ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದವರು ಸೋಮವಾರ ( ಫೆಬ್ರವರಿ 5) ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ ವರೆಗೆ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದರೆ. ಉದ್ಯೋಗ ಹುಡುಕುತ್ತಾ ಇರುವವರು ಸಂದರ್ಶನದಲ್ಲಿ ಭಾಗವಹಿಸಿ. ಪಿಯುಸಿ, ಡಿಗ್ರೀ, ಡಿಪ್ಲೊಮಾ ಮುಗಿಸಿದವರು ನಿಮ್ಮ Resume ಮತ್ತು ಮಾರ್ಕ್ಸ್ ಕಾರ್ಡ್ ಜೆರಾಕ್ಸ್ ನಿಮ್ಮ ಭಾವಚಿತ್ರದೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಚಿತ್ರದುರ್ಗಕ್ಕೆ ಭೇಟಿ ನೀಡಿ.
ಉದ್ಯೋಗ ಮೇಳಕ್ಕೆ ಬರುವ ಸಂಸ್ಥೆಗಳು :- ಐಸಿಐಸಿಐ ಬ್ಯಾಂಕ್, ಕ್ರೇಡಿಟ್ ಅಕ್ಸೆಸ್ ಗ್ರಾಮೀಣ್ ಲಿಮಿಟೆಡ್ ಗಳಲ್ಲಿ ನೂರಕ್ಕೂ ಹೆಚ್ಚು ಖಾಲಿ ಇರುವ ಹುದ್ದೆಗಳಿಗೆ ನೇಮಕ ನಡೆಯುತ್ತದೆ. ರಿಲೇಶಿಯನ್ಶಿಪ್ ಮ್ಯಾನೇಜರ್ ಮತ್ತು ಟ್ರೈನೀ ಮ್ಯಾನೇಜರ್ ಹುದ್ದೆಗಲಿಗೆ ನೇರ ಸಂದರ್ಶನ ನಡೆಯುತ್ತದೆ. 18 ರಿಂದ 28 ವರ್ಷದೊಳಗಿನವರು ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗಳ ಪೂರ್ಣ ವಿವರ:- ಐಸಿಐಸಿಐ ಬ್ಯಾಂಕ್ (ಟಿವಿಎಸ್ ಟ್ರೈನಿಂಗ್ ಸರ್ವೀಸಸ್) ನಲ್ಲಿ 80 ರಿಲೇಶಿಯನ್ಶಿಪ್ ಮ್ಯಾನೇಜರ್ (relationship manager) ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ. ಪದವಿ ಮುಗಿಸಿದವರು ಅರ್ಜಿ ಸಲ್ಲಿಸಬಹುದು. ಬಿ.ಇ, ಬಿ.ಟೆಕ್ ಮತ್ತು ಎಂಬಿಎ ಪದವಿಯನ್ನು ಹೊರತುಪಡಿಸಿ ಅರ್ಜಿ ಸಲ್ಲಿಸಬಹುದು. ಉದ್ಯೋಗಕ್ಕೆ ಸೇರಿದ ತಕ್ಷಣ ತಿಂಗಳಿಗೆ 21 ಸಾವಿರ ರೂಪಾಯಿ ಸಂಬಳ ಸಿಗುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕ್ರೇಡಿಟ್ ಅಕ್ಸೆಸ್ ಗ್ರಾಮೀಣ್ ಲಿಮಿಟೆಡ್ನಲ್ಲಿ40 ಟ್ರೈನೀ ಕೇಂದ್ರ ಮ್ಯಾನೇಜರ್ ಹುದ್ದೆಗಳಿಗೆ ಸಂದರ್ಶನ ನಡೆಯುತ್ತದೆ. ಪಿಯುಸಿ, ಐಟಿಐ, ಯಾವುದೇ ಪದವಿ ಮುಗಿಸಿದವರು ಸಂದರ್ಶನಕ್ಕೆ ಬರಬಹುದು. ತಿಂಗಳಿಗೆ 13 ಸಾವಿರ ಸಂಬಳ ಸಿಗುತ್ತದೆ. ದಾವಣಗೆರೆ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ.
ಇದನ್ನೂ ಓದಿ: ಮುಂಗಡ ಬುಕಿಂಗ್ ಗೆ ಲಭ್ಯವಿರುವ iQOO Neo 9 Pro ನ ದಿನಾಂಕ ಮತ್ತು ವಿಶೇಷತೆಗಳನ್ನು ತಿಳಿಯಿರಿ
ರಾಜ್ಯ ಸರ್ಕಾರದಿಂದ ನಡೆಯಲಿದೆ ಉದ್ಯೋಗ ಮೇಳ
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ ನಡೆಸುವುದಾಗಿ ಈ ಹಿಂದೆ ತಿಳಿಸಿದ್ದರು. ಈಗ ಉದ್ಯೋಗ ಮೇಳ ನಡೆಯುವ ದಿನಾಂಕವನ್ನು ತಿಳಿಸಲಾಗಿದೆ. ಬೃಹತ್ ಉದ್ಯೋಗ ಮೇಳವನ್ನೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಆಯೋಜಿಸಿದೆ. ‘ಯುವ ಸಮೃದ್ಧಿ ಸಮ್ಮೇಳನ’ ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆಬ್ರವರಿ 19 ಮತ್ತು 20 ರಂದು ಉದ್ಯೋಗ ಮೇಳ ನಡೆಯುತ್ತದೆ. ಪಿಯುಸಿ, ಐಟಿಐ, ಡಿಗ್ರೀ, ಡಿಪ್ಲೊಮಾ ಓದಿದವರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ನಿರುದ್ಯೋಗಿ ಯುವಕ ಯುವತಿಯರ ಜೊತೆಗೆ ಈಗಾಗಲೇ ಉದ್ಯೋಗ ಮಾಡುತ್ತಾ ಇರುವವರು ಸಹ ಉದ್ಯೋಗ ಮೇಳಕ್ಕೆ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ಉದ್ಯೋಗ ಮೇಳದಲ್ಲಿ ಭಾಗವಹಿಸಲು ನಿರುದ್ಯೋಗಿ ಆಗಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ ವೆಬ್ಸೈಟ್ ಗೆ ಹೋಗಿ ರಿಜಿಸ್ಟರ್ ಬಟನ್ ಒತ್ತಿ. ನಂತರ ಉದ್ಯೋಗ ಮೇಳ ಎಂಬ ಆಯ್ಕೆ ಒತ್ತಿ. ಅಭ್ಯರ್ಥಿ ನೋಂದಣಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯಲ್ಲಿ ನಿಮ್ಮ ಹೆಸರು ವಯಸ್ಸು ನಿಮ್ಮ ವಿದ್ಯಾರ್ಹತೆ, ಎಲ್ಲವನ್ನೂ ಭರ್ತಿಮಾಡಿ.
ಉದ್ಯೋಗ ಮಾಡುತ್ತಿರುವವರು ಸಹ ಅರ್ಜಿ ಸಲ್ಲಿಸಬೇಕು ಎಂದರೆ ಮೇಲೆ ತಿಳಿಸುವ ವೆಬ್ಸೈಟ್ ಗೆ ತೆರಳಿ ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ, ಉದ್ಯೋಗಗಳು ಎಂಬ ಆಯ್ಕೆ ಒತ್ತಿ, ನಂತರ ಉದ್ಯೋಗದಾತ ನೋಂದಣಿ ಎಂಬ ಬಟನ್ ಕ್ಲಿಕ್ ಮಾಡಿ ನಂತರ ನಿಮ್ಮ ಅರ್ಜಿಯಲ್ಲಿ ನಿಮ್ಮ ಹೆಸರು ವಯಸ್ಸು ನಿಮ್ಮ ವಿದ್ಯಾರ್ಹತೆ, ಎಲ್ಲವನ್ನೂ fill ಮಾಡಿ.
ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಬಿಡುಗಡೆ ಆಗುವ ಮುನ್ನ ಸರ್ಕಾರ ಮತ್ತೆ ಎರಡು ನಿಯಮಗಳನ್ನು ಜಾರಿಗೊಳಿಸಿದೆ.