇಸ್ ಮಾರ್ಕ್ಸ್ ನೀಡಿದರೂ ಸಹ ನಿರೀಕ್ಷೆಯಂತೆ ಈ ಬಾರಿಯ SSLC ಫಲಿತಾಂಶ ಬಾರದೆ ಇರುವುದು ಬೇಸರ ತಂದಿದೆ.
ಗ್ರೇಸ್ ಮಾರ್ಕ್ಸ್ ರದ್ದತಿಗೆ ಸಿಎಂ ಸಿದ್ದರಾಮಯ್ಯ ಆದೇಶ :- ಬರೋಬ್ಬರಿ 20 ಮಾರ್ಕ್ಸ್ ಗ್ರೇಸ್ ನೀಡಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಂತರದಲ್ಲಿ ಮುಂದಿನ ವರ್ಷದಿಂದ ರಾಜ್ಯದಲ್ಲಿ SSLC ವಿದ್ಯಾರ್ಥಿಗಳಿಗೆ ಅನುಕಂಪದ ಆಧಾರದ ಮೇಲೆ ಗ್ರೆಸ್ ಮಾರ್ಕ್ಸ್ ನೀಡುವುದನ್ನು ರದ್ದು ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಆದೇಶ ನೀಡಿದರು.
ಇದನ್ನೂ ಓದಿ: ವೈದ್ಯಕೀಯ, ಶಿಕ್ಷಣ, ಮದುವೆ, ವಸತಿಗಾಗಿ EPF ಹಣ ಪಡೆಯಲು ಕೆಲವು ಹಕ್ಕು ನಿಯಮಗಳ ಬದಲಾವಣೆಯ ಮಾಹಿತಿ ಇಲ್ಲಿದೆ
2023-24 ಶೈಕ್ಷಣಿಕ ವರ್ಷದ ರಾಜ್ಯದ SSLC ಫಲಿತಾಂಶ ಹೀಗಿದೆ :-
2023-24 ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದವರ ಅಂಕೆ 8,59,967 ಲಕ್ಷ ವಿಧ್ಯಾರ್ಥಿಗಳು ಹಾಗೂ ಇದರಲ್ಲಿ ಒಟ್ಟು 6,31,204 ವಿದ್ಯಾರ್ಥಿಗಳು ಪಾಸ್ ಆಗಿದ್ದರೂ. ಶೇಕಾಡಾ 94% ಫಲಿತಾಂಶ ಗಳಿಸಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ ಹಾಗೂ ಶೇಕಡಾ 50.59% ಗಳಿಸಿ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.