ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ; 2024ಕ್ಕೆ ನಾನು ಅಮ್ಮಾ ಆಗ್ತಿದೀನಿ ಅಂದ್ರು
2024ರ ಹೊಸ ವರ್ಷದ ಮೊದಲ ದಿನ ನಟಿ ಅದಿತಿ ಪ್ರಭುದೇವ ಅವರು ಅಮ್ಮನಾಗುತ್ತಿರುವ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಹೊಸ ವರ್ಷದ ಮೊದಲ ದಿನವೇ ತಮ್ಮ ಅಭಿಮಾನಿಗಳಿಗೆ ಖುಷಿಯ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು ತಿಳಿಸಿದ್ದಾರೆ. ಹೌದು ಕನ್ನಡ ಕಿರುತೆರೆ, ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿರುವ ನಟಿ ಅದಿತಿ ಪ್ರಭುದೇವ ಅವರು ಹೊಸ ವರ್ಷವನ್ನು ತುಂಬ ಖುಷಿಯಿಂದ ಬರಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ 2024ಕ್ಕೆ ಅವರು ಹೊಸ ಹುದ್ದೆಗೆ ಬಡ್ತಿ ಕೂಡ ಪಡೆಯಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಈ…