ಪ್ರತಿ ವರ್ಷ ಫೆಬ್ರುವರಿ ತಿಂಗಳಿಂದ ಪರೀಕ್ಷೆ ಗಳದ್ದೇ ಕಾರುಬಾರು. ಒಂದು ತರಗತಿಯಿಂದ ಮತ್ತೊಂದು ತರಗತಿಗೆ ತೇರ್ಗಡೆ ಹೊಂದಲು ಕನಿಷ್ಠ ಅಂಕ ಗಳಿಸಬೇಕು ಎಂಬ ನಿಯಮ ಪರೀಕ್ಷೆ ಬರೆಯುವ ಮಕ್ಕಳ ಜೊತೆಗೆ ಪಾಲಕರಿಗೂ ಸಹ ಭಯ ಆಗುತ್ತದೆ. ಆದರೆ ಈಗ ಸರ್ವರಿಗೂ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಪ್ರಾಥಮಿಕ ಶಾಲೆಗಳಲ್ಲಿ ಫೇಲ್ ಎಂಬ ಪದವೇ ಇಲ್ಲ. ಆದರೂ ಸಹ ಪಾಲಕರು ತಮ್ಮ ಮಗ ಅಥವಾ ಮಗಳು ಪರೀಕ್ಷೆ ಯಲ್ಲಿ ಚೆನ್ನಾಗಿ ಮಾರ್ಕ್ಸ್ ಬರಬೇಕು ಎಂದು ಒತ್ತಡವನ್ನು ಹೇರುವುದು ಸಾಮಾನ್ಯ. ಈಗ ಮಾರ್ಚ್ ತಿಂಗಳಲ್ಲಿ ಒಂದರಿಂದ ಐದು ಮತ್ತು ಆರು ,ಏಳನೇ ತರಗತಿಯ ವಾರ್ಷಿಕ ಪರೀಕ್ಷೆಯ ಅಂಕಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ರಾಜ್ಯದ ಎಲ್ಲಾ ಸರಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದೇ ಸಮಯದಲ್ಲಿ ಪರೀಕ್ಷೆಗಳು ನಡೆಯಬೇಕು ಎಂದು ಶಿಕ್ಷಣ ಇಲಾಖೆಯು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರತಿ ವರ್ಷದಂತೆ ಪರೀಕ್ಷೆ ನಡೆಸಿ ಏಪ್ರಿಲ್ ಹತ್ತನೇ ತಾರೀಖಿನ ಸಮುದಾಯದತ್ತ ಶಾಲೆಯನ್ನು ನಡೆಸಿ ಪಾಲಕರಿಗೆ ಆಹ್ವಾನ ನೀಡಿ ಮಕ್ಕಳ ಪ್ರಗತಿಯ ಬಗ್ಗೆ ತಿಳಿಸಿ ಉತ್ತರ ಪತ್ರಿಕೆಯನ್ನು ನೀಡಿ ಮತ್ತು ಮಾರ್ಕ್ಸ್ ಕಾರ್ಡ್ ವಿತರಣೆ ಮಾಡಬೇಕು ಎಂದು ಇಲಾಖೆಯು ಸುತ್ತೋಲೆ ಹೊರಡಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇಲಾಖೆಯು ನೀಡಿರುವ ವೇಳಾಪಟ್ಟಿ ಹೀಗಿದೆ :-
1 ರಿಂದ 4ನೇ ತರಗತಿಯ ಮಕ್ಕಳಿಗೆ –
- 25-03-2024- ಪ್ರಥಮ ಭಾಷೆ ( ಕನ್ನಡ, ಇಂಗ್ಲಿಷ್, ಉರ್ದು)
- 26-03-2024- ದ್ವಿತೀಯ ಭಾಷೆ ( ಕನ್ನಡ, ಇಂಗ್ಲಿಷ್)
- 27-03-2024 – ಗಣಿತ
- 28-03-2024 – ಪರಿಸರ ಅಧ್ಯಯನ
6 ಮತ್ತು 7ನೇ ತರಗತಿಯ ಮಕ್ಕಳಿಗೆ –
- 22-03-2024 – ಪ್ರಥಮ ಭಾಷೆ ( ಕನ್ನಡ, ಇಂಗ್ಲಿಷ್, ಉರ್ದು)
- 23-03-2024 -ದ್ವಿತೀಯ ಭಾಷೆ ( ಕನ್ನಡ, ಇಂಗ್ಲಿಷ್)
- 25-03-2024- ತೃತೀಯ ಭಾಷೆ ( ಹಿಂದಿ , ಕನ್ನಡ, ಇಂಗ್ಲಿಷ್ ,ಉರ್ದು)
- 26-03-2024 -ಗಣಿತ
- 27-03-2024 – ವಿಜ್ಞಾನ
- 28-03-2024 – ಸಮಾಜ ವಿಜ್ಞಾನ
- 30-03-2024 – ದೈಹಿಕ ಶಿಕ್ಷಣ
ಶಿಕ್ಷಣ ಇಲಾಖೆ ಹೊರಡಿಸಿದ ಸೂಚನೆಗಳು
- ಲಿಖಿತ ಪರೀಕ್ಷೆ ಮುಗಿದ ದಿನ ಮಧ್ಯಾಹ್ನ ಅದೇ ವಿಷಯದ ಮೌಖಿಕ ಪರೀಕ್ಷೆ ನಡೆಸಬೇಕು.
- ಪ್ರಾಥಮಿಕ ಶಾಲೆಯ ಶಿಕ್ಷಕರು ತಾವೇ ನಿಯಮದ ಅನುಸಾರವಾಗಿ ಪತ್ರಿಕೆ ಸಿದ್ಧಪಡಿಸಬೇಕು ಹಾಗೂ ಆಯಾ ವಿಷಯದ ಶಿಕ್ಷಕರೇ ಮೌಲ್ಯಮಾಪನ ಮಾಡಬೇಕು.
- ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರ ಇರುವ ಶಾಲೆಗಳಲ್ಲಿ ಮಧ್ಯಾಹ್ನ ಲಿಖಿತ ಪರೀಕ್ಷೆ ನಡೆಸಬೇಕು.
- ಆಯಾ ತರಗತಿ ಮತ್ತು ವಿಷಯಕ್ಕೆ ನಿಗದಿಪಡಿಸಿದ ಎಸ್ಎ-1 ರ ಮೌಲ್ಯ ಮಾಪನಕ್ಕೆ ಪರಿಗಣಿಸಿದ ನಂತರ ಉಳಿದ ಶೇಕಡಾ 50 ರಷ್ಟು ಪಠ್ಯವನ್ನು ಪರಿಗಣಿಸಬೇಕು.
- ಪರೀಕ್ಷೆಯ ನಂತರ ಎಸ್ಎ-2 ನ ಅಂಕಗಳು ಹಾಗೂ ಹಿಂದಿನ ಎಫ್ ಎ -1, ಎಫ್ ಎ -2, ಎಫ್ಎಂ ಮತ್ತು ಎಫ್ ಇ 4 ಹಾಗೂ
ಎಸ್ಎ-1 ರ ಎಲ್ಲಾ ದತ್ತಾಂಶಗಳನ್ನು ಕಡ್ಡಾಯವಾಗಿ 6-04-2024 ರ ಒಳಗೆ ಪೂರ್ಣಗೊಳಿಸಿ ಪ್ರತಿ ವಿದ್ಯಾರ್ಥಿಯೂ ಮುಂದಿನ ತರಗತಿಗೆ ಹೋಗುವ ಹಾಗೆ ಕ್ರಮ ವಹಿಸಬೇಕು.
ಇದನ್ನೂ ಓದಿ: 128 GB ಸ್ಟೋರೇಜ್ ಹೊಂದಿರುವ Redmi A3 ಸ್ಮಾರ್ಟ್ ಫೋನ್ ಅತ್ಯಂತ ರಿಯಾಯಿತಿ ಬೆಲೆಯಲ್ಲಿ ಇದೀಗ ಆನ್ಲೈನ್ನಲ್ಲಿ, ತಡ ಮಾಡಬೇಡಿ!
ಇದನ್ನೂ ಓದಿ: ಪದವೀಧರರಿಗೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ 3000 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ..