Sanju Basayya: ತಮ್ಮ ಮದುವೆಯ ಆರತಕ್ಷತೆಗೆ ಅಭಿಮಾನಿಗಳನ್ನು ಅಹ್ವಾನಿಸಿದ ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ ಹಾಗೂ ಪಲ್ಲವಿ.

Sanju Basayya: ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಕುಳ್ಳ ಮಿಂಡ್ರಿ ಖ್ಯಾತಿಯ ಸಂಜು ಬಸಯ್ಯ ದಾಂಪತ್ಯಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಗೆಳತಿ ಪಲ್ಲವಿ ಬಳ್ಳಾರಿ ಜೊತೆ ಸಂಜು ಬಸಯ್ಯ ವೈವಾಹಿಕ ಜೀವನಕ್ಕೆ ಕಾಲ್ಲಿಟ ಸಂಜು ಮತ್ತು ಪಲ್ಲವಿ ಜೋಡಿಯ ಫೋಟೋಗಳು ವೈರಲ್ ಆಗಿದ್ವು ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ ಅಂತ ತಾವೇ ಈ ಹಿಂದೆ ಹೇಳಿಕೊಂಡಿದ್ರು. ಇದೀಗ ಈ ಜೋಡಿ ಮತ್ತೆ ಗುಡ್ ನ್ಯೂಸ್ ಅನ್ನ ಕೊಟ್ಟಿದ್ದು , ಅರತಕ್ಷತೆಗೆ ಸಿದ್ದವಾಗ್ತಿದ್ದಾರೆ. ಹೌದು ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಕಿರುತೆರೆ ಪ್ರಿಯರಿಗೆ ಪರಿಚಯವಾದ ಸಂಜು ಬಸಯ್ಯ ತಮ್ಮ ಹಾಸ್ಯಪ್ರಜ್ಞೆ, ನಟನೆಯಿಂದಲೇ ಹಾಸ್ಯಪ್ರಿಯರ ಮನಗೆದ್ದಿದ್ದರು.

WhatsApp Group Join Now
Telegram Group Join Now

ಇದರ ಜೊತೆಗೆ ಸಂಜು ಅವ್ರ ವೈವಾಹಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆ ಆಗ್ತಾನೆ ಇತ್ತು. ಹೌದು ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲೇ ಸಂಜು ಬಸಯ್ಯ ಅವ್ರ ಸಹ ಕಲಾವಿದರು ಸಂಜು ಪ್ರೀತಿಯಲ್ಲಿದ್ದಾರೆ ಅಂತ ರೇಗಿಸುತ್ತಿದ್ದರು. ಆದರೆ ಅವರ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದೆಲ್ಲಾ ಸಂಜು ಬಸಯ್ಯನ ಕಾಲು ಎಳೆಯಲು ಅಂದುಕೊಂಡಿದ್ರು, ಆದ್ರೆ ಇತ್ತೀಚೆಗಷ್ಟೇ ಸಂಜು ಬಸಯ್ಯ ಬಹಳ ಸುದ್ದಿಯಲ್ಲಿದ್ದರು. ತಾವು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯನ್ನು ರಿಜಿಸ್ಟರ್‌ ಮದುವೆ ಆಗಿ ಎಲ್ಲರಿಗೂ ಶಾಕ್‌ ನೀಡಿದ್ದರು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ತಮ್ಮ ಅರತಕತೆಗೆ ಕರೆಯಲು ಎಲ್ಲರಿಗೂ ಆಮಂತ್ರಣ ನೀಡಿದ್ದಾರೆ.

ಹೌದು ಸಂಜು ಬಸಯ್ಯ ಹಾಗೂ ಪತ್ನಿ ಪಲ್ಲವಿ ತಮ್ಮ ಮದುವೆ ವಿಚಾರವನ್ನು ಅಧಿಕೃತವಾಗಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ರು, ಅಲ್ದೇ ತಾವು ಮದುವೆ ಆಗಿರುವುದಾಗಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದ ಇಬ್ಬರು ಇಲ್ಲಿಯವರೆಗಿನ ನನ್ನ ಹಾಗೂ ಪಲ್ಲವಿ ಬಳ್ಳಾರಿಯವರ ನಡುವಿನ ಸಂಬಂಧಗಳ ಊಹಾಪೋಹಗಳಿಗೆ ಇಂದು ನಾವು ತೆರೆ ಎಳೆದಿದ್ದೆವೆ. ಮೊದಲಿಗೆ ನಮ್ಮಿಬ್ಬರ ಪರಿಚಯವಾಗಿತು ,ಆ ಪರಿಚಯ ಸ್ನೇಹವಾಗಿ , ಸ್ನೇಹ ಪ್ರೀತಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿದ್ದ ವಿಷಯ. ಈಗ ನಾವಿಬ್ಬರು ಕಾನೂನು ಬದ್ದವಾಗಿ, ಅಧಿಕೃತವಾಗಿ, ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ. ನಮ್ಮ ,ನಮ್ಮ ಕುಟುಂಬದ ಒಪ್ಪಿಗೆ ಪಡೆದು ನಿಮ್ಮೆಲ್ಲರ ಸುಮ್ಮುಖದಲ್ಲಿ ಆದಷ್ಟು ಬೇಗ ಸಪ್ತಪದಿ ತುಳಿಯಲಿದ್ದೇವೆ. ನಿಮ್ಮ ಪ್ರೀತಿ ,ಆಶೀರ್ವಾದ ನಮ್ಮ ಮೇಲೆ ಹೀಗೆ ಇರಲಿ. ನಿಜವಾದ ಪ್ರೀತಿಗೆ ಯಾವುದೇ ಜಾತಿ, ಧರ್ಮ ,ಇನ್ನಿತರ ಯಾವುದೇ ವಿಷಯಗಳು ಅಡ್ಡ ಬರಲಾರದು ಎಂಬುದನ್ನು ಸಾಧಿಸಿ ತೋರಿಸಿದ್ದೇವೆ, ನಿಜವಾದ ಪ್ರೀತಿಗೆ ಜಯ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ನಾವೇ ಸಾಕ್ಷಿ ಅಂತ ಬರೆದುಕೊಂಡಿದ್ದರು. ಅದರಂತೆ ಈ ಜೋಡಿ ಪ್ರೀತಿಗೆ ಧರ್ಮ, ಜಾತಿ, ಬಣ್ಣ, ಎತ್ತರ ಯಾವುದೂ ಅಡ್ಡಿ ಬರುವುದಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದು, ಇದೀಗ ಕುಟುಂಬಸ್ಥರ ಸಮ್ಮುಖದಲ್ಲಿ ಭರ್ಜರಿ ಅರತಕ್ಷತೆ ಕಾರ್ಯಕ್ರಮ ಏರ್ಪಡಿಸಿದ್ದರೆ ಸಂಜು ಬಸಯ್ಯ ಹಾಗೂ ಪಲ್ಲವಿ ಜೋಡಿ.

ಇದನ್ನೂ ಓದಿ: ಹೊಸ ಉದ್ಯಮ ಶುರು ಮಾಡಿದ ನಟ ಉಪೇಂದ್ರ; ಫಾರ್ಮ್ ಹೌಸ್ ನ್ನ ಬಾಡಿಗೆಗೆ ನೀಡಲು ಮುಂದಾದ ನಟ

ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗ್ತಿದೆ ವೆಡ್ಡಿಂಗ್ ಕಾರ್ಡ್

ಇನ್ನು ಸಂಜು ಬಸಯ್ಯ ಮೂಲತ: ಬೆಳಗಾವಿ ಜಿಲ್ಲೆಯ ಮುರುಗೋಡು ಗ್ರಾಮದವರು. ಚಿಕ್ಕಂದಿನಿಂದಲೇ ನಾಟಕ ಕಂಪನಿಗಳಲ್ಲಿ ಗುರುತಿಸಿಕೊಂಡಿದ್ದ ಈ ಪ್ರತಿಭೆ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಹೆಚ್ಚಾಗಿ ಜನರ ಪ್ರೀತಿ ಗಿಟ್ಟಿಸಿಕೊಂಡ್ರು. ಇನ್ನು ಪಲ್ಲವಿ ಅವ್ರು ಮೂಲತ: ಬಳ್ಳಾರಿಯವರು, ಇವ್ರು ಕೂಡಾ ರಂಗಭೂಮಿ ಪ್ರತಿಭೆ. ಅಲ್ದೇ ಸಂಜು ಬಸಯ್ಯ ಜೊತೆ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹೀಗಾಗಿ ಸ್ನೇಹ ಪ್ರೀತಿಯಾಗಿ ಈಗ ಮದುವೆಯಾಗಿರುವ ಸಂಜು ಬಸಯ್ಯ ಹಾಗೂ ಪಲ್ಲವಿ ದಂಪತಿ ಈಗ ಆರತಕ್ಷತೆಗೆ ಸಿದ್ಧರಾಗಿದ್ದಾರೆ. ಅಲ್ದೇ ಅಭಿಮಾನಿಗಳಿಗೆ ತಮ್ಮ ರಿಸೆಪ್ಷನ್‌ ಪಾರ್ಟಿಗೆ ಆಹ್ವಾನಿಸಿದ್ದಾರೆ. ಹೌದು ಇದೇ ತಿಂಗಳು ಅಂದರೆ ಜುಲೈ 30 ರಂದು ಸಂಜು ಬಸಯ್ಯ ಹಾಗೂ ಪಲ್ಲವಿ ಬಳ್ಳಾರಿ ಆರತಕ್ಷತೆ ಕಾರ್ಯಕ್ರಮ ಫಿಕ್ಸ್‌ ಆಗಿದೆ.

ಈ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋ ಈ ಜೋಡಿ ಜುಲೈ 30/07/2023 ರಂದು ಬೆಳಿಗ್ಗೆ 12 ಗಂಟೆ ಬೈಲಹೊಂಗಲ ಬೈ ಪಾಸ್ ರೋಡ್ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪ ಬೈಲಹೊಂಗಲ ಮಹಾ ನಗರದಲ್ಲಿ ನಮ್ಮ ಆರತಕ್ಷತೆ ಕಾರ್ಯಕ್ರಮ ಮತ್ತು ಸಂಜು ಬಸಯ್ಯ ಅವರ ಹುಟ್ಟು ಹಬ್ಬದ ಕಾರ್ಯಕ್ರಮ ದಯವಿಟ್ಟು ಎಲ್ಲರೂ ಬಂದು ನಮಗೆ ಆಶೀರ್ವದಿಸಬೇಕೆಂದು ಕೇಳಿಕೊಳ್ಳುತ್ತೇವೆ. ಇಂತಿ ನಿಮ್ಮ ಪ್ರೀತಿಯ ಸಂಜು ಬಸಯ್ಯ ಮತ್ತು ಪಲ್ಲವಿ” ಅಂತ ಬರೆದು ಸಂಜು ಬಸಯ್ಯ ಆಹ್ವಾನ ಪತ್ರಿಕೆಯನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇದನ್ನ ನೋಡ್ತಿದ್ದಂತೆ ಈ ಜೋಡಿಗೆ ನೆಟಿಜನ್‌ಗಳು ಶುಭ ಹಾರೈಸುತ್ತಿದ್ದಾರೆ. ಅಲ್ದೇ ನಿಮ್ಮದು ಅಪರೂಪದ ಜೋಡಿ, ನೂರು ವರ್ಷ ಹೀಗೇ ಪ್ರೀತಿಯಿಂದ ಬಾಳಿ ಬದುಕಿ ಎಂದು ವಿಶ್‌ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಪ್ರೀತಿಗೆ ಯಾವುದರ ಹಂಗು ಅಡ್ಡಿ ಇರೋದಿಲ್ಲ ಅನ್ನೋದಕ್ಕೆ ಈ ಜೋಡಿ ಪ್ರತ್ಯಕ್ಷ ಉದಾಹರಣೆ.

ಇದನ್ನೂ ಓದಿ: 35 ವರ್ಷಗಳ ಬಳಿಕ ಹಳೆ ಪ್ರೇಮಿಗಳ ಭೇಟಿ! ಹರಟೆ, ಮಾತುಕತೆ, ಭಾವುಕತೆ ಜೊತೆಗೆ ಆಗಿದ್ದೇನು ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram