Nayana: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ.. ಕೈಯಾರೇ ಅಡುಗೆ ಮಾಡಿ ಬಯಕೆ ಈಡೇರಿಸಿದ ಸಿಹಿ ಕಹಿ ಚಂದ್ರು

Nayana: ಹುಬ್ಬಳ್ಳಿಯಿಂದ ಸಾಮಾನ್ಯ ಹುಡುಗಿಯಾಗಿ ಬಂದ ನಯನ ಯಾವುದೇ ಬ್ಯಾಕ್‌ಗ್ರೌಂಡ್ ಗಾಡ್ ಫಾಧರ್ ಇಲ್ಲದೇ ಕಿರುತೆರೆಯ ಜನಪ್ರಿಯ ಕಾಮಿಡಿ ಕಿಲಾಡಿಗಳು ಶೋಗೆ ಎಂಟ್ರಿ ಕೊಟ್ಟು ತಮ್ಮ ಪ್ರತಿಭೆ ಮೂಲಕ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಕನ್ನಡಿಗರ ಮನೆ ಮಾತಾದ್ರೂ. ಅಲ್ದೇ ಕಾಮಿಡಿ ಮಾತ್ರವಲ್ಲ ಎಂತಹ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದಾರೆ. ಇನ್ನು ಕಿರುತೆರೆಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ. ಹೌದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ವಿಚಾರವನ್ನ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ಯ ನಟಿಯ ಬೇಬಿ ಬಂಪ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಹೌದು ಕಳೆದ ಮೂರು ವರ್ಷಗಳ ಹಿಂದೆ ಶರತ್ ಜೊತೆ ನಯನಾ ಸರಳವಾಗಿ ಮದುವೆಯಾದರು. ಸದ್ಯ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮನೆಗೆ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿಯಲ್ಲಿ ವಿಷಯ ರಿವೀಲ್ ಆಗಿದೆ. ಹೌದು ಸಿಹಿ ಕಹಿ ಚಂದ್ರು ಅವರ ನಿರೂಪಣೆಯ ಬೊಂಬಾಟ್ ಭೋಜನ ಕಾರ್ಯಕ್ರಮಕ್ಕೆ ನಟಿ ಎಂಟ್ರಿ ಕೊಟ್ಟಿದ್ದು, ಅದರಲ್ಲಿ ತಾಯಿಯಾಗುತ್ತಿರುವ ಸಂತಸವನ್ನು ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now

ಇದನ್ನೂ ಓದಿ: ಅಪ್ಪಂದಿರಂತೆ ಮಕ್ಕಳು ಕೂಡ ಬೆಸ್ಟ್ ಪ್ರೆಂಡ್ಸ್! ಅಪ್ಪು-ಕಿಚ್ಚ ಆಗ ಬೆಸ್ಟ್ ಪ್ರೆಂಡ್ಸ್ ಈಗ ಸಾನ್ವಿ-ಧೃತಿ ಕ್ಲೋಸ್ ಪ್ರೆಂಡ್ಸ್

ಬೊಂಬಾಟ್ ಭೋಜನಾ ಕಾರ್ಯಕ್ರಮದಲ್ಲಿ ನಯನ

ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ನಯನಾ ಕನ್ನಡಿಗರಿಗೆ ಪರಿಚಿತರಾದರು. ಅದ್ಭುತ ಹಾಸ್ಯದ ಮೂಲಕ ನಯನ(Nayana) ಕನ್ನಡಿಗರ ಹೃದಯ ಗೆದ್ದರು. ಇದೀಗ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಬೊಂಬಾಟ್ ಭೋಜನಾ ಕಾರ್ಯಕ್ರಮಕ್ಕೆ ನಯನ ಅವರನ್ನ ಕರೆಸಿ ಕಾರ್ಯಕ್ರಮದ ಮೂಲಕ ಬಸರಿ ಬಯಕೆ ಈಡೇರಿಸಿದ್ದಾರೆ. ಇನ್ನು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಇನ್ನು ಸಿಹಿ ಕಹಿ ಚಂದ್ರು ನಡೆಸಿಕೊಡುವ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ನಯನ ಭಾಗಿಯಾಗಿದ್ದರು.ಈ ಕಾರ್ಯಕ್ರಮದಲ್ಲಿ ನಯನಾ ಇಷ್ಟದ ಪಾನಿಪೂರಿ ಮಾಡಿಕೊಡುವ ಮೂಲಕ ಸಿಹಿ ಕಹಿ ಚಂದ್ರು, ನಯನ ಬಸರಿ ಬಯಕೆ ಈಡೇರಿಸಿದ್ದಾರೆ.

ಹೌದು ಸ್ಟಾರ್ ಸುವರ್ಣ ವಾಹಿನಿಯವರು ಬೊಂಬಾಟ್ ಭೋಜನಾ ಕಾರ್ಯಕ್ರಮದ ಒಂದು ಪ್ರೋಮೋವನ್ನ ರಿಲೀಸ್ ಮಾಡಿದ್ದಾರೆ. ಅದರಲ್ಲಿ ನಯನ ಭಾಗಿಯಾಗಿದ್ದು, ಸಿಹಿ ಕಹಿ ಚಂದ್ರು ಅವ್ರು ನಯನಗೆ ಪಾನಿಪುರಿ ಮಾಡಿಕೊಟ್ಟು, ತಿನಿಸಿ, ಗರ್ಭಿಣಿ ಆಗಿರುವ ನಯನಗೆ ಒಳ್ಳೆಯದಾಗಲಿ ಅಂತ ಆಶೀರ್ವಾದ ಮಾಡಿದ್ದಾರೆ. ಸದ್ಯ ನಯನಗೆ ಸದ್ಯ 6 ತಿಂಗಲಾಗಿದ್ದು, ಈಗಲೂ ಕೂಡ ಗರ್ಭಿಣಿಯಾಗಿದ್ದರೂ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ದೇ ಅನೇಕ ಕಾರ್ಯಕ್ರಮಗಳ ನಿರೂಪಣೆ ಕೂಡ ಮಾಡುತ್ತಾರೆ. ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಯನ ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಕ್ತಿ ಪೂರ್ವಕ, ಧಾರವಾಹಿ ಉಧೋ ಉಧೋ ರೇಣುಕಾ ಯಲ್ಲಮ್ಮ ಸೀರಿಯಲ್ ನಲ್ಲಿ ಯಲ್ಲಮ್ಮ ನಾ ತಾಯಿ ಪಾತ್ರ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ: ಭರ್ಜರಿ ಬ್ಯಾಚುಲರ್ಸ್ ಶೋ ನಿಂದ ಸುಕೃತ ನಾಗ್ ಔಟ್! ನವಾಜ್ ಗೆ ಜೋಡಿಯಾಗಿದ್ದ ಸುಕೃತ ಹೊರನಡೆದದ್ದು ಯಾಕೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram