CIBIL Score: ಹಣಕಾಸಿನ ಅವಶ್ಯಕತೆ ಎಲ್ಲರಿಗೂ ಇರುತ್ತದೆ ಒಂದಲ್ಲ ಒಂದು ಕಾರಣಕ್ಕೆ ಎಲ್ಲರೂ ಕೂಡ ಸಾಲವನ್ನು ಮಾಡಿಯೇ ಮಾಡುತ್ತಾರೆ ಕೆಲವರು ಶಿಕ್ಷಣಕ್ಕಾಗಿ ಸಾಲವನ್ನು ತೆಗೆದುಕೊಂಡರೆ ಇನ್ನೂ ಕೆಲವರು ತಮ್ಮ ವಾಹನಗಳಿಗಾಗಲಿ ಮನೆಗಳಿಗಾಗಲಿ ಹಾಗೂ ವೈದ್ಯಕೀಯ ಚಿಕಿತ್ಸೆಗಾಗಲಿ ಈ ರೀತಿಯಲ್ಲಿ ಹಲವು ರೀತಿಯಲ್ಲಿ ಸಾಲವನ್ನು ಮಾಡುತ್ತಾರೆ ಅದೇ ರೀತಿ ತಮ್ಮ ಪರ್ಸನಲ್ ಕೆಲಸಗಳಿಗಾಗಿ ಕೂಡ ಸಾಲವನ್ನು ತೆಗೆದುಕೊಳ್ಳುತ್ತಾರೆ ಅದಕ್ಕೆ Personal Loan ಅಂತ ಹೇಳಲಾಗುತ್ತದೆ.
ಸಾಲ ಎಂದ ತಕ್ಷಣ ಮೊದಲು ನಮಗೆ ನೆನಪಾಗುವುದೇ ವೈಯಕ್ತಿಕ ಸಾಲ ಅಂದರೆ Personal Loan. ಈ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವ ಮೊದಲು ಸ್ವಲ್ಪ ಯೋಚಿಸಬೇಕಾಗುತ್ತದೆ ಏಕೆಂದರೆ ಇದರ ಬಡ್ಡಿದರವು ಕೂಡ ಬಾಕಿ ಸಾಲಗಳಿಗಿಂತ ಸ್ವಲ್ಪ ಹೆಚ್ಚಿಗೆ ಇರುತ್ತದೆ. ಹಾಗೆಯೇ ನಾವು ಯಾವುದೇ ಸಾಲವನ್ನು ತೆಗೆದುಕೊಳ್ಳುವುದಾದರೂ ನಮ್ಮ Cibil Score ಅನ್ನು ಚೆಕ್ ಮಾಡಿ ಸಾಲವನ್ನು ನೀಡಲಾಗುತ್ತದೆ. ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಮಾತ್ರ ನಾವು ಸಾಲವನ್ನು ಪಡೆಯಬಹುದು. ಒಂದು ವೇಳೆ ಸಿಬಿಲ್ ಸ್ಕೋರ್ ಚೆನ್ನಾಗಿಲ್ಲ ಅಂತಾದ್ರೆ ಯಾವ ಬ್ಯಾಂಕ್ಗಳು ಕೂಡ ಸಾಲವನ್ನು ಸುಲಭವಾಗಿ ನೀಡುವುದಿಲ್ಲ.
ಒಂದು ವೇಳೆ ನಿಮ್ಮ ಸಿವಿಲ್ ಸ್ಕೋರ್ (Cibil Score) ಚೆನ್ನಾಗಿಲ್ಲ ಅಂತಾದ್ರೆ ನೀವು ಯಾವ ಬ್ಯಾಂಕುಗಳಿಂದಾಗಲಿ ಅಥವಾ NBFC ಯಿಂದಾಗಲಿ ಸಾಲವನ್ನು ಪಡೆಯಲು ಸಾಧ್ಯವಿಲ್ಲ. ನೀವು ಸಾಲವನ್ನು ಪಡೆಯುವಾಗ ಸಿಬಿಲ್ ಸ್ಕೋರ್ ನ ಹೊರತಾಗಿ ನಿಮ್ಮ ಆದಾಯದ ಬಗ್ಗೆ ಕೆಲವು ದಾಖಲೆಗಳನ್ನು ಕೂಡ ಬ್ಯಾಂಕುಗಳಿಗೆ ನೀಡಬೇಕಾಗುತ್ತದೆ. ಆದರೆ ಇಲ್ಲಿ ನೀವು ಯಾವ ಆದಾಯದ ಪುರಾವೆಯೂ ಇಲ್ಲದೆ ಹಾಗೂ ಸಿವಿಲ್ ಸ್ಕೋರ್ ಅವಶ್ಯಕತೆಯೂ ಇಲ್ಲದೆ ಸುಲಭವಾಗಿ ಪಡೆಯಬಹುದು.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ Whats App ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
CIBIL Score ಇಲ್ಲದೆ ಸಾಲವನ್ನು ಪಡೆಯುವ ವಿಧಾನ
ಹೌದು, ಹೀಗೆ ಮಾಡುವುದರಿಂದ ನೀವು ಯಾವುದೇ ದಾಖಲಾತಿಗಳು ಇಲ್ಲದೆ ಸುಲಭವಾಗಿ ಸಾಲವನ್ನು ಪಡೆಯಬಹುದು. ಚಿನ್ನ ಎಲ್ಲರ ಬಳಿಯೂ ಇರುವಂತಹ ಒಂದು ವಸ್ತು ಇದನ್ನು ಉಪಯೋಗಿಸಿಕೊಂಡು ಸುಲಭವಾಗಿ ನೀವು ಸಾಲವನ್ನು ಪಡೆಯಬಹುದಾಗಿದೆ ಚಿನ್ನ ವನ್ನು ಅಡ ಇಡುವುದರಿಂದ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಬೇಕಾದರೆ ಸಾಲವನ್ನು ಪಡೆದುಕೊಳ್ಳಬಹುದು.
ನಿಮಗೆ ಯಾವುದೇ ರೀತಿಯ emergency ಇದ್ದಾಗ ಅಥವಾ ಯಾವಾಗಲಾದರೂ ಸಾಲವನ್ನು ಮಾಡಬೇಕು ಅನಿಸಿದಾಗ ನಿಮ್ಮ ಹತ್ತಿರ ಇರುವ ಚಿನ್ನವನ್ನು ಉಪಯೋಗಿಸಿಕೊಂಡು Gold Loan ತೆಗೆದುಕೊಳ್ಳಬಹುದು. ಅದು ಕೂಡ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ. ಇದಕ್ಕೆ ಯಾವ ದಾಖಲಾತಿಗಳು ಬೇಕಾಗಿಲ್ಲ ನಿಮ್ಮ ಆದಾಯದ ಪತ್ರವೂ ಕೂಡ ಬೇಕಾಗಿಲ್ಲ. ಈ ಗೋಲ್ಡ್ ಲೋನ್ (Gold Loan) ತೆಗೆದುಕೊಳ್ಳುವಾಗ ನಿಮ್ಮ ಹತ್ತಿರ ಇರುವ ಚಿನ್ನವನ್ನು ಪರೀಕ್ಷಿಸಿ ಅದರ ಆಧಾರದ ಮೇಲೆ ಸುಮಾರು 50 ಲಕ್ಷದವರೆಗೆನ ಸಾಲವನ್ನು ಪಡೆಯಬಹುದು.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಮಾಡಿಸಲು ಸುವರ್ಣಾವಕಾಶ; ಪಡಿತರ ಚೀಟಿಯಲ್ಲಿನ ತಿದ್ದುಪಡಿಗೆ 2ದಿನದ ಕಾಲವಾಕಾಶ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗೆ ಜಾಯಿನ್ ಆಗಿ: Click Here To Join Telegram