Darshan: ರೆಬಲ್ ಮನೆತನ ಉಳಿಸೋ ಜವಾಬ್ದಾರಿ ನಿಂದಮ್ಮ, ಅವಿವಾ ಮುಂದೆ ಮಂಡಿಯೂರಿ ಕೈಮುಗಿದ ದರ್ಶನ್.!!

Darshan: ರೆಬಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿದ್ದಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು, ಇದೀಗ ಕಳೆದ ವಾರವಷ್ಟೇ ಗುರುಹಿರಿಯರ ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವಾರದಿಂದ ಅಂಬಿ ಮನೆಯಲ್ಲಿ ಸಡಗರ ಮನೆಮಾಡಿತ್ತು. ಹೌದು ಅಭಿಷೇಕ್ ಅಂಬರೀಶ್ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅವಿವಾ ಬಿದ್ದಪ್ಪ ಹೊಸ ಜೀವನಕ್ಕೆ ಕಾಲಿಟ್ಟರು. ಗೌಡರ ಸಂಪ್ರದಾಯದಂತೆ ನಡೆದ ಕಾರ್ಯಕ್ರಮದಲ್ಲಿ ಅವಿವಾಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ದೀರ್ಘಕಾಲದ ಗೆಳತಿಯೊಂದಿಗೆ ಅಭಿಷೇಕ್ ಹಸೆಮಣೆ ಏರಿದರು. ಇನ್ನು ಈ ಮದುವೆಗೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು.

WhatsApp Group Join Now
Telegram Group Join Now

ಹೌದು ತಮಿಳಿನ ಖ್ಯಾತ ನಟ ರಜನಿಕಾಂತ್, ತೆಲುಗು ನಟ ಚಿರಂಜೀವಿ, ಕ್ರಿಕೆಟಿಗ ಅನಿಲ್ ಕುಂಬ್ಳೆ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳು ನಟ ಮೋಹನ್ ಬಾಬು, ತೆಲುಗು ನಟ ನರೇಶ್, ನಟಿ ಪವಿತ್ರ ಲೋಕೇಶ್, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಸುದೀಪ್ ಕುಟುಂಬ, ಯಶ್ ಕುಟುಂಬ, ಹಿರಿಯ ನಟ ದೊಡ್ಡಣ್ಣ, ಗಾಯಕ ವಿಜಯ್ ಪ್ರಕಾಶ್ ಹೀಗೆ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಆಗಮಿಸಿ, ನವ ಜೋಡಿಗೆ ವಿಶ್ ಮಾಡಿದ್ರು. ಆ ನಂತರ ಅದ್ದೂರಿಯಾಗಿ ಅರತಕ್ಷತೆ ಸಮಾರಂಭ ಕೂಡ ಮಾಡಲಾಗಿತ್ತು, ಇದಕ್ಕೂ ಕೂಡ ಮದುವೆಗೆ ಮಿಸ್ ಆಗಿದ್ದ ಮತ್ತೊಂದಷ್ಟು ಕಲಾವಿದರ ದಂಡೇ ಆಗಮಿಸಿ ಎಲ್ಲರು ಸೇರಿ ಎಂಜಾಯ್ ಮಾಡಿದ್ರು. ಇದೀಗ ಅಭಿಷೇಕ್ ಹಾಗೂ ಅವಿವಾ ಹಾಗೂ ಕುಟುಂಬದವರ ಆಪ್ತರಿಗಾಗಿ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಪಾರ್ಟಿಯೊಂದನ್ನು ಆಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ: ಒಟ್ಟಿಗೆ ಕಾಣಿಸಿಕೊಂಡ ಟೈಗರ್ ಪ್ರಭಾಕರ್ ಮಕ್ಕಳು, ಸ್ಯಾಂಡಲ್ವುಡ್ ನಲ್ಲಿ ಹರಿದಾಡುತ್ತಿದ್ದ ಟಾಕ್ ಗೆ ಬಿತ್ತು ತೆರೆ

ಸ್ಟೇಜ್ ಮೇಲೆ ಅಂಬಿ ಸಾಂಗ್ ಗಳಿಗೆ ಸಕ್ಕತ್ ಸ್ಟೆಪ್ ಹಾಕಿದ ಯಶ್, ದರ್ಶನ್, ಅಭಿ

ಹೌದು ಬಹಳ ವಿಭಿನ್ನವಾಗಿ ಅಷ್ಟೇ ಅದ್ದೂರಿಯಾಗಿ ವಿವಾಹ ಬಂಧನಕ್ಕೆ ಒಳಗಾದ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಜೋಡಿ ಇದೀಗ ಮದುವೆ ನಂತರ ಅವರ ಆಪ್ತರಿಗಾಗಿ ಪಾರ್ಟಿಯೊಂದನ್ನು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಆಯೋಜನೆ ಮಾಡಿಸಿದ್ರು. ಕ್ಲಬ್ ಅವಿವಾ ಹೆಸರಿನಲ್ಲಿ ಆಯೋಜನೆಯಾಗಿದ್ದ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ಹಲವು ತಾರೆಯರು ಆಗಮಿಸಿದ್ದರು. ಅಲ್ಲದೇ ಕೆಲವರು ಅಂಬರೀಶ್ ಅವರ ಜನಪ್ರಿಯ ಹಾಡಿಗೆ ನೃತ್ಯ ಕೂಡ ಮಾಡಿದರು. ಕ್ಲಬ್ ಅವಿವಾ ಹೆಸರಿನಲ್ಲಿ ಆಯೋಜನೆಯಾಗಿದ್ದ ಪಾರ್ಟಿಯಲ್ಲಿ, ನಟಿ ಜಯಪ್ರದಾ, ಮಾಲಾಶ್ರೀ, ರಮ್ಯಕೃಷ್ಣ, ಯಶ್, ರಾಕ್ ಲೈನ್ ವೆಂಕಟೇಶ್, ದರ್ಶನ್, ರಾಗಿಣಿ ಪ್ರಜ್ವಲ್, ಸೇರಿದಂತೆ ಹಲವು ನಾಯಕಿಯರು ಕೂಡ ಬಂದು ಸಖತ್ ಎಂಜಾಯ್ ಮಾಡಿದ್ದಾರೆ.

ಅದರಲ್ಲೂ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಫೇಮಸ್ ಸಾಂಗ್ ‘ಹೇ ಜಲೀಲಾ’ ಹಾಡಿಗೆ ಸುಮಲತಾ ಅಂಬರೀಶ್ ಜೊತೆ ಯಶ್ ಡಾನ್ಸ್ ಮಾಡಿದರು. ನಂತರ ಇವರಿಗೆ ಅಭಿಷೇಕ್ ಮತ್ತು ಅವಿವಾ ಕೂಡ ಸಾಥ್ ನೀಡಿದ್ದು ವಿಶೇಷವಾಗಿತ್ತು. ಅಲ್ಲದೇ ಅಭಿಷೇಕ್ ಅಂಬರೀಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರು ಕೂಡ ಭರ್ಜರಿ ಸ್ಟೆಪ್ ಹಾಕಿದ್ದು, ಆಗ ಅಭಿ ಅವ್ರನ್ನ ನೋಡಿದವರಿಗೆ ಅಂಬಿಯೇ ಕಣ್ಣ ಮುಂದೆ ಬಂದಂತಾಗದ್ದಂತು ಸುಳ್ಳಲ್ಲ. ಇನ್ನು ಇದೆ ಸಂದರ್ಭದಲ್ಲಿ ಅವಿವಾಗೆ ಜವಾಬ್ದಾರಿ ಕೊಟ್ಟ ದರ್ಶನ್(Darshan) ಪ್ರೀತಿಯಿಂದ ಕಿವಿ ಮಾತು ಹೇಳಿ ನೀಲ್ ಡೌನ್ ಆಗಿ ಅಂದ್ರೆ ಮಂಡಿಗಾಲಿನ ಮೇಲೆ ಕುಳಿತು ಅವಿವಾ ಅವರಿಂದ ಮಾತು ತಗೊದುಕೊಂಡ ವಿಡಿಯೋ ಫುಲ್ ವೈರಲ್ ಆಗ್ತಿದೆ.

ನೀನು ದೊಡ್ಡ ಕಿರೀಟಯಿದ್ದಂಗೆ, ಮನೆ ಚೆನ್ನಾಗಿ ನೋಡ್ಕೋ

ಹೌದು ಈ ಒಂದು ಪಾರ್ಟಿಯಲ್ಲಿ ಪ್ರತಿಯೊಬ್ಬರೂ ಎಂಜಾಯ್ ಮಾಡಿದ್ದಾರೆ. ಅಲ್ಲದೇ ಅಂಬಿ ಅವ್ರ ದೊಡ್ಮಗ ಅಂತ ಕರೆಸಿಕೊಳ್ಳುವ ನಟ ದರ್ಶನ್(Darshan) ಅವ್ರು ಅವಿವಾಗೆ ಕಿವಿ ಮಾತನ್ನ ಹೇಳಿದ್ದಾರೆ. ಅವಿವಾ ಅವ್ರನ್ನ ಚಿನ್ನ ಅಂತ ಕರೆಯುತ್ತಲೇ ಮಾತು ಆರಂಭಿಸಿದ ಡಿ. ಬಾಸ್, ನೋಡ್ ಚಿನ್ನ ಯಾವ ಜನ್ಮದ ಪುಣ್ಯನೋ ಗೊತ್ತಿಲ್ಲ, ಅಂಬಿ ಥರ ಅಪ್ಪ ಎಲ್ಲೂ ಇರೋಕಾಗಲ್ಲ ಮತ್ತೆ ಹುಟ್ಟೋದು ಇಲ್ಲ ಅಂತ ಮನೆಗೆ ನೀನು ಹೋಗ್ತಿದ್ಯ, ಈಗ ಇಡೀ ಮನೆ ಜವಾಬ್ದಾರಿ ನಿನ್ನ ಮೇಲಿದೆ, ನೀನು ನಮ್ಮ ಪಾಲಿನ ಕಿರೀಟ ಇದ್ದಂಗೆ ನಿನ್ನ ಚೆನ್ನಾಗಿ ನೋಡಿಕೊಳ್ಳೋದು ಜವಾಬ್ದಾರಿ ನಮ್ಮದು ನೋಡ್ಕೋತೀವಿ ಅಕಸ್ಮಾತ್ ಅವ್ನು ತಪ್ಪು ಮಾಡ್ದ ಅಂದ್ರೆ ನೀನು ನಂಗೆ ಹೇಳು ಅಮ್ಮಗೂ ಹೇಳೋದು ಬೇಕಾಗಿಲ್ಲ ದೊಡ್ಡ ಅಣ್ಣನಾಗಿ ನಾನು ನಿನಗೆ ಹೇಳ್ತಿದೀನಿ ಅಂದಾಗ ಸುಮಲತಾ ಅವ್ರು ಕೂಡ ನಾನು ನಿಂಗೆ ಅಲ್ವೇನೋ ಹೇಳೋದು ಅಂತಾರೆ ಆಗ ಅವಿವಾ ಕೂಡ ತುಂಬಾ ವಿನಾಯದಿಂದಲೇ ಎಲ್ಲವನ್ನ ಕೇಳ್ತಿರ್ತಾರೆ.

ಆಗ ದರ್ಶನ್ ಅವ್ರು ಮಂಡಿಯೂರಿ ಕೂತು ಅಂಬಿ ಮನೆ ಮರ್ಯಾದೆ ನಿನ್ನ ಕೈಲಿದೆ ಕಣ್ಣಮ್ಮ ಅದನ್ನ ಉಳಿಸಿಕೊಂಡು ಹೋಗು ಅಷ್ಟು ಸಾಕು ಬೇರೇನೂ ಬೇಡ ಅಂತಾರೆ ಎಲ್ಲರು ಕೂಡ ಅದನ್ನ ನೋಡಿ ಖುಷಿ ಪಡ್ತಾರೆ ಅವಿವಾ ಕೂಡ ಒಂದು ಕ್ಷಣ ಭಾವುಕರಾಗ್ತಾರೆ. ಅದಾದ ನಂತರ ಯಶ್ ಅವ್ರು ಕೂಡ ಮಾತನಾಡ್ತಾ ನೀವು ಅವಿವಾಗೆ ಮಾತ್ರ ಹೇಳುದ್ರೆ ಹೆಂಗೆ ಲೋ ಬಾರೋ ಇಲ್ಲಿ ಅಂತ ಅಭಿ ಅವ್ರನ್ನ ಕರೆದು ನೋಡು ಮನೆಗೆ ಲಕ್ಷ್ಮೀ ಬಂದವಳೇ ಅವ್ಳು ಏನೇ ಮಾಡುದ್ರು ತಪ್ಪು ಅವಳದಲ್ಲ ನಿಂದು ತಪ್ಪು, ಎಲ್ಲೇ ಹೋದ್ರು ಮನೆಗೆ ಬರಬೇಕು ನೆನಪಿಟ್ಕೋ ಅಂತ ನಗೆ ಚಟಾಕಿ ಹಾರಿಸಿದ್ದಾರೆ.

 

View this post on Instagram

 

A post shared by Bangalore Times (@bangalore_times)

ಇದನ್ನೂ ಓದಿ: ಸೈಲೆಂಟ್ ಆಗಿ ರಿಜಿಸ್ಟರ್ ಮದುವೆಯಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram