ಇಷ್ಟು ವರುಷ ಹಣ ಬೇಕು ಎಂದರೆ ನಾವು ಬ್ಯಾಂಕ್ ಅಥವಾ ಎಟಿಎಂ ತೆರಳಿ ಹಣವನ್ನು ತೆಗೆದುಕೊಂಡು ಬರಬೇಕಿತ್ತು. ಆದರೆ ಈಗಿನ ಆನ್ಲೈನ್ ಯುಗದಲ್ಲಿ ಮನೆಯಲ್ಲಿ ಕುಳಿತು ಹಣ ವರ್ಗಾವಣೆ ಮಾಡಬಹುದು ಎಂಬುದು ಗೊತ್ತಿದೆ ಹಾಗೆಯೇ ಈಗ ಬ್ಯಾಂಕ್ ಗೆ ತೆರಳದೆ ಮನೆಯಿಂದಲೇ ನೀವು ನಗದು ಹಣ ಪಡೆಯಬಹುದು. ಹೇಗೆ ಎಂದು ಆಲೋಚನೆ ಮಾಡುತ್ತೀರಾ? ವಿವರಗಳಿಗೆ ಈ ಲೇಖನವನ್ನು ಓದಿ.
ಎಟಿಎಂ ಗೆ ತೆರಳದೆ ಹಣ ಪಡೆಯಲು ಏನೇನು ಬೇಕು?: ನಿಮ್ಮ ಬಳಿ ಎಟಿಎಂ ಇಲ್ಲ ಎಂದಾದರೆ ಸಹ ನೀವು ಹಣವನ್ನು ಪಡೆಯಲು ಸಾಧ್ಯ. ಹೇಗೆಂದರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇರಬೇಕು. ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ಸಿಡಿಂಗ್ ಮಾಡಿಸಿದ್ದಾರೆ ಮಾತ್ರ ನೀವು ಎಟಿಎಂ ಕಾರ್ಡ್ ಇಲ್ಲದೆಯೇ ಎಟಿಎಂ ಅಥವಾ ಬ್ಯಾಂಕ್ ಗೆ ತೆರಳದೆ ಹಣ ಪಡೆಯಬಹುದು.
ಏನಿದು ಆಧಾರ್ ಎಟಿಎಂ?: ನೀವು ನಿಮ್ಮ ಖಾತೆಗೆ ಆಧಾರ್ ಸಿಡಿಂಗ್ ಮಾಡಿಸಿದ ಬಳಿಕ ನಿಮ್ಮ ಖಾತೆಯಲ್ಲಿ ಇರುವ ಹಣವನ್ನು ನಗದು ರೂಪದಲ್ಲಿ ಆಧಾರ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಹಾಗೂ ಬಯೋಮೆಟ್ರಿಕ್ ನೀಡುವ ಮೂಲಕ ಆಧಾರ್ ಎಟಿಎಂ ನಲ್ಲಿ ನೀವು ಹಣ ಪಡೆಯಲು ಸಾಧ್ಯವಿದೆ.
ಭಾರತೀಯ ಅಂಚೆ ಇಲಾಖೆ ನೀಡುತ್ತಿದೆ ವಿಶೇಷ ಸೌಲಭ್ಯ:-
ಅಂಚೆ ಇಲಾಖೆ ಈಗ ಗ್ರಾಹಕರ ಅನುಕೂಲಕ್ಕಾಗಿ ಹಲವಾರು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಈಗ ಹೊಸದಾಗಿ ಮನೆಯಿಂದಲೇ ನಿಮಗೆ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಇರುವ ಹಣವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ವ್ಯಸ್ಥೆಯನ್ನು ಪೋಸ್ಟ್ ಜಾರಿಗೆ ತಂದಿದೆ. ಇದರ ಮೂಲಕ ನಿಮಗೆ ಬೇಕಾದ ಹಣವನ್ನು ಪೋಸ್ಟ್ ಮ್ಯಾನ್ ನಿಮ್ಮ ಮನೆಗೆ ತಲುಪಿಸುತ್ತಾರೆ. ಈ ವ್ಯವಸ್ಥೆಗೆ ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಈ ಸೌಲಭ್ಯದಲ್ಲಿ ನೀವು ನಿಮ್ಮ ಖಾತೆಯ ಬಗ್ಗೆ ಪೂರ್ಣ ಮಾಹಿತಿಯನ್ನು ಸಹ ಪಡೆಯಲು ಸಾಧ್ಯವಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹರಿದ ನೋಟ್ ಏನು ಮಾಡ್ಬೇಕು ಎಂಬ ಚಿಂತೆ ಕಾಡುತ್ತಿದೆಯ ಹಾಗಾದರೆ ಈ ಸಿಂಪಲ್ ಹಂತವನ್ನು ಅನುಸರಿಸಿ
ನಗದು ಹಣ ಪಡೆಯುವುದು ಹೇಗೆ ?
ನೀವು ಎಟಿಎಂ ಅಥವಾ ಬ್ಯಾಂಕ್ ಗೆ ಹೋಗದೆ ನಗದು ಹಣ ಪಡೆಯಲು ಮೊದಲು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ನ ವೆಬ್ಸೈಟ್ಗೆ ತೆರಳಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅದಾದ ಬಳಿಕ ನಿಮ್ಮ ಮನೆಗೆ ಪೋಸ್ಟ್ಮ್ಯಾನ್ ಮೈಕ್ರೋ ಎಟಿಎಂನೊಂದಿಗೆ ನ ಬರುತ್ತಾರೆ. ನಂತರ ನಿಮ್ಮ ಆಧಾರ್ ಕಾರ್ಡ್ ಹಾಗೂ ನಿಮ್ಮ ಬಯೋಮೆಟ್ರಿಕ್ ಪಡೆದು, ಪೋಸ್ಟ್ಮ್ಯಾನ್ ನಿಮಗೆ ನಗದು ಮೊತ್ತವನ್ನು ನೀಡುತ್ತಾರೆ. ಹಾಗೆಯೇ ನಿಮಗೆ ಹಣ ಕಡಿತವಾಗಿರುವ ಬಗ್ಗೆ ಬ್ಯಾಂಕ್ ನಾ ಮೆಸೇಜ್ ಬರುತ್ತದೆ.
ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ಇಂದು ದಿನಕ್ಕೆ ಗರಿಷ್ಠ ಏಷ್ಟು ಹಣ ಪಡೆಯಬಹುದು?: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಿಯಮದ ಅನ್ವಯ ಈ ಸೇವೆಗೆ ಯಾವುದೇ ಶುಲ್ಕ ಇಲ್ಲ. . ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ನಿಯಮದ ಅನುಸಾರವಾಗಿ , ಒಮ್ಮೆಗೇ ಗರಿಷ್ಠ 10,000 ಗೆ ನಗದು ಹಣವನ್ನು ಪಡೆಯಲು ಸಾಧ್ಯವಿದೆ. . ಆದರೆ ನೀವು ಯಾವ ಬ್ಯಾಂಕ್ ನಿಂದಾ ಹಣ ಪಡೆಯುತ್ತೀರಿ ಎಂಬುದನ್ನು ಮೊದಲು ನಿರ್ಧರಿಸಿ ಒಂದಕ್ಕಿಂತ ಹಲವು ಬ್ಯಾಂಕ್ ಇದ್ದರೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಎಂಬುದನ್ನು ಕನ್ಫರ್ಮ್ ಮಾಡಿಕೊಂಡು ನಗದು ಹಣ ಬೇಕೆಂದು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ.
ಇದನ್ನೂ ಓದಿ: SIP ಫಾರ್ಮುಲಾ; ಈ 4 ಸಲಹೆಗಳೊಂದಿಗೆ ನಿಮ್ಮ ಹಣವನ್ನು ಡಬಲ್, ಟ್ರಿಪಲ್ ಮಾಡಿ!