ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೋಡುತ್ತಾ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರವು ಯಶಸ್ವಿ ಆಗಿದೆ. ಈಗ ಹೊಸದಾಗಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಆರ್ಥಿಕ ಸಹಾಯ ಒದಗಿಸಲು 11 ಸಾವಿರ ರೂಪಾಯಿ ನೀಡುತ್ತಿದೆ. ಹಾಗಾದರೆ ಈ ಯೋಜನೆ ಯಾವುದು? ಯೋಜನೆಗೆ ಅರ್ಜಿ ಹಾಕಲು ಇರುವ ನಿಯಮಗಳು ಹಾಗೂ ಅರ್ಹತೆಗಳ ಬಗ್ಗೆ ಪೂರ್ತಿ ವಿವರ ಈ ಲೇಖನದಲ್ಲಿ ಇದೆ.
ಕೇಂದ್ರ ಸರ್ಕಾರದ ಈ ಯೋಜನೆ ಯಾರಿಗೆ ಲಭ್ಯವಿದೆ?: ಭಾರತದ ಎಲ್ಲ ರಾಜ್ಯಗಳ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಮಹಿಳೆಯರು ಗರ್ಭಿಣಿ ಇರುವಾಗ ಹೆಚ್ಚಿನ ರೆಸ್ಟ್ ಅಗತ್ಯ ಇರುತ್ತದೆ. ಆ ಸಮಯದಲ್ಲಿ ಬೇರೆ ಕಡೆ ಹೋಗಿ ದುಡಿಯಲು ಸಾಧ್ಯವಿಲ್ಲ. ಅದಕ್ಕೆ ಈ ಯೋಜನೆಯು ಮಹಿಳೆಯರ ಆರ್ಥಿಕ ಬದುಕಿಗೆ ಸಹಾಯ ಆಗುತ್ತದೆ.
ಗರ್ಭಿಣಿಗೆ ಸಹಾಯ ನೀಡುವ ಈ ಯೋಜನೆ ಯಾವುದು?
ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳೆಯರಿಗಾಗಿ ಆಯೋಜಿಸಿದ ವಿಶೇಷ ಯೋಜನೆ ಇದಾಗಿದೆ. ಈ ವಿಶೇಷ ಯೋಜನೆಯ ಹೆಸರು ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ. ಈ ಯೋಜನೆಯಲ್ಲಿ ಮಹಿಳೆಯರಿಗೆ ವಿವಿಧ ಕಂತಿನ ಮೂಲಕ 11,000 ರೂಪಾಯಿ ಸಹಾಯಧನವನ್ನು ಸರ್ಕಾರ ನೀಡುತ್ತದೆ. ಈ ಯೋಜನೆಯಿಂದ ಗರ್ಭಿಣಿ ಸಮಯದಲ್ಲಿ ಪೌಷ್ಟಿಕ ಆಹಾರ ಸೇವನೆ, ಪ್ರಸವದ ನಂತರ ಮಕ್ಕಳ ಆರೈಕೆಗೆ ಬೇಕಾಗುವ ಆಸ್ಪತ್ರೆ ಖರ್ಚು, ಔಷಿಧಿಗಳ ಖರ್ಚಿಗೆ ಸ್ವಲ್ಪ ಪ್ರಮಾಣದ ಸಹಾಯ ಆಗಲಿದೆ. ಯೋಜನೆಗೆ ಅರ್ಜಿ ಸಲ್ಲಿಸುವವರು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡುವವರಿಗೆ ಹೊಸ ನಿಯಮ ಜಾರಿ ಮಾಡಿದ ರೈಲ್ವೆ ಇಲಾಖೆ
ವಿವಿಧ ಕಂತುಗಳಲ್ಲಿ ಹಣ ಸಿಗುತ್ತದೆ.
ಫಲಾನುಭವಿ ಮಹಿಳೆಯು ಮೊದಲ ಬಾರಿ ಗರ್ಭಿಣಿ ಆಗಿದ್ದರೆ ಮೊದಲ ಕಂತಿನಲ್ಲಿ 3,000 ರೂಪಾಯಿ ಸಿಗುತ್ತದೆ. ಮೊದಲ ಕಂತಿನ ಹಣ ಪಡೆಯಲು ಗರ್ಭಧಾರಣೆಯ ನೋಂದಣಿ ಮತ್ತು ಕನಿಷ್ಠ ಒಂದು ಎನ್‌ಸಿ ಪೂರ್ಣವಾಗಿರಬೇಕು. ನಂತರ ಇನ್ನೊಂದು ಕಂತಿನಲ್ಲಿ 2,000 ಹಣ ಸಿಗುತ್ತದೆ. ಮಗುವಿನ ಜನನ ನೋಂದಣಿ ಆಗಬೇಕು ಹಾಗೂ ಮೊದಲ ಸುತ್ತಿನ ಲಸಿಕೆ ನಂತರ ನಿಮಗೆ ಎರಡನೇ ಸುತ್ತಿನ ಹಣ ಸಿಗುತ್ತದೆ. ಹಾಗೂ ಎರಡನೇ ಬಾರಿ ಹೆಣ್ಣು ಮಗು ಜನಿಸಿದರೆ ಮಗುವಿನ ನೋಂದಣಿ ಮತ್ತು ಮೊದಲ ಹಂತದ ಲಿಸಿಕೆ ಆದ ನಂತರ ಮಹಿಳೆಯ ಖಾತೆಗೆ ನೇರವಾಗಿ 6,000 ರೂಪಾಯಿ ಹಣ ಬರುತ್ತದೆ. ಒಟ್ಟು ಈ ಯೋಜನೆಯಲ್ಲಿ ಮೂರು ಕಂತಿನಲ್ಲಿ 11,000 ರೂಪಾಯಿ ಹಣವನ್ನು ಒಬ್ಬ ಮಹಿಳೆಗೆ ಸಿಗಲಿದೆ.
ಯೋಜನೆಯ ನಿಯಮಗಳು :-
- ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯು ಭಾರತದ ಪ್ರಜೆ ಆಗಿರಬೇಕು.
- ಮಹಿಳಾ ಅರ್ಜಿದಾರರ ಕನಿಷ್ಠ ವಯಸ್ಸು 19 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟಿರಬೇಕು.
- ಗರ್ಭಿಣಿ ಮಹಿಳೆ ಅಥವಾ ಹಾಲುಣಿಸುವ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸಹ ಈ ಯೋಜನೆ ಅರ್ಜಿ ಸಲ್ಲಿಸಲು ಅರ್ಹರು.
- ಅರ್ಜಿದಾರ ಮಹಿಳೆಯ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆ:- ಗರ್ಭಿಣಿ ಮಹಿಳೆಯ ಆಧಾರ್ ಕಾರ್ಡ್, ಗರ್ಭಿಣಿ ಕಾರ್ಡ್ ನಂಬರ್ ಮಗುವಿನ ಜನನ ಪ್ರಮಾಣಪತ್ರ, ವಿಳಾಸ ಪುರಾವೆ ಆದಾಯ ಮತ್ತು ಜಾತಿ ಪ್ರಮಾಣಪತ್ರ, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ಪಾಸ್ ಪುಸ್ತಕ, ಮೊಬೈಲ್ ಸಂಖ್ಯೆ, ಪಾಸ್ಪೋರ್ಟ್ ಅಳತೆಯ ಫೋಟೋ.
ಇದನ್ನೂ ಓದಿ: ಕೆಪಿಎಸ್‌ಸಿ ಇಲಾಖೆಯಲ್ಲಿ 200ಕ್ಕೂ ಹೆಚ್ಚಿನ PDO ಹುದ್ದೆಗಳ ಭರ್ತಿಗೆ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.