Chandraprabha Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭಾ..ಮದುವೆ ವಿಚಾರವನ್ನ ಯಾರಿಗೂ ತಿಳಿಸದೇ ಗುಟ್ಟಾಗಿ ಮದುವೆಯಾಗಿದ್ದೇಕೆ?

Chandraprabha Marriage: ಕಾಮಿಡಿ ಟಾಕೀಸ್ ರಿಯಾಲಿಟಿ ಶೋ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕಾಮಿಡಿ ಕಲಾವಿದ ಚಂದ್ರಪ್ರಭಾ ಜನಪ್ರಿಯತೆಯ ಜೊತೆಗೆ ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡ್ರು. ಹೌದು ಚಂದ್ರಪ್ರಭಾ ಆರಂಭದಲ್ಲಿ ಶೋ ಆಡಿಷನ್ ಗೆ ಬಂದಾಗ ಇವನಿಂದ ಏನ್ ಸಾಧ್ಯ ಅಂದವರಿಗೆ ಇದೀಗ ಚಂದ್ರಪ್ರಭಾ ಕಾಮಿಡಿ ಟೈಮಿಂಗ್ ಉತ್ತರ ನೀಡ್ತಿದೆ. ಹೌದು ಈ ಕಾರ್ಯಕ್ರಮದಲ್ಲಿ ಚಂದ್ರಪ್ರಭಾ ಅವ್ರ ಸ್ಕಿಟ್ ಇದೆ ಅಂದ್ರೆ ಅಲ್ಲಿ ಏನಾದ್ರೂ ಒಂದು ಮಜಾ ಇದ್ದೆ ಇರುತಿತ್ತು ಅಷ್ಟ ಮಟ್ಟಿಗೆ ಚಂದ್ರಪ್ರಭಾ ಎಲ್ಲರನ್ನ ತನ್ನತ್ತ ಸೆಳೆದಿಟ್ಟುಕೊಳ್ಳುತ್ತಿದ್ರು. ಸ್ಕಿಟ್ ಮುಗಿದ ಮೇಲು ಆಂಕರ್, ಜಡ್ಜ್ ಗಳು ಸಹ ಕಲಾವಿದರು ಯಾರು ಎಷ್ಟೇ ಕಾಲು ಎಳೆದರೂ ಎಷ್ಟೇ ರೇಗಿಸಿದರು ಕೂಡ ಚಂದ್ರಪ್ರಭಾ ಯಾವುದಕ್ಕೂ ಕೋಪಿಸಿಕೊಳ್ಳದೆ ಎಲ್ಲವನ್ನ ನಗು ನಗುತ್ತಾಳೆ ಸ್ವೀಕರಿಸುವ ಒಬ್ಬ ಉತ್ತಮ ಕಲಾವಿದ.

WhatsApp Group Join Now
Telegram Group Join Now

ಇನ್ನು ಗಿಚ್ಚಿ ಗಿಲಿಗಿಲಿ ಶೋನಲ್ಲಿ ಚಂದ್ರಪ್ರಭಾ ಅವ್ರ ಮದುವೆ ವಿಚಾರ ಸಾಕಷ್ಟು ಚರ್ಚೆ ಆಗ್ತಾಲೆ ಇತ್ತು, ಅದಕ್ಕೂ ಕೂಡ ಚಂದ್ರಪ್ರಭಾ ಬೇಸರ ಮಾಡಿಕೊಳ್ಳದೆ ನನಗೆ ಯಾರು ಸಿಗ್ತಾರಪ್ಪ ಅಂತ ಹೇಳಿ ಸುಮ್ಮನಾಗಿಬಿಟ್ಟಿದ್ರು, ಅಲ್ದೇ ಯಾವ ಹುಡುಗಿ ನನ್ನನ್ನ ನೋಡಿದ್ರು ಮಾತಿಗು ಮೊದಲೇ ಅಣ್ಣ ಅಂದುಬಿಡ್ತಾಳೆ ಇನ್ನು ಮದುವೆ ಎಲ್ಲಪಾ ಅಂತ ಹೇಳ್ತಿದ್ದ ಚಂದ್ರಪ್ರಭಾ ಇದೀಗ ಯಾರಿಗೂ ಹೇಳದೆ ಮದುವೆ ಆಗಿದ್ದಾರೆ. ತಮ್ಮ ಮದುವೆಯ ಕುರಿತಂತೆ ಚಂದ್ರಪ್ರಭಾ ಇದೀಗ ಸೋಷಿಯಲ್ ಮೀಡಿಯಾ ಅಂದ್ರೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ದೇ ಚಂದ್ರಪ್ರಭಾ ಅವ್ರ ಹುಡುಗಿ ಕೂಡ ಈ ವಿಚಾರವನ್ನ ಶೇರ್ ಮಾಡಿದ್ದಾರೆ. ಹಾಗಾದ್ರೆ ಚಂದ್ರಪ್ರಭಾ ಗುಟ್ಟಾಗಿ ಮದುವೆ ಆದ್ರೆ, ಮದುವೆಯಾಗಿರುವ ಹುಡುಗಿ ಯಾರು, ಹೇಗಿದ್ದಾರೆ, ಏನ್ ಮಾಡ್ತಿದ್ದಾರೆ, ಮದುವೆ ಇಷ್ಟು ಸಿಂಪಲ್ ಹಾಗೂ ಯಾರಿಗೂ ಹೇಳದಂತೆ ಇಷ್ಟು ಆತುರದಲ್ಲಿ ಮದುವೆಯಾಗಿದ್ದು ಯಾಕೆ ಎಲ್ಲವನ್ನ ನೋಡೋಣ ಬನ್ನಿ..

ಹೌದು ಪಕ್ಕಾ ಹಳ್ಳಿಯ ಮುಗ್ದ ಪ್ರತಿಭೆ ಚಂದ್ರಪ್ರಭಾ ಇದೀಗ ತನ್ನ ಪ್ರತಿಭೆಯನ್ನು ಮೂಲಕವೇ ಎಲ್ಲರ ಮನೆಮಾತಾಗಿದ್ದಾರೆ. ಮದುವೆಯ ವಿಚಾರವಾಗಿ ಟ್ರೋಲ್ ಆಗಿ ಸಹ ಕಲಾವಿದರು, ಜಡ್ಜ್ ಗಳು ಎಲ್ಲರು ಕೂಡ ಇವ್ರ ಕಾಲು ಎಳಿಯುತ್ತಿದ್ರು ಯಾವುದಕ್ಕೂ ಬೇಸರ ಮಾಡಿಕೊಳ್ಳದೆ ನಗುಮುಖದಲ್ಲೇ ಎಲ್ಲವನ್ನ ಸರಿದೂಗಿಸಿಕೊಂಡು ಹೋಗುವ ಕಲಾವಿದ ಇದೀಗ ಎಲ್ಲರಿಗೂ ಶಾಕ್ ಜೊತೆಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೌದು ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಚಾರವನ್ನ ಸ್ವತಃ ಚಂದ್ರಪ್ರಭಾ ಪತ್ನಿ ಅವ್ರೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಹೌದು ಚಂದ್ರಪ್ರಭಾ ಹಾಗೂ ಅವ್ರು ಮದುವೆಯಾಗಿರುವ ಹುಡುಗಿ ಇಬ್ಬರು ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋಗಳನ್ನ ಹಂಚಿಕೊಂಡು ನಾವು ಮದುವೆಯಾಗಿರೋದಾಗಿ ತಿಳಿಸಿದ್ದಾರೆ. ಮೈ ಸೊಲ್ಮೆಟ್ ಅಂತ ಹಾರ್ಟ್ ಎಮೋಜಿಗಳನ್ನ ಹಾಕುವ ಮೂಲಕ ತಮ್ಮ ವಿವಾಹದ ಸುದ್ದಿಯನ್ನ ಅಧಿಕೃತ ಗೊಳಿಸಿದ್ದಾರೆ. ಈ ಮೂಲಕ ವಯಸ್ಸಾದ್ರೂ ಮದುವೆ ಆಗಿಲ್ಲ ಅಂತ ಕಾಲು ಎಳೆಯುತ್ತಿದ್ದವರ ಬಾಯಿಗೆ ಬೀಗ ಹಾಕಿಸಿದ್ದಾರೆ.

 

View this post on Instagram

 

A post shared by Bharthi Priya (@bharthi.priya.1393)

ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ವಿಡಿಯೋ ಹಂಚಿಕೊಂಡ ಸತಿಪತಿ

ಇನ್ನು ಚಂದ್ರಪ್ರಭಾ ಮದುವೆಯಾಗಿರುವ ಹುಡುಗಿಯ ಹೆಸರು ಭಾರತಿ, ಇವ್ರ ಇನ್ಸ್ಟಾಗ್ರಾಮ್ ಖಾತೆಯನ್ನ ನೋಡುತ್ತಿದ್ರೆ ಭಾರತಿ ಅವ್ರಿಗೂ ನಟನೆಯಲ್ಲಿ ಆಸಕ್ತಿ ಇರುವಂತೆ ತೋರುತ್ತಿದ್ದೂ, ಆಗಾಗ ರೀಲ್ಸ್ ಗಳನ್ನ ಮಾಡಿರುವ ವಿಡಿಯೋಗಳನ್ನ ಹಂಚಿಕೊಂಡಿದ್ದಾರೆ. ಇನ್ನು ಚಂದ್ರಪ್ರಭಾ ಹಾಗೂ ಭಾರತಿ ಅವ್ರಿಗೆ ತುಂಬಾ ದಿನಗಳಿಂದಲೇ ಪರಿಚಯ ಇರುವಂತೆ ಕಾಣುತ್ತಿದ್ದೂ, ಈ ವಿಚಾರವನ್ನ ಈ ಹಿಂದೆ ಎಲ್ಲಿಯೂ ಈ ಇಬ್ಬರು ಹೇಳಿಕೊಂಡಿಲ್ಲ, ಆದರೆ ಮದುವೆಯಾದ ನಂತರ ಒಂದೊಂದೇ ವಿಡಿಯೋಗಳನ್ನ ಶೇರ್ ಮಾಡಿ ತಾವಿಬ್ಬರು ಸತಿಪತಿಗಳು ಅನ್ನೋದನ್ನ ಖಾತ್ರಿ ಪಡಿಸಿದ್ದಾರೆ. ಇಬ್ಬರು ಕೂಡ ತಮ್ಮ ಮದುವೆ ಹಾಗೂ ತಾವಿಬ್ಬರು ಭೇಟಿಯಾದಾಗ ಒಟ್ಟಿಗೆ ತೆಗೆದ ಫೋಟೋಗಳನ್ನ ಎಡಿಟ್ ಮಾಡಿ ವಿಡಿಯೋ ಮಾಡುವ ಮೂಲಕ ಆ ವಿಡಿಯೋವನ್ನ ಹಂಚಿಕೊಂಡು ಸ್ನೇಹಿತರು ಅಭಿಮಾನಿಗಳು ಹಾಗೂ ಆಪ್ತರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನೀವು ಸಹ ಇಬ್ಬರಿಗೂ ವಿಶ್ ಮಾಡಿ ಒಳ್ಳೆಯದಾಗ್ಲಿ ಅಂತ ಶುಭ ಆರೈಸಿ.

ಇದನ್ನೂ ಓದಿ: ಈ ಬಾರಿ TRP ಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದ ‘ಗಟ್ಟಿಮೇಳ’, ಉಳಿದ ಧಾರಾವಾಹಿಗಳು ಎಷ್ಟನೇ ಸ್ಥಾನ?

ಇದನ್ನೂ ಓದಿ: ಮತ್ತೆ ಕಿರುತೆರೆಗೆ ಮರಳಿದ ನಟಿ ಅಭಿನಯ! ಮತ್ತೊಂದು ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಲಿರುವ ನಟಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram