Chandan gowda kr pete: ಒಬ್ಬ ಯೂಟ್ಯೂಬರ್ ಇಷ್ಟರ ಮಟ್ಟಿಗೆ ಜನಬೆಂಬಲ ಪಡೆದು, ಯಾವುದೇ ಹಣ ಆಮಿಷಗಳನ್ನ ನೀಡದೆ ಕೇವಲ ಅಭಿವೃದ್ಧಿ ವಿಚಾರ ವನ್ನ ಇಟ್ಟುಕೊಂಡು 16ಜನರ ಟೀಮ್ ನಲ್ಲಿ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸ್ತಿರೋ ಪರಿ ಹುಮ್ಮಸ್ಸು, ಚಂದನ್ ಮುಖದಲ್ಲಿರುವ ತೇಜಸ್ಸು, ಕಳೆ ನೋಡ್ತಿದ್ರೆ ಎಂಥವರಿಗೂ ಈ ಹುಡಗನನ್ನ ಒಮ್ಮೆ ಗೆಲ್ಲಿಸಿ ಕಳುಹಿಸಬೇಕು ಅನ್ನಿಸದೆ ಇರದು. ಇಷ್ಟು ಚಿಕ್ಕ ವಯಸ್ಸಿಗೆ ಆ ತಾಳ್ಮೆ, ಗುಂಪಲ್ಲಿ ಮಾತನಾಡುವಾಗ ಅವರಿಗಿರುವ ಪ್ರಭುದ್ಧತೆ ನಿಜಕ್ಕೂ ನಮ್ಮ ಈಗಿನ ರಾಜಕಾರಣಿಗಳಿಗೆ ಬರಲು ಸಾಧ್ಯವೇ ಇಲ್ವೇನೋ ಅನ್ನೋ ಸಂದೇಹ ಕಾಡೋಕೆ ಶುರುವಾಗಿ ಬಿಟ್ಟಿದೆ. ಚಂದನ್ ಕಣ್ಣಲ್ಲಿರೋ ತೇಜಸ್ಸು, ಆ ನಗು ಒಮ್ಮೆ ಇವ್ರೇ ಯಾಕೆ ವಿಧಾನಸಭೆ ಚನಾವಣೆ ಯಲ್ಲಿ ಗೆಲ್ಲಬಾರದು ಅಂತ ಕೊಂಕು ಮಾಡುವಂತೆ ಇರುತ್ತೆ. ನಿಜಕ್ಕೂ ಜನ ಯಾರನ್ನು ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳಲ್ಲ ಮೆಚ್ಚಿಕೊಳ್ಳಲ್ಲ ತನ್ನ ಮನೆ ಮಗ ಅಂತ ಹೇಳಿ ಹರಸಲ್ಲ, ಆದ್ರೆ ಚಂದನ್ ಗೆ ಇದೆಲ್ಲಾ ಸಿಕ್ಕಿದ್ದು ಅತೀ ಕಡಿಮೆ ಸಮಯ ದಲ್ಲಿ. ಹಾಗಾದ್ರೆ ಪಕ್ಷೇತರ ಅಭ್ಯರ್ಥಿ ಆಗಿ ಕಣಕ್ಕಿಳಿದಿರುವ ಚಂದನ್ ತತ್ವ ಸಿದ್ದಂತಾಗಳೇನು, ಗೆದ್ದಾಗ ಮಾಡಬೇಕಾಗಿರೋ ಕೆಲ್ಸಗಳ ಬಗ್ಗೆ ಅವ್ರಿಗಿರೋ ಆಶಕ್ತಿ ಏನು, ಜನ ಬೆಂಬಲ ಹೇಗೆ ಸಿಗ್ತಿದೆ, ಚುನಾವಣಾ ಪ್ರಚಾರ ಕಾರ್ಯಕ್ರಮ ಹೇಗ್ ನಡೀತಿದೆ ನೋಡೋಣ ಬನ್ನಿ.
ಚಂದನ್ ಈಗ ಎಲ್ಲರ ಮಧ್ಯೆಯು ಗುರುತಿಸಿಕೊಳ್ಳುತ್ತಿರೋ ಯುವ ಪ್ರತಿಭೆ, ಆದ್ರೆ ರಾಜಕೀಯಕ್ಕೆ ಎಂಟ್ರಿ ಕೊಡೋಕು ಮೊದಲು ಚಂದನ್ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಕಾಪಿ ಎಡಿಟರ್ ಆಗಿ ಕೆಲಸ ಮಾಡ್ತಿದ್ರು, ಅಲ್ಲಿನ ವಾತಾವರಣ ಸರಿಬರೆದಿದ್ದಾಗ ಬೆಂಗಳೂರನ್ನ ಬಿಟ್ಟು ತನ್ನ ತವರೂರು ಸೇರ್ತರೆ. ಆದಾದ ಮೇಲೆ ಏನ್ ಮಾಡೋದು ಅಂತ ಯೋಚನೆ ಮಾಡ್ತಿದ್ದ ಚಂದನ್ ಗೆ ಮೀಡಿಯಾ ನಂಟು ಬಿಡೋದಿಲ್ಲ ಈಗಾಗಿ ಯೌಟ್ಯೂಬ್ ಚಾನೆಲ್ ಒಂದನ್ನ ಶುರು ಮಾಡ್ತಾರೆ. ಮೂವರು ಸ್ನೇಹಿತರು ಸೇರಿ ಆರಂಭಿಸಿದ ಯೂಟ್ಯೂಬ್ ಚಾನೆಲ್ ಬಹಳ ಚೆನ್ನಾಗಿಯೇ ಕ್ಲಿಕ್ ಆಗುತ್ತೆ. ಆಗ ಚಂದನ್ ಜನರ ಮಧ್ಯೆ ನಿಂತು ಯಾಕೆ ಕೆಲವೊಂದು ಕಾರ್ಯಕ್ರಮ ಗಳನ್ನ ಮಾಡಬಾರದು ಅಂತ ಆಲೋಚಿಸಿ ಜನರ ನಡುವೆ ನಿಲ್ತಾರೆ ಅಲ್ಲಿಂದ ಚಂದನ್ ಜನರ ಪ್ರೀತಿ ವಿಶ್ವಾಸ ಗಳಿಸಿಕೊಳ್ಳುತ್ತಾರೆ. ಅದಾದ ನಂತರ ಯಾರೋ ಒಬ್ಬರು ಹೇಳಿದ ಮಾತನ್ನ ಯೋಚ್ನೆ ಮಾಡಿ ನೋಡಿ ತಾನೇಕೆ ತಮ್ಮೂರಿನ ಅಭಿವೃದ್ಧಿ ಮಾಡ ಬಾರದು ಚುನಾವಣೆಗೆ ನಿಲ್ಲಬಾರದು ಆಲೋಚಿಸಿ. ಯಾವ ಪಕ್ಷದ ಸಹವಾಸವೂ ಬೇಡ ಅವ್ರುಗಳಿಂದ ಹೊಸ ರೀತಿಯಾ ಕ್ರಾಂತಿ ಅಭಿವೃದ್ಧಿ ಸಾಧ್ಯವಾಗಲ್ಲ ಅಂತ ನಿರ್ಧರಿಸಿ, ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಕನಸು ಕಾಣುತ್ತಾರೆ. ಅದಕ್ಕೂ ಮೊದಲು ಹಳ್ಳಿ ಹಳ್ಳಿಗೂ ಹೋಗಿ ತಾನು ಚುನಾವಣೆಗೆ ನಿಂತ್ರೆ ಜನಬೆಂಬಲ ಸಿಗುತ್ತೆ ಅಂತ ಕೆಲವು ಕಾರ್ಯಕ್ರಮಗಳನ್ನ ಮಾಡ್ತಾರೆ ಅದನ್ನ ತಮ್ಮ ಯೌಟ್ಯೂಬ್ ನ್ಯೂಸ್ ಅಲರ್ಟ್ ಳು ಕೂಡ ಅಪ್ಲೋಡ್ ಮಾಡ್ತಾನ ಹೋಗ್ತಾರೆ. ಅಲ್ಲಿಂದ ಶುರುವಾಗುತ್ತೆ ಚಂದನ್ ಅವ್ರ ನೈತಿಕ ರಾಜಕಾರಣದ ಹವಾ..
ನೈತಿಕ ರಾಜಕಾರಣದಿಂದ ಜನರ ಮನಸ್ಸು ಗೆದ್ದ ಚಂದನ್ ಗೌಡ
ಹೌದು ಚಂದನ್ ಒಬ್ಬ ಸಾಮಾನ್ಯ ರೈತ ಕುಟುಂಬ ದಿಂದ ಬಂದವರು ಹೀಗಾಗಿ ಸಾಮಾನ್ಯರಲ್ಲಿ ಒಬ್ಬನ್ನಾಗಿರಲು ಬಯಸಿ ತಮ್ಮ ಕ್ಷೇತ್ರದ ಅಭಿವೃದ್ಧಿ ಆಗ್ಬೇಕು ಯುವಕರು ರಾಜಕಾರಣಕ್ಕೆ ಬರಬೇಕು ಅಂತ ತೀರ್ಮಾನಿಸಿ ಬದಲಾವಣೆ ಪರ್ವ ಆರಂಭಿಸಿದ್ದಾರೆ. ನೈತಿಕ ರಾಜಕಾರಣದ ಹೆಸರಿನಲ್ಲಿ ಈಗಾಗಲೇ ಸಾಕಷ್ಟು ಜನರ ಮನಸ್ಸನ್ನ ಗೆದ್ದಿದ್ದಾರೆ. ಪ್ರತಿ ಹಳ್ಳಿ ಹಳ್ಳಿಗೂ ಹೋಗಿ ಜನರ ಮಧ್ಯೆ ನಿಂತು ಅವ್ರ ಸಮಸ್ಯೆ ಗಳನ್ನ ಕೇಳಿ ಅವುಗಳನ್ನ ಸರಿಪಡಿಸಲು ಪ್ರಯತ್ನ ಮಾಡೋದಾಗಿ ಹೇಳ್ತಿರುವ ಚಂದನ್ ಅಪ್ಪಟ ಸಾಮಾನ್ಯ ಹುಡುಗ. ಚಂದನ್ ಮಾತಿನಲ್ಲಿರೋ ಗತ್ತು, ಕಾನ್ಫಿಡೆನ್ಸ್, ಹುಮ್ಮಸ್ಸು, ಹುರುಪು ಎಲ್ಲರಲ್ಲೂ ಬರಲ್ಲ. ಚಂದನ್ ಮಾತಾನಾಡುವಾಗ ಬಹಳ ಯೋಚನೆ ಮಾಡಿ ಮಾತನಾಡಲ್ಲ ಸೀದಾ ಸಾದಾ ಹಾಗೂ ಅರ್ಥಬದ್ದವಾಗಿ ಮಾತಾನಾಡ್ತಾರೆ. ಈ ಕಾರಣ ದಿಂದಲೇ ಮೊನ್ನೆ ನಾಮಪತ್ರ ಸಲ್ಲಿಸುವಾಗ್ಲೂ ಹಣದ ಆಮಿಷ ಇಲ್ಲದೆ ಬಂದಿದ್ದ ಜನರೇ ಇದಕ್ಕೆ ಪ್ರತ್ಯಕ್ಷ ಉದಾಹರಣೆ. ಯಾಕಂದ್ರೆ ಈಗ ಎಲ್ಲ ಪಕ್ಷದ ಮುಖಂಡರು ಸಾವಿರಾರು ಜನರನ್ನ ಸೇರಿಸಲು 500-1000 ರೂಪಾಯಿಯಂತೆ ಹಣ ನೀಡಿ ಕರೆಸಿಕೊಂಡು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಆದ್ರೆ ಚಂದನ್ ಯಾರೊಬ್ಬರಿಗೂ ಒಂದು ಬಿಡಿಕಾಸನ್ನು ಕೊಟ್ಟಿಲ್ಲ. ಅವತ್ತು ಬಂದಿದ್ದ ಜನರು ಚಂದನ್ ಮೇಲಿನ ಪ್ರೀತಿ ವಿಶ್ವಾಸಕ್ಕೆ ಅವತ್ತು ಅಷ್ಟು ಜನ ಬಂದಿದ್ರು.
ಇದನ್ನು ಓದಿ: ತಮಾಷೆ ಮಾಡಲು ಹೋಗಿ ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಂಡ!
ಚಂದನ್ ಗೌಡ ಪ್ರಾಚಾರ ಕಾರ್ಯದಲ್ಲಿ ಕೊಡ್ತಿರೋ ಲೆಟರ್ ನಲ್ಲಿ ಏನಿದೆ ಗೊತ್ತಾ?
ನಾಮಪತ್ರ ಸಲ್ಲಿಸಿದ ನಂತರವೂ ಚಂದನ್ ಹೇಳಿದ್ದು ಒಂದೇ ಮಾತು ನನಗೆ ಮತ ನೀಡಿ ಅಂತ ನಾನು ಯಾವತ್ತೂ ಕೇಳಲ್ಲ ಈಗ ನಾಮಪತ್ರ ಸಲ್ಲಿಸಿರೋ ಅಷ್ಟು ಜನರನ್ನ ನೋಡಿ, ಅವ್ರಲ್ಲಿ ನಿಮಗೆ ಯಾರು ಉತ್ತಮ ಅನ್ನಿಸ್ತಾರೋ ಅವ್ರಿಗೆ ಓಟ್ ಹಾಕಿ. ಆದ್ರೆ ಓಟ್ ಹಾಕ್ದೆ ಮಾತ್ರ ಇರಬೇಡಿ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ದಿಂದ ಇವತ್ತು ನಾನಿಲ್ಲಿ ನಿಂತಿದೀನಿ. ಗೆದ್ದಾಗ ಹಿಗ್ಗಾಲ್ಲ ಸೋತಾಗ ಕುಗ್ಗಲ್ಲ, ಆದ್ರೆ ಪ್ರಯತ್ನ ಮಾಡೋದ್ರಿಂದ ಏನು ಕಳ್ಕೊಲಲ್ಲ ಅಲ್ವಾ ಆ ಪ್ರಯತ್ನ ಇವತ್ತು ನಾನು ಮಾಡ್ತಿದೀನಿ ಅಂತ ಹೇಳ್ತಿದ್ದಾರೆ. ಎಲ್ಲೇ ಹೋದ್ರು ನನಗೆ ಮತ ನೀಡಿ ಅಂತ ಚಂದನ್ ಕೇಳ್ತಿಲ್ಲ, ಒಳ್ಳೆ ವ್ಯಕ್ತಿಗೆ ಓಟ್ ಹಾಕಿ ಅಂತ ಹೇಳ್ತಾರೆ ಜನರ ಮನಸಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ತಾವು ಗೆದ್ರೆ ತಮ್ಮ ಕ್ಷೇತ್ರದ ಪ್ರತಿ ಹಳ್ಳಿಗೂ ಹೋಗಿ ಸಮಸ್ಯೆ ಕೇಳಿ ಅದನ್ನ 2ವರ್ಷದ ಒಳಗೆ ಪರಿಹಾರ ಮಾಡ್ದೆ ಇದ್ದ ಪಕ್ಷದಲ್ಲಿ ತಾನು ಶಾಸಕ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ, ನನ್ನನ್ನ ಕೆಳಗಿಳಿಸುವ ಹಕ್ಕೂ ನಿಮಗಿದೆ ಅಂತ ಹೇಳಿ ಒಂದು ಪತ್ರವನ್ನ ಸಿದ್ದಪಡಿಸಿ ಅಂದ್ರೆ ಅಗ್ರಿಮೆಂಟ್ ಕೊಡ್ತಿದ್ದಾರೆ. ಈ ಅಗ್ರಿಮೆಂಟ್ ಲೆಟರ್ ಈಗ ಟ್ರೆಂಡ್ ಆಗ್ತಿದೆ.
ಒಟ್ಟಿನಲ್ಲಿ ಯುವ ರಾಜಕಾರಣಿ ಯುವ ಸಂದೇಶಗಳು, ಹೊಸ ಪ್ರಯತ್ನ, ನೈತಿಕ ರಾಜಕಾರಣದ ಮೂಲಕ ಕರ್ನಾಟಕದಲ್ಲಿ ಹೊಸ ಅಲೆ ಎಬ್ಬಿಸಲು ಪ್ರಯತ್ನ ಪಡ್ತಿರೋದ್ರಿಂದ ಚಂದನ್ ಅವ್ರಿಗೆ ಇಷ್ಟು ಜನ ಬೆಂಬಲ ಮೇಲಾಗಿ ಯುವಕ ಯುವತಿಯರ ಬೆಂಬಲ ಸಿಗ್ತಿದೆ, ಎಲ್ಲೇ ಹೋದ್ರು ನಿನಗೂ ಒಂದು ಅವಕಾಶ ಕೊಟ್ಟು ನೋಡ್ತಿವಿ ಹೋಗಪ್ಪ ಅಂತಾಲೇ ಹೇಳ್ತಿದ್ದಾರೆ. ಕೇವಲ 16ಜನರ ಟೀಮ್ ನಲ್ಲಿ ಚಂದನ್ ಪ್ರಚಾರ ಕಾರ್ಯ ಮಾಡ್ತಿದ್ರು ಕೂಡ ಅವ್ರಿಗೆ ಸಿಕ್ತಿರೋ ಜನ ಬೆಂಬಲ ಅಪಾರ. ಎಲ್ಲೇ ಹೋದ್ರು ಚಂದನ್ ನ ಜನ ಗುರ್ತಿಸುತ್ತಾರೆ, ಆಶೀರ್ವಾದ ಮಾಡಿ ಕಳುಹಿಸುತ್ತಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದ್ರು ಚಂದನ ಅವ್ರ ಪರವಾದ ಬೆಂಬಲ ವ್ಯಕ್ತವಾಗ್ತಿದೆ. ಯಾವುದ್ರಲ್ಲೂ ಕೂಡ ನೆಗೆಟಿವ್ ಕಮೆಂಟ್ಸ್ ಇಲ್ಲ.. ಪ್ರತಿಯೊಬ್ಬರೂ ಕೂಡ ಚಂದನ್ ಗೆ ಬೆಂಬಲ ಕೊಡ್ತೇವೆ, ಚಂದನ್ ನ ಗೆಲ್ಲಿಸಿ ಅಂತಾನೆ ಹೇಳ್ತಿದ್ದಾರೆ. ಹಣ ಚೆಲ್ಲಿ ರಾಜಕಾರಣ ಮಾಡುವ ಜಯಾಮಾನ ಚಂದನ್ ದಲ್ಲ ಹೊಸ ಅಲೆಯೇಬ್ಬಿಸಲು ಪ್ರಯತ್ನಿಸೋಣ ಚಂದನ್ ಗೆ ಬೆಂಬಲಿಸೋಣ ಅಂತಿದ್ದಾರೆ.
ಇದನ್ನು ಓದಿ: ನಟ ದರ್ಶನ್ ಅವ್ರು ಮಾಧ್ಯಮದವರಿಗೆ ಕ್ಷಮೆಯಾಚನೆ ಮಾಡಿದ್ರ? ವೈರಲ್ ಆಗ್ತಿರೋ ಪ್ರೆಸ್ ನೋಟ್ ನಿಜಕ್ಕೂ ಸತ್ಯನಾ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram