Darshan: ದರ್ಶನ್ ಸರ್ ನ ಭೇಟಿ ಮಾಡಿಸಿ ಎಂದು ವಿಡಿಯೋ ಮಾಡಿದ ಅಭಿಮಾನಿ; ಆಸೆ ಈಡೇರಿಸಿದ ದರ್ಶನ್

Darshan: ಅಭಿಮಾನ ಎಂದರೆ ಹಾಗೆ ಯಾರೋ ಗೊತ್ತಿಲ್ಲದ ವ್ಯಕ್ತಿಯನ್ನು ಅವರ ನಟನೆ ಮತ್ತು ಅವರ ವೈಯಕ್ತಿಕ ವಿಷಯಗಳನ್ನು ನೋಡುತ್ತಾ ಪ್ರೇರಣೆಯಾಗುವ ತುಂಬಾ ಜನರನ್ನು ನೋಡಿದ್ದೇವೆ. ಇದೀಗ ಸ್ಯಾಂಡಲ್ ವುಡ್ ನ ಡಿಬಾಸ್ ಅಂದರೆ ಪೂಜಿಸುವ ಅಭಿಮಾನಿಗಳು ಸಹ ಇದ್ದಾರೆ. ನಟನೆ ಹಾಗೂ ಹಿರಿಯರಿಗೆ ಆಗಲಿ ಕಿರಿಯರಿಗೆ ಆಗಲಿ ಸದಾ ಗೌರವ ಕೊಟ್ಟು ಮಾತನಾಡುವ ದರ್ಶನ್ ಅವರ ಗುಣ ತುಂಬಾ ಜನಕ್ಕೆ ಇಷ್ಟ ಈ ಗುಣಗಳನ ನೋಡೆ ದರ್ಶನ್ ಅವರನ್ನು ಎಷ್ಟೋ ಜನ ಇಷ್ಟ ಪಡುತ್ತಾರೆ.

WhatsApp Group Join Now
Telegram Group Join Now

ಸರಿಗಮಪ ಸ್ಪರ್ಧಿಯಾಗಿದ ರೇವಣಸಿದ್ದ ದರ್ಶನ್ ಅವರ ಕಟ್ಟ ಅಭಿಮಾನಿ ಅವರನ್ನು ಒಮ್ಮೆಯಾದರು ಭೇಟಿ ಮಾಡಬೇಕು ಎಂದು ಸರಿಗಮಪ ವೇದಿಕೆಯಲ್ಲೇ ಹೇಳಿಕೊಂಡಿದ್ದರು ಅದರಂತೆ ನಟಿ ರಕ್ಷಿತಾ ಅವರು ಕೂಡ ದರ್ಶನ್ ಅವರನ್ನು ಭೇಟಿ ಮಾಡಿಸುತ್ತೇನೆ ಎಂದಿದ್ದರು ಆದರೆ ಕಾರಣಾಂತರದಿಂದ ಆಗಲಿಲ್ಲ. ಕಳೆದ 5,6 ದಿನಗಳ ಹಿಂದೆ ರೇವಣಸಿದ್ದ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ದರ್ಶನ್ ಅವರನ್ನು ಯಾರದರೂ ಭೇಟಿ ಮಾಡಿಸಿ ಎಂದು ಕೇಳಿಕೊಂಡಿದ್ದರು.

ಅದು ಹೇಗೋ ಆ ವಿಡಿಯೋ ದರ್ಶನ್ ಅವರಿಗೆ ತಲುಪಿ ರೇವಣಸಿದ್ದ ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ಅವರಿಗೆ ಸನ್ಮಾನ ಮಾಡಿ ಸಿಹಿ ತಿನ್ನಿಸಿರುವ ಫೋಟೋಗಳು ಇದೀಗ ವೈರಲ್ ಆಗುತ್ತಿದ್ದಾವೆ. ದರ್ಶನ್ ಅವರ ಎದೆ ಮೇಲೆ ಹಾಕಿಸಿರುವ ‘ನನ್ನ ಸೆಲೆಬ್ರಿಟೀಸ್’ ಟ್ಯಾಟೂ ಅನ್ನು ರೇವಣಸಿದ್ದ ಅವರು ಮುಟ್ಟಿ ಸಂತಸ ಪಟ್ಟರು. ತಮ್ಮ ಅಭಿಮಾನಿಗಳಿಗೆ ಸೆಲೆಬ್ರಿಟಿ ಸ್ಥಾನ ಕೊಟ್ಟಿರುವ ದರ್ಶನ್ ಅವರು ಅದೇ ರೀತಿಯಾಗಿ ತಮ್ಮ ಅಭಿಮಾನಿಗಳನ್ನು ಕಾಣುತ್ತಾರೆ ಎನ್ನುವುದು ನಿಜಕ್ಕೂ ಗ್ರೇಟ್.

ದರ್ಶನ್(Darshan) ಅವರ ಮುಂದಿನ ಸಿನಿಮಾ ಕಾಟೇರ ಆಯುಧ ಪೂಜೆಗೆ ಬಿಡುಗಡೆಯಾಗಲ್ಲಿದೆ ಎಂದು ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮಾಧ್ಯಮಗಳಲ್ಲಿ ದರ್ಶನ್ ಅವರ ಯಾವುದೇ ಸುದ್ದಿಯನ್ನು ಹಾಕುತ್ತಿರಲಿಲ್ಲ ಇದೀಗ ವರಮಹಾಲಕ್ಷ್ಮೀ ಹಬ್ಬದ ದಿನದಂದು ಮಾಧ್ಯಮ ಹಾಗೂ ದರ್ಶನ್ ಅವರ ನಡುವೆ ರಾಜಿ ಸಂಧಾನ ಯಶಸ್ವಿಯಾಗಿದ್ದು ಈಗ ದರ್ಶನ್ ಅವರ ಸಿನಿಮಾದ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಿದ್ದು ಮುಂದಿನ ದಿನಗಳಲ್ಲಿ ದರ್ಶನ್ ಅವರ ಇಂಟರ್ವ್ಯೂಗಳು ಸಹ ಬರಲಿವೆ. ಆಗಸ್ಟ್ 27 ರಂದು ಸುಮಲತಾ ಅಂಬರೀಶ್ ಬರ್ತಡೇಯಲ್ಲೂ ಸಹ ಸುಮಾರು 6 ವರ್ಷಗಳ ನಂತರ ದರ್ಶನ್ ಹಾಗೂ ಸುದೀಪ್ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದು. ಮುಂದೆಯಾದರೂ ಇವರ ಮನಸ್ತಾಪಗಳು ತಣ್ಣಗಾಗಿ ಇವರಿಬ್ಬರೂ ಒಟ್ಟಿಗೆ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಮುನಿಸು ಮರೆತು ಒಂದಾದ್ರ ಚ್ಚು ಕಿಚ್ಚ; ಇವರಿಬ್ಬರನ್ನ ಒಂದು ಮಾಡಲು ರಾಕ್ ಲೈನ್ ಮಾಡಿದ್ದೇನು?

ಇದನ್ನೂ ಓದಿ: ಅಮೇರಿಕಾದಲ್ಲಿ ಮೃತಪಟ್ಟವರ ಮೃತ ದೇಹ ಕರ್ನಾಟಕಕ್ಕೆ ಬರ್ಲೆ ಇಲ್ಲ; ಕುಟುಂಬದವರಿಗೆ ಅಂತಿಮ ದರ್ಶನವು ಸಿಗಲಿಲ್ಲ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram