ಚಿತ್ರದುರ್ಗ ಗ್ರಾಮ ಪಂಚಾಯಿತಿಗಳಲ್ಲಿ ನೇಮಕಾತಿಗೆ ಅರ್ಜಿ ಅಹ್ವಾನ; ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ನೇಮಕಾತಿ ಆರಂಭ

Chitradurga Gram Panchayat Recruitment

ಪ್ರತಿ ಜಿಲ್ಲೆಯಲ್ಲಿಯೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಂಥಾಲಯಗಳು ಇದ್ದೆ ಇರುತ್ತೆ. ಸುಜ್ಞಾನದ ಭಂಡಾರ ಅಂತ ಕರೆಸಿಕೊಳ್ಳುವ ಅಕ್ಷರ ದೇವಸ್ಥಾನದಲ್ಲಿ ಇದೀಗ ಉದ್ಯೋಗ ಖಾಲಿಯಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಹೌದು ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೌದು ಚಿತ್ರದುರ್ಗ ಜಿಲ್ಲಾ ಪಂಚಾಯತ್​ ವ್ಯಾಪ್ತಿಯ ಗ್ರಾಮ ಪಂಚಾಯತ್​ನಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

WhatsApp Group Join Now
Telegram Group Join Now

ಅದರಲ್ಲಿ ಒಟ್ಟು ಆರು ಹುದ್ದೆಗಳ ಭರ್ತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮುಖ್ಯವಾಗಿ ಚಿತ್ರದುರ್ಗದ ಮದಕರಿಪುರ, ಗೋಡಬನಾಳ್​, ಚಳ್ಳಕೆರೆಯ ಕಾಲುವೇಹಳ್ಳಿ, ಎನ್​ ದೇವರಹಳ್ಳಿ, ಗೌರ ಸಮುದ್ರ ಮತ್ತು ಮೊಳಕಾಲ್ಮೂರಿನ ಜೆಬಿ ಹಳ್ಳಿಗಳಲ್ಲಿ ತಲಾ ಒಂದರಂತೆ ಖಾಲಿ ಇರುವ ಒಟ್ಟು 6 ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ. ಹೀಗಾಗಿ ಆಸಕ್ತರು ಅರ್ಜಿ ಸಲ್ಲಿಸಬಹುದು. ಹಾಗಾದ್ರೆ ಅರ್ಜಿ ಸಲ್ಲಿಸೋದು ಹೇಗೆ ಎಲ್ಲಿ ಮತ್ತು ಬೇಕಾಗಿರುವ ದಾಖಲಾತಿಗಳೇನು ಸಂಪೂರ್ವಾಗಿ ನೋಡೋಣ ಬನ್ನಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ವಿದ್ಯಾರ್ಹತೆ ಮತ್ತು ಅರ್ಜಿ ಸಲ್ಲಿಕೆ ಹೇಗೆ ಮತ್ತು ಕೊನೆ ದಿನ ಯಾವಾಗ

ಹೌದು ತೆರವಾಗಿರುವ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಈಗಾಗ್ಲೇ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಇದರ ಲಾಭ ಪಡೆಯಲು ಅರ್ಹ ಮತ್ತು ಆಸಕ್ತರು ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಕೆ ಮಾಡಬಹುದು. ಇನ್ನು ಅರ್ಜಿ ಸಲ್ಲಿಸಲು ಕೆಲವೊಂದು ಮನದಂಡಗಳು ಇರೋದು ಸಹಜ ಹೌದು ಅರ್ಜಿ ಸಲ್ಲಿಸುವಂತ ಅಭ್ಯರ್ಥಿಗಳು ಪಿಯುಸಿ ವಿದ್ಯಾರ್ಹತೆ ಪಡೆದಿರಬೇಕು. ಮುಖ್ಯವಾಗಿ ಸರ್ಟಿಫಿಕೇಷನ್​ ಕೋರ್ಸ್​ ಇನ್​​ ಲೈಬ್ರರಿ ಸೈನ್ಸ್​ ಪ್ರಮಾಣಪತ್ರ ಪಡೆದಿರಬೇಕು. ಜೊತೆಗೆ ಕನಿಷ್ಠ 3 ತಿಂಗಳ ಕಂಪ್ಯೂಟರ್​ ಕೋರ್ಸ್​ ಉತ್ತೀರ್ಣರಾಗಿರಬೇಕು. ಸರ್ಟಿಫಿಕೇಷನ್​ ಕೋರ್ಸ್​ ಇನ್​ ಲೈಬ್ರರಿ ಸೈನ್ಸ್​ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸದಿದ್ದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಹುದ್ದೆಗೆ ಪರಿಗಣಿಸಲಾಗುತ್ತದೆ ಎಂದು ಹೇಳಲಾಗಿದೆ.

ಇನ್ನು ಅಭ್ಯರ್ಥಿಗಳು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಯಾಗಿರಬೇಕು. ಅಂದ್ರೆ ಈಗ ಚಿತ್ರದುರ್ಗ ಜಿಲ್ಲೆಯಲ್ಲಿ 6 ಕಡೆಗೆ ಅರ್ಜಿ ಆಹ್ವಾನಿಸಿರೋದ್ರಿಂದ ಅಭ್ಯರ್ಥಿಗಳು ಆಯಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿವಾಸಿಗಳಾಗಿರುವುದು ಅತೀ ಮುಖ್ಯ. ಇನ್ನು ವಯೋಮಿತಿ ವಿಚಾರಕ್ಕೆ ಬಂದ್ರೆ ಅರ್ಜಿ ಸಲ್ಲಿಸೋರಿಗೆ ಕನಿಷ್ಠ 18 ವರ್ಷಮತ್ತು ಗರಿಷ್ಠ 35 ವರ್ಷ ವಯೋಮಿತಿ ಹೊಂದಿರಬೇಕು, ಅಂತವರು ಅರ್ಜಿ ಸಲ್ಲಿಸಲು ಅರ್ಹರು ಅಂತ ಹೇಳಬಹುದು. ಇನ್ನು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ.ಜಾತಿ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷದವರೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಬೇಕಾದ ದಾಖಲಾತಿಗಳನ್ನು ನೀಡಿದ ಮೇಲೆ ದಾಖಲೆಗಳನ್ನು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತಿ ಡಿಸೆಂಬರ್ 26ವರೆಗು ಅರ್ಜಿ ಸಲ್ಲಿಸಬಹುದು. ಇನ್ನು ಅಭ್ಯರ್ಥಿಗಳು ಜಿಲ್ಲಾಡಳಿತದ ವೆಬ್​ಸೈಟ್​ನಲ್ಲಿ ನೀಡಲಾಗಿರುವ ನಿಗದಿತ ಅರ್ಜಿಯನ್ನು ಭರ್ತಿ ಮಾಡಬೇಕು. ಹೌದು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಈ ಅರ್ಜಿಯನ್ನು ಭರ್ತಿ ಮಾಡಬೇಕಿದೆ ಇದು ಅತ್ಯಾವಶ್ಯಕ. ಹೌದು ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯಿತಿ, ಸ್ಟೇಡಿಯಂ ರಸ್ತೆ, ಚಿತ್ರದುರ್ಗ. ಇಲ್ಲಿಗೆ ಅಂಚೆ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನು ಈ ಹಿಂದೆಯೇ ಹೇಳಿದಂತೆ ಈ ಹುದ್ದೆಗೆ ಡಿಸೆಂಬರ್​ 6 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಡಿಸೆಂಬರ್​ 26 ಆಗಿದೆ. ಹೀಗಾಗಿ ಆಸಕ್ತರು ತಕ್ಷಣವೇ ಉದ್ಯೋಗವಾಕಾಶವನ್ನ ಪಡೆಯಬೇಕು ಅಂದು ಕೊಂಡಿದ್ರೆ, ಹುದ್ದೆಯನ್ನ ನಿರ್ವಹಿಸಲು ನಿಮಗೆ ಅರ್ಹತೆ ಇದ್ರೆ ಖಂಡಿತಾ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಇನ್ನು ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು chitradurga.nic.in ಗೆ ಭೇಟಿ ನೀಡಿ ಅವಶ್ಯಕ ಮಾಹಿತಿ ಪಡೆದು ಮುಂದುವರೆಯಬಹುದು.

ಅಧಿಸೂಚನೆ PDFಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮತ್ತೊಂದು ಸಿಹಿಸುದ್ದಿ ನೀಡಿದ ರಾಜ್ಯ ಸರ್ಕಾರ, ಮುಂದಿನ ವರ್ಷ 8ನೇ ತರಗತಿಯ ಮಕ್ಕಳಿಗೆ ಸೈಕಲ್ ವಿತರಣೆ

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯ ಹಣ ಇನ್ನು ಕೈ ಸೇರಿಲ್ಲ; ಡಿಸೆಂಬರ್ ಕಳೆಯುತ್ತ ಬಂದ್ರು ಹಣ ಮಾತ್ರ ಬಂದಿಲ್ಲ