ಕೇಂದ್ರ ಸರ್ಕಾರಿ ನೌಕರರ DA, DR ಭತ್ಯೆಯನ್ನು ಮೂಲ ವೇತನದ ಜೊತೆಗೆ ವಿಲೀನ ಮಾಡಲಿದೆಯೇ?

DA DR Hiked Central Government Employees

ಸರ್ಕಾರಿ ನೌಕರರ ಹಲವು ದಿನಗಳ ಬೇಡಿಕೆ ಹಾಗೂ ಇಂದಿನ ದರ ಏರಿಕೆಯ ಕಾಲಮಾನವನ್ನು ಪರಿಗಣಿಸಿದ ಕೇಂದ್ರ ಸರ್ಕಾರವು ಈಗ DA, DR ಭತ್ಯೆಯನ್ನು 50% ಏರಿಸಿದ್ದು ಈಗ ಜೊತೆಗೆ DA, DR ಭತ್ಯೆ ಸ್ವಯಂ ಚಾಲಿತ ಆಗುವುದೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಈ ಭತ್ಯೆ ಹೆಚ್ಚಳ ಯಾವ ಯಾವ ನೌಕರರಿಗೆ ಸಿಗಲಿದೆ ಎಂಬುದನ್ನು ನೋಡೋಣ.

WhatsApp Group Join Now
Telegram Group Join Now

DA, DR ಭತ್ಯೆಯನ್ನು ಯಾವ ವರ್ಗದ ನೌಕರರಿಗೆ ಹೆಚ್ಚಿಸಲಾಗಿದೆ?: ಜನವರಿ 1, 2024 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದ್ದು ಕೇಂದ್ರ ಸರ್ಕಾರಿ ನೌಕರರು ಹಾಗೂ ಕೇಂದ್ರ ಸರಕಾರದಿಂದ ಪಿಂಚಣಿ ಸೌಲಭ್ಯ ಪಡೆಯುವವರಿಗೆ ಈ ಭತ್ಯೆಯನ್ನು ಪಡೆಯುತ್ತಾರೆ.

ಮೂಲ ವೇತನದ ಜೊತೆಗೆ ವಿಲೀನ ಆಗಲಿದೆಯೇ DA?: ಮೂಲ ವೇತನದೊಂದಿಗೆ ಡಿಎ ವಿಲೀನಗೊಳಿಸುವ ಸಾಧ್ಯತೆ ಇದೆ ಎಂದು ಕೆಲವು ಸುದ್ದಿಗಳು ಹಬ್ಬಿದೆ. ಇದಕ್ಕೆ ಕಾರಣ, ಮೂಲ ವೇತನವು 50% ತಲುಪಿದಾಗ ಡಿಎ ಮೂಲ ವೇತನದೊಂದಿಗೆ ವಿಲೀನಗೊಳಿಸಲಾಗಿದೆ. ವಾಸ್ತವವಾಗಿ, 5 ನೇ ವೇತನ ಆಯೋಗದ ವರದಿಯ ಶಿಫಾರಸು ಮೂಲ ವೇತನದೊಂದಿಗೆ ಡಿಎ ವಿಲೀನಗೊಳಿಸಲಾಗಿತ್ತು. 2004 ರಲ್ಲಿ ಮೂಲ ವೇತನದ 50% ರಷ್ಟು ಡಿಎ ಮೊತ್ತವನ್ನು ವಿಲೀನಗೊಳಿಸಲಾಯಿತು.ಆದರೆ, 6 ನೇ ವೇತನ ಆಯೋಗ ಸೇರಿದಂತೆ ನಂತರದ ಆಯೋಗಗಳು ಈ ರೀತಿಯ ವಿಲೀನ ಮಾಡಲು ಮುಂದಾಗಿಲ್ಲ.

50% ಡಿಎ ಹೆಚ್ಚಂದಂತೆ ಕೇಂದ್ರ ಸರ್ಕಾರಿ ನೌಕರಿಗೆ ಹೆಚ್ಚಾಗುವ ಭತ್ಯೆ ಯಾವುವು?

1) ಮನೆ ಬಾಡಿಗೆ ಭತ್ಯೆ :- HRA ಎಂದರೆ ಮನೆ ಬಾಡಿಗೆ ಭತ್ಯೆ. ಇದು ಉದ್ಯೋಗಿಗಳಿಗೆ ವಾಸದ ವೆಚ್ಚವನ್ನು ಭರಿಸಿಸಲು ನೀಡಲಾಗುವ ಒಂದು ಭತ್ಯೆ. HRA ದರವು ಸಾಮಾನ್ಯವಾಗಿ ಉದ್ಯೋಗದ ಸ್ಥಾನಮಾನ, ವಾಸಿಸುವ ನಗರದ ವರ್ಗ, ಮತ್ತು ಮೂಲ ವೇತನದಂತಹ ಅಂಶಗಳನ್ನು ಹೊಂದಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

2) ಮಕ್ಕಳ ಶಿಕ್ಷಣ ಭತ್ಯೆ (CEA):- CEA ಎಂದರೆ ಮಕ್ಕಳ ಶಿಕ್ಷಣ ಭತ್ಯೆ. ಇದು ಉದ್ಯೋಗಿಗಳಿಗೆ ತಮ್ಮ ಮಕ್ಕಳ ಶಿಕ್ಷಣ ವೆಚ್ಚವನ್ನು ಭರಿಸಲೂ ನೀಡಲಾಗುವ ಒಂದು ಭತ್ಯೆ. CEA ದರವು ಸಾಮಾನ್ಯವಾಗಿ ಉದ್ಯೋಗಿಯ ಸ್ಥಾನಮಾನ, ಮಕ್ಕಳ ಸಂಖ್ಯೆ ಮತ್ತು ಮಕ್ಕಳ ವಯಸ್ಸಿನಂತಹ ಅಂಶಗಳನ್ನು ಆಧರಿಸಿರುತ್ತದೆ.

3) ಶಿಶುಪಾಲನಾ ಭತ್ಯೆ :- ಉದ್ಯೋಗಿಗಳಿಗೆ ತಮ್ಮ ಮಕ್ಕಳಿಗೆ ನೀಡುವ ವೆಚ್ಚವನ್ನು ಭರಿಸಲು ಸಹಾಯ ಮಾಡಲು ಉದ್ಯೋಗದಾತರಿಗೆ ಇದು ಒಂದು ಪ್ರಯೋಜನವಾಗಿದೆ.

4) ಹಾಸ್ಟಲ್ ಸಬ್ಸಿಡಿ ಭತ್ಯೆ :- ಕೆಲವು ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ವಸತಿ ವೆಚ್ಚವನ್ನು ಭರಿಸಲು ಸಹಾಯ ಮಾಡಲು ಹಾಸ್ಟೆಲ್ ಸಬ್ಸಿಡಿ ಭತ್ಯೆ ಇದೆ. ಈ ಭತ್ಯೆಯು ಉದ್ಯೋಗದಾತರಿಂದ ಉದ್ಯೋಗಕ್ಕೆ ನೀಡಲಾಗುವ ಒಂದು ಧನಸಹಾಯವನ್ನು ಹೊಂದಿದೆ, ಅದರ ಉದ್ಯೋಗವು ತಮ್ಮ ವಾಸದ ವೆಚ್ಚವನ್ನು ಭರಿಸಲು ಬಳಸಬಹುದು.

5) ಟ್ರಾನ್ಸ್ಫರ್ ಅಲೋಯನ್ಸ್ :- ಉದ್ಯೋಗಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸಿದಾಗ ಅವರಿಗೆ ಉಂಟಾಗುವ ಖರ್ಚುಗಳನ್ನು ಭರಿಸಿಸಲು ಉದ್ಯೋಗದಾತರು ನೀಡುವ ಒಂದು ಭತ್ಯೆ ಇದಾಗಿದೆ.

6) ಗ್ರಾಚ್ಯುಟಿ ಸೀಲಿಂಗ್:- ಭಾರತದಲ್ಲಿ ಗ್ರಾಚ್ಯುಟಿ ಸೀಲಿಂಗ್ ಎನ್ನುವುದು ನಿವೃತ್ತಿ, ಮರಣ, ರಾಜೀನಾಮೆ ಅಥವಾ ಅಂಗವಿಕಲತೆಯ ನಂತರ ಉದ್ಯೋಗಿ ಪಡೆಯುವ ಗರಿಷ್ಠ ಪ್ರಮಾಣದ ಗ್ರಾಚ್ಯುಟ ಭತ್ಯೆ ಸರ್ಕಾರ ನೀಡುತ್ತದೆ.

7) ಉಡುಗೆ ಭತ್ಯೆ (Dress Allowance):- ಉಡುಗೆ ಭತ್ಯೆ ಉದ್ಯೋಗಿಗಳಿಗೆ ಕೆಲಸದ ಉಡುಪುಗಳನ್ನು ಖರೀದಿಸಲು ಮತ್ತು ನಿರ್ವಹಿಸಲು ಸಹಾಯ ಮಾಡಲು ಉದ್ಯೋಗದಾತರು ನೀಡುವ ಒಂದು ಭತ್ಯೆ. ಉಡುಗೆ ಭತ್ಯೆಯು ಉದ್ಯೋಗದಾತರ ನೀತಿಗಳನ್ನು ಅವಲಂಬಿಸಿ ಭಿನ್ನವಾಗಿರುತ್ತದೆ.

ಇದನ್ನೂ ಓದಿ: ದೇಶದಲ್ಲಿ ಪೆಟ್ರೋಲ್ ದರ ಇಳಿಕೆ ಕಂಡಿದೆ. ಗ್ರಾಹಕರ ಬಹು ದಿನಗಳ ಬೇಡಿಕೆಗೆ ಒಪ್ಪಿದ ಕೇಂದ್ರ ಸರ್ಕಾರ

ಇದನ್ನೂ ಓದಿ: 5 ಲಕ್ಷಕ್ಕೂ ಕಡಿಮೆ ಬೆಲೆಯಲ್ಲಿ ಖರೀದಿಸುವಂತಹ ಕಾರುಗಳಿವು, ಇದರ ಬಗ್ಗೆ ಒಂದಷ್ಟು ಮಾಹಿತಿಗಳು