ಚುನಾವಣೆ ಬಂತು ಎಂದರೆ ಎಲ್ಲಾ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತವೆ. ಜನರಿಗೆ ಉದ್ಯೋಗ, ನೀರು, ಮನೆ ಹಿಂಗೆ ಮೂಲ ಸೌಲಭ್ಯಗಳು ಒಂದು ಕಡೆ ಆದರೆ ಇನ್ನೊಂದು ಕಡೆ ದೇಶದ ಅಭಿವೃದ್ಧಿಗೆ ಮಾಡಬೇಕಾದ ಹಲವು ಕಾರ್ಯಗಳ ಬಗ್ಗೆ ಹೇಳುತ್ತವೆ. ಆದರೆ ಇವೆಲ್ಲ ಘೋಷಣೆಗಳಿಗೆ ಮತದಾರ ಯಾರ ಪರವಾಗಿ ಓಟು ಹಾಕುತ್ತೇನೆ ಎನ್ನುವುದು ಮಾತ್ರ ಚುನಾವಣಾ ಫಲಿತಾಂಶ ಬಂದ ಮೇಲೆ ತಿಳಿಯುವುದು.
ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಜನರಿಗೆ ಉಚಿತ ನೀಡುವ ಗ್ಯಾರೆಂಟಿ ಯೋಜನೆಗಳ ಮೂಲಕ ಜನರನ್ನು ತನ್ನೆಡೆ ಸೆಳೆದುಕೊಂಡು ಜನರಿಗೆ ಉಚಿತವಾಗಿ ಅಕ್ಕಿ ಹಣ, ಉಚಿತವಾಗಿ ಮಹಿಳೆಯರಿಗೆ ಬಸ್ ಪ್ರಯಾಣ ಜೊತೆಗೆ ಮಹಿಳೆಯರ ಖಾತೆಗೆ 2,000 ರೂಪಾಯಿ ಹೀಗೆ ಉಚಿತ ಭಾಗ್ಯಗಳನ್ನು ನೀಡಿ ಜನರ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿದೆ ಎನ್ನಬಹುದು. ಅದರಂತೆ ಈಗ ಬರುವ ಲೋಕಸಭಾ ಚುನಾವಣೆಯಲ್ಲಿ ಸಹ ಕಾಂಗ್ರೆಸ್ ತನ್ನದೇ ಕೆಲವು ಗ್ಯಾರೆಂಟಿ ಯೋಜನೆಗಳ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವ ಘೋಷಣೆಗಳು ಏನು?
ಕಾಂಗ್ರೆಸ್ ಪಕ್ಷ ಈ ಸಲ ಬರೋಬ್ಬರಿ 5 ಘೋಷಣೆಗಳು ಹಾಗೂ 25 ಗ್ಯಾರೆಂಟಿ ಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಮುಖ್ಯವಾಗಿ ಉದ್ಯೋಗ ಸೃಷ್ಠಿಯ ಬಗ್ಗೆ ತಿಳಿಸಿದೆ. ಮುಖ್ಯವಾಗಿ 5 ನ್ಯಾಯಗಳ ಬಗ್ಗೆ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದು ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ ಹಾಗೂ ಸಮಾನತೆ ನ್ಯಾಯ ಎಂದು 5 ಘೋಷಣೆ ಮಾಡಲಾಗಿದೆ.
ಯುವ ನ್ಯಾಯ ಗ್ಯಾರೆಂಟಿ ಯೋಜನೆ:- ಬರೋಬ್ಬರಿ 30ಲಕ್ಷ ಉದ್ಯೋಗಗಳನ್ನು ನೀಡುವ ಭರವಸೆಯನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ. ಇದರ ಜೊತೆಗೆ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಹೊಸ ನೀತಿ ಕಾನೂನು ರಚಿಸುವ ಭರವಸೆ ನೀಡಿದೆ. ಹಾಗೂ ಗುತ್ತಿಗೆ ಆಧಾರಿತ ಅಥವಾ ಅರೆಕಾಲಿಕ ಉದ್ಯೋಗಿಗಳ ರಕ್ಷಣೆಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ತಿಳಿಸಿದೆ. ಹಾಗೂ ಯುವಕ-ಯುವತಿಯರಿಗೆ ₹5,000 ಕೋಟಿ ಸ್ಟಾರ್ಟಪ್ ಫಂಡ್ ನೀಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದೆ.
ಮಹಿಳೆಯರಿಗೆ ಒಂದು ಲಕ್ಷ ಗ್ಯಾರೆಂಟಿ :- ಮಹಿಳೆಯರಿಗೂ ಸಹ ಗ್ಯಾರೆಂಟಿ ಯೋಜನೆ ಘೋಷಣೆ ಆಗಿದ್ದು ಮಹಾಲಕ್ಷ್ಮೀ ಯೋಜನೆ ಎಂಬ ಹೆಸರಲ್ಲಿ ಬಡ ಕುಟುಂಬದ ಪ್ರತಿಯೊಬ್ಬ ಮಹಿಳಗೆ ಪ್ರತಿ ವರ್ಷವೂ 1 ಲಕ್ಷ ರೂಪಾಯಿ ಸಹಾಯಧನ ನೀಡುವುದಾಗಿ ಭರವಸೆ ನೀಡಿದೆ. ಹಾಗೂ ಉದ್ಯೋಗ ನೇಮಕಾತಿಯಲ್ಲಿ ಕೇಂದ್ರ ಸರ್ಕಾರವು ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಹಾಗೂ ಆಶಾ ಕಾರ್ಯಕರ್ತರು, ಬಿಸಿಯೂಟ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗ ವೇತನ ಹೆಚ್ಚು ಮಾಡುವ ಭರವಸೆ ನೀಡಿದ್ದಾರೆ. ಹಾಗೂ ಪಂಚಾಯ್ತಿಗಳಲ್ಲಿ ಮಹಿಳೆಯರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಕೇಂದ್ರ. ಉದ್ಯೋಗಸ್ಥ ಮಹಿಳೆಯರಿಗಾಗಿ ಸಾವಿತ್ರಿಬಾಯಿ ಫುಲೆ ಹಾಸ್ಟೆಲ್ ನಿರ್ಮಾಣ ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.
ರೈತ ಗ್ಯಾರೆಂಟಿ :- ರೈತರಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸಿನ ಪ್ರಕಾರ ಬೆಂಬಲ ಬೆಲೆ. ಹಾಗೂ ಬೇಳೆ ನಾಶವಾದರೆ 38 ದಿನಗಳ ಒಳಗೆ ಪರಿಹಾರ. ತೆರಿಗೆ ವಿನಾಯಿತಿ ಗಳು ರೈತರಿಗೆ ನೀಡುವ ಭರವಸೆ ನೀಡಿದ್ದಾರೆ.
ಕಾರ್ಮಿಕರಿಗೆ ಗ್ಯಾರೆಂಟಿ :- ಕಾರ್ಮಿಕರಿಗೆ 400 ರೂಪಾಯಿ ಕನಿಷ್ಠ ದಿನಗೂಲಿ 25 ಲಕ್ಷ ಆರೋಗ್ಯ ವಿಮಾ ಗ್ಯಾರೆಂಟಿ.
ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಈ ಸರ್ಕಾರಿ ಯೋಜನೆಯು ನಿಮ್ಮ ಕುಟುಂಬದ ಭವಿಷ್ಯವನ್ನು ಭದ್ರಪಡಿಸುತ್ತದೆ, 20 ರೂ.ಗೆ 2 ಲಕ್ಷ ಜೀವ ವಿಮೆಯ ವರದಾನ!
ಇದನ್ನೂ ಓದಿ: ನೀವು ಆನ್ಲೈನ್ ನಲ್ಲಿ ಹಣ ಸಂಪಾದನೆ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.