ನೌಕರರಿಗೆ ಅದರಲ್ಲೂ ಕೇಂದ್ರ ಸರ್ಕಾರಿ ನೌಕರರಿಗೆ ಇದು ಬಹಳಾನೇ ಸಿಹಿ ಸುದ್ದಿ ಅಂತ ಹೇಳಬಹುದು. ಹೌದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೌಕರರಿಗೆ ದೀಪಾವಳಿಗೆ ಬಂಪರ್ ಗಿಫ್ಟ್ ಘೋಷಣೆ ಮಾಡಿದೆ. ದೀಪಾವಳಿ ಹಬ್ಬಕ್ಕೂ ಮುನ್ನವೇ ಬೋನಸ್ ನೀಡುವ ಕುರಿತು ಅಧಿಕೃತ ಘೋಷಣೆ ಮಾಡುವ ಮೂಲಕ ಸಂತಸದ ಸುದ್ದಿ ಕೊಟ್ಟಿದೆ. ಹೌದು ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ 2022-23ಕ್ಕೆ ₹7,000 ಕ್ಕೆ ಉತ್ಪಾದನೇತರ ಲಿಂಕ್ಡ್ ಬೋನಸ್‌ಗಳನ್ನು ಲೆಕ್ಕಾಚಾರ ಮಾಡಲು ಹಣಕಾಸು ಸಚಿವಾಲಯವು ಅನುಮೋದನೆ ನೀಡಿದೆ. ಇನ್ನು 31.3.2023 ರಂತೆ ಸೇವೆಯಲ್ಲಿದ್ದ ಮತ್ತು 2022-23 ವರ್ಷದಲ್ಲಿ ಕನಿಷ್ಠ ಆರು ತಿಂಗಳ ನಿರಂತರ ಸೇವೆಯನ್ನು ಸಲ್ಲಿಸಿದ ನೌಕರರು ಮಾತ್ರ ಈ ಆದೇಶಗಳ ಅಡಿಯಲ್ಲಿ ಪಾವತಿಗೆ ಅರ್ಹರಾಗಿರುತ್ತಾರೆ. ಅಂದ್ರೆ ಇಂಥವರಿಗೆ ಮಾತ್ರ ಬೋನಸ್ ಸಿಗುತ್ತದೆ ಇನ್ನೂ ಆರು ತಿಂಗಳಿಂದ ಪೂರ್ಣ ವರ್ಷದವರೆಗೆ ನಿರಂತರ ಸೇವೆಯ ಅವಧಿಗೆ ಅರ್ಹ ಉದ್ಯೋಗಿಗಳಿಗೆ ಪ್ರೊ-ರೇಟಾ ಪಾವತಿಯನ್ನು ಅನುಮತಿಸಲಾಗುತ್ತದೆ. ಅರ್ಹತಾ ಅವಧಿಯನ್ನು ಸೇವೆಯ ತಿಂಗಳ ಸಂಖ್ಯೆಯ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ.
ಕೇಂದ್ರ ಸರ್ಕಾರದ ಗ್ರೂಪ್ ಸಿ, ಡಿ ನೌಕರರರು ಮತ್ತು ಗುತ್ತಿಗೆದಾರರು ಈ ವರ್ಷ ದೀಪಾವಳಿ ಬೋನಸ್ ಪಡೆಯಲಿದ್ದಾರೆ. ಹೌದು ಕೇಂದ್ರ ಸರ್ಕಾರದ ಗ್ರೂಪ್ ಸಿ ನೌಕರರು ಹಾಗೂ ನಾನ್ ಗೆಜೆಟೆಡ್ ಗ್ರೂಪ್ ಬಿ ದರ್ಜೆಯ ಅಧಿಕಾರಿಗಳಿಗೆ ದೀಪಾವಳಿ ಹಬ್ಬಕ್ಕೆ ಮುನ್ನ ಬೋನಸ್ ಸಿಗಲಿದೆ. ಅರೆಸೇನಾ ಪಡೆಗಳೂ ಈ ಬೋನಸ್ ಫಲಾನುಭವಿಗಳ ಪಟ್ಟಿಯಲ್ಲಿದ್ದಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಬೋನಸ್ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ
ಕೇಂದ್ರದ ವರದಿಯ ಪ್ರಕಾರ ಕೇಂದ್ರ ಸರ್ಕಾರಿ ನೌಕರರಿಗೆ 2022-23ರ ಸಾಲಿಗೆ 7,000 ರೂ ಮಿತಿಯ ಬೋನಸ್ ಅನ್ನು ಕೇಂದ್ರ ಹಣಕಾಸು ಸಚಿವಾಲಯ ನಿಗದಿಪಡಿಸಿದೆ. 2022-23 ನೇ ಸಾಲಿಗೆ ಕೇಂದ್ರ ಸರ್ಕಾರದ ಗೆಜೆಟೆಡ್ ಅಲ್ಲದ ಉದ್ಯೋಗಿಗಳಿಗೆ ರೂ 7000 ಬೋನಸ್ ಘೋಷಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ಘೋಷಣೆಯು ಕರ್ನಾಟಕದ ಕೇಂದ್ರ ಸರ್ಕಾರಿ ನೌಕರರಿಗೂ ಸಂತಸ ತರಿಸಿದೆ ಅಂತಾನೆ ಹೇಳಹುದು. ಕೇಂದ್ರ ಹಣಕಾಸು ಸಚಿವಾಲಯದ ವ್ಯಾಪ್ತಿಗೆ ಬರುವ ವೆಚ್ಚದ ಇಲಾಖೆಯು ಬೋನಸ್ ಘೋಷಣೆ ಮಾಡಿ ಆದೇಶ ಹೊರಡಿಸಿದೆ. 2021ರ ಮಾರ್ಚ್ 31ರಿಂದ ಕಾರ್ಯನಿರ್ವಹಿಸುತ್ತಿರುವವರು ದೀಪಾವಳಿ ಬೋನಸ್ ಪಡೆಯಲು ಅರ್ಹರಾಗಿರುತ್ತಾರೆ.
ಗ್ರೂಪ್ ಡಿ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರು ಕೂಡ ಬೋನಸ್ ಪಡೆಯಲಿದ್ದಾರೆ. ಗ್ರೂಪ್ ಸಿ, ಡಿ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರಿಗೆ ಸರ್ಕಾರವು ಪ್ರತಿ ವರ್ಷ ದೀಪಾವಳಿ ಬೋನಸ್ ನೀಡುತ್ತದೆ. ಕೇಂದ್ರೀಯ ಪ್ಯಾರಾ ಮಿಲಿಟರಿ ಪಡೆಗಳು ಹಾಗೂ ಸಶಸ್ತ್ರ ಪಡೆಗಳ ಸಿಬ್ಬಂದಿಯೂ ಬೋನಸ್‌ನ ಲಾಭ ಪಡೆಯಲಿದ್ದಾರೆ. ಇನ್ನು ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಪ್ರತಿ ವರ್ಷದ ಪ್ರಕ್ರಿಯೆಯಂತೆ ತುಟ್ಟಿ ಭತ್ಯೆ ಘೋಷಿಸಲಿದ್ದು, ಲಕ್ಷಾಂತರ ನೌಕರರು ಇದರ ಲಾಭ ಪಡೆಯಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗುತ್ತಿದೆ.
ಹೌದು ಇನ್ನೇನು ದೀಪಾವಳಿ ಸಮೀಪಿಸುತ್ತಿದೆ. ಸರ್ಕಾರಿ ಸೇರಿ ಎಲ್ಲ ಕಚೇರಿಗಳಲ್ಲಿ ಈಗ ಬೋನಸ್ ಕುರಿತು ಚರ್ಚೆ, ಯಾವಾಗ ಕೊಡುತ್ತಾರೆ, ಎಷ್ಟು ಕೊಡುತ್ತಾರೆ ಎಂಬ ಅಂದಾಜಿನ ಲೆಕ್ಕಾಚಾರ ಶುರುವಾಗಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ಗವರ್ನಮೆಂಟ್ ಕೇಂದ್ರ ಸರ್ಕಾರವು ನೌಕರರಿಗೆ ದೀಪಾವಳಿ ಬೋನಸ್ ಗೆ ಸಂಬಂಧಪಟ್ಟಂತೆ ಸಿಹಿ ಸುದ್ದಿ ನೀಡಿದೆ ಅಂತಲೇ ಹೇಳಬಹುದು. ದೀಪಾವಳಿಗೂ ಮೊದಲೇ ಬೋನಸ್ ನೀಡಲು ತೀರ್ಮಾನಿಸಿದ್ದು ಎಲ್ಲರಲ್ಲೂ ಅದರಲ್ಲೂ ಕೇಂದ್ರ ಉದ್ಯೋಗಿಗಳಲ್ಲಿ ಖುಷಿ ಮನೆ ಮಾಡಿದೆ. ಹೌದು ಗರಿಷ್ಠ 7 ಸಾವಿರ ರೂಪಾಯಿವರೆಗೆ ನೌಕರರಿಗೆ ಬೋನಸ್ ಸಿಗಲಿದೆ
ಗ್ರೂಪ್ ಸಿ ನೌಕರರು, ನಾನ್-ಗೆಜೆಟೆಡ್ ಗ್ರೂಫ್ ಬಿ ಬ್ಯಾಂಕ್ ನೌಕರರು ಕೇಂದ್ರ ಸರ್ಕಾರದಿಂದ ದೀಪಾವಳಿ ಬೋನಸ್ ಪಡೆಯಲಿದ್ದಾರೆ. ಆಯಾ ನೌಕರರ ಕಾರ್ಯಕ್ಷಮತೆ, ಸೇವಾ ಮನೋಭಾವ, ದಕ್ಷತೆ, ಸಮಯಪಾಲನೆ ಸೇರಿ ಹಲವು ಮಾನದಂಡಗಳನ್ನು ಆಧರಿಸಿ ಗರಿಷ್ಠ 7 ಸಾವಿರ ರೂಪಾಯಿವರೆಗೆ ಸರ್ಕಾರ ಬೋನಸ್ ನೀಡುತ್ತದೆ. ಇದರಿಂದ ನೌಕರರು ಹಬ್ಬವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಲು ಸಾಧ್ಯವಾಗುತ್ತದೆ. ಹೀಗಾಗಿ ಬೋನಸ್ ಬಿಡುಗಡೆ ಯಾವಾಗ ಅಂತ ಕಾಯುತ್ತಿದ್ದಾರೆ.
ಇದನ್ನೂ ಓದಿ: ನವರಾತ್ರಿ ಹಬ್ಬಕ್ಕೆ ಬ್ಯಾಂಕ್ ಗಳು ಸಾಲು ಸಾಲು ರಜಾ! ಯಾವ ಯಾವ ದಿನ ರಜಾ ಇಲ್ಲಿದೆ ನೋಡಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram