ಪ್ರತಿ ವರ್ಷವೂ ಸಹ ಸಿಇಟಿ ಪರೀಕ್ಷೆ ಮುಗಿದು ಎರಡು ಅಥವಾ ಮೂರು ದಿನಕ್ಕೆ ಉತ್ತರ ಪತ್ರಿಕೆಯ ಕೀ answer ಗಳನ್ನೂ ಇಲಾಖೆ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡುತ್ತಿತ್ತು ಆದರೆ ಈ ವರ್ಷ ಪ್ರಶ್ನೆ ಪತ್ರಿಕೆಯಲ್ಲಿ ಹಲವಾರು ಗೊಂದಲಗಳು ಸೃಷ್ಟಿ ಆಗಿರುವ ಕಾರಣ ಕೀ ಉತ್ತರ ಬಿಡುಗಡೆ ಆಗುವುದು ತಡವಾಗಿದೆ.
ಪರೀಕ್ಷೆಯಲ್ಲಿ ಉಂಟಾದ ಗೊಂದಲವೇನು?: ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಹಲವಾರು ಪ್ರಶ್ನೆಗಳು ಸಿಲೆಬಸ್ ಹೊರತಾಗಿ ಇತ್ತು. ಹಾಗೂ ಕೆಲವು ಪ್ರಶ್ನೆಗಳು ತಪ್ಪಾಗಿ ಇತ್ತು. ಅದರಿಂದ ಇಲಾಖೆ ಯಾವ ಯಾವ ಪ್ರಶ್ನೆಗಳು ತಪ್ಪಾಗಿದೆ ಎಂಬುದನ್ನು ತಿಳಿದು ಮುಂದಿನ ಕ್ರಮ ಕೈಗೊಂಡು ನಂತರ ಕೀ ಉತ್ತರವನ್ನು ಪ್ರಕಟಿಸಿದೆ.
ಯಾವ ಯಾವ ವಿಷಯಗಳ ಪ್ರಶ್ನೆಗಳು ಸಿಲೆಬಸ್ ಹೊರತಾಗಿದೆ?: 2023-24 ರ CET ಪರೀಕ್ಷೆಯಲ್ಲಿ ಭೌತಶಾಸ್ತ್ರ ವಿಷಯದಲ್ಲಿ 9 ಪ್ರಶ್ನೆಗಳು ಹಾಗೂ ರಸಾಯನ ಶಾಸ್ತ್ರ ವಿಷಯದಲ್ಲಿ 15 ಪ್ರಶ್ನೆಗಳು ಗಣಿತ ವಿಷಯದಲ್ಲಿ 15 ಪ್ರಶ್ನೆಗಳು ಹಾಗೂ ಜೀವಶಾಸ್ತ್ರ ವಿಷಯದಲ್ಲಿ 11 ಪ್ರಶ್ನೆಗಳು ಸಿಲೆಬಸ್ ಹೊರತಾಗಿ ತೆಗೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ತಾತ್ಕಾಲಿಕ ಕೀ ಉತ್ತರ ಬಿಡುಗಡೆ ಮಾಡಿದ ಇಲಾಖೆ :-
ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಕೀ ಉತ್ತರಗಳನ್ನು ಪ್ರಕಟಿಸಿದೆ. ಹಾಗೂ 30-04-2014 ರ ಬೆಳಗ್ಗೆ 11 ಗಂಟೆಯಿಂದ 7-05-2024 ರ ಬೆಳಗ್ಗೆ 11 ಗಂಟೆಯವರೆಗೆ ಕೀ ಉತ್ತರ ಪತ್ರಿಕೆಯ ಬಗ್ಗೆ ಯಾವುದೇ ರೀತಿಯ ಆಕ್ಷೇಪ ಇದ್ದರೆ ವಿಷಯ, ವರ್ಷನ್ ಕೋಡ್, ಪ್ರಶ್ನೆ ಪತ್ರಿಕೆಯ ಸಂಖ್ಯೆ ಯ ವಿವರಗಳ ಜೊತೆಗೆ justification ಅನ್ನು pdf ಮೂಲಕ ವೆಬ್ಸೈಟ್ ನಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಇಲಾಖೆ ಅಧಿಸೂಚನೆ ಹೊರಡಿಸಿದೆ. ವೆಬ್ಸೈಟ್ ವಿಳಾಸ :- http://kea.kar.nic.in
ಕೀ ಉತ್ತರಗಳನ್ನು ನೋಡುವುದು ಹೇಗೆ?: CET ಪರೀಕ್ಷೆಯ ಕೀ ಉತ್ತರಗಳನ್ನು ನೋಡಲು ಮೊದಲು ಇಲಾಖೆ ವೆಬ್ಸೈಟ್ ಲಿಂಕ್ https://cetonline.karnataka.gov.in/kea/ugcet2024 ಗೆ ಭೇಟಿ ನೀಡಿ. ನಂತರ ನಿಮಗೆ ಯುಜಿಸಿಇಟಿ 2024- ತಾತ್ಕಾಲಿಕ ಸರಿ ಉತ್ತರ ಎಂಬ ಆಪ್ಷನ್ ಕ್ಲಿಕ್ ಮಾಡಿ. ನಂತರ ನಿಮಗೆ ಜೀವಶಾಸ್ತ್ರ ತಾತ್ಕಾಲಿಕ ಉತ್ತರ, ಗಣಿತ ಶಾಸ್ತ್ರ ತಾತ್ಕಾಲಿಕ ಉತ್ತರ, ರಸಾಯನಶಾಸ್ತ್ರ ತಾತ್ಕಾಲಿಕ ಉತ್ತರ ಹಾಗೂ ಭೌತಶಾಸ್ತ್ರ ತಾತ್ಕಾಲಿಕ ಉತ್ತರ ಎಂಬ ನಾಲ್ಕು ಆಯ್ಕೆಗಳು ಕಾಣುತ್ತವೆ. ನೀವು ಯಾವ ವಿಷಯದ ಕೀ ಉತ್ತರಗಳನ್ನು ನೋಡಬಯಸುತ್ತಿರೋ ಆ ವಿಷಯವನ್ನು ಆಯ್ಕೆ ಮಾಡಿ ನಂತರ ನೀವು ಕೀ ಉತ್ತರದ ಫಿಡಿಎಫ್ ಪ್ರತಿ ಪಡೆಯಬಹುದು.
ಆಕ್ಷೇಪಣಾ ಪತ್ರ ಸಲ್ಲಿಸುವುದು ಹೇಗೆ?
ವೆಬ್ಸೈಟ್ ಲಿಂಕ್ https://cetonline.karnataka.gov.in/kea/ugcet2024 ಗೆ ಭೇಟಿ ನೀಡಬೇಕು ನಂತರ KEA UGCET- 2024 ಪ್ರಾವಿಶನಲ್ ಕೀ ಉತ್ತರಗಳು ಆಕ್ಷೇಪಣೆ ಲಿಂಕ್ ಎಂಬ ಆಪ್ಷನ್ ಕ್ಲಿಕ್ ಮಾಡಬೇಕು. ನಂತರ ಅರ್ಜಿ ಸಂಖ್ಯೆ, ಅಭ್ಯರ್ಥಿಯ ಹೆಸರು, ಹುಟ್ಟಿದ ದಿನಾಂಕ, ಪರೀಕ್ಷೆಯನ್ನು ಆಯ್ಕೆ ಮಾಡಿ ಹಾಗೂ ಕ್ಯಾಪ್ಟ ಸಂಖ್ಯೆಯನ್ನು ನಮೂದಿಸಿ ಲಾಗ್ ಇನ್ ಆಗಬೇಕು. ನಂತರ ನಿಮ್ಮ ಅಕ್ಷೇಪಣೆಯ ವಿವರಗಳನ್ನು ಸವಿವರವಾಗಿ ಫಾರ್ಮ್ ನಲ್ಲಿ ಭರ್ತಿ ಮಾಡಿ ಆಕ್ಷೇಪಣಾ ಪತ್ರ ಸಲ್ಲಿಸಬೇಕು. ಆಕ್ಷೇಪಣಾ ಪತ್ರ ಸಲ್ಲಿಸುವಾಗ ಪ್ರಶ್ನೆ ಸಂಖ್ಯೆ ಮತ್ತು ವಿಷಯವನ್ನು ಸರಿಯಾಗಿ ನಮೂದಿಸಿ.
ಇದನ್ನೂ ಓದಿ: 50 ಔಟ್ ಆಫ್ ಸಿಲೆಬಸ್ ಪ್ರಶ್ನೆ ಹೊರತು ಪಡಿಸಿ ಸಿಇಟಿ ಪರೀಕ್ಷೆಯ ಮೌಲ್ಯಮಾಪನ ನಡೆಯಲಿದೆ
ಇದನ್ನೂ ಓದಿ: ಬ್ಯಾಂಕ್ ಎಫ್‌ಡಿಯನ್ನು ಮೀರಿಸುವ ಬಡ್ಡಿ ಮತ್ತು ತೆರಿಗೆ ಪ್ರಯೋಜನಗಳೊಂದಿಗೆ ಸುರಕ್ಷಿತ ಹೂಡಿಕೆ ಮಾಡಿ!