ಕಾಂಗ್ರೆಸ್ ನ 5ಭಾಗ್ಯಗಳಿಗೆ ದಿನಕ್ಕೆ,ತಿಂಗಳಿಗೆ ಆಗುವ ದುಡ್ಡೆಷ್ಟು? ಇಂತ ಯೋಜನೆಗಳಿಗೆ ಹಣ ಎಲ್ಲಿಂದ ಬರುತ್ತೆ? ಸರ್ಕಾರ ಏನ್ ಮಾಡುತ್ತೆ?

ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ 3ಪಕ್ಷಗಳು ನೀಡಿದ ಭರವಸೆಗಳಲ್ಲಿ ಕಾಂಗ್ರೆಸ್‌ ಪಕ್ಷ ನೀಡಿದ 5 ಗ್ಯಾರೆಂಟಿಗಳ ಚುನಾವಣಾ ಭರವಸೆ ಈಗ ಟಾಕ್‌ ಆಫ್‌ ದ ಟೌನ್ ಆಗಿದೆ. ಹೌದು ಕಾಂಗ್ರೇಸ್ ನೀಡಿದ ಅಷ್ಟು ಭರವಸೆಗಳು ಸಾಕಷ್ಟು ಜನರನ್ನ ತಲುಪಲು ಯಶಸ್ವಿಯಾಗಿ ಇದೀಗ ಅದೇ ಕಾರಣದಿಂದ ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿದ್ದು, ಅಧಿಕಾರ ಚುಕ್ಕಾಣಿ ಹಿಡಿದಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ನೀಡಿರುವ ಅಷ್ಟು ಗ್ಯಾರಂಟಿಗಳನ್ನ ಈಡೇರಿಸುವುದು ಬಹಳ ಮುಖ್ಯವಾಗಿದೆ. ಬಹುಮತ ಸಿಕ್ಕಿರುವ ಹಿನ್ನೆಲೆ ಇದೀಗ ಬೇರೆ ಪಕ್ಷದವರ ಮೇಲೆ ಗೂಬೆ ಕೂರಿಸುವ ಅವಕಾಶ ಇದೀಗ ಕಾಂಗ್ರೆಸ್ ಪಕ್ಷಕ್ಕಿಲ್ಲ. ಹೀಗಾಗಿ ಅಷ್ಟು ಯೋಜನೆಗಳನ್ನ ಕಾಂಗ್ರೆಸ್ ಪಕ್ಷ ಅನುಷ್ಠಾನಗೊಳಿಸಲೇ ಬೇಕಾದ ಅನಿವಾರ್ಯತೆ ಇದೆ. ಇನ್ನು 5 ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿದ್ದ ಕಾರಣವೇ ಕಾಂಗ್ರೆಸ್‌ ಪಕ್ಷಕ್ಕೆ ಈ ಬಾರಿ ಇಷ್ಟು ದೊಡ್ಡ ಬಹುಮತ ಸಿಗಲು ಕಾರಣ ಅಂತ ಹೇಳುದ್ರೆ ತಪ್ಪಾಗಲಾರದು. ಹೀಗಿರುವಾಗ ಜನರ ನಂಬಿಕೆಯನ್ನ ಕಾಂಗ್ರೆಸ್ ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದ್ದು, ಇವುಗಳನ್ನ ಜಾರಿಗೊಳಿಸಲು ಸರ್ಕಾರಕ್ಕೆ ದಿನಕ್ಕೆ, ತಿಂಗಳಿಗೆ ಎಷ್ಟು ಹಣದ ಅವಶ್ಯಕತೆ ಇದೆ. ಸರ್ಕಾರ ಇದನ್ನ ಹೇಗೆ ಭರಿಸುತ್ತದೆ ಎಲ್ಲವನ್ನ ಸಂಪೂರ್ಣವಾಗಿ ತಿಳಿಸಿಕೊಡ್ತೀನಿ.

WhatsApp Group Join Now
Telegram Group Join Now

ಕಾಂಗ್ರೆಸ್ ನ 5 ಗ್ಯಾರಂಟಿಗಳು

ಹೌದು ಮೊನ್ನೆ ಮೊನ್ನೆಯಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 135 ಸ್ಥಾನಗಳನ್ನು ಗೆದ್ದುಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇನ್ನು ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿದ ಕಾಂಗ್ರೆಸ್‌ ಪಕ್ಷಕ್ಕೆ ಈಗ ಚುನಾವಣಾ ಭರವಸೆಗಳನ್ನು ಈಡೇರಿಸುವ ಸವಾಲು ಇದೆ. ಅದರಲ್ಲೂ ವಿಶೇಷವಾಗಿ 5 ಗ್ಯಾರೆಂಟಿಗಳು ಕಾಂಗ್ರೆಸ್ಸಿಗರ ಮುಂದಿರುವ ದೊಡ್ಡ ಸವಾಲುಗಳಾಗಿವೆ. ಮೊದಲಿಗೆ ಎಲ್ಲ ಮನೆಗಳಿಗೆ ಗೃಹ ಜ್ಯೋತಿ ಯೋಜನೆಯಡಿಯಲ್ಲಿ 200 ಯುನಿಟ್‌ ವಿದ್ಯುತ್‌ ಉಚಿತ, ಗೃಹ ಲಕ್ಷ್ಮಿ ಯೋಜನೆಯಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂಪಾಯಿ ಮನೆ ನಿರ್ವಹಣೆಗೆ ಕೊಡೋದಾಗಿ ಕಾಂಗ್ರೆಸ್‌ ಹೇಳಿತ್ತು, ಇದಲ್ಲದೆ, 18 ರಿಂದ 25 ವರ್ಷದ ಪ್ರತಿ ಪದವೀಧರ ಯುವಜನರಿಗೆ 3,000 ರೂಪಾಯಿ, ಡಿಪ್ಲೊಮಾ ಪದವೀಧರರಿಗೆ 1,500 ರೂಪಾಯಿ ಎರಡು ವರ್ಷದ ಅವಧಿಗೆ ಯುವನಿಧಿ ಯೋಜನೆಯಡಿಯಲ್ಲಿ ನೀಡುವ ಭರವಸೆ ಸೇರಿದಂತೆ, ಬಿಪಿಎಲ್‌ ಕುಟುಂಬದ ಪ್ರತಿ ಸದಸ್ಯರಿಗೆ 10 ಕಿಲೋ ಅಕ್ಕಿ ಉಚಿತ ಸೇರಿದಂತೆ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನೂ ಕಾಂಗ್ರೆಸ್‌ ಘೋಷಣೆ ಮಾಡಿತ್ತು. ಇದೀಗ ಇದೆಲ್ಲವನ್ನು ಕೂಡ ಈಡೇರಿಸುವುದು ಅಷ್ಟು ಸುಲಭವಲ್ಲ ಇದಕ್ಕೆ ಸಾಕಷ್ಟು ಹಣದ ಅವಶ್ಯಕತೆ ಇದ್ದು ಹಣ ಸಂಗ್ರಹ ಮಾಡೋದು ಕಾಂಗ್ರೆಸ್ ಮುಂದಿರುವ ದೊಡ್ಡ ಸವಾಲು.

ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬದಲಾಯ್ತು ಚಿನ್ನದ ಬೆಲೆ,ಎಷ್ಟಿದೆ ನೋಡಿ ಇಂದಿನ ಚಿನ್ನದ ಬೆಲೆ.

ಗ್ಯಾರಂಟಿ ಭಾಗ್ಯಗಳಿಗೆ ಬೇಕಾಗುವ ಹಣ ಎಷ್ಟು ಗೊತ್ತಾ?

ಇನ್ನು 5 ಗ್ಯಾರೆಂಟಿ ಸೇರಿ ಉಳಿದ ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ ಕರ್ನಾಟಕ ಸರ್ಕಾರಕ್ಕೆ ವಾರ್ಷಿಕವಾಗಿ ಕನಿಷ್ಠ 62,000 ಕೋಟಿ ರೂಪಾಯಿ ಬೇಕು. ಅಲ್ದೇ ಮೊದಲ ಕ್ಯಾಬಿನೆಟ್‌ ಸಭೆಯಲ್ಲೇ ಈ 5 ಗ್ಯಾರೆಂಟಿಗಳನ್ನು ಈಡೇರಿಸುವ ಪ್ರಸ್ತಾವನೆಯನ್ನು ಅಂಗೀಕರಿಸುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಇದೀಗ ಹೇಳಿದಂತೆ ನಡೆದುಕೊಳ್ಳುವ ಅನಿವಾರ್ಯ ಹೆಚ್ಚಾಗಿದ್ದು, ಕಾಂಗ್ರೆಸ್ ಸರ್ಕಾರದ ಮುಂದಿನ ನಡೆ ಏನಿರಬಹುದು ಅನ್ನೋದು ಸದ್ಯದ ಕುತೂಹಲ. ಇನ್ನು ದೊಡ್ಡ ರಾಜ್ಯಗಳ ಪೈಕಿ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕವು ಅತ್ಯಧಿಕ ಬೆಳವಣಿಗೆ ದರವನ್ನು ದಾಖಲಿಸಿದೆ. 2022-23ಕ್ಕೆ, ಆದಾಯ ಸಂಗ್ರಹಣೆಯ ಗುರಿಯನ್ನು 72,000 ಕೋಟಿ‌ ರೂಪಾಯಿಗೆ ನಿಗದಿಪಡಿಸಲಾಗಿತ್ತು. ಜಿಎಸ್‌ಟಿ ಪರಿಹಾರವನ್ನು ಹೊರತುಪಡಿಸಿ 83,010 ಕೋಟಿಯ ರೂಪಾಯಿ ಆದಾಯ ಸಂಗ್ರಹವನ್ನು ಜನವರಿ ಅಂತ್ಯದ ವೇಳೆಗೆ ಸಾಧಿಸಲಾಗಿದೆ.

ಇದು ಬಜೆಟ್ ಅಂದಾಜಿಗಿಂತ 15 ಪ್ರತಿಶತ ಹೆಚ್ಚಾಗಿದೆ. ಇದೆಲ್ಲದರ ಅರ್ಥವೇನೆಂದರೆ, ಹೊಸ ಕಾಂಗ್ರೆಸ್ ಸರ್ಕಾರವು ತಾನು ಭರವಸೆ ನೀಡಿದ ಉಚಿತಗಳನ್ನು ಒದಗಿಸಲು ಹೆಚ್ಚು ಕಷ್ಟಪಡಬೇಕಾಗಿಲ್ಲ.ಇನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ 200ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಿಕ್ಕೆ 14430ಕೋಟಿ, ಯುವನಿಧಿ ಯೋಜನೆಗೆ 3000 ಕೋಟಿ, ಗೃಹಲಕ್ಷ್ಮಿ ಯೋಜನೆಗೆ 30720ಕೋಟಿ, ಅನ್ನ ಭಾಗ್ಯ ಯೋಜನೆಗೆ 5000ಕೋಟಿ ಹಣ. ಬೇಕಾಗುತ್ತೆ. ಉಚಿತ ಬಸ್ ಪ್ರಯಾಣಕ್ಕೆ ಇನ್ನು ಹಣವನ್ನ ಲೆಕ್ಕ ಹಾಕಲು ಸಾಧ್ಯವಾಗೋದಿಲ್ಲ. ಅದು ಪ್ರಯಾಣಿಕರನ್ನ ಅವಲಂಬಿಸಿರುತ್ತೆ ಇದನ್ನ ಹೊರತುಪಡಿಸಿ ಇನ್ನುಳಿದ 4ಯೋಜನೆಗಳ ಅನುಷ್ಠಾನಕ್ಕೆ ವರ್ಷಕ್ಕೆ 53150ಕೋಟಿ ರೂಪಾಯಿ, ಅದೇ ತಿಂಗಳಿಗೆ 4500ಕೋಟಿ ರೂಪಾಯಿ ಇನ್ನು ದಿನ ಒಂದಕ್ಕೆ 150ಕೋಟಿ ರೂಪಾಯಿಗಳ ಅವಶ್ಯಕತೆ ಇದೆ. ಹೀಗಾಗಿ ಇದೆಲ್ಲವನ್ನ ಕಾಂಗ್ರೆಸ್ ಸರ್ಕಾರ ಹೇಗೆ ನಿಭಾಯಿಸುತ್ತದೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕು.

ಇದನ್ನೂ ಓದಿ: ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್..ಇಂದಿನಿಂದಲೇ 5 ಯೋಜನೆಗಳು ಜಾರಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram