ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ(PM Awas Yojana) ಈಗಾಗಲೇ ಕೆಲವು ಪ್ರದೇಶಗಳನ್ನು ಗುರುತಿಸಿ ಮನೆ ಇಲ್ಲದವರಿಗೆ ಸೂರು ಕಲ್ಪಿಸುವ ಕಾರ್ಯ ನಡೆಯುತ್ತಿದೆ. ಅದರಲ್ಲಿ ಬೆಂಗಳೂರಿನ ಕೊಳಗೇರಿ ಅಭಿವೃದ್ಧಿ ಮಂಡಳಿಯವರು 1,80,230 ಮನೆಗಳನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿದ್ದರು. ಈಗ ಆ ಮನೆಗಳ ಪೈಕಿ 36,789 ಪೂರ್ಣಗೊಂಡಿದ್ದು ಎಲ್ಲಾ ಮೂಲ ಸೌಕರ್ಯಗಳು ಸಿಗುವಂತೆ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಸಿಎಂ ಈ ಮನೆಗಳನ್ನು ಉದ್ಘಾಟನೆ ಮಾಡಿ ಫಲಾನುಭವಿಗಳಿಗೆ ಮನೆ ಪತ್ರವನ್ನು ಹಸ್ತಾಂತರ ಮಾಡಿದ್ದಾರೆ.
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನೀಡುವ ಹಣ ಏಷ್ಟು?: ಬಡ ಕುಟುಂಬಗಳು ಸ್ವಂತ ಮನೆಯನ್ನು ಹೊಂದಬೇಕು ಎಂಬ ಆಕಾಂಕ್ಷೆಯಿಂದ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಯೋಜನೆ ಇದಾಗಿದ್ದು, ಈ ಯೋಜನೆಗೆ ಕೇಂದ್ರ ಸರ್ಕಾರವು ಪ್ರತಿ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ 1,50,000 ರೂಪಾಯಿಗಳನ್ನು ನೀಡುತ್ತದೆ. ಉಳಿದ ಹಣವನ್ನು ಫಲಾನುಭವಿಗಳು ಭರಿಸಬೇಕು. ಆದರೆ ಇದು ಫಲಾನುಭವಿಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಆಗುವ ದೃಷ್ಟಿಯಿಂದ ರಾಜ್ಯ ಸರ್ಕಾರವು 4,00,000 ರೂಪಾಯಿಗಳನ್ನು ನೀಡುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಆರೋಗ್ಯ ವಿಮೆ ರಿಜೆಕ್ಟ್ ಆಗಲೂ ಕಾರಣಗಳು ಏನು?
ಪ್ರಧಾನ್ ಮಂತ್ರಿ ಆವಸ್ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?
- ಈ ಮೊದಲು ಯಾವುದೇ ಸರ್ಕಾರಿ ಯೋಜನೆಯ ಅಡಿಯಲ್ಲಿ ಮನೆ ನಿರ್ಮಾಣಕ್ಕೆ ಸಹಾಯಧನ ಪಡೆದಿರಬಾರದು.
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಆರ್ಥಿಕವಾಗಿ ಮೂರು ವಿಭಾಗವನ್ನು ಮಾಡಲಾಗಿದೆ. ಆರ್ಥಿಕವಾಗಿ ದುರ್ಬಲ ಹೊಂದಿದ ಕುಟುಂಬ, ಕಡಿಮೆ ಆದಾಯ ಹೊಂದಿರುವ ಕುಟುಂಬ, ಮಧ್ಯಮ ಆದಾಯ ಹೊಂದಿರುವ ಕುಟುಂಬ A, ಮಧ್ಯಮ ಆದಾಯ ಹೊಂದಿರುವ ಕುಟುಂಬ B ಎಂದು ವರ್ಗಗಳಾಗಿ ಮಾಡಲಾಗಿದೆ. ಅರ್ಜಿ ಸಲ್ಲಿಸ ಕುಟುಂಬಗಳ ಆದಾಯ ಪ್ರತಿ ವಿಭಾಗಕ್ಕೂ ಬೇರೆ ಬೇರೆ ರೀತಿಯಾಗಿ ಇದೆ. ಆರ್ಥಿಕವಾಗಿ ದುರ್ಬಲ ಹೊಂದಿದ ಕುಟುಂಬಕ್ಕೆ 3 ಲಕ್ಷ , ಕಡಿಮೆ ಆದಾಯ ಹೊಂದಿರುವ ಕುಟುಂಬಕ್ಕೆ 6 ಲಕ್ಷ, ಮಧ್ಯಮ ಆದಾಯ ಹೊಂದಿರುವ ಕುಟುಂಬ A ವರ್ಗಕ್ಕೆ 12 ಲಕ್ಷ ಹಾಗೂಮಧ್ಯಮ ಆದಾಯ ಹೊಂದಿರುವ ಕುಟುಂಬ B ವರ್ಗಕ್ಕೆ 18 ಲಕ್ಷ ರೂಪಾಯಿ ಗರಿಷ್ಠ ಮಿತಿಯನ್ನು ಇಲಾಖೆಯು ತಿಳಿಸಿದ್ದಾರೆ.
- ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ನೌಕರಿ ಹೊಂದಿರಬಾರದು. ಹಾಗೂ ಬಾಡಿಗೆ ಮನೆಯಲ್ಲಿ ಇರುವ ಬಗ್ಗೆ ನಿಖರವಾದ ದಾಖಲೆಗಳನ್ನು ಸಲ್ಲಿಸಬೇಕು.
- ಅರ್ಜಿ ದಾರರು ಕರ್ನಾಟಕದ ಮೂಲ ನಿವಾಸಿಯಾಗಿರಬೇಕು.
- ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
ಯೋಜನೆಗೆ ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆಗಳು:-
- ಕುಟುಂಬದವರ ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
- ಮನೆ ಬಾಡಿಗೆ ಕಟ್ಟಿದ ಬಿಲ್
- ಆದಾಯ ಮತ್ತು ಜಾತಿ ಪ್ರಮಾಣಪತ್ರ
ಕಳಪೆ ಗುಣಮಟ್ಟದ ಕಾಮಗಾರಿ ನಡೆದರೆ ಕ್ರಮ ಕೈಗೊಳ್ಳಲಾಗುವುದು
ಮನೆ ನಿರ್ಮಾಣದ ಕಾರ್ಯದಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ಮನೆ ನಿರ್ಮಾಣ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ತಿಳಿಸಿದ್ದಾರೆ. ಮನೆಯ ಹಸ್ತಾಂತರಿಸುವ ಸಮಯದಲ್ಲಿ ಅಥವಾ ಬಿಲ್ ಪಾವತಿ ವೇಳೆ ಗುತ್ತಿಗೆದಾರರು ತೊಂದರೆಗಳನ್ನು ನೀಡಿದ್ದರೆ ತಕ್ಷಣ ಉನ್ನತ ಅಧಿಕಾರಿಗಳಿಗೆ ದೂರು ನೀಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ: 50MP ಕ್ಯಾಮೆರಾ ಮತ್ತು 144Hz ಡಿಸ್‌ಪ್ಲೇಯೊಂದಿಗೆ ಹೊಸ Motorola ಇದರ ವಿಶೇಷ ರಿಯಾಯಿತಿಯನ್ನು ತಿಳಿಯಿರಿ