ಮೇ 1 ರಿಂದ ಕ್ರೆಡಿಟ್ ಕಾರ್ಡ್ ಗ್ರಾಹಕರು ಯುಟಿಲಿಟಿ ಬಿಲ್‌ಗಳನ್ನು ಪಾವತಿಸುವಾಗ ಹೆಚ್ಚಿನ ಮೊತ್ತವನ್ನು ಶುಲ್ಕ ನೀಡಬೇಕಾಗುತ್ತದೆ.

Credit card Rule Change

ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಯಾವುದೇ ಯುಟಿಲಿಟಿ ಬಿಲ್‌ಗಳನ್ನು ಪಾವತಿಸುವಾಗ ಹೆಚ್ಚಿನ ಹಣವನ್ನು ಶುಲ್ಕದ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಎಷ್ಟು ಹಣವನ್ನು ಪಾವತಿಸಬೇಕು ಹಾಗೂ ಯಾವ ಯಾವ ಕ್ರೆಡಿಟ್ ಕಾರ್ಡ್ ಗಳಿಗೆ ಈ ಹೊಸ ನಿಯಮ ಅನ್ವಯ ಆಗುತ್ತದೆ ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಯಾವ ಯಾವ ಬ್ಯಾಂಕ್ ಗೆ ಈ ಹೊಸ ನಿಯಮ ಅನ್ವಯ ಆಗುತ್ತದೆ?: ಈ ನಿಯಮ ಎಲ್ಲಾ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಅನ್ವಯ ಆಗುವುದಿಲ್ಲ. ಯಸ್ ಬ್ಯಾಂಕ್(Yes Bank) ಹಾಗೂ IDFC first ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಮಾತ್ರ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. 

ಎಷ್ಟು ಶುಲ್ಕ ಪಾವತಿಸಬೇಕು?: ನೀವು ಯಸ್ ಬ್ಯಾಂಕ್(Yes Bank) ಅಥವಾ IDFC first ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಬಳಸಿ ಯುಟಿಲಿಟಿ ಬಿಲ್ ಪಾವತಿಸಿದರೆ ಪಾವತಿಯ ಮೊತ್ತದ ಮೇಲೆ ಶೇಕಡಾ 1% ಶುಲ್ಕವನ್ನು ಪಾವತಿಸಬೇಕು ಎಂದು ನಿಯಮ ಬದಲಾವಣೆ ಮಾಡಿದ್ದಾರೆ. ಅಂದರೆ ನೀವು ಒಂದು ತಿಂಗಳ ವಿದ್ಯುತ್ ಬಿಲ್ 1000 ರೂಪಾಯಿ ಪಾವತಿ ಮಾಡಿದ್ದರೆ ಶೇಕಡಾ 1% ಶುಲ್ಕದಂತೆಯೇ ಬಿಲ್ ಮೊತ್ತದ ಮೇಲೆ ನಿಮಗೆ ಹೆಚ್ಚುವರಿ 10 ರೂಪಾಯಿ ಪಾವತಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಉಚಿತ ಬಳಕೆಯ ಮಿತಿ ಏಷ್ಟು?

ಯೆಸ್ ಬ್ಯಾಂಕ್‌ ತನ್ನ ಗ್ರಾಹಕರಿಗೆ 15,000 ರೂಪಾಯಿ ಹಾಗೂ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ ತನ್ನ ಗ್ರಾಹಕರಿಗೆ 20,000 ರೂಪಾಯಿಗಳ ವರೆಗೆ ಉಚಿತ ಬಳಕೆಯ ಮಿತಿಯನ್ನು ನೀಡುತ್ತಿದೆ. ಕ್ರೆಡಿಟ್ ಕಾರ್ಡ್ ಹೊಂದಿರುವವರು ಸ್ಟೇಟ್‌ಮೆಂಟ್ ಸೈಕಲ್‌ನಲ್ಲಿ ನೀವು ಯಸ್ ಬ್ಯಾಂಕ್ ನಲ್ಲಿ 15,000 ರೂಪಾಯಿ ಗಿಂತ ಹಾಗೂ IDFC first ಬ್ಯಾಂಕ್ 20,000 ರೂಪಾಯಿ ಕ್ಕಿಂತ ಕಡಿಮೆ ಯುಟಿಲಿಟಿ ಬಿಲ್ ಪಾವತಿಸಿದರೆ ನೀವು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಜೊತೆಗೆ ನೀವು 15,000 ರೂಪಾಯಿಗಿಂತ ಹೆಚ್ಚಿನ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಿದರೆ ನೀವು ಹೆಚ್ಚುವರಿ 1 ಶೇಕಡಾ ಶುಲ್ಕದ ಜೊತೆಗೆ 18% ಶೇಕಡಾ GST ಅನ್ವಯ ಆಗುತ್ತದೆ.

ಇದನ್ನೂ ಓದಿ: EPF ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ? ಬಡ್ಡಿ ಎಷ್ಟಾಗಿದೆ ಎಂಬುದನ್ನು ನೀವೇ ನೋಡಬಹುದು!

ಶುಲ್ಕ ಪಾವತಿಸುವ ನಿಯಮ ಜಾರಿಗೆ ಬರಲು ಕಾರಣವೇನು?

1) ಪ್ರತಿ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲಿನ ವ್ಯವಹಾರಗಳ ಪಾವತಿ ಗೇಟ್‌ವೇಗಳಿಗೆ ಪಾವತಿಸುವ ಶುಲ್ಕವನ್ನು MDR ಎಂದು ಕರೆಯಲಾಗುತ್ತದೆ. ಈ ಶುಲ್ಕವು ವ್ಯವಹಾರದ ವರ್ಗ (ದಿನಸಿ, ಪ್ರಯಾಣ, ಇತ್ಯಾದಿ) ಅನ್ನು ಅವಲಂಬಿಸಿರುತ್ತದೆ. ಉಪಯುಕ್ತತೆಯ ಬಿಲ್ ಪಾವತಿಗಳಿಗೆ, MDR ಸಾಮಾನ್ಯವಾಗಿ ಇತರ ವರ್ಗಗಳ ಕಡಿಮೆಯಾಗಿರುತ್ತದೆ. ಇದಕ್ಕೆ ಕಾರಣ, ಉಪಯುಕ್ತತೆಗಳನ್ನು ಪಡೆಯಲು ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಬ್ಯಾಂಕುಗಳಿಗೆ ಲಾಭ ಕಡಿಮೆ ಆಗುತ್ತದೆ ಎಂಬ ಕಾರಣವೂ ಹೌದು.

2) ವ್ಯಾಪಾರ ದುರುಪಯೋಗ ಆಗಬಾರದು ಎಂಬ ಕಾರಣಕ್ಕೆ ಕ್ರೆಡಿಟ್ ಮಿತಿಯೊಂದಿಗೆ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.

ಶುಲ್ಕ ತಪ್ಪಿಸಲು ಏನು ಮಾಡಬೇಕು?: ಬೇರೆ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ನೀವು ಪೇಮೆಂಟ್ ಮಾಡ್ಬೇಕು. ಇಲ್ಲವೇ ನೀವು ಕ್ಯಾಶ್ ಮೂಲಕ ಪೇಮೆಂಟ್ ಮಾಡಿ ಕ್ರೆಡಿಟ್ ಮಿತಿಯ ಒಳಗೆ ನೀವು ಪೇಮೆಂಟ್ ಮಾಡಬೇಕು. ಇಲ್ಲವೇ ನೀವು ನೆಟ್ ಬ್ಯಾಂಕಿಂಗ್ ಹಾಗೂ UPI ಮೂಲಕ ಪೇಮೆಂಟ್ ಮಾಡಬೇಕು ಆಗ ನೀವು ಶುಲ್ಕ ಪಾವತಿ ಮಾಡಬೇಕಾಗಿರುವುದಿಲ್ಲ ಹಾಗೂ ನೀವು GST Hana payment ಮಾಡುವುದರಿಂದ ತಪ್ಪಿಸಬಹುದು.

ಇದನ್ನೂ ಓದಿ: ಐಷಾರಾಮಿ ಮತ್ತು ಸಾಮರ್ಥ್ಯದ ಸಂಗಮವಾದ ಮಹೀಂದ್ರಾ XUV 3XO ಅನ್ನು ಖರೀದಿಸಿ!