Comedy Khiladigalu Chidambara Engagement: ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಿದಂಬರ ಪೂಜಾರಿ ನಿಶ್ಚಿತಾರ್ಥ..

Comedy Khiladigalu Chidambara Engagement: ಕಾಮಿಡಿ ಕಿಲಾಡಿಗಳು ಸೀಸನ್ 2 ಖ್ಯಾತಿಯ ಚಿದಂಬರ ಪೂಜಾರಿಯವ್ರು ವೈವಾಹಿಕ ಜೀವನಕ್ಕೆ ಕಾಲಿಡಲು ಅಣಿಯಿಟ್ಟಿದ್ದಾರೆ. ಹೌದು ನಿನ್ನೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯ ವಿಭಿನ್ನ ಹಾಗೂ ನೋವನ್ನ ಮರೆಸುವ ಪ್ರೇಕ್ಷಕರ ಮೆಚ್ಚಿನ ರಿಯಾಲಿಟಿ ಶೋನಲ್ಲಿ ಚಿದಂಬರ ಅವ್ರು ಪ್ರೇಕ್ಷರನ್ನ ರಂಜಿಸುವಲ್ಲಿ ಯಶಸ್ವಿಯಾಗಿ ತಮ್ಮದೇ ಅಭಿಮಾನಿ ಬಳಗವನ್ನ ಹೊಂದಿದ್ರು ಅಲ್ಲದೇ ನಮ್ಮ ಕನಸ್ಸು ಮಾರಾಟಕ್ಕಿದೆ ಅನ್ನೋ ಸಿನಿಮಾದಲ್ಲೂ ಕೂಡ ಕಾಮಿಡಿ ಮೂಲಕ ಎಲ್ಲರನ್ನು ಕೂಡ ನಕ್ಕು ನಗಿಸಿದ್ರು. ಕಿರುತೆರೆಯಲಿ ನಗುವಿನ ಹೊಳೆ ಹರಿಸಲು ಆರಂಭಿಸಿದ ಚಿದಂಬರ ಪೂಜಾರಿ ಇದೀಗ ಬೆಳ್ಳಿತೆರೆಯಲ್ಲಿಯೂ ಕೂಡ ಮಿಂಚುತ್ತಿದ್ದಾರೆ. ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನಕ್ಕೂ ಪ್ರಾಮುಖ್ಯತೆ ನೀಡಿರುವ ಚಿದಂಬರ ಪೂಜಾರಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧತೆಯನ್ನ ಮಾಡಿಕೊಂಡಿದ್ದಾರೆ. ಹೌದು ನಿನ್ನೆ ಅದ್ದೂರಿಯಾಗಿ ನಿಶಿತಾರ್ಥ ಸಮಾರಂಭ ನಡೆದಿದೆ. ಸುಕನ್ಯಾ ಗೌಡ ಅನ್ನೋರ ಜೊತೆಗೆ ಚಿದಂಬರ ಪೂಜಾರಿ ಉಂಗುರು ಬದಲಾಯಿಸಿಕೊಂಡಿದ್ದಾರೆ. ಹೌದು ಮದುವೆಯ ಜೀವನಕ್ಕೆ ಕಾಲಿಡುವ ಮುನ್ನ ವೈವಾಹಿಕ ಜೀವನದ ಮುನ್ನುಡಿ ಎಂಬಂತೆ ಪ್ರೀತಿಯ ಬದುಕಿಗೆ ಸುಕನ್ಯಾ ಅವ್ರ ಜೊತೆಗೆ ಉಂಗುರದ ಮುದ್ರೆ ಒತ್ತಿದ್ದಾರೆ. ಇನ್ನು ಎಂಗೇಜ್ಮೆಂಟ್ ಕಾರ್ಯಕ್ರಮ ಬಹಳ ಸಂಪ್ರದಾಯ ಬದ್ದವಾಗಿ ನಡೆದಿದೆ. ಈ ಒಂದು ಸಮಾರಂಭದಲ್ಲಿ ಬಿಳಿ ಹಾಗೂ ನೀಲಿ ಬಣ್ಣದ ಉಡುಗೆಯಲ್ಲಿ ಚಿದಂಬರ ಹಾಗೂ ಹಸಿರು ಬಣ್ಣದ ರೇಷ್ಮೆ ಸೀರೆಯಲ್ಲಿ ಸುಕನ್ಯಾ ಮಿಂಚಿದ್ದಾರೆ.

WhatsApp Group Join Now
Telegram Group Join Now

ಇನ್ನು ನಿಶಿತಾರ್ಥ ಕಾರ್ಯಕ್ರಮಕ್ಕೆ ಕಾಮಿಡಿ ಕಿಲಾಡಿಗಳು ಶೋ ನ ಕಲಾವಿದರು ಕೂಡ ಆಗಮಿಸಿ ಶುಭಾಶಯಗಳು ಆರೈಸಿದ್ದಾರೆ. ಜೊತೆಗೆ ಚಿದಂಬರ ಅವ್ರ ಸ್ನೇಹಿತರು, ಆಪ್ತರು ಬಂದುಗಳು ಹಾಗೂ ಕುಟುಂಬದವರು ಹಾಗೂ ಸುಕನ್ಯಾ ಸ್ನೇಹಿತರು ಮತ್ತು ಅವ್ರ ಮನೆಯವರು ಆಗಮಿಸಿದ್ದು ಇಬ್ಬರಿಗೂ ಕೂಡ ಶುಭಾಶಯಗಳು ಆರೈಸಿದ್ದಾರೆ. ನೀವು ಸಹ ಇಬ್ಬರಿಗೂ ಒಳ್ಳೆಯದಾಗ್ಲಿ ಅಂತ ಶುಭಾಶಯಗಳು ಆರೈಸಿ.

ಇದನ್ನೂ ಓದಿ: ಮೊದಲ ದಿನ ಶಾಲೆಗೆ ಹೊರಟ ರಾಯನ್ ರಾಜ್ ಸರ್ಜಾ- ಮಗನ ಬಗ್ಗೆ, ಭವಿಷ್ಯದ ಬಗ್ಗೆ ಮೇಘನಾ ರಾಜ್ ಹೇಳಿದ್ದೇನು ಗೊತ್ತಾ?

ಇದನ್ನೂ ಓದಿ: 75 ರೂ. ಹೊಸ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ, ಎಲ್ಲಿ ಸೀಗುತ್ತದೆ, ಬೆಲೆ ಎಷ್ಟು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram