ಕಾರ್ ನಲ್ಲಿ ಮುಂಬಾಗದಲ್ಲಿ ಕುಳಿತಿರುವ ವಾಹನ ಸವಾರರಿಗೆ ಬೆಲ್ಟ್ ಧರಿಸದೆ ಇದ್ದಾರೆ ಫೈನ್ ಹಾಕುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಇನ್ನೂ ಮುಂದೆ ಕಾರಿನ ಹಿಂಬದಿಯಲ್ಲಿ ಕುಳಿತಿರುವ ಸವಾರರು ಸಹ ಕಡ್ಡಾಯವಾಗಿ ಬೆಲ್ಟ್ ಧರಿಸಬೇಕು. ಹಿಂಗಿದು ಹೊಸ ಕಾನೂನು ಜಾರಿಯಾಗಿದೆ. ಇನ್ನು ಮುಂದೆ ನೀವು ಈ ನಿಯಮ ಪಾಲಿಸದೆ ಇದ್ದರೆ ನೀವೂ ದಂಡ ಕಟ್ಟಬೇಕಾಗುತ್ತದೆ.
ವಾಹನ ತಯಾರಿಕಾ ಕಂಪನಿಗೆ ನೀಡಿರುವ ಆದೇಶ ಏನು?: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಶುಕ್ರವಾರ ವಾಹನ ತಯಾರಕ ಕಂಪನಿಗಳಿಗೆ ಅಧಿಸೂಚನೆಯಲ್ಲಿ ಏಪ್ರಿಲ್ 1, 2025 ರಿಂದ ದೇಶದಲ್ಲಿ ಮಾರಾಟವಾಗುವ ಎಲ್ಲಾ ಕಾರುಗಳಲ್ಲಿ ‘ಹಿಂಭಾಗದ ಸೀಟ್ ಬೆಲ್ಟ್ ಅಲಾರಂ’ ಅನ್ನು ಅಳವಡಿಸಬೇಕು ಎಂದು ತಿಳಿಸಿದೆ. ಹಿಂಭಾಗದಲ್ಲಿ ಕುಳಿತ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸದಿದ್ದರೆ ಕಾರು ಎಚ್ಚರಿಕೆ ಶಬ್ದ ಮಾಡಲಿದೆ.
ಸೀಟ್ ಬೆಲ್ಟ್ ಅಲಾರಂ ಅಳವಡಿಸುವುದು ಏಕೆ?
ಇನ್ನೂ ಸೀಟ್ ಬೆಲ್ಟ್ ಅಲಾರಂ ಒಂದು ಅತ್ಯಗತ್ಯ ಸುರಕ್ಷತಾ ಕ್ರಮವಾಗಿದೆ. ಈ ವ್ಯವಸ್ಥೆಯು ಕಾರಿನಲ್ಲಿ ಕುಳಿತಿರುವ ಪ್ರಯಾಣಿಕರನ್ನು ಸೀಟ್ ಬೆಲ್ಟ್ ಧರಿಸಲು ಬೀಪಿಂಗ್ ಶಬ್ದದ ಮೂಲಕ ಎಚ್ಚರಿಕೆ ನೀಡುತ್ತದೆ ಮತ್ತು ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವವರೆಗೆ ಈ ಶಬ್ದ ನಿಲ್ಲುವುದಿಲ್ಲ. ಇದರಿಂದ ವಾಹನ ಸವಾರರು ಕಾರ್ ಹತ್ತುವ ತಕ್ಷಣ ಸಿಟ್ ಬೆಲ್ಟ್ ಧರಿಸುತ್ತಾರೆ. ಹಿಂಭಾಗದ ಸೀಟ್‌ನಲ್ಲಿ ಇರುವ ವಾಹನ ಸವಾರರು ಸೀಟ್ ಬೆಲ್ಟ್ ಧರಿಸಿದ ಪ್ರಯಾಣಿಕರಿಗೆ ಕೇಂದ್ರ ಮೋಟಾರು ವಾಹನ ನಿಯಮಗಳು (ಸಿಎಂವಿಆರ್) ನಿಯಮ 138 (3) ರ ಅಡಿಯಲ್ಲಿ ₹1,000 ದಂಡ ಹಾಕಲಾಗುತ್ತದೆ. ಆದರೆ, ಈ ನಿಯಮದ ಬಗ್ಗೆ ಜಾಗೃತಿ ಕೊರತೆ ಹಾಗೂ ಅನುಸರಣೆಯ ಕೊರತೆಯಿಂದಾಗಿ, ಈ ದಂಡವನ್ನು ವಿಧಿಸುವುದು ಅಪರೂಪವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸೀಟ್ ಬೆಲ್ಟ್ ಏಕೆ ಧರಿಸಬೇಕು :-
ಅಪಘಾತದ ಸಂದರ್ಭದಲ್ಲಿ ಸೀಟ್ ಬೆಲ್ಟ್ ನಿಮ್ಮ ಪ್ರಾಣವನ್ನು ಉಳಿಸಲು ಸಹಾಯ ಮಾಡುತ್ತದೆ. ಹಾಗೂ ಹೆಚ್ಚಿನ ಗಾಯ ಅಥವಾ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿನ ಆಕ್ಸಿಡೆಂಟ್ ನಲ್ಲಿ ಸವಾರನ ತಲೆಗೆ ಗಾಯ, ಬೆನ್ನುಹುರಿಯ ಗಾಯ ಆಗುತ್ತದೆ. ಇದನ್ನು ಸಿಟ್ ಬೆಲ್ಟ್ ತಡೆಯುತ್ತದೆ. ಸಾವಿನ ಅಪಾಯವನ್ನು ಸೀಟ್ ಬೆಲ್ಟ್ ಕಡಿಮೆ ಮಾಡುತ್ತದೆ. ದೇಶದಲ್ಲಿ ಸಿಟ್ ಬೆಲ್ಟ್ ಧರಿಸದೆ ಹೆಚ್ಚಿನ ಪ್ರಮಾಣದ ಸಾವುಗಳು ಸಂಭವಿಸುತ್ತಿವೆ. ಆದರಿಂದ ಸಿಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ.
ಸಿಟ್ ಬೆಲ್ಟ್ ಧರಿಸುವ ಕೆಲವು ಕ್ರಮಗಳನ್ನು ಅನುಸರಿಸಿ :-
- ಸೀಟ್ ಬೆಲ್ಟ್ ಅನ್ನು ಧರಿಸುವಾಗ ತಿರುಗಿಸಬಾರದು ಅಥವಾ ಬಾಗಿಸಬಾರದು ಯಾಕೆಂದರೆ ಹಾಗೆ ಧರಿಸಿದರೆ ಬೆಲ್ಟ್ ಸರಿಯಾಗಿ ಕಾರ್ಯನಿರ್ವಹಿಸದಂತೆ ತಡೆಯುತ್ತದೆ. ಇದರಿಂದ ಅಪಾಯ ಆಗುವ ಸಂಭವ ಹೆಚ್ಚು.
- ಗರ್ಭಿಣಿಯರು ಸಿಟ್ ಬೆಲ್ಟ್ ಬಹಳ ಬಿಗಿಯಾಗಿ ಧರಿಸಬಾರದು ಹಾಗೂ ಹೊಟ್ಟೆಯ ಮೇಲ್ಭಾಗಕ್ಕೆ ಸಿಟ್ ಬೆಲ್ಟ್ ಧರಿಸಬೇಡಿ.
- ಸಿಟ್ ಬೆಲ್ಟ್ ಧರಿಸುವಾಗ ನೀವು ಯಾವುದೇ ರೀತಿಯ ಒತ್ತಡಕ್ಕೆ ಒಳಲಾಗಬೇಡಿ ಅಂದರೆ ನೀವು ಸಿಟ್ ನಲ್ಲಿ ಆರಾಮದಾಯವಾಗೀ ಕುಳಿತುಕೊಳ್ಳುವಂತೆ ಸಿಟ್ ಬೆಲ್ಟ್ ಧರಿಸಿ.
- ಸಿಟ್ ಬೆಲ್ಟ್ ಕೆಲವರು ಸುಮ್ಮನೆ ಲೋಕ್ ಮಾಡಿಕೊಂಡು ಸಿಟ್ ಬೆಲ್ಟ್ ಧರಿಸದೆ ಕುಳಿತು ಕೊಳ್ಳುತ್ತಾರೆ ದಯಮಾಡಿ ಅಂತಹ ಕೆಲಸ ಮಾಡಬೇಡಿ. ಅಪಾಯ ಆದರೆ ನಿಮಗೆ ಯಾವುದೇ ರಕ್ಷಣೆ ಇರುವುದಿಲ್ಲ.
ಇದನ್ನೂ ಓದಿ: CNG SUV ಗಳು: ನಿಮ್ಮ ಮುಂದಿನ ಕಾರು ಖರೀದಿಗೆ ಉತ್ತಮ ಆಯ್ಕೆಯಾಗಿದೆ!
ಇದನ್ನೂ ಓದಿ: ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಇದುವೇ ಬೆಸ್ಟ್ ಟೈಂ; ಮುಂದಿನ ತಿಂಗಳಿಂದ ಬೆಲೆ ಏರಿಕೆ