ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 3,454 ಕೋಟಿ ರೂಪಾಯಿ ಬರಪರಿಹಾರದ ಹಣ ಬಿಡುಗಡೆ

Drought Relief Fund

ರಾಜ್ಯದಲ್ಲಿ ಈ ಬಾರಿ ಬರಗಾಲ ಪ್ರಮಾಣ ಹೆಚ್ಚಿದೆ. ಮಲೆನಾಡಿನ ಹಳ್ಳಿಗಳಿಂದ ಬೆಂಗಳೂರಿನ ಸಿಟಿಯ ಜನರಿಗೂ ಈ ಬಾರಿ ಬರಗಾಲದ ಛಾಯೆ ಆವರಿಸಿದೆ. ಈಗಾಗಲೇ ಎಲ್ಲ ಕಡೆ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು ಹೀಗೆ ಆದರೆ ಮುಂದೆ ಜನರ ಸ್ಥಿತಿ ಸಂಕಷ್ಟ ಆಗಲಿದೆ. ಈಗಾಗಲೇ ರಾಜ್ಯ ಸರ್ಕಾರ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದೆ. ಆದರೂ ಸಹ ಬರ ಪೀಡಿತ ಪ್ರದೇಶಗಳಿಗೆ ಮೂಲ ಸೌಕರ್ಯ ನೀಡಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಪರಿಹಾರ ಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರವು ಯಾವುದೇ ಪರಿಹಾರದ ಹಣವನ್ನು ನೀಡಿರಲಿಲ್ಲ. ಈಗ ರಾಜ್ಯಕ್ಕೆ ಬರೋಬ್ಬರಿ 3,454 ಕೋಟಿ ರೂಪಾಯಿ ಬರಪರಿಹಾರ ನೀಡಿದೆ.

WhatsApp Group Join Now
Telegram Group Join Now

ರಾಜ್ಯ ಸರ್ಕಾರ ಸುಪ್ರೀಂ ಮೆಟ್ಟಿಲೇರಿತ್ತು: ಕೇಂದ್ರ ಸರ್ಕಾರ ನಮ್ಮ ರಾಜ್ಯವನ್ನು ಕಡೆಗಣಿಸಿದೆ. ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಬರಗಾಲ ಎದುರಾಗಿತ್ತು. ಬರಗಾಲವನ್ನು ಎದುರಿಸಲು ಹೆಚ್ಚಿನ ಹಣ ಬೇಕಾಗಿದೆ. ಅದಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ರಾಜ್ಯ ಸರ್ಕಾರವು ಸುಪ್ರಿಂ ಮೆಟ್ಟಿಲು ಹತ್ತಿತ್ತು. 

ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ:-

ನಮ್ಮ ರಾಜ್ಯವು ಈ ಬಾರಿ ಬಹಳ ಬರಗಾಲದಿಂದ ಬಳಲುತ್ತಿದೆ. ಜನರು ಕುಡಿಯುವ ನೀರಿಗೆ ಪರದಾಡುತ್ತ ಇದ್ದರೆ. ಇಂತಾ ಸಮಯದಲ್ಲಿ ಕೇಂದ್ರ ಸರ್ಕಾರ ನೀಡಿರುವ ಪರಿಹಾರ ನಮಗೆ ಸಾಲುವುದಿಲ್ಲ. ನಾವು ಕೇಂದ್ರ ಸರ್ಕಾರಕ್ಕೆ 18,172 ಸಾವಿರ ಕೋಟಿ ರೂಪಾಯಿ ಮನವಿ ಮಾಡಿದ್ದೆವು. ಆದರೆ ಕೇಂದ್ರ ಸರ್ಕಾರವು ಕೇವಲ 3,454 ಕೋಟಿ ರೂಪಾಯಿ ಬರಪರಿಹಾರ ನೀಡಿದೆ. ರಾಜ್ಯದಲ್ಲಿ 48 ಹೆಕ್ಟೇರ್ ಪ್ರದೇಶದಲ್ಲಿ ಬಿಸಿಲಿನಿಂದ ಬೇಕೆ ಹಾನಿ ಆಗಿದೆ ಒಟ್ಟು 35 ಸಾವಿರ ಕೋಟಿ ರೂಪಾಯಿ ಹಾನಿ ಆಗಿದೆ ಎಂಬ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ನೀಡಿದರು.

ಎನ್ ಡಿ ಆರ್ ಎಫ್ ವರದಿಯಂತೆ ಬರ ಪರಿಹಾರ ನೀಡಿದ ಕೇಂದ್ರ :- ರಾಜ್ಯದಲ್ಲಿ ಯಾವ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ ಎಂಬ ಎನ್ ಡಿ ಆರ್ ಎಫ್ ವರದಿಯ ಪ್ರಕಾರ ಕೇಂದ್ರ ಸರ್ಕಾರದಿಂದ ಬರಗಾಲ ಪ್ರದೇಶಕ್ಕೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರವು ಈ ಹಿಂದೆ ಬರ ಪರಿಹಾರ ನೀಡುವ ಬಗ್ಗೆ ಘೋಷಣೆ ಮಾಡಿತ್ತು. ಅದರಂತೆ ಈಗ ಪರಿಹಾರ ನೀಡಲಾಗಿದೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಸರ್ಕಾರ ನೀಡಿದ ಮನವಿಯಲ್ಲಿ ಯಾವ ಯಾವ ಕ್ಷೇತ್ರಕ್ಕೆ ಏಷ್ಟು ಪರಿಹಾರಕ್ಕೆ ಮನವಿ ಮಾಡಿತ್ತು?: ರಾಜ್ಯ ಸರ್ಕಾರವು ಬರ ಪರಿಹಾರಕ್ಕೆ ನೀಡಿದ ಮನವಿಯಲ್ಲಿ ಒಟ್ಟು 18,172 ಕೋಟಿ ರೂಪಾಯಿ ಹಣ ಬೇಕೆಂದು ಕೇಳಿತ್ತು. ಅದರಲ್ಲಿ 566 ಕೋಟಿ ರೂಪಾಯಿ ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು, 363 ಕೋಟಿ ರೂಪಾಯಿ ಜಾನುವಾರುಗಳ ಆಹಾರಕ್ಕೆ ಹಾಗೂ ಬೆಳೆ ಪರಿಹಾರಕ್ಕೆ ಹಣ ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಮನವಿಯಲ್ಲಿ ಶೀಘ್ರ ವಾಗಿ 8,177ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡುವಂತೆ ಆಗ್ರಹ ಮಾಡಿತ್ತು. 

ಬರಗಾಲದಲ್ಲಿ ಒಂದು ಹನಿ ನೀರು ಸಿಕ್ಕಿದರೂ ಅಮೃತ ಸಿಕ್ಕಂತೆ ಆಗುತ್ತದೆ ಎಂಬಂತೆ ರಾಜ್ಯದ ಬರಗಾಲದ ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ಸಹಾಯ ಆಗಲಿ ಎಂದು ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ.

ಇದನ್ನೂ ಓದಿ: SSLC ಫಲಿತಾಂಶ ನೋಡುವುದು ಹೇಗೆ?

ಇದನ್ನೂ ಓದಿ: ತಿಂಗಳಿಗೆ 5 ರಿಂದ 10 ಸಾವಿರ ಇನ್ವೆಸ್ಟ್ ಮಾಡಿ ಒಂದು ಕೋಟಿ ಗಳಿಸುವ SIP ಯೋಜನೆ