ಮೋಡ ಬಿತ್ತನೆಯಿಂದಾಗಿ ಹಾವೇರಿ ಜಿಲ್ಲೆಯಲ್ಲಿ ಮಳೆ; ಶಾಸಕ ಪ್ರಕಾಶ್ ಕೋಳಿವಾಡರಿಂದ ಮೋಡ ಬಿತ್ತನೆ ಸಕ್ಸಸ್

ರಾಜ್ಯದಲ್ಲಿ ಈಗಾಗ್ಲೇ ಮುಂಗಾರು ಮಳೆ ಕೈಕೊಟ್ಟಿದೆ. ಅಲ್ದೇ ಬಿದ್ದಂತ ಅಲ್ಪಸ್ವಲ್ಪ ಮಳೆಯನ್ನು ನಂಬಿ ರೈತರು ಬಿತ್ತನೆ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ರೈತರು ಈಗ ತಲೆಯ ಮೇಲೆ ಕೈ ಹೊತ್ತು ಆಕಾಶ ನೋಡೋ ಪರಿಸ್ಥಿತಿಯಲ್ಲಿದ್ದಾರೆ. ಇಂತ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕು ಎಂದು ಮೋಡ ಬಿತ್ತನೆ ಕಾರ್ಯವನ್ನು ನೆಡಸಲಾಗಿದೆ. ಹೌದು ಕೈಕೊಟ್ಟ ವರುಣ ಕಾರಣದಿಂದ ಬಿತ್ತಿದ ಬೆಳೆಗಳು ಜಮೀನಲ್ಲೆ ಬತ್ತಿಹೋಗ್ತಿದೆ. ಹೀಗಾಗಿ ಸ್ವಂತ ಹಣದಲ್ಲೆ ಮೋಡ ಬಿತ್ತನೆಗೆ ಶಾಸಕರು ಮುಂದಾಗಿ ಯಶಸ್ಸು ಕಂಡಿದ್ದಾರೆ. ಹೌದು ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ ಅದರಲ್ಲು ಏಲಕ್ಕಿ ನಗರಿ ಹಾವೇರಿಯಲ್ಲಿ ಹಿಂದೆಂದಿಗಿಂತಲು ಕಡಿಮೆ ಮಳೆಯಾಗಿದೆ. ಇದರಿಂದ ಹಾವೇರಿಯ ಪ್ರಮುಖ ಬೆಳೆಗಳಾದ ಮೆಕ್ಕೆ ಜೋಳ ಹತ್ತಿ ಸೇರಿ ಅನೇಕ ಬೆಳೆಗಳು ಹೊಲದಲ್ಲಿಯೇ ಬತ್ತಿ ಹೋಗುತ್ತಿದೆ. ಹಾಗಾಗಿ ರಾಣಿಬೆನ್ನೂರು ಶಾಸಕ ಪ್ರಕಾಶ್‌ ಕೊಳಿವಾಡ ತಮ್ಮದೆ ಹಣದಲ್ಲಿ ಮೋಡ ಬಿತ್ತನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

WhatsApp Group Join Now
Telegram Group Join Now

ಇನ್ನು ಮೋಡ ಬಿತ್ತನೆ ಅಥವಾ ಮಾನವ ನಿರ್ಮಿತ ಮಳೆಯ ವರ್ಧನೆಯು ಹಿಮ ಅಥವಾ ಮಳೆಯನ್ನು ಮಾಡಲು, ಸಣ್ಣ ಕಣಗಳೊಂದಿಗೆ ಮೋಡಗಳನ್ನು ಹರಡುವ ಮೂಲಕ ಹವಾಮಾನವನ್ನು ಕೃತಕವಾಗಿ ಮಾರ್ಪಡಿಸುವ ಒಂದು ಮಾರ್ಗವಾಗಿದೆ. ಅಂದ್ರೆ ಮೋಡ ಬಿತ್ತನೆಯು ಮಳೆ ಬೀಳುವಂತೆ ಮೋಡಗಳನ್ನು ಕುಶಲತೆಯಿಂದ ನಿರ್ವಹಿಸುವುದು. ಮೋಡಗಳು ನೀರಿನ ಹನಿಗಳು ಅಥವಾ ಐಸ್ ಸ್ಫಟಿಕಗಳನ್ನು ಒಳಗೊಂಡಿರುತ್ತವೆ. ಹೀಗಾಗಿ ವಾತಾವರಣದಲ್ಲಿನ ನೀರಿನ ಆವಿ ತಣ್ಣಗಾದಾಗ ಮತ್ತು ನಂತರ ಧೂಳು ಅಥವಾ ಉಪ್ಪಿನ ಕಣದ ಸುತ್ತಲೂ ಘನೀಕರಣಗೊಂಡಾಗ ಅವು ರೂಪುಗೊಳ್ಳುತ್ತವೆ. ಈ ಧೂಳು ಅಥವಾ ಮಂಜುಗಡ್ಡೆಯ ಕಣಗಳನ್ನು ಕಂಡೆನ್ಸೇಶನ್ ನ್ಯೂಕ್ಲಿಯಸ್ ಎಂದೂ ಕರೆಯುತ್ತಾರೆ, ಮಳೆಹನಿಗಳು ಅಥವಾ ಸ್ನೋಫ್ಲೇಕ್ಗಳ ರಚನೆಯನ್ನು ಸುಲಭಗೊಳಿಸುತ್ತದೆ.

ಇನ್ನು ಘನೀಕರಣ ನ್ಯೂಕ್ಲಿಯಸ್ಗಳಿಲ್ಲದೆ, ಮಳೆಯು ರೂಪುಗೊಳ್ಳುವುದಿಲ್ಲ ಆದ್ದರಿಂದ, ಮಳೆಯು ಸಂಭವಿಸುವುದಿಲ್ಲ. ಹೀಗಾಗಿ ಮೋಡ ಬಿತ್ತನೆಯು ಕೃತಕವಾಗಿ ಘನೀಕರಣ ನ್ಯೂಕ್ಲಿಯಸ್‌ಗಳನ್ನು ವಾತಾವರಣಕ್ಕೆ ಸೇರಿಸುತ್ತದೆ, ಮಳೆ ಅಥವಾ ಹಿಮವನ್ನು ಉತ್ಪಾದಿಸುವ ಮೋಡದ ಸಾಮರ್ಥ್ಯವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಸೇರಿಸಲಾದ ಘನೀಕರಣ ನ್ಯೂಕ್ಲಿಯಸ್‌ಗಳೊಂದಿಗೆ, ಮೋಡ ಬಿತ್ತನೆಯು ಸ್ನೋಫ್ಲೇಕ್‌ಗಳು ಅಥವಾ ಮಳೆಹನಿಗಳು ರೂಪುಗೊಳ್ಳಲು ಆಧಾರವನ್ನು ಒದಗಿಸುವ ತಂತ್ರಜ್ಞಾನದಲ್ಲಿ ಇದೀಗ ಶಾಸಕರು ಸಕ್ಸಸ್ ಕಂಡಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಇದನ್ನೂ ಓದಿ: ಆಭರಣ ಪ್ರಿಯರಿಗೆ ಗುಡ್ ನ್ಯೂಸ್! ಇಳಿಕೆಯಾದ ಚಿನ್ನದ ಬೆಲೆ; ಬೆಳ್ಳಿ ದರದಲ್ಲಿ 1,750 ರೂಪಾಯಿ ಇಳಿಕೆ

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಶಾಸಕರ ಒಳ್ಳೆ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ

ಇನ್ನು ಕಳೆದ 2015-19 ರಲ್ಲಿ ಕರ್ನಾಟಕ ಮತ್ತು ಮಹರಾಷ್ಟ್ರ ಮೋಡ ಬಿತ್ತನೆ ಯಶಸ್ವಿಯಾಗಿ ಮಾಡಿತ್ತು. ಹೀಗಾಗಿ ದೇಶದಲ್ಲಿ ಮೋಡ ಬಿತ್ತನೆಗೆ ಸಿದ್ದಪಡಿಸಿರುವ ವಿಮಾನಗಳಿರುವುದು ಶಾಸಕ ಪ್ರಕಾಶ್‌ ಕೊಳಿವಾಡ ಬಳಿ ಮಾತ್ರ. ಇದರಿಂದ ರೈತರ ನೆರವಿಗೆ ನಿಂತಿರುವ ಕೊಳಿವಾಡ ತಮ್ಮದೆ ಸ್ವಂತ ಖರ್ಚಿನಲ್ಲಿ ಬಿತ್ತನೆಯನ್ನು ಮಾಡಿಸಿದ್ದಾರೆ. ಹೌದು ಜಿಲ್ಲಾಧಿಕಾರಿಗೆ ಪತ್ರವನ್ನು ಬರೆದು ಮೋಡ ಬಿತ್ತನೆಗೆ ಪ್ರಾರಂಭ ಮಾಡಿದ್ದು, ಹುಬ್ಬಳಿ ಎರ್ಪೋಟ್‌ನಿಂದ ಮೋಡ ಬಿತ್ತನೆಗೆ ಚಾಲನೆ ಸಿಕ್ಕಿದೆ. ಅಲ್ದೇ ಯಶಸ್ಸು ಕೂಡ ಸಿಕ್ಕಿದೆ. ಹೌದು ನಿಗದಿತ ವೇಳೆಗೆ ಮಳೆಯಾಗುತ್ತಿಲ್ಲ ಆದ್ದರಿಂದ ಬಿತ್ತನೆ ಮಾಡಿರುವ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ವೈಯಕ್ತಿಕವಾಗಿ ಈ ಮೋಡ ಬಿತ್ತನೆಯನ್ನು ಶಾಸಕ ಪ್ರರಂಭ ಮಾಡಿದ್ದಾರೆ, ತಮ್ಮ ಜಿಲ್ಲೆಗೆ ಮಾತ್ರ ಮೊದಲ ಪ್ರಮುಖ್ಯತೆಯನ್ನು ನೀಡುತ್ತೇನೆ ಎಂದು ಶಾಸಕರು ಹೇಳಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

ಹೌದು ಇಂದಿನ ಮೋಡ ಬಿತ್ತನೆ ಕಾರ್ಯವು ಮದ್ಯಾಹ್ನ 1 ಗಂಟೆಗೆ ಪ್ರಾರಂಭವಾಯಿತು, ಅದಕ್ಕಿಂತ ಮುಂಚಿತವಾಗಿ ನಮ್ಮ ಜಿಲ್ಲೆ ವ್ಯಾಪ್ತಿಯಲ್ಲಿ ಎಲ್ಲೂ ಮಳೆಯಾದ ವರದಿಯಾಗಿಲ್ಲ. ಇನ್ನು ಮದ್ಯಾಹ್ನ 1 ಗಂಟೆಗೆ ಪ್ರಾರಂಭವಾದ ಮೋಡ ಬಿತ್ತನೆ ಕಾರ್ಯವು ಸಂಜೆ 4.30 ರವರೆಗೆ ರಾಣೇಬೆನ್ನೂರು, ಬ್ಯಾಡಗಿ, ಹಾವೇರಿ ಮತ್ತು ಸವಣೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನಡೆಯಿತು. ಈ ಎಲ್ಲಾ ಪ್ರದೇಶಗಳಲ್ಲಿ ಮೋಡ ಬಿತ್ತನೆಯ ನಂತರ ಮಳೆಯಾಗಿದ್ದು ಗರಿಷ್ಠ 28.5 ಮಿಮಿ ಮತ್ತು ಕನಿಷ್ಠ 1 ಮಿಮಿ ನಷ್ಟು ಮಳೆಯಾಗಿರುವ ಬಗ್ಗೆ ಹವಾಮಾನ ಮಾಪನಗಳಲ್ಲಿ ವರದಿಯಾಗಿದೆ. ಹೌದು ಬರಗಾಲದಿಂದ ನೊಂದಿರುವ ರೈತರ ಬಾಳಿಗೆ ನೆರವಾಗಲು ಕೈಗೊಂಡಿರುವ ನಮ್ಮ ಈ ಪ್ರಾಮಾಣಿಕ ಪ್ರಯತ್ನಕ್ಕೆ ಸಿಕ್ಕ ಯಶಸ್ಸು ಕಂಡು ತುಂಬಾ ಸಂತೋಷವಾಯಿತು ಅಂತ ಹೇಳಿಕೊಂಡಿದ್ದಾರೆ. ಒಟ್ಟಾರೆ ಹಾವೇರಿ ರೈತರ ಸಂಕಷ್ಟಕ್ಕೆ ನೆರವಾಗುವ ಮೂಲಕ ಶಾಸಕ ಪ್ರಕಾಶ್‌ ಎಲ್ಲರ ಮೆಚ್ಚುಗೆಗೆ ಮಾತ್ರರಾಗಿದ್ದಾರೆ. ಈ ಮೂಲಕ ಇತರರಿಗು ಕೂಡ ಮಾದರಿಯಾಗಿದ್ದಾರೆ.

ಇದನ್ನೂ ಓದಿ: ಗೃಹ ಲಕ್ಷ್ಮೀ ಹಣ ಖಾತೆಗೆ ಬಂದಿಲ್ವ; ಯೋಚ್ನೆ ಮಾಡಬೇಡಿ, ಗೃಹಲಕ್ಷ್ಮಿಯರಿಗೆ ಇಲ್ಲಿದೆ ಗುಡ್ ನ್ಯೂಸ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram