Vanshika: ಮಾಸ್ಟರ್ ಆನಂದ್ ಮಗಳು ವಂಶಿಕಾ ಹೆಸರಲ್ಲಿ ಮೋಸ! ಫೋಟೋಶೂಟ್, ಟ್ಯಾಲೆಂಟ್ ಶೋ ಹೆಸರಲ್ಲಿ ಲಕ್ಷ ಲಕ್ಷ ಪಿಕಿರೋ ಐನಾತಿ.. ಪೊಲೀಸ್ ಸ್ಟೇಷನ್ ಎದುರೆ ಲೈವ್ ಬಂದ ಯಶಸ್ವಿನಿ ಆನಂದ್

Vanshika: ವಂಶಿಕಾ ಅಂಜನಿ ಕಶ್ಯಪ, ಮಾಸ್ಟರ್ ಆನಂದ್ ಅವ್ರ ಮುದ್ದಿನ ಮಗಳು. ಸದ್ಯ ಕಿರುತೆರೆಯಲ್ಲಿ ಒಂದು ರೀತಿಯ ಅಲೆ ಸೃಷ್ಟಿ ಮಾಡಿರೋ ಪುಟ್ಟ ಪೋರಿ ಅಂತಲೇ ಹೇಳಬಹುದು. ಹೌದು ಸದ್ಯಕ್ಕೆ ಕಾಲ ಲೋಕದಲ್ಲಿ ತನ್ನದೆ ಆದ ಛಾಪು ಮೂಡಿಸಿ ಎಲ್ಲರ ಮನ ಗೆದ್ದ ಮುಗ್ದ ಪ್ರತಿಭೆ ಅಂತ ಹೇಳಬಹುದು. ಅಪ್ಪಂನಂತೆ ಮಗಳು ಕೂಡ ಒಳ್ಳೆಯ ಪ್ರತಿಭೆ. ಹೌದು ನಟ ಮಾಸ್ಟರ್‌ ಆನಂದ್‌ರಂತೆ ಅರಳು ಹುರಿದಂತೆ ಪಟ ಪಟ ಅಂತ ಮಾತನಾಡುವ ವಂಶಿಕಾ ಸೋಶಿಯಲ್‌ ಮೀಡಿಯಾದಲ್ಲೂ ಹೆಚ್ಚು ಸದ್ದು ಮಾಡುತ್ತಿದ್ದಾಳೆ. ಅಷ್ಟೆ ಮುದ್ದಾಗಿ ಆಕ್ಟಿಂಗ್ ಮಾಡ್ತಾಳೆ, ಡೈಲಾಗ್ಸ್ ಅಂತೂ ಚಿಂದಿ ಅಂತ ಹೇಳಬಹುದು ಇಷ್ಟು ಸಣ್ಣ ವಯಸ್ಸಿಗೆ ಆ ಮಟ್ಟಿನ ಆಸಕ್ತಿ ಹೊಂದಿರೋ ಈ ಪೋರಿಗೆ ಕಲಾ ದೇವತೆಯ ಆಶೀರ್ವಾದ ಸದಾ ಇದ್ಯೇನೋ ಅಂತ ಎಲ್ಲರು ಅಂದುಕೊಳ್ಳುವಷ್ಟು ಮನೋಜ್ಞಾವಾಗಿ ನಟಿಸುತ್ತಾಳೆ ಈ ಪುಟ್ಟ ಪೋರಿ. ಆದ್ರೆ ಇದೀಗ ಈ ಪುಟ್ಟ ಮಗುವಿನ ಹೆಸರನ್ನ ಬಳ್ಸಿಕೊಂಡು ಐನಾತಿಯೋಬ್ಬಳು ಕೆಲವೊಂದಷ್ಟು ಜನರಿಂದ ಲಕ್ಷ ಲಕ್ಷ ಪೀಕಿದ್ದು ಇದೀಗ ವಂಶಿಕಾ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಅಂತ ಹೇಳಿ ವಂಶಿಕ ತಾಯಿ ಯಶಸ್ವಿನಿ ಠಾಣೆ ಮೆಟ್ಟಿಲೇರಿದ್ದಾರೆ.

WhatsApp Group Join Now
Telegram Group Join Now

ಎಲ್ಲ ತಂದೆ ತಾಯಿಗೂ ವಂಶಿಕ(Vanshika) ಥರ ನನ್ನ ಮಗೂನೂ ಆಗಬೇಕು ಬಣ್ಣದ ಲೋಕದಲ್ಲಿ ನನ್ನ ಮಗುಗು ಒಂದು ನೆಲೆ ಸಿಗಬೇಕು ಹಾಗೆ ಹೀಗೆ ಅಂತ ಸಾಕಷ್ಟು ಆಸೆ ಕನಸುಗಳನ್ನ ಇಟ್ಟುಕೊಂಡಿರುತ್ತಾರೆ. ಕೇವಲ ಬಣ್ಣದ ಲೋಕ ಅಂತ ಅಲ್ಲ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಮಕ್ಕಳು ಬೆಳೀಬೇಕು ಗುರುತಿಸಿಕೊಳ್ಳಬೇಕು ಅನ್ನೋ ಆಸೆ ತಂದೆ ತಾಯಿಗೆ ಇದ್ದೆ ಇರುತ್ತೆ. ಅದರಂತೆ ಕೆಲವೊಂದಷ್ಟು ಜನ ತಮ್ಮ ಮಗ ಅಥವಾ ಮಗಳು ಬಣ್ಣದ ಲೋಕಕೆ ಬರಬೇಕು ಅಲ್ಲಿ ಒಳ್ಳೆ ವೇದಿಕೆ ಸಿಗಬೇಕು ಅಂದಾಗ ಒಂದಷ್ಟು ಹಣ ಖರ್ಚದ್ರೂ ಪರವಾಗಿಲ್ಲ ಅಂತ ಧೈರ್ಯ ಮಾಡ್ತಾರೆ. ಆದ್ರೆ ಕೆಲವೊಂದಷ್ಟು ಕೀಳು ಮನಸ್ಸಿನ ಜನರು ದಾರಿ ಯಾವುದಾದರೇನು ತಮಗೆ ಹಣ ಬಂದ್ರೆ ಸಾಕು ಅಂತ ದೋಖಾ ಮಾಡಲು ಹೊರಟು ಬಿಡುತ್ತಾರೆ.

ಅಷ್ಟೆ ಆಗಿದ್ರೆ ಪರವಾಗಿರಲಿಲ್ಲ ಆದ್ರೆ ಒಂದು ಚಿಕ್ಕ ಮಗುವಿನ ಹೆಸರನ್ನ ಬಳಸಿಕೊಂಡು ತಂದೆ ತಾಯಿಗಳಿಗೆ ಮೋಸ ಮಾಡೋದು ಅಂದ್ರೆ ಸುಮ್ಮನೆನಾ ಈಗ ಆಗಿರೋದು ಇದೆ. ವಂಶಿಕ ಹೆಸರಲ್ಲಿ ಈಗ ಸಾಕಷ್ಟು ಜನರ ಬಳಿ ಸಾಕಷ್ಟು ಹಣವನ್ನ ತೆಗೆದುಕೊಂಡು ಯಾಮಾರಿಸಿದ್ದಾರೆ. ಹೌದು ಆ್ಯಡ್ ಶೂಟ್, ಕಾರ್ಯಕ್ರಮಗಳು, ಮಕ್ಕಳ ಟ್ಯಾಲೆಂಟ್ ಶೋ, ಖಾಸಗಿ ಚಾನಲ್‌ನಲ್ಲಿ ಟ್ಯಾಲೆಂಟ್ ಶೋ ನೆಪದಲ್ಲಿ ವಂಚನೆ ಮಾಡುತ್ತಿರುವ ಆರೋಪ ಕೇಳಿ ಬಂದಿದ್ದು, ನಿಶಾ ನರಸಪ್ಪ ಎಂಬಾಕೆ ವಂಶಿಕಾ ಹೆಸರಿನಲ್ಲಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದಿದ್ದಾರೆ. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಸದಾಶಿವನಗರ ಠಾಣೆಯಲ್ಲಿ ವಂಶಿಕಾ ತಾಯಿ ಯಶಸ್ವಿನಿ ಆನಂದ್ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: 35 ವರ್ಷಗಳ ಬಳಿಕ ಹಳೆ ಪ್ರೇಮಿಗಳ ಭೇಟಿ! ಹರಟೆ, ಮಾತುಕತೆ, ಭಾವುಕತೆ ಜೊತೆಗೆ ಆಗಿದ್ದೇನು ಗೊತ್ತಾ?

ದೋಖ ಕುರಿತು ಪೊಲೀಸ್ ಠಾಣೆ ಮೆಟ್ಟಿಲೇರಿದ ವಂಶಿಕ ತಾಯಿ

ಹೌದು ಸೋಶಿಯಲ್‌ ಮೀಡಿಯಾದಲ್ಲಿ ಎನ್‌ಎನ್‌ ಪ್ರೊಡಕ್ಷನ್‌ ಎಂಬ ಪೇಜ್‌ ತೆರೆದು, ಅಮಾಯಕರಿಗೆ ವಂಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ನಿಮ್ಮ ಮಕ್ಕಳಿಗೂ ಆಲ್ಬಂನಲ್ಲಿ ಫೋಟೊ ಶೂಟ್‌ಗೆ ಚಾನ್ಸ್ ಕೊಡಿಸುವುದಾಗಿ ಹೇಳಿ ನೂರಾರು ಪೋಷಕರಿಗೆ ವಂಚನೆ ಮಾಡಿದ್ದಾರೆ. ನಿಶಾ ನರಸಪ್ಪಗೆ ಹಣ ಕೊಟ್ಟು ಮೋಸ ಹೋದ ಪೋಷಕರು ದೂರು ದಾಖಲಿಸಿದ್ದಾರೆ. ಸದ್ಯ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ನಿಶಾ ನರಸಪ್ಪರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಯನ್ನು ನಡೆಸಿದ್ದಾರೆ. ಜನರು ಇಂತಹವರಿಂದ ಮೋಸ ಹೋಗಿ ಹಣ ಕಳೆದುಕೊಳ್ಳದಂತೆ ವಂಶಿಕಾ ತಾಯಿ ಯಶಸ್ವಿನಿ ಮನವಿ ಮಾಡಿದ್ದಾರೆ. ಹೌದು ಯಶಸ್ವಿನಿ ವಂಶಿಕ(Vanshika) ಫೇಜ್ ಇಂದ ಲೈವ್ ಬಂದು ಆಗ್ತಿರೋ ದೋಖ ಬಗ್ಗೆ ಇಂಚಿಚು ಮಾಹಿತಿಯನ್ನ ಕೊಟ್ಟಿದ್ದಾರೆ.

ಪೊಲೀಸ್ ಠಾಣೆಯ ಮುಂದೆ ನಿಂತು ಕೆಲವೊಂದಷ್ಟು ಪೋಷಕರಿಂದಲೇ ಆಗಿರೋ ಮೋಸದ ಬಗ್ಗೆ ಮಾಹಿತಿ ಕೊಟ್ಟಿದ್ದು ಇನ್ಮುಂದೆ ಯಾರು ಈ ರೀತಿಯ ಜನರಿಂದ ಮೋಸ ಹೋಗಬೇಡಿ. ನಿಮಗೆ ಆಸೆಯಿರುತ್ತೆ ಆಗಂತ ಇಂಥವರಿಗೆ ಹಣ ಕೊಟ್ಟು ಮೋಸ ಹೋಗಬೇಡಿ. ಹಣ ಕೊಡೊ ಮೊದಲು ಒಮ್ಮೆ ಅಲ್ಲ ಸಾವಿರ ಸಲ ಯೋಚ್ನೆ ಮಾಡಿ.. ಈಗ ಸಾಕಷ್ಟು ಜನ ಹಣ ಕಳೆದುಕೊಂಡಿದ್ದಾರೆ. ಆದ್ರೆ ಇನ್ಮುಂದೆ ಈಗಾಗೋದು ಬೇಡ. ಈ ರೀತಿ ಹೇಳ್ಕೊಂಡು ಹಣ ಕೇಳುದ್ರೆ ಕೊಡಬೇಡಿ, ಅವೆಲ್ಲಾ ಮಾಡೋದು ಅಷ್ಟು ಸುಲಭ ಅಲ್ಲ. ದಯಮಾಡಿ ಅರ್ಥ ಮಾಡಿಕೊಳ್ಳಿ ಅಂತ ಕೇಳಿಕೊಂಡು ಠಾಣೆಗೆ ಹೋಗಿ ನಿಶಾ ವಿರುದ್ಧ ದೂರು ಕೊಟ್ಟಿದ್ದು, ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ದೇ ನಿಶಾ ಪೊಲೀಸ್ ಠಾಣೆಯಲ್ಲಿರೋ ಬಗ್ಗೆ ವಂಚನೆಗೂಳಗಾಗಿರೋ ಪೋಷಕರಿಗೆ ಈ ಮೂಲಕ ತಿಳಿಸಿ ತಾವು ಬಂದು ದೂರು ನೀಡುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ತಮ್ಮ ಮದುವೆಯ ಆರತಕ್ಷತೆಗೆ ಅಭಿಮಾನಿಗಳನ್ನು ಅಹ್ವಾನಿಸಿದ ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ ಹಾಗೂ ಪಲ್ಲವಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram