ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್.. ಇಂದಿನಿಂದಲೇ 5 ಯೋಜನೆಗಳು ಜಾರಿಯಾಗುವ ನಿರೀಕ್ಷೆ!?

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಮೊನ್ನೆ ಹೊರಬಿದಿದ್ದು. ಕಾಂಗ್ರೆಸ್‌ ಭರ್ಜರಿಯಾಗಿ ಸ್ಪಷ್ಟ ಬಹುಮತದೊಂದಿಗೆ ವಿಜಯ ಸಾಧಿಸಿದೆ. ಇನ್ನು ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ ವಲಯದಲ್ಲಿ ಯಾರಾಗ್ತಾರೆ ಸಿಎಂ ಅನ್ನೋ ಪ್ರಶ್ನೆ ಹಾಗೂ ಗೊಂದಲದ ಮಧ್ಯೆಯೇ ಇದೀಗ ಸರಣಿ ಟ್ವೀಟ್‌ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊದಲ ಕ್ಯಾಬಿನೆಟ್‌ನಲ್ಲಿಯೇ 5 ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ರಾಜ್ಯದ ಜನತೆಯ ಕಲ್ಯಾಣ ಮಾತ್ರವಲ್ಲ ಎಂದಿರುವ ಸಿದ್ದರಾಮಯ್ಯ, ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯ ಬದುಕು ಕೂಡಾ ನಮ್ಮ ಗ್ಯಾರಂಟಿ ಅಂತ ಹೇಳಿದ್ದಾರೆ. ಹಾಗಾದ್ರೆ 5ಗ್ಯಾರಂಟಿಗಳೇನು ಯಾರ್ ಯಾರಿಗೆ ಅದರ ಲಾಭ ತಲುಪುತ್ತೆ ಎಲ್ಲವನ್ನ ಸಂಪೂರ್ಣವಾಗಿ ನೋಡೋಣ ಬನ್ನಿ.

WhatsApp Group Join Now
Telegram Group Join Now

5 ಗ್ಯಾರಂಟಿಗಳನ್ನ ಈಡೇರಿಸುವ ಭರವಸೆ

ಕರ್ನಾಟಕ ವಿಧಾನಸಭ ಚುನಾವಣೆಯ 2023 ರ ಈ ಫಲಿತಾಂಶ ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುವಾದದ ವಿರುದ್ಧದ ಫಲಿತಾಂಶವಾಗಿದೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಗೆಲುವಲ್ಲ, ಇದು ಕರ್ನಾಟಕದ ಗೆಲುವು. ಕನ್ನಡಿಗರ ಗೆಲುವು, ಪ್ರಜಾಪ್ರಭುತ್ವದ ಗೆಲುವು. ಈ ಗೆಲುವಿಗಾಗಿ ರಾಜ್ಯದ ಸಮಸ್ತ ಕನ್ನಡಿಗರೂ ಅಭಿನಂದಿಸುತ್ತೇನೆ ಅಂತ ಹೇಳುತ್ತಾ, ತಾವು ಕೊಟ್ಟ ಆಶ್ವಾಸನೆಗಳ ಬಗ್ಗೆಯೂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ನಮ್ಮ ಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಪ್ರಣಾಳಿಕೆಯ ಮೂಲಕ ರಾಜ್ಯದ ಜನತೆಗೆ ನೀಡಿರುವ ಭರವಸೆಗಳನ್ನು ನಾವು ಈಡೇರಿಸುತ್ತೇವೆ ಎನ್ನುವುದನ್ನು ರಾಜ್ಯದ ಮತದಾರರು ಬಲವಾಗಿ ನಂಬಿದ್ದಾರೆ. ಇದಕ್ಕೆ ಕಾರಣ ಹಿಂದಿನ ನಮ್ಮ ಸರ್ಕಾರದ ಕಾಲದಲ್ಲಿ ನಾವು ಪ್ರಣಾಳಿಕೆಯ ಮೂಲಕ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಿರುವುದು. ಅದಕ್ಕಾಗಿ ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್‌ನಲ್ಲಿಯೇ ಈಡೇರಿಸುತ್ತೇವೆ ಎಂದಿದ್ದಾರೆ.ಅಲ್ಲದೇ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ನಾವು ಈಡೇರಿಸುತ್ತೇವೆ. ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ನಮ್ಮ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ. ರಾಜ್ಯದ ಜನತೆ ಇನ್ನು ನೆಮ್ಮದಿಯಿಂದ ಇರಬಹುದು. ರಾಜ್ಯದ ಜನತೆಯ ಕಲ್ಯಾಣ ಮಾತ್ರವಲ್ಲ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯ ಬದುಕು ಕೂಡಾ ನಮ್ಮ ಗ್ಯಾರಂಟಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ವಿಧಾನಸಭಾ ಚುನಾವಣೆಯಲ್ಲಿ ಸೋಲು! ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

ಯಾವಾವು 5ಗ್ಯಾರಂಟಿಗಳು, ಅದರಲ್ಲೇನಾದ್ರೂ ಬದಲಾವಣೆ ಇದೆಯಾ?

ಹೌದು ಆ 5 ಗ್ಯಾರಂಟಿಗಳೇನು ಅಂತ ನೋಡೋದಾದ್ರೆ, ಮೊದಲಿಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯ ಒಡತಿ ಯಾರು ಇರ್ತಾರೋ ಅಂತ ಹೆಣ್ಣು ಮಗಳಿಗೆ ಅಂದ್ರೆ ಒಂದು ಕುಟುಂಬದ ಒಬ್ಬ ಹೆಣ್ಣು ಮಗಳಿಗೆ ಪ್ರತಿ ತಿಂಗಳು ತಿಂಗಳಿಗೆ 2ಸಾವಿರ ರೂಪಾಯಿಯಂತೆ ಹಣ ಸಹಾಯ ಮಾಡಲಾಗುವ ಉದ್ದೇಶವನ್ನ ಮೊದಲ ಪ್ರಣಾಳಿಕೆಯಲ್ಲಿಯೇ ಈಡೇರುವ ಭರವಸೆಯನ್ನ ಕೊಟ್ಟಿದ್ದಾರೆ. ಇದರಲ್ಲಿ ಮುಖ್ಯವಾದ ಎಲ್ಲರು ಅರ್ಥ ಮಾಡಿಕೊಳ್ಳಬೇಕಾದ ಅಂಶ ಏನಪ್ಪ ಅಂದ್ರೆ ಒಂದು ಮನೆಯಲ್ಲಿ ಎಷ್ಟೇ ಹೆಣ್ಣು ಮಕ್ಕಳಿದ್ದರು ಅದರಲ್ಲಿ ಮನೆಯ ಒಡತಿ ಯಾರು ಇರ್ತಾರೋ ಅವರಿಗೆ ಮಾತ್ರ ತಿಂಗಳಿಗೆ 2ಸಾವಿರ ಹಣ ನೀಡುವ ಯೋಜನೆಯೇ ಗೃಹಲಕ್ಷ್ಮೀ. ಇನ್ನು ಎರಡನೇಯ ಯೋಜನೆ ಅನ್ನಭಾಗ್ಯ ಇದು ಈ ಹಿಂದಿನ ಯೋಜನೆಯಾದ್ರೂ ಇದರಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆಗಳನ್ನ ತಂದು ಬಿಪಿಎಲ್ ರೇಷನ್ ಕಾರ್ಡು ದಾರರಿಗೆ ಪ್ರತಿಯೊಬ್ಬ ಸದಸ್ಯರಿಗೆ 10ಕೆ.ಜಿ ಅಕ್ಕಿಯಂತೆ ಮನೆಯಲ್ಲಿರುವಾ ಎಲ್ಲ ಸದಸ್ಯರಿಗೂ 10ಕಿ. ಜಿ ಯಂತೆ ಅಕ್ಕಿಯನ್ನ ನೀಡುವ ಯೋಜನೆ ಇದಾಗಿದೆ.

ಇನ್ನು ಯುವನಿಧಿ ಯೋಜನೆ ನಿರುದ್ಯೋಗಿ ವಿದ್ಯಾವಂತರಿಗೆ ಒಂದು ಮಟ್ಟಿನ ನೆಮ್ಮದಿಯನ್ನ ನೀಡುವ ಯೋಜನೆಯಗಿದ್ದು, ಪಧವಿದರರು, ಡಿಪ್ಲೋಮ ಪಧವಿದರ ನಿರುದ್ಯೋಗಿಗಳು ಯಾರು ಇರ್ತಾರೋ ಅವ್ರಿಗೆ ನಿರುದ್ಯೋಗ ಭತ್ಯೆ ಅಂತ ಪ್ರತಿ ತಿಂಗಳು ಭತ್ಯೆಯನ್ನ ನೀಡ್ತಾರೆ. ಪಧವಿದರ ನಿರುದ್ಯೋಗಿಗಳಿಗೆ 3ಸಾವಿರ, ಡಿಪ್ಲೋಮೊ ಪಧವಿದರ ನಿರುದ್ಯೋಗಿಗಳಿಗೆ 1500 ನಿರುದ್ಯೋಗ ಭತ್ಯೆಯನ್ನ ನೀಡಲಾಗುತ್ತದೆ. ಇನ್ನು ಗೃಹ ಜ್ಯೋತಿ ಯೋಜನೆ ಇದು ಪ್ರತಿ ತಿಂಗಳು 200ಯುನಿಟ್ ವಿದ್ಯುತ್ ನೀಡುವ ಯೋಜನೆಯಾಗಿದ್ದು, ಪ್ರತಿ ತಿಂಗಳು ಉಚಿತವಾಗಿ 200ಯುನಿಟ್ ವಿದ್ಯುತ್ ನೀಡಲಾಗುವುದು. ಇನ್ನು ಕೊನೆಯದಾಗಿ ಉಚಿತ ಪ್ರಯಾಣ ಯೋಜನೆ. ಇದು ಮಹಿಳೆಯರಿಗಾಗಿಯೇ ತಂದಿರುವ ಯೋಜನೆಯಗಿದ್ದು ಸರ್ಕಾರಿ ಬಸ್ ನಲ್ಲಿ ಓಡಾಡುವ ಮಹಿಳೆಯರಿಗೆ ಉಚಿತವಾಗಿ ಉಚಿತ ಬಸ್ ಪಾಸ್ ನೀಡುವ ಯೋಜನೆಯಾಗಿದೆ.

ಚುನಾವಣೆಗೂ ಮೊದಲೇ ನೀಡಿದ್ದ 5 ಗ್ಯಾರಂಟಿ ಗಳನ್ನ ಇದೀಗ ಮೊದಲ ಕ್ಯಾಬಿನೆಟ್ ನಲ್ಲೆ ಈಡೇರಿಸುವ ಭರವಸೆಯನ್ನ ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದು, ಇದರ ಮಧ್ಯೆಯೇ ಸಿಎಂ ಖುರ್ಚಿಗಾಗಿ ಈಗ ಫೈಟ್ ನಡೆಯುತ್ತಿದ್ದೂ ಸಿಎಂ ಪಟ್ಟಭಿಷೇಕದ ನಂತರ ಎಲ್ಲದಕ್ಕೂ ಸ್ಪಷ್ಟ ನಿಲುವು ಸಿಗಲಿದೆ.

ಇದನ್ನೂ ಓದಿ: ಯಾರಾಗ್ತಾರೆ ಕರ್ನಾಟಕದ ಮುಂದಿನ ಸಿಎಂ? ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಟಫ್ಫ್ ಫೈಟ್!

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram