ನೀವು ಮಂಗಳವಾರ ಜನಿಸಿದ್ರೆ ಇದನ್ನ ನೀವು ತಿಳಿದುಕೊಳ್ಳಲೇಬೇಕು! ಇಂಥವರನ್ನ ಎದುರು ಹಾಕಿಕೊಂಡ್ರೆ ಆಗೋದೇ ಬೇರೆ..

ಸ್ನೇಹಿತರೆ ಮನುಷ್ಯ ಅಂದಮೇಲೆ ಒಬ್ಬರಿಗಿಂತ ಮತ್ತೊಬ್ಬರು ಭಿನ್ನಾಭಿಪ್ರಾಯ ಹಾಗೂ ವಿಭಿನ್ನವಾಗಿರುತ್ತಾರೆ. ಕೆಲವೊಂದು ಹೋಲಿಕೆಗಳನ್ನ ಬಿಟ್ರೆ ಎಲ್ಲ ಮನುಷ್ಯರು ಕೂಡ ತಮ್ಮದೇ ಅದು ಗುಣ ಲಕ್ಷಣಗಳನ್ನ ಹೊಂದಿರುತ್ತಾರೆ. ಇದು ಅವ್ರು ಹುಟ್ಟಿದ ದಿನದಿಂದ ಪ್ರಭಾವಿತವಾಗಿರುತ್ತದೆ ಅನ್ನೋದು ಧಾರ್ಮಿಕ ಶಾಸ್ತ್ರಗಳಲ್ಲಿನ ನಂಬಿಕೆ. ಹೌದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ ಏಳು ದಿನಗಳು ತಮ್ಮದೇ ಆದ ಪ್ರತ್ಯೇಕ ಗ್ರಹವನ್ನು ಹೊಂದಿವೆ. ವಾರದ ಪ್ರತಿಯೊಂದು ದಿನವನ್ನೂ ಬೇರೆ ಬೇರೆ ಗ್ರಹಗಳು ಆಳುತ್ತವೆ. ಅಂದ್ರೆ ಸೋಮವಾರ ಚಂದ್ರ ಗ್ರಹ ಮತ್ತು ಮಂಗಳವಾರ(Tuesday) ಮಂಗಳ ಗ್ರಹ.

WhatsApp Group Join Now
Telegram Group Join Now

ಇದೆ ಹಾದಿಯಾಗಿ ಪ್ರತಿ ದಿನವೂ ತನ್ನದೇ ಆದ ಪ್ರತ್ಯೇಕ ಗ್ರಹವನ್ನು ಪ್ರತಿಯೊಂದು ದಿನವೂ ಹೊಂದಿದೆ. ಹೀಗಾಗಿ ಇದು ಈ ದಿನಗಳಲ್ಲಿ ಜನಿಸಿದ ಜನರ ಮೇಲೆ ಈ ಗ್ರಹಗಳು ಪರಿಣಾಮ ಬೀರುತ್ತವೆ. ಅಲ್ದೇ ಈ ವಾರಗಳು ನಮ್ಮ ವ್ಯಕ್ತಿತ್ವದ ಮೇಲೆ ಬಲವಾದ ಪ್ರಭಾವ ಬೀರುತ್ತದೆ. ಹೀಗಾಗಿ ಗ್ರಹಗಳ ಪ್ರಭಾವದಿಂದ ನಮ್ಮ ನಡವಳಿಕೆಯೂ ಒಬ್ಬರಿಗಿಂತ ಒಬ್ಬರದು ಭಿನ್ನವಾಗಿರುತ್ತದೆ. ಒಂದಷ್ಟು ಹೋಲಿಕೆ ಮಾಡೋದನ್ನ ಬಿಟ್ಟರೆ ಒಬ್ಬರು ಮತ್ತೊಬ್ಬರಿಗಿಂತ ಸಂಪೂರ್ಣ ಭಿನ್ನಾವಾಗುರಿತ್ತೆ ಅದಕ್ಕೆ ಹುಟ್ಟಿದ ದಿನ ಬಹಳ ಪ್ರಭಾವ ಬಿರುತ್ತೆ ಅಂತ ಜ್ಯೋತಿಷ್ಯ ಶಾಸ್ತ್ರ ಹೇಳುತ್ತೆ. ಅದ್ರಲ್ಲೂ ಮಂಗಳವಾರ ಜನಿಸಿದವರನ್ನ ಎದುರು ಹಾಕಿಕೊಳ್ಳಲೇಬಾರದು ಅಂತ ಹೇಳಾಲಾಗ್ತಿದ್ದು, ಈ ದಿನ ಜನಿಸಿದವರ ಸ್ವಭಾವ ಗುಣ ಹೇಗಿರುತ್ತೆ ಅಂತ ನೋಡೋಣ.

ಹೌದು ವಾರಗಳಲ್ಲಿ ಮಂಗಳವಾರ ತುಂಬಾ ಅದೃಷ್ಟಶಾಲಿ ಅಂತ ಹೇಳಲಾಗಿದ್ದು ಈ ಮಂಗಳವಾರದಂದು ಜನಿಸಿದವರು ತುಂಬಾ ಧೈರ್ಯಶಾಲಿ ಮತ್ತು ತ್ವರಿತ ಸ್ವಭಾವವನ್ನು ಹೊಂದಿರುತ್ತಾರಂತೆ. ಇನ್ನು ಇವರಿಗೆ ಸವಾಲುಗಳನ್ನು ಎದುರಿಸುವುದೆಂದರೆ ಬಹಳ ಇಷ್ಟ. ಆದ್ರು ಈ ದಿನ ಹುಟ್ಟಿದ ಜನರು ಕೋಪಕ್ಕೆ ಹೆಚ್ಚು ಒಳಗಾಗುತ್ತಾರೆ. ಈ ವ್ಯಕ್ತಿಗಳು ತಮ್ಮ ಕೆಲಸದ ಬಗ್ಗೆ ತುಂಬಾ ಗಂಭೀರವಾಗಿರುತ್ತಾರೆ. ಆದರೆ ಅವರು ಶುದ್ಧ ಹೃದಯ ಮತ್ತು ಶುದ್ಧ ಆಲೋಚನೆಗಳನ್ನು ಹೊಂದಿರುತ್ತಾರೆ. ಇವರು ಎಲ್ಲದರಲ್ಲೂ ದೌರ್ಬಲ್ಯಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ, ಮತ್ತು ಕೆಲವೊಮ್ಮೆ ಹಿಂಸಾತ್ಮಕರಾಗುತ್ತಾರೆ. ಕೆಲವೊಮ್ಮೆ ಈ ವ್ಯಕ್ತಿಗಳು ಸಣ್ಣ ವಿಷಯಗಳ ಬಗ್ಗೆಯೂ ಹಾಸ್ಯವನ್ನು ಮಾಡಿದರೆ ಸಹಿಸುವುದಿಲ್ಲ. ಅವರ ಸಕಾರಾತ್ಮಕ ಗುಣವೆಂದರೆ ಅವರು ತಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ತಮ್ಮ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಾರೆ. ಹೌದು ಈ ರಾಶಿಯವರು ಸ್ವಲ್ಪ ವಿಚಿತ್ರ ಸ್ವಭಾವದವರು ಅನಿಸುದರು ಇದು ನಿಜ. ಕೆಲವೊಮ್ಮೆ ಇವ್ರು ಅತ್ಯುತ್ತಮರು ಅನುಸಿದರು ಮತ್ತು ಕೆಲವೊಮ್ಮೆ ವಿಚಿತ್ರ ಅನಿಸುತ್ತದೆ. ಆದರೂ ಕೂಡ ಬಹಳ ಮುಗ್ದ ಮನಸ್ಸಿನವರು.

ಇದನ್ನೂ ಓದಿ: ನಿತ್ಯ 10ಲಕ್ಷ ಆದಾಯ ರೈತನ ಅದೃಷ್ಟ ಬದಲಿಸಿದ ಟೊಮೊಟೊ; ಟೊಮೊಟೊ ಬೆಳೆಯೊ ಟೆಕ್ನಿಕ್ ಬದಲಿಸಿತು ರೈತನ ಆದಾಯ

ಈ ದಿನ ಜನಿಸಿದವರ ಗುಣ ಸ್ವಭಾವ ಹೇಗಿರುತ್ತೆ ಗೊತ್ತಾ?

ಇನ್ನು ಮಂಗಳವಾರ(Tuesday) ಜನಿಸಿದವರ ವಿಶೇಷ ಗುಣ ಮತ್ತು ಸ್ವಭಾವಗಳ ಬಗ್ಗೆ ಮಾತಾನಾಡೋದಾದ್ರೆ ಮಂಗಳವಾರದಂದು ಜನಿಸಿದವರಿಗೆ ಅಡುಗೆ ಮಾಡುವುದರಲ್ಲಿ ಆಸಕ್ತಿ ಇರುವುದಿಲ್ಲ. ಅಡುಗೆ ಮಾಡುವುದೆಂದರೆ ಹೆಚ್ಚು ದುಃಖವನ್ನು ಅನುಭವಿಸುತ್ತಾರೆ. ಈ ಜನರು ಸಂತೋಷದ ಸಂಪತ್ತನ್ನು ಹೊಂದಿರುತ್ತಾರೆ. ಇವರು ಸಣ್ಣ ಸುಳ್ಳನ್ನು ಸಹಿಸುವುದಿಲ್ಲ, ಸತ್ಯಕ್ಕೆ ತಮ್ಮ ಸಂಪೂರ್ಣ ಭಕ್ತಿಯನ್ನು ನೀಡುತ್ತಾರೆ. ಮತ್ತು ದುಷ್ಟರ ಬಗ್ಗೆ ತಮ್ಮ ಅಸಹನೆಯನ್ನು ಬಹುಬೇಗ ಹೊರಹಾಕುತ್ತಾರೆ. ಇನ್ನುಈ ರಾಶಿಯವರಿಗೆ ಪ್ರೀತಿಯನ್ನು ಮುಂದುವರಿಸಿಕೊಂಡು ಹೋಗುವುದು ಕಷ್ಟದ ಮಾತು. ಅಲ್ದೇ ಮಂಗಳವಾರ ಹುಟ್ಟಿದವರ ವೃತ್ತಿ ಜೀವನ ತುಂಬ ಚೆನ್ನಾಗಿರುತ್ತದೆ. ಹೌದು ಮಂಗಳವಾರ ಜನಿಸಿದವರ ಉತ್ತಮ ಲಕ್ಷಣವೆಂದರೆ ಇವರು ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಈ ವ್ಯಕ್ತಿಗಳು ದೊಡ್ಡ ಸಮಸ್ಯೆಗಳನ್ನು ತುಂಬಾ ತ್ವರಿತವಾಗಿ ಪರಿಹರಿಸುತ್ತಾರೆ. ಇವರ ವ್ಯಕ್ತಿತ್ವವು ತುಂಬಾ ಆಕರ್ಷಕವಾಗಿರುತ್ತದೆ ಮತ್ತು ಸದಾ ನ್ಯಾಯದ ಕಡೆ ಇರುತ್ತದೆ. ಯಾವುದೇ ಸವಾಲುಗಳನ್ನು ತೆಗೆದುಕೊಳ್ಳುವ ಮೂಲಕ ವೃತ್ತಿ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಾರೆ. ಈ ಮೂಲಕ ಇತರರನ್ನು ಸುಲಭವಾಗಿ ಸೆಳೆದುಕೊಳ್ಳುವ ಗುಣವನ್ನು ಹೊಂದಿರುತ್ತಾರೆ. ಮಂಗಳವಾರ ಜನಿಸಿದವರು ಸದಾ ಹೊಸತನ್ನು ಕಲಿಯಲು ಇಷ್ಟಪಡುತ್ತಾರೆ. ತಾಂತ್ರಿಕ ಕೆಲಸ ಮತ್ತು ದೈಹಿಕ ಕೆಲಸದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ. ಇನ್ನು ಈ ದಿನ ಜನಿಸಿದವರ ಮತ್ತೊಂದು ವಿಶೇಷತೆ ಅಂದ್ರೆ ಒಬ್ಬರನ್ನು ಪ್ರೀತಿಸಲು ಇವ್ರು ಆರಂಭಿಸಿದರೆ ಅವರಿಗಾಗಿ ಯಾವುದೇ ಸಮಸ್ಯೆಯನ್ನು ಎದುರು ಹಾಕಿಕೊಳ್ಳಲು ಸಿದ್ದರಿರುತ್ತಾರೆ. ಆದರೆ ಸ್ವಭಾದಲ್ಲಿ ನೀವು ಹೆಚ್ಚು ಚಿಂತೆಯಲ್ಲಿಯೇ ಇರುವುದರಿಂದ, ಸದಾ ನಿಮ್ಮ ಆಲೋಚನೆಗಳಲ್ಲಿಯೇ ಮುಳುಗಿರುವುದರಿಂದ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ನಿಮಗೆ ಕಷ್ಟವಾಗುತ್ತದೆ.

ನಿಮ್ಮ ಪ್ರೀತಿಯನ್ನು ಕಂಡುಕೊಳ್ಳಲು ನಿಮ್ಮ ಸಂಗಾತಿಯ ಭಾವನಾತ್ಮಕ ಅಗತ್ಯಗಳನ್ನು ನೀವು ಪರಿಗಣಿಸುವುದು ಮುಖ್ಯ. ನೀವು ಯಾವಾಗಲೂ ಯಾವುದೇ ಮುಂದಾಲೋಚನೆ ಇಲ್ಲದೆ ಆಡುವ ಮಾತಿನಿಂದ ನಿಮ್ಮ ಸಂಗಾತಿಯನ್ನು ಅಸಮಾಧಾನಗೊಳಿಸುತ್ತೀರಿ. ನೀವು ಮಾತನಾಡುವ ಮೊದಲು ಎರಡು ಅಥವಾ ಮೂರು ಬಾರಿ ಯೋಚಿಸಿ. ಜೀವನದ ಸಮಸ್ಯೆಗಳನ್ನು ವಿವಿಧ ದೃಷ್ಟಿಕೋನಗಳಿಂದ ನೋಡಿ. ಈ ನಿಲುವು ನಿಮ್ಮ ಮತ್ತು ನಿಮ್ಮ ಪ್ರೀತಿಯ ಸಂಗಾತಿಯ ನಡುವೆ ಸಾಮರಸ್ಯ ಮತ್ತು ಉತ್ತಮ ತಿಳುವಳಿಕೆಯನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಮಂಗಳವಾರ ಜನಿಸಿದವರ ಅದೃಷ್ಟದ ಬಣ್ಣ – ಕೆಂಪು ಮತ್ತು ಮರೂನ್ ಇವ್ರ ಅದೃಷ್ಟದ ಸಂಖ್ಯೆ – 3,6,9. ಇನ್ನು ಮಂಗಳವಾರ ಜನಿಸಿದವರು ಮಂಗಳವಾರ ದಾನಧರ್ಮಗಳನ್ನು ಮಾಡುವುದು ಬಹಳ ಉತ್ತಮ. ಈ ದಿನದಂದು ನಿರ್ಗತಿಕರಿಗೆ ದಾನ ಮಾಡೋದು ಶ್ರೇಯಸ್ಸು ಅಂತ ಹೇಳಲಾಗಿದ್ದು. ಇವ್ರು ಸಾಧ್ಯವಾದಷ್ಟು ಕಪ್ಪು ಬಣ್ಣವನ್ನ ಬಳಸದೆ ಇರೋದು ಒಳಿತು. ಇದು ಮಂಗಳನಿಗೆ ವಿರುದ್ಧವಾದ ಬಣ್ಣವಾಗಿದೆ. ಹೀಗಾಗಿ ಸಾಧ್ಯವಾದಷ್ಟು ಕೆಂಪು, ಕಿತ್ತಳೆ ಬಣ್ಣದ ವಸ್ತ್ರ ಉಡುಗೆ ತೊಡುಗೆಗಳನ್ನ ಬಳಸೋದು ಬಹಳಷ್ಟು ಉತ್ತಮ.

ಇದನ್ನೂ ಓದಿ: ಅಮಾವಾಸ್ಯೆಯ ದಿನ ಈ 3 ವಸ್ತುಗಳನ್ನು ಮನೆಗೆ ತರಬಾರದು! ಲಕ್ಷ್ಮೀ ದೇವಿ ನಿಮ್ಮ ಮನೆಯಿಂದ ಶಾಶ್ವತವಾಗಿ ಹೊರಹೋಗಿ ಬಿಡ್ತಾಳೆ!

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram