ಸೆಪ್ಟೆಂಬರ್ 29 ರಂದು ನಡೆದ ಕಾವೇರಿ ಪ್ರತಿಭಟನೆಯಲ್ಲಿ ಚಿತ್ರರಂಗದ ಹಲವಾರು ಗಣ್ಯರು ಭಾಗವಹಿಸಿದ್ದರು. ಹೌದು ತಮಿಳು ನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದವು. ಸೆಪ್ಟೆಂಬರ್ 29ರಂದು ಕಾವೇರಿಗಾಗಿ ಕರುನಾಡು ಸ್ತಬ್ಧವಾಗಿತ್ತು. ಅಲ್ಲದೆ, ಈ ಹೋರಾಟಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಒಂದಾಗಿ ಒಗ್ಗಟ್ಟಿನ ಮಂತ್ರ ಜಪಿಸಿದರು. ತದನಂತರ 11 ಗಂಟೆಯ ವೇಳೆ ಶಿವಣ್ಣ, ಧ್ರುವ ಸರ್ಜಾ, ವಸಿಷ್ಠ ಸಿಂಹ, ದುನಿಯಾ ವಿಜಯ್ ಪ್ರತಿಭಟನೆಯಲ್ಲಿ ಭಾಗಿಯಾದರು. ಅದ್ರೆ ನಟ ದರ್ಶನ್ ಸ್ವಲ್ಪ ತಡವಾಗಿ ಬಂದರು. ರೆಡ್ ಕಾರು ಹತ್ತಿ ಬಂದ ದಾಸ ವೇದಿಕೆ ಮೇಲೆ ಎಂಟ್ರಿ ಕೊಡುತ್ತಿದ್ದಂತೆ ಶಿವರಾಜ್‌ಕುಮಾರ್ ಅವರ ಕಾಲಿಗೆ ಬಿದ್ದು ದಚ್ಚು ನಮಸ್ಕರಿಸಿದರು, ಹಾಗೆ ಪಕ್ಕದಲ್ಲಿ ಇದ್ದ ವಸಿಷ್ಠ ದಚ್ಚುಗೆ ಜಾಗ ಮಾಡಿಕೊಟ್ಟರು.
ಉಮಾಶ್ರೀ ಸಹ ಎದ್ದು ನಿಂತು ಚಾಲೆಂಜಿಂಗ್ ಸ್ಟಾರ್‌ನನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ನಟ ದರ್ಶನ್(Darshan) ಹಾಗು ಧ್ರುವ ಸರ್ಜಾ(Dhruva Sarja) ಒಂದೇ ವೇದಿಕೆ ಮೇಲಿದ್ದರೂ ಸಹ ಒಬ್ಬರನೊಬ್ಬರು ನೋಡಿದರೂ ಮಾತನಾಡಿಸಲೇ ಇಲ್ಲ. ಇದರಿಂದ ಇವರ ಮಧ್ಯ ಎಲ್ಲವೂ ಸರಿಯಾಗಿಲ್ಲ ಎನ್ನುವ ಊಹಾಪೋಹಗಳು ಹರಿದಾಡುತ್ತಿತ್ತು. ಇದೀಗ ಈ ಬಗ್ಗೆ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಮಾತನಾಡಿದ್ದು ಅದ್ಕಕೆ ಕಾರಣ ಇತ್ತು, ಆ ಒಂದು ಬಲವಾದ ಕಾರಣದಿಂದಲೇ ದ್ರುವ ವೇದಿಕೆ ಮೇಲೆ ಲವ ಲವಿಕೆ ಇಲ್ಲದೆ ಕೂತಿದ್ರು ಅಂದಿದ್ದಾರೆ.
ಹೌದು ದರ್ಶನ್ ಅವರಿಗಿಂತ ಮೊದಲೇ ಬಂದು ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಧ್ರುವ ಮಾತ್ರ ದರ್ಶನ್ ಅವರನ್ನು ನೋಡಿದರೂ ನೋಡದಂತೆ ನಿಂತಿದ್ದರು. ಅಲ್ಲದೆ, ದರ್ಶನ್ ಶಿವಣ್ಣನನ್ನು ಮಾತನಾಡಿಸುವಾಗ ಕಾಟಾಚಾರಾಕ್ಕೆ ಎದ್ದು ನಿಂತರು. ನಂತರ ದರ್ಶನ್ ಮೈಕ್ ಮುಂದೆ ನಿಂತು ಮಾತನಾಡುವಾಗ ಆಕ್ಷನ್ ಪ್ರಿನ್ಸ್ ವೇದಿಕೆಯಿಂದ ಕೆಳಗೆ ಇಳಿದು ಹೊರಟರು. ಈ ಎಲ್ಲಾ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಬ್ಬರ ನಡುವೆ ಏನಾಗಿದೆ ಎಂದು ಯೋಚಿಸುವಂತೆ ಮಾಡಿತ್ತು, ಆದ್ರೆ ಇಬ್ಬರ ನಡುವೆ ಅಂತಹುದು ಏನೂ ಆಗಿಲ್ಲ, ಎಲ್ಲವೂ ಸರಿಯಾಗಿದೆ. ಏನೇನೋ ಕಲ್ಪಿಸೋದು ಸರಿಯಲ್ಲ.
ಚಿತ್ರರಂಗದವರು ಎಲ್ಲಾರು ಒಟ್ಟಾಗಿ ಚೆನ್ನಾಗೆಯೇ ಇದ್ದಾರೆ. ಅರ್ಜುನ್ ಸರ್ಜಾ ನಿರ್ದೇಶನದ ʼಪ್ರೇಮ ಬರಹʼ ಸಿನಿಮಾದ ಹಾಡಿನಲ್ಲಿ ದರ್ಶನ್ ಕಾಣಿಸಿಕೊಂಡಿದ್ದರು. ʼಜೈ ಹನುಮಾನʼ ಹಾಡಿನಲ್ಲಿ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಜೊತೆ ದರ್ಶನ್ ಹೆಜ್ಜೆ ಹಾಕಿದ್ದರು. ದರ್ಶನ್ ಹಾಗು ಸರ್ಜಾ ಕುಟುಂಬದ ಮಧ್ಯೆ ಒಳ್ಳೆಯ ಒಡನಾಟವಿದೆ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವು ಒಳ್ಳೆಯದಲ್ಲ ಅಂತ ದಚ್ಚು ಹಾಗೂ ಧ್ರುವ ಅಭಿಮಾನಿಗಳು ವಾದಿಸುತ್ತಿದ್ದರು ಆದರೂ ಟ್ರೋಲ್ ಗಳು ಮಾತ್ರ ಕಡಿಮೆ ಆಗಿರಲಿಲ್ಲ. ಸದ್ಯ ಈ ಬಗ್ಗೆ ಯಾರು ಕೂಡ ತುಟಿ ಬಿಚ್ಚಿರಲಿಲ್ಲ. ಇದೀಗ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಮಾತನಾಡಿದ್ದಾರೆ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗೋರು ಓದಲೇಬೇಕಾದ ಸುದ್ದಿ; ಎರಡು ಮೂರು ದಿನದಿಂದ ಅಲ್ಲಿ ಏನಾಗ್ತಿದೆ?
ಪ್ರಥಮ್ ಹೇಳಿದ್ದೇನು?
ಹೌದು ನಿನ್ನೆ ಚಿರಂಜೀವಿ ಸರ್ಜಾ ನಟನೆಯ ರಾಜಮಾರ್ತಾಂಡ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮೇಘನಾ ರಾಜ್ ಸರ್ಜಾ, ಧ್ರುವ ಸರ್ಜಾ, ನಟ ಪ್ರಥಮ್ ಸೇರಿ ಚಿತ್ರತಂಡದ ಹಲವರು ಈ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ನಟ ಪ್ರಥಮ್, ಅಂದು ಹೋರಾಟದ ವೇದಿಕೆ ಮೇಲೆ ಧ್ರುವ ಮಂಕಾಗಿದ್ದು ಏಕೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಹೌದು ಧ್ರುವ ಆವತ್ತು ಸಪ್ಪಾಗಿರುವುದಕ್ಕೆ ಕಾರಣ ಅವರ ಅಭಿಮಾನಿಯೊಬ್ಬರ ಸಾವನ್ನಪ್ಪಿದ್ರು, ಧ್ರುವ ಸರ್ಜಾ ಅವರ ದೊಡ್ಡ ಅಭಿಮಾನಿಯಾಗಿದ್ದ ರಘುನಾಥ ಭಜಂತ್ರಿ, ಬಂದ್‍ಗಿಂತ ಒಂದು ದಿನ ಮುಂಚಿತವಾಗಿ ತೀರಿ ಹೋದರು. ಹಾಸನ ಮಾರ್ಗವಾಗಿ ಬೇಗೂರಿನಿಂದ ಬರುವಾಗ ಕಾರು-ಬಸ್ಸಿನ ನಡುವೆ ಅಪಘಾತ ಸಂಭವಿಸಿತು. ಇದರಲ್ಲಿ ದ್ರುವ ಅಭಿಮಾನಿ ಸಾವನ್ನಪ್ಪಿದ್ರು. ಇನ್ನು ರಘುನಾಥ್ ಭಜಂತ್ರಿ ಅವರಿಗೆ ಒಂದು ಚಿತ್ರ ನಿರ್ದೇಶನ ಮಾಡುವ ಆಸೆ ಇತ್ತು. ಅಲ್ದೇ ಧ್ರುವ ಅವರನ್ನು ಭೇಟಿ ಮಾಡುವ ಆಸೆಯೂ ಇತ್ತು. ಈ ವಿಷಯವನ್ನು ಧ್ರುವ ಅವರಿಗೂ ಹೇಳಿದ್ದೆ. ಹೀಗಾಗಿ ಹುಟ್ಟುಹಬ್ಬದ ದಿನ ಕರೆದುಕೊಂಡು ಬರುವುದಕ್ಕೆ ಧ್ರುವ ಹೇಳಿದ್ದರು. ಆದರೆ, ಅಷ್ಟರಲ್ಲಿ ರಘುನಾಥ್ ನಿಧನರಾದರು. ಅವರನ್ನು ಕೊನೆಯ ಬಾರಿ ನೋಡುವುದು, ಸೆಲ್ಫಿ ತೆಗೆಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಈ ವಿಷಯ ಧ್ರುವ ಅವರನ್ನು ತುಂಬಾ ಕಾಡಿದೆ. ಅದೇ ವಿಷಯವನ್ನು ನೆನಪಿಸಿಕೊಂಡು ಕೊರಗುತ್ತಿದ್ದಾರೆ. ಅವರಲ್ಲಿ ಯಾವ ಚೈತನ್ಯವೂ ಇರಲಿಲ್ಲ. ಬಹಳ ಡಿಪ್ರೆಸ್ ಆಗಿಬಿಟ್ಟಿದ್ದರು. ಮೂರು ದಿನಗಳ ಕಾಲ ಅವರು ಅನುಭವಿಸಿದ ನೋವು ನನಗೆ ಮಾತ್ರ ಗೊತ್ತು. ಕಾವೇರಿ ಬಂದ್ ದಿನ ಅವರ ಮುಖದಲ್ಲಿ ನಗುವಿಲ್ಲ, ಚೈತನ್ಯವಿಲ್ಲ. ಇದು ಎಷ್ಟೋ ಜನರಿಗೆ ಗೊತ್ತಿಲ್ಲ. ತಮಗೆ ಬೇಕಾಗಿದ್ದನ್ನು ವ್ಯಾಖ್ಯಾನಿಸುತ್ತಾರೆ. ಇವತ್ತಿಗೂ ಅದೇ ನೋವಿನಲ್ಲಿದ್ದಾರೆ. ಸರಿಯಾಗಿ ಮಾತನಾಡುತ್ತಿಲ್ಲ. ಅದಕ್ಕೆ ಬೇರೆ ವಿಚಾರಗಳನ್ನು ತಳುಕು ಹಾಕಬೇಡಿ ಅಂತ ನಟ ಪ್ರಥಮ್ ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ನವೆಂಬರ್ ತಿಂಗಳ ಮೊದಲ ವಾರವೇ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram