Sanju Basayya Marriage: ಸೈಲೆಂಟ್ ಆಗಿ ನಟಿಯನ್ನು ರಿಜಿಸ್ಟರ್ ಮದುವೆಯಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ

Sanju Basayya Marriage: ಸಂಜು ಬಸಯ್ಯ ಈ ಹೆಸರು ಕೇಳಿದ ತಕ್ಷಣ ಕುಳ್ಳ ವ್ಯಕ್ತಿಯೊಬ್ಬ ಥಟ್ ಅಂತ ನೆನಪಿಗೆ ಬರ್ತಾರೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಕನ್ನಡ ನಾಡಿನ ಮನೆಮಾತಾದ ಕಾಮಿಡಿ ನಟ ಸಂಜು ಬಸಯ್ಯ, ತಮ್ಮ ಹಾಸ್ಯದಿಂದಲೇ ಎಲ್ಲರ ಮನಸೆಳೆದವರು. ಕಾಮಿಡಿ ಕಿಲಾಡಿಗಳು ಮುಗಿದ ಬಳಿಕ ಹಲವು ಅವಕಾಶ ಗಿಟ್ಟಿಸಿಕೊಂಡು ಸಿನಿಮಾ, ನಾಟಕ ಹೀಗೆ ಅವರ ಸಿನಿ ಜರ್ನಿ ಮುಂದುವರಿಯುತ್ತಿದೆ. ಈ ಮಧ್ಯೆ ಇದೀಗ ಸದ್ದಿಲ್ಲದೆ, ತಮ್ಮ ಬಹುಕಾಲದ ಪ್ರೇಯಸಿಯನ್ನು ಮದುವೆಯಾಗಿದ್ದಾರೆ. ಆತನ ಪ್ರೇಯಸಿಯನ್ನು ನೋಡಿ ಭಲೇ ಕಿಲಾಡಿಯಪ್ಪಾ ಇವ್ನು ಅಂತಿದ್ದಾರೆ. ಹೌದು ಎಲ್ಲರಿಗಿಂತ ಅತ್ಯಂತ ಕುಳ್ಳರಾಗಿರುವ ಈ ನಟ ಕಾಮಿಡಿ ಕಿಲಾಡಿಗಳು ಟಿವಿ ಶೋ ಮೂಲಕ ರಾಜ್ಯದ ಜನತೆಗೆ ಪರಿಚಯರಾದವರು. ಆತನ ಒಳ್ಳೆಯ ಮಾತು ಅಂಗೀಕ ಭಾವ, ನಗು, ಸುಂದರ ಮುಖ ಇದೆಲ್ಲಾ ಜನರಿಗೆ ಇಷ್ಟವಾಗಿತ್ತು. ಕಾಮಿಡಿ ಕಿಲಾಡಿಗಳು ತೀರ್ಪುಗಾರರಾದ ನಟ ಜಗ್ಗೇಶ್ ಅವರ ಕೈಲಿ ‘ ಕುಳ್ ಮಿಂಡ್ರೀ’ ಎಂದು ಪ್ರೀತಿಯಿಂದ ಕರೆಸಿಕೊಂಡ ಸಂಜು ಬಸಯ್ಯ ಇವತ್ತಿಗೆ ಸ್ಟಾರ್. ಮೆಣಸಿನಕಾಯಿ ಬಸ್ಯಾ, ಸಂಜು ಬಸಯ್ಯ ಹೀಗೆ ಹಲವು ಹೆಸರುಗಳಿಂದಲೇ ಈತ ಫೇಮಸ್. ಆದ್ರೆ ಈಗ ಇದು ಮ್ಯಾಟ್ರೆ ಅಲ್ಲಾ ಬಿಡಿ. ಯಾಕಂದ್ರೆ ಸಂಜು ಬಸಯ್ಯ ಕುಳ್ಳ ವ್ಯಕ್ತಿ. ಆದ್ರೆ ಪಲ್ಲವಿ ಬಳ್ಳಾರಿ ಎಲ್ಲರಂತೆ ಸಹಜ ಎತ್ತರ ಹೊಂದಿದ್ದಾರೆ . ಸಂಜುಗಿಂತ ಪಲ್ಲವಿ 1.5 ಅಡಿ ಉದ್ದಕ್ಕಿದ್ದಾರೆ. ಇಂತಹ ಸಹಜ ಸುಂದರಿಯ ಕೈ ಹಿಡಿದಿರುವ ಸಂಜು ಈಗ ಫುಲ್ ಫೇಮಸ್.

WhatsApp Group Join Now
Telegram Group Join Now

ಹೌದು ಹಿಂದೊಮ್ಮೆ ಜೀ ಕನ್ನಡ ಕಾಮಿಡಿ ಕಿಲಾಡಿ ಪ್ರೋಗ್ರಾಮ್ ನಲ್ಲಿ ಈ ಜೋಡಿಯ ಪರಿಚಯ ಆಗಿತ್ತು. ನವರಸ ನಾಯಕ ಜಗ್ಗೇಶ್ ಅವರು ಅಂದು ತಮ್ಮ ಇಂದಿನ ಕಾಮಿಡಿ ಶೈಲಿಯಲ್ಲಿ ಮಾತನಾಡಿ ಬಲೆ ಕಿಲಾಡಿಯಪ್ಪ ನೀನು, ‘ ಕುಳ್ ಮಿಂಡ್ರೀ’ ಅಂದಿದ್ರು. ಈಗ ಅದೇ ಹೆಸರು ಜನಪ್ರಿಯತೆ ಪಡೆದುಕೊಂಡಿದ್ದು, ಹಿರಿಯ ನಟ ಜಗ್ಗೇಶ್ ಅವ್ರು ತಮಾಷೆಗೆ ಹೇಳಿದ ಮಾತು ಇವತ್ತು ನಿಜವಾಗಿದ್ದು ಅದೇ ಹುಡುಗಿ ಜೊತೆಗೆ ಸಂಜು ಈಗ ರಿಜಿಸ್ಟರ್ ಮದುವೆ ಆಗಿದ್ದಾರೆ. ಇಬ್ಬರಿಗು ಏಳೆಂಟು ವರ್ಷಗಳ ಹಿಂದೆಯೇ ಪರಿಚಯವಿಟ್ಟು, ಜೊತೆಗೆ ನಾಟಕ ಮಾಡುತ್ತಾ ಸ್ಕಿಟ್ ನಲ್ಲಿ ಭಾಗವಹಿಸುತ್ತಾ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಸದ್ಯ ರಿಜಿಸ್ಟರ್‌ ಮದುವೆ ಆಗಿರುವ ಈ ಜೋಡಿ ಮುಂದಿನ ದಿನಗಳಲ್ಲಿ ಸಂಪ್ರದಾಯ ಬದ್ದವಾಗಿ ಸಪ್ತಪದಿ ತುಳಿಯಲಿದ್ದಾರಂತೆ. ಇದೀಗ ಈ ವಿಚಾರವನ್ನ ಸಂಜು ಬಸಯ್ಯ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಎಲ್ಲರು ಭಿನ್ನ ವಿಭಿನ್ನವಾಗಿ ಕಮೆಂಟ್ಸ್ ಮಾಡ್ತಿದ್ದು, ಗುಡ್ ಲಕ್ ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ಟಿ ಆರ್ ಪಿ ರೇಸ್ ನಲ್ಲಿ ನಂ1 ಪಟ್ಟಕ್ಕೆ ಏರಿದ ‘ಪುಟ್ಟನ ಮಕ್ಕಳು’; ಮೊದಲ ವಾರ ‘ಅಮೃತಧಾರೆ’ ಪಡೆದ ಟಿಆರ್ ಪಿ ಎಷ್ಟು?

ಇವತ್ತು ನಮ್ ಪ್ರೀತಿ ಗೆದ್ದಿದೆ ಎಂದ ನಟ ಸಂಜು ಬಸಯ್ಯ

ಹೌದು ಸೋಷಿಯಲ್‌ ಮೀಡಿಯಾದಲ್ಲಿಯೂ ಪೋಸ್ಟ್ ಮಾಡಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿರುವ ಸಂಜು ಬಸಯ್ಯ “ಕನ್ನಡದ ಕಲಾಭಿಮಾನಿಗಳಿಗೆ ನಿಮ್ಮ ಪ್ರೀತಿಯ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಮಾಡುವ ಅನಂತ ಅನಂತ ಕೋಟಿ ನಮಸ್ಕಾರ. ಇಂದು ನನ್ನ ಹಾಗೂ ಪಲ್ಲವಿ ಬಳ್ಳಾರಿಯವರ ನಡುವಿನ ಸಂಬಂಧಗಳ ಊಹಾಪೋಹಗಳಿಗೆ ಇಂದು ನಾವು ತೆರೆ ಎಳೆದಿದ್ದೇವೆ. ಮೊದಲಿಗೆ ನಮ್ಮಿಬ್ಬರ ಪರಿಚಯವಾಗಿ, ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿದ್ದ ವಿಷಯ. ಈಗ ನಾವಿಬ್ಬರು ಕಾನೂನಬದ್ದವಾಗಿ, ಅಧಿಕೃತವಾಗಿ, ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ. ನಮ್ಮ ಕುಟುಂಬದ ಒಪ್ಪಿಗೆ ಪಡೆದು ನಿಮ್ಮೆಲ್ಲರ ಸಮ್ಮುಖದಲ್ಲಿ ಆದಷ್ಟು ಬೇಗ ಸಪ್ತಪದಿ ತುಳಿಯಲಿದ್ದೇವೆ. ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಮೇಲೆ ಹೀಗೆ ಇರ್ಲಿ. ನಿಜವಾದ ಪ್ರೀತಿಗೆ ಯಾವುದೇ ಜಾತಿ, ಧರ್ಮ, ಇನ್ನಿತರ ಯಾವುದೇ ವಿಷಯಗಳು ಅಡ್ಡ ಬರಲಾರದು ಎಂಬುದನ್ನು ಸಾಧಿಸಿ ತೋರಿಸಿದ್ದೇವೆ. ನಿಜವಾದ ಪ್ರೀತಿಗೆ ಜಯ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ನಾವೇ ಕಾರಣ” ಅಂತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಗೆ ಮೂರು ಕಡೆ ಅರ್ಜಿ ಸಲ್ಲಿಸಬಹುದು; ಪತಿ ಸಾವಾಗಿದ್ರೆ ಅಂತಹ ಮಹಿಳೆಯರು ಏನ್ ಮಾಡ್ಬೇಕು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram