ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಬದಲಾಯಿಸಿದ RBI; ಗ್ರಾಹಕರಿಗೆ ಉತ್ತಮ ಲಾಭ

Credit card rule change by RBI

ಕ್ರೆಡಿಟ್ ಕಾರ್ಡ್ ಬಳಕೆಗೆ ಅದರದ್ದೇ ಆದ ನಿಯಮಗಳು ಇವೆ. ಕ್ರೆಡಿಟ್ ಕಾರ್ಡ್ ಬಳಸಲು ಗರಿಷ್ಠ ನಿಯಮಗಳು ಇವೆ. ಕ್ರೆಡಿಟ್ ಕಾರ್ಡ್ ಬಳಕೆಗೆ ಸಂಬಂಧಿಸಿದಂತೆ ಬ್ಯಾಂಕ್ ಗಳಿಗು ಸಹ ಕೆಲವು ನಿರ್ಬಂಧಗಳು ಇವೆ. ಈಗ ಹಳೆಯ ನಿಯಮಗಳ ಜೊತೆಗೆ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿ ಗೊಳಿಸಿದೆ. RBI ನ ಹೊಸ ನಿಯಮಗಳು ಏನೇನು ಎಂಬುದನ್ನು ಈ ಲೇಖನದಲ್ಲಿ ನೋಡಿ.

WhatsApp Group Join Now
Telegram Group Join Now

ಗ್ರಾಹಕರಿಗೆ RBI ನೀಡಿರುವ ಹೊಸ ರೂಲ್ಸ್ ಗಳು ಏನೇನು?: ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಇನ್ನೂ ಮುಂದೆ ತಮ್ಮ ಆಯ್ಕೆಯ ಅನುಸಾರವಾಗಿ ವೀಸಾ, ಮಾಸ್ಟರ್ ಕಾರ್ಡ್‌ನಂತಹ ಯಾವುದೇ ನೆಟ್‌ವರ್ಕ್ ಆಯ್ಕೆ ಮಾಡಬಹುದಾಗಿದೆ ನೀವು ಬ್ಯಾಂಕ್‌ಗಳಲ್ಲಿ ಅಥವಾ ಹಣಕಾಸು ಕಂಪನಿಯಲ್ಲಿ ನಿಮ್ಮ ಇಷ್ಟದ ಕಾರ್ಡ್ ನೆಟ್‌ವರ್ಕ್ ಪಡೆಯಲು ಸಾಧ್ಯವಿದೆ. ಆಕಸ್ಮಾತ್ ನಿಮ್ಮ ಬಳಿ ಈಗಾಗಲೇ ಕ್ರೆಡಿಟ್ ಕಾರ್ಡ್ ಇದ್ದಲ್ಲಿ, ಕ್ರೆಡಿಟ್ ಕಾರ್ಡ್ ನವೀಕರಣ ಮಾಡಿಸುವಾಗ ನೀವು ಕಾರ್ಡ್ ನೆಟ್‌ವರ್ಕ್ ಅನ್ನು ಬದಲಾಯಿಸಿಕೊಳ್ಳಬಹುದು ಆದರೆ 10 ಲಕ್ಷಕ್ಕಿಂತ ಕಡಿಮೆ ಸಕ್ರಿಯ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವ ವಿತರಕರಿಗೆ ಈ ನಿಯಮ ಅನ್ವಯವಾಗುವುದಿಲ್ಲ.

ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ನಿಯಮ ಬದಲಾವಣೆ

ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಎಂದರೆ ನೀವು ತೆಗೆದುಕೊಂಡ credit ಮೊತ್ತವನ್ನು ತಿರುಗಿಸುವ ಒಂದು ಸಮಯ ಸಾಮಾನ್ಯವಾಗಿ ಬಿಲ್ಲಿಂಗ್ ಸೈಕಲ್ ಸಮಯವೂ 27 ರಿಂದ 31 ದಿನಗಳ ಕಾಲ ಇರುತ್ತದೆ. ಆದರೆ ಒಂದು ಬ್ಯಾಂಕ್ ನಿಂದಾ ಒಂದು ಬ್ಯಾಂಕ್ ಗೆ ಬಿಲ್ಲಿಂಗ್ ಸೈಕಲ್ ಅವಧಿಯಲ್ಲಿ ಹೆಚ್ಚು ಕಡಿಮೆ ಇರುತ್ತದೆ. ಹಾಗೂ ಪ್ರತಿ ವ್ಯಕ್ತಿಯ ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಬೇರೆ ಬೇರೆಯಾಗಿ ಇರುತ್ತದೆ. ನೀವು ಕ್ರೆಡಿಟ್ ಕಾರ್ಡ್ ಪಡೆಯುವ ಮುನ್ನ ಬಿಲ್ಲಿಂಗ್ ಸೈಕಲ್ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈಗ ಹೊಸದಾಗಿ RBI ನ ನಿಯಮದ ಪ್ರಕಾರ ಗ್ರಾಹಕರು ಅವರ ಇಚ್ಛೆಯ ಅನುಗುಣವಾಗಿ ಬಿಲ್ಲಿಂಗ್ ಸೈಕಲ್ ಅವಧಿಯನ್ನು ಒಂದಕ್ಕಿಂತ ಹೆಚ್ಚು ಬಾರಿ ಬದಲಿಸಲು ಸಾಧ್ಯ. ಆದರೆ ನೀವು ಬಿಲ್ಲಿಂಗ್ ಸೈಕಲ್ ಬದಲಿಸುವ ಮುನ್ನ ಕೆಲವು ನಿಯಮಗಳನ್ನು ಅನುಸರಿಸಬೇಕು. ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಬದಲಿಸಲು ಹೀಗೆ ಮಾಡಿ

1) ಬಾಕಿ ಇರಬಾರದು:- ನೀವು ಕ್ರೆಡಿಟ್ ಕಾರ್ಡ್ ನ ಬಿಲ್ಲಿಂಗ್ ಸೈಕಲ್ ಬದಲಿಸಬೇಕು ಎಂದಾದರೆ ಮೊದಲು ಹಿಂದಿನ ಎಲ್ಲಾ ಬಾಕಿ ಹಣಗಳನ್ನು ಪಾವತಿಸಿರಬೇಕು. ಇಲ್ಲವಾದರೆ ನಿಮಗೆ ಕ್ರೆಡಿಟ್ ಕಾರ್ಡ್ ನ ಬಿಲ್ಲಿಂಗ್ ಸೈಕಲ್ ಬದಲಿಸಲು ಸಾಧ್ಯವಾಗುವುದಿಲ್ಲ.

2) ಫೋನ್ ಅಥವಾ ಮೇಲ್ ಮೂಲಕ ವಿನಂತಿಸಿ :- ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಬದಲಾಯಿಸಲು ನೀವು ಫೋನ್ ಅಥವ ಮೇಲ್ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ವಿತರಣಾ ಕಂಪನಿಗೆ ವಿನಂತಿಸಬೇಕು.

3) ಮೊಬೈಲ್ ಅಪ್ಲಿಕೇಶನ್ :- ಈಗ ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗೆ ಮೊಬೈಲ್ ಆ್ಯಪ್ ಗಳು ಲಭ್ಯ ಇವೆ. ನಿಮ್ಮ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಮೊಬೈಲ್ ಅಪ್ಲಿಕೇಶನ್ ಬಳಸಿ ವಿನಂತಿ ಮಾಡಬೇಕು.

4) ಬಡ್ಡಿರಹಿತ ಸಮಯ ಪಡೆಯಿರಿ :- ಕ್ರೆಡಿಟ್ ಕಾರ್ಡ್ ನಿಯಮದ ಪ್ರಕಾರ ಬಡ್ಡಿ ರಹಿತವಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಸಮಯ ಇರುತ್ತದೆ. ಅದನ್ನು ಗಮನಿಸಿಕೊಂಡು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಬದಲಾಯಿಸಿ. ಇಲ್ಲವಾದರೆ ನಿಮ್ಮ ಕ್ರೆಡಿಟ್ ಹಣಕ್ಕೆ ನೀವು ಹೆಚ್ಚಿನ ಬಡ್ಡಿ ನೀಡಬೇಕಾಗುತ್ತದೆ.

ಇದನ್ನೂ ಓದಿ: ಮಹಿಳೆಯರು ತೆಗೆದುಕೊಳ್ಳುವ ಗೃಹ ಸಾಲಕ್ಕೆ ಹಲವು ರೀತಿಯ ಪ್ರಯೋಜನಗಳು ಇವೆ