ಕ್ರೆಡಿಟ್ ಕಾರ್ಡ್ ಎಂಬುದು ಪಾವತಿಸುವ ಒಂದು ಕಾರ್ಡ್ ಆಗಿದ್ದು. ನಿಮ್ಮ ಅಕೌಂಟ್ ನಲ್ಲಿ ಹಣ ಇಲ್ಲದೆಯೂ ಕೆಲವು ಮಿತಿಗಳ ಅನ್ವಯ ಶಾಪಿಂಗ್ ಮಾಡುವ ಸಮಯದಲ್ಲಿ ಹಣ ಪಾವತಿ ಮಾಡುವ ವಿಶಿಷ್ಟ ಕಾರ್ಡ್ ಇದಾಗಿದ್ದು. ಭಾರತದಲ್ಲಿ ಹೆಚ್ಚಿನ ಜನರು ಕ್ರೆಡಿಟ್ ಕಾರ್ಡ್ ಬಳಸುತ್ತಾರೆ. ಕ್ರೆಡಿಟ್ ಕಾರ್ಡ್ ಬಳಕೆಗೆ ಅನೇಕ ಶಾಪಿಂಗ್ ಮಳಿಗೆಯಲ್ಲಿ ಹಲವಾರು ಆಫರ್ ಗಳು ಲಭ್ಯ ಇವೆ. ಹಲವರು ಬ್ಯಾಂಕ್ ಗಳು ಕ್ರೆಡಿಟ್ ಕಾರ್ಡ್ ವಿತರಣೆ ಮಾಡುತ್ತಿದೆ. ಆದರೆ ಈಗ ಕೆಲವು ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ ಬಳಕೆಗೆ ಏಪ್ರಿಲ್ ಒಂದರಿಂದ ಹೊಸ ನಿಯಮಗಳು ಜಾರಿಯಾಗಲಿದೆ ಹಾಗಾದರೆ ಹೊಸ ನಿಯಮಗಳು ಏನು ಯಾವ ಯಾವ ಕ್ರೆಡಿಟ್ ಕಾರ್ಡ್ ಗೆ ನಿಯಮಗಳು ಬದಲಾಗಿವೆ ಎಂದು ನೋಡೋಣ.
ನಿಯಮ ಬದಲಾವಣೆ ಏನು?
ಯೆಸ್ ಬ್ಯಾಂಕ್(Yes Bank) ಪ್ರವೇಶ ನೀತಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಮುಂದಿನ ತ್ರೈಮಾಸಿಕದಲ್ಲಿ ಲಾಂಜ್‌ಗಳನ್ನು ಬಳಸಿ, ಕ್ರೆಡಿಟ್ ಕಾರ್ಡ್ ಹೊಂದಿರುವವರು ಪ್ರಸಕ್ತ ತ್ರೈಮಾಸಿಕದಲ್ಲಿ 10,000 ರೂಪಾಯಿ ಕನಿಷ್ಠ ಖರ್ಚು ಮಾಡಬೇಕು. ಈ ಬದಲಾವಣೆ ಎಲ್ಲಾ ಯೆಸ್ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಇದು ಅನ್ವಯಿಸುತ್ತದೆ. ಏಪ್ರಿಲ್ 1, 2024 ರಿಂದ ಲಾಂಜ್ ಪ್ರವೇಶಕ್ಕೆ ಹೊಸ ನಿಯಮಗಳು ಜಾರಿಗೆ ಬರಲಿವೆ. ಲಾಂಜ್ ಪ್ರವೇಶ ಪಡೆಯಲು, ಡಿಸೆಂಬರ್ 21, 2023 ರಿಂದ ಮಾರ್ಚ್ 20, 2024 ರವರೆಗೆ ಕ್ರೆಡಿಟ್ ಕಾರ್ಡ್‌ಗಳಲ್ಲಿ ₹10,000 ಖರ್ಚು ಮಾಡಬೇಕು.
ಯಾವ ಯಾವ ಕ್ರೆಡಿಟ್ ಕಾರ್ಡ್ ಗೆ ನಿಯಮ ಅನ್ವಯಿಸಲಾಗಿದೆ?: ಯೆಸ್ ಸೆಲೆಕ್ಟ್ , ಯೆಸ್ ರಿಸರ್ವ್, ಯೆಸ್ ಫಸ್ಟ್ ಪ್ರಿಫರ್ಡ್, ಯೆಸ್ ಬ್ಯಾಂಕ್ ಎಲೈಟ್, BYOC, Yes Wellness Plus, ಕ್ರೆಡಿಟ್ ಕಾರ್ಡ್ ಗಳಿಗೆ ಈ ನಿಯಮಗಳು ಅನ್ವಯವಾಗಲಿದೆ.
ಇದರ ಜೊತೆಗೆ ICICI ಬ್ಯಾಂಕ್ ಏಪ್ರಿಲ್ 1, 2024 ರಿಂದ ಲಾಂಜ್ ಪ್ರವೇಶಕ್ಕೆ ಹೊಸ ಸ್ಥಳಗಳನ್ನು ಜಾರಿಗೆ ತರಲಿದೆ. ಕೆಲವು ಕಾರ್ಡ್‌ಗಳಿಗೆ, ಗ್ರಾಹಕರು ಈಗ ಮುಂದಿನ ತ್ರೈಮಾಸಿಕದ ಲಾಂಜ್ ಪ್ರವೇಶವನ್ನು ಪಡೆಯಲು ಹಿಂದಿನ ತ್ರೈಮಾಸಿಕದಲ್ಲಿ ₹35,000 ಖರ್ಚು ವೆಚ್ಚವಾಗುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರೂಪ್ ಯೆಸ್ ಬ್ಯಾಂಕ್‌ನಲ್ಲಿ ತನ್ನ ಪಾಲನ್ನು ಹೆಚ್ಚಿಸಲು RBI ಅನುಮೋದನೆ ನೀಡಿದ ನಂತರ, ಯೆಸ್ ಬ್ಯಾಂಕ್ ಷೇರುಗಳು ಫೆಬ್ರವರಿ 6 ರಂದು 13% ಏರಿಕೆ ಕಂಡು ₹25.70 ತಲುಪಿತು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) ಯೋಜನೆಯಲ್ಲಿ ಇನ್ವೆಸ್ಟ್ ಮಾಡಿ ಲಾಭ ಗಳಿಸಿ
ಕ್ರೆಡಿಟ್ ಕಾರ್ಡ್ ಪ್ರಯೋಜನಗಳು :-
- ರಿವಾರ್ಡ್‌ಗಳು: ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವಾಗ ನೀವು ಪಾಯಿಂಟ್‌ಗಳು ಸಿಗುತ್ತವೆ. ಹಾಗೂ ನೀವು ಪಾವತಿಸಿದ ಹಣಕ್ಕೆ ರಿವಾರ್ಡ್ ಹಣವೂ ಬರುತ್ತದೆ.
- ಖರೀದಿ ರಕ್ಷಣೆ: ನಿಮ್ಮ ಬಳಿ ಹಣ ಇಲ್ಲದೆ ಇರುವ ಸಮಯದಲ್ಲಿ ಅಥವಾ ಶಾಪಿಂಗ್ ಮಾಡುವಾಗ ಹಣ ಹೆಚ್ಚಾದರೆ ಈ ಕಾರ್ಡ್ ಬಳಸಿ ಹೆಚ್ಚಿನ ಹಣವನ್ನು ಪಾವತಿ ಮಾಡಲು ಸಾಧ್ಯವಿದೆ.
- ಕ್ರೆಡಿಟ್ ಸ್ಕೋರ್ ಹೆಚ್ಚು:- ಕ್ರೆಡಿಟ್ ಕಾರ್ಡ್‌ಗಳನ್ನು ಜವಾಬ್ದಾರಿಯುತವಾಗಿ ಬಳಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಲು ಸಹಾಯ ಮಾಡಬಹುದು.
- ದೇಶ ವಿದೇಶಗಳಲ್ಲಿ ಬಳಸಬಹುದು – ಇದು ಅಂತರರಾಷ್ಟ್ರೀಯ ಪ್ರಯಾಣಕ್ಕೆ ಅನುಕೂಲಕರವಾಗಿದೆ. ಆದಾಗ್ಯೂ, ವಿದೇಶಿ ವಹಿವಾಟು ಶುಲ್ಕಗಳು ಮತ್ತು ವಿನಿಮಯ ದರಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
- ನಗದು ಹಣದ ಜೊತೆ ಪ್ರಯಾಣಿಸುವ ಅಗತ್ಯ ಇಲ್ಲ.:- ಹೆಚ್ಚಿನ ಹಣವನ್ನು ಪಾವತಿ ಮಾಡಬೇಕು ಅಥವಾ ಎಲ್ಲಿ ಆದರೂ ಹೆಚ್ಚಿನ ಅಹಣ ತೆಗೆದುಕೊಂಡು ಹೋಗಬೇಕು ಎಂದಾಗ ಕಳ್ಳರ ಭಯ ಇರುತ್ತದೆ. ಆದ್ದರಿಂದ ನೀವು ಈ ಕಾರ್ಡ್ ಹೊಂದಿದ್ದರೆ ಎಲ್ಲಿ ಆದರೂ ಭಯ ಇಲ್ಲದೆಯೇ ಪ್ರಯಾಣಿಸಬಹುದು.
ಇದನ್ನೂ ಓದಿ: ದೈನಂದಿನ ಬಳಕೆಗೆ ಸೂಕ್ತವಾದ ಒಂದೇ ಒಂದು ಬ್ರಾಂಡ್ ಅಂದ್ರೆ ಅದುವೇ ಸುಜುಕಿ ಆಕ್ಸೆಸ್ 125 ಸ್ಕೂಟರ್