Chota Champion: ಛೋಟಾ ಚಾಂಪಿಯನ್ ಶೋ ಗೆ ಟೈಟಲ್ ಹಾಡನ್ನು ಹೇಳಿದ ದಿಯಾ ಹೆಗ್ಡೆ, ಶೋ ಯಾವಾಗಿನಿಂದ ಶುರುವಾಗುತ್ತೆ?

Chota Champion: ಜೀ ಕನ್ನಡ ವಾಹಿನಿ ಕಿರುತೆರೆ ಪ್ರೇಕ್ಷಕರಿಗೆ ವಿಭಿನ್ನವಾದ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋ ಗಳನ್ನು ಇಷ್ಟು ವರ್ಷಗಳ ಕಾಲ ಕೊಡುತ್ತಾ ಬರುತ್ತಿದೆ ಅದಕ್ಕೆ ಈಗ ಜೀ ಕನ್ನಡ ಕರ್ನಾಟಕದ ನಂಬರ್ ಒನ್ ಚಾನೆಲ್ ಆಗಿ 2018 ರಿಂದ ಇಲ್ಲಿಯವರೆಗೂ ಕೂಡ ನಂಬರ್ ಒನ್ ಸ್ಥಾನ ಯಾರಿಗೂ ಬಿಟ್ಟು ಕೊಟ್ಟಿಲ್ಲ. ಒಂದು ಕಡೆ ವಾರದ ದಿನದಲ್ಲಿ ಪ್ರಸಾರವಾಗುವ ದಾರವಾಹಿಗಳು ಪ್ರೇಕ್ಷಕರನ್ನು ಹಿಡಿದಿಟ್ಟು ಕೊಂಡಿದ್ದಾವೆ. ವಾರಂತ್ಯದಲ್ಲಿ ಬರುವ ರಿಯಾಲಿಟಿ ಶೋಗಳು ಕೂಡ ಜನರ ಮನಸ್ಸನ್ನು ಗೆದ್ದಿವೆ. ಈಗ ಇದೇ ಸಾಲಿಗೆ ಛೋಟಾ ಚಾಂಪಿಯನ್ ಕೂಡ ಬರುತ್ತಿದ್ದು ಈ ಕಾರ್ಯಕ್ರಮ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

WhatsApp Group Join Now
Telegram Group Join Now

ವೀಕೆಂಡ್ ಗಳಲ್ಲಿ ನಿಮ್ಮನ್ನು ರಂಜಿಸಲು ಇದೀಗ ಝೀ ಕನ್ನಡ ವಾಹಿನಿ ಎರಡು ಕಾರ್ಯಕ್ರಮಗಳನ್ನು ತಂದಿದ್ದು ಮೇ 6 ರಿಂದ ಛೋಟಾ ಚಾಂಪಿಯನ್ ಶೋ ಶುರುವಾಗಲ್ಲಿದ್ದು ಅತಿ ಶೀಘ್ರದಲ್ಲೇ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಕೂಡ ಶುರುವಾಗಲಿದೆ. ಈ ಎರಡು ಕಾರ್ಯಕ್ರಮಗಳ ಆಡಿಶನ್ ಗಳು ಈಗಾಗಲೇ ಮುಗಿದಿದ್ದು ಎರಡು ಶೋಗಳ ಪ್ರೊಮೋ ಸಹ ಬಿಟ್ಟಿದ್ದಾರೆ. ಈಗ ಈ ಪ್ರೊಮೋ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಇಂದಿನ ಛೋಟಾ ಚಾಂಪಿಯನ್ ಕಾರ್ಯಕ್ರಮವನ್ನು ಸೃಜನ್ ಲೋಕೇಶ್ ಅವರು ನಡೆಸುತ್ತಿದ್ದರು ಆಗಾ ಈ ಛೋಟಾ ಚಾಂಪಿಯನ್ ಶೋ ತುಂಬಾ ಮಕ್ಕಳಿಗೂ ಹಾಗೂ ಪೋಷಕರಿಗೂ ಇಷ್ಟವಾಗಿತ್ತು ಆದರೆ ಈ ಬಾರಿ ವಿಭಿನ್ನವಾಗಿ ವಾಹಿನಿ ಮಾಡುತ್ತಿದ್ದು ಪ್ರೊಮೋದಲ್ಲಿ ಶ್ವೇತ ಚಂಗಪ್ಪ, ಕುರಿ ಪ್ರತಾಪ್, ರಚಿತಾರಾಮ್ ಹಾಗೂ ವಿಜಯ್ ರಾಘವೇಂದ್ರ ಅವರು ಕಾಣಿಸಿಕೊಂಡಿದ್ದಾರೆ. ಈ ಇಂದಿನ ಸೂಪರ್ ಕ್ವೀನ್ ಕಾರ್ಯಕ್ರಮದಲ್ಲೂ ಈ ನಾಲ್ಕು ಜನ ಆಂಕರ್ ಹಾಗೂ ತೀರ್ಪುಗಾರರಾಗಿ ಬಂದಿದ್ದರು ಹಾಗಾಗಿ ಛೋಟ ಚಾಂಪಿಯನ್ ಶೋಗೂ ಕೂಡ ರಚಿತರಾಮ್, ವಿಜಯ್ ರಾಘವೇಂದ್ರ ಅವರು ತೀರ್ಪುಗಾರರಾಗಿ ಮತ್ತು ಕುರಿ ಪ್ರತಾಪ್, ಶ್ವೇತ ಚಂಗಪ್ಪ ನಿರೂಪಕರಾಗಿ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: ಸರಿಗಮಪ ಸೀಸನ್ 1 ರಿಂದ 19 ರವರೆಗೂ ಯಾರೆಲ್ಲಾ ವಿನ್ನರ್ ಗಳು ಆಗಿದ್ರು ಗೋತ್ತ? ಮತ್ತು ಈಗ ಅವರೆಲ್ಲ ಹೇಗಿದ್ದಾರೆ?

ಛೋಟಾ ಚಾಂಪಿಯನ್ ಟೈಟಲ್ ಸಾಂಗ್ ಹಾಡಿದ ಸರಿಗಮಪ ಖ್ಯಾತಿಯ ದಿಯಾ ಹೆಗ್ಡೆ

ಸ ರಿ ಗ ಮ ಪ ಶೋ ನಿಂದ ಜನರ ಮನೆ ಗೆದ್ದ ನಮ್ಮ ದಿಯಾ ಹೆಗ್ಡೆ ಇದೀಗ ಛೋಟಾ ಚಾಂಪಿಯನ್ ಟೈಟಲ್ ಸಾಂಗ್ ಅನ್ನು ಹಾಡಿ ಅದರ ವಿಡಿಯೋ ವನ್ನು ತಮ್ಮ ಸೋಶಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿಕೊಂಡಿದ್ದು “ರಾತ್ರಿಯ ಕನಸು ನಿಜ ಆಗುವುದಿಲ್ಲ, ಜೀವನ ಹೇಗೆ ಸಾಗುತ್ತೆ ತಿಳಿಯುವುದಿಲ್ಲ. ನಮ್ಮ ದಿಯಾ ಹೆಗ್ಡೆ ಯವರ ಹಾಡು ಮತ್ತು ಮಾತು ಕೇಳುತ್ತಿದ್ದರೆ ಮರೆಯಲು ಸಾಧ್ಯವಾಗುವುದಿಲ್ಲ.. ಆ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ” ಎಂದು ದಿಯಾ ಹೆಗ್ಡೆ ಹಾಡು ಕೇಳಿ ಅಭಿಮಾನಿ ಒಬ್ಬರು ಕಮೆಂಟ್ ಮಾಡಿದ್ದಾರೆ ಸರಿಗಮಪ ದಲ್ಲಿ ದಿಯಾ ಹಾಡುಗಳು ಪ್ರತಿ ವಾರ ಕೂಡ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗುತ್ತಿದ್ದವು ದಿಯಾ ಕೂಡ ಅಷ್ಟೇ ಮುದ್ದಾಗಿ ಕನ್ನಡ ಮಾತನಾಡುವ ಶೈಲಿ ಹಿರಿಯರಿಗೆ ಕೊಡುವ ಗೌರವ ತುಂಬಾ ಜನಕ್ಕೆ ಇಷ್ಟವಾಗಿತ್ತು. ದಿಯಾ ಹಾಡು ಕೇಳಲು ಪ್ರತಿ ವಾರಂತ್ಯದಲ್ಲೂ ಟಿವಿ ಮುಂದೆ ಕಾಯುತ್ತಿದ್ದರು.

ಛೋಟಾ ಚಾಂಪಿಯನ್ ಕಾರ್ಯಕ್ರಮವು ಮೇ 6ನೇ ತಾರೀಕಿ ನಿಂದ ಶುರುವಾಗಲಿದ್ದು. ಈ ಶೋ ಜೀ ಕನ್ನಡ ವಾಹಿನಿ ಯಲ್ಲಿ ಶನಿವಾರ ಮತ್ತು ಭಾನುವಾರ ಸಂಜೆ 6 ರಿಂದ 7:30 ವರೆಗೂ ಮೂಡಿ ಬರಲಿದೆ.

ಇದನ್ನೂ ಓದಿ: ಪೋಲೀಸ್ ಆಫೀಸರ್ ಗೆ ಧಮ್ಕಿ ಹಾಕಿದವನಿಗೆ ಆಫೀಸ್ ಮಾಡಿದ ಕೆಲಸ ನೋಡಿ ಇಡೀ ದೇಶವೇ ಶಾಕ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram