Darshan Letter: ನಿಮ್ಮಲ್ಲರಿಗೂ ಗೊತ್ತಿರುವಂತೆ ನೆನ್ನೆ ಮೊನ್ನೆ ಯಿಂದ ನಟ ದರ್ಶನ್ ಅವ್ರು ಮಾಧ್ಯಮಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರದ್ದೆ ಸುದ್ದಿಯಾಗಿ ಬಿಟ್ಟಿದ್ದೆ. ಹೌದು ಕಳೆದ ಕೆಲ ಸಮಯದ ಹಿಂದೆ ಮಾಧ್ಯಮಗಳೊಂದಿಗೆ ಸ್ವಲ್ಪಮಟ್ಟಿಗಿನ ಎಡವಟ್ಟನ್ನು ಮಾಡಿಕೊಂಡಿದ್ದ ನಟ ದರ್ಶನ್ ಮಧ್ಯಮಗಳ ಬಗ್ಗೆ ಸ್ವಲ್ಪ ಕೆಳಮಟ್ಟದ ಭಾಷೆ ಯನ್ನ ಬಳಸಿ ಮಾತಾನಾಡಿದ್ರು ಅದ್ರಿಂದ ಮಾಧ್ಯಮಗಳು ದರ್ಶನ್ ಸುದ್ದಿ ಗಳನ್ನ ಅವ್ರ ಸಿನಿಮಾ ಸುದ್ದಿಗಳನ್ನ ಪ್ರಕಟನೆ ಮಾಡದಂತೆ ಅಘೋಷಿತವಾಗಿ ದರ್ಶನ್ ಅವ್ರನ್ನ ಮಧ್ಯಮಗಳಿಂದ ಬ್ಯಾನ್ ಮಾಡಿದ್ರು. ಆದ್ರೆ ಇದೀಗ ನಟ ದರ್ಶನ್ ಅವರು ಬರೆದಿದ್ದಾರೆ ಎನ್ನಲಾದ ವಿಷಯನ್ನು ವ್ಯಕ್ತಪಡಿಸಿದ ಪತ್ರವೊಂದು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿತ್ತು, ಇದರ ಬೆನ್ನಲ್ಲೇ ಇದೀಗ 2ಮಧ್ಯಮದವರು ದರ್ಶನ್ ಅವ್ರು ಬರೆದಿರುವ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದ್ರೆ ದರ್ಶನ್ ಅವ್ರ ಈ ಪತ್ರದ ವಿಚಾರ ಎಲ್ಲಿಗೆ ಬಂದು ನಿಂತಿದೆ ಇದ್ರಲ್ಲಿ ಸುಳ್ಳೆಷ್ಟು ಸತ್ಯಂಶ ಎಷ್ಟು? ಯಾವ ಮಾಧ್ಯಮದವರು ಇದೀಗ ದರ್ಶನ್ ಗೆ ಬೆಂಬಲ ಸೂಚಿಸಿದ್ದಾರೆ ಇದೆಲ್ಲವನ್ನ ನೋಡೋಣ ಬನ್ನಿ.
ಹೌದು ಈ ಹಿಂದೆ ಮಾಧ್ಯಮದವರ ಬಗ್ಗೆ ನಟ ದರ್ಶನ್ ಅವ್ರು ಆಡಿದ್ದ ಕೆಲ ಮಾತುಗಳು ಮಾಧ್ಯಮದವರಿಗೆ ನೋವುಂಟು ಮಾಡಿತ್ತು. ಹೀಗಾಗಿ ಇದಾದ ಬಳಿಕ ದೃಶ್ಯ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮಗಳು ದರ್ಶನ್ ಅವರ ಸಿನಿಮಾ ಸುದ್ದಿ ಸೇರಿದಂತೆ ಇತರೆ ಸುದ್ದಿಯ ಪ್ರಸಾರ ಮತ್ತು ಪ್ರಕಟಣೆ ಮಾಡುವುದನ್ನು ನಿರ್ಬಂಧಿಸಿ, ಅಘೋಷಿತವಾಗಿ ಬ್ಯಾನ್ ಮಾಡಲು ನಿರ್ಧರಿಸಿದ್ರು. ಆದ್ರೆ ಇದೀಗ ನಟ ದರ್ಶನ್ ಅವರು ತಾವು ಆಡಿದ ಮಾತುಗಳು ಮಾಧ್ಯಮ ಮಿತ್ರರಿಗೆ ನೋವುಂಟು ಮಾಡಿರುವ ವಿಷಯವನ್ನು ವ್ಯಕ್ತಪಡಿಸಿ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಎಲ್ಲಾ ಮಾಧ್ಯಮಗಳ ಕಚೇರಿಗೆ ತಲುಪಿದೆ ಎನ್ನಲಾಗಿತ್ತು.
ಆದರೆ ದೊಡ್ಡ ದೊಡ್ಡ ಮಾಧ್ಯಮದವರು ಈ ವಿಚಾರ ದಲ್ಲಿ ಕುರಿತು ಸಣ್ಣ ಸುದ್ದಿಯನ್ನು ಕೂಡ ಎಲ್ಲಿಯೂ ಪ್ರಸಾರ ಮಾಡಿರಲಿಲ್ಲ, ಆದರೆ ಪವರ್ ಟಿವಿ ಯವರು ಮಾತ್ರ ಅವತ್ತಿನ ದಿನವೇ ದರ್ಶನ್ ರವರು ಈ ರೀತಿ ಕ್ಷಮೆ ಕೇಳಿ ಪಾತ್ರವೊಂದನ್ನ ನಮ್ಮ ಕಚೇರಿಗೆ ತಲುಪಿಸಿದ್ದಾರೆ ಅಂತ ಸುದ್ದಿಯೊಂದನ್ನ ಪ್ರಕಟ ಮಾಡ್ತು ಅದರ ಜೊತೆಗೆ ದರ್ಶನ್ ಬರ್ದಿದ್ದ ಸಾಲುಗಳನ್ನು ಕೂಡ ದೊಡ್ಡ ದೊಡ್ಡ ಅಕ್ಷರಗಳಲ್ಲಿ ತಿಳಿಸಿದ್ರು.. ಆದರೆ ದರ್ಶನ್ ಅವ್ರ ಅಭಿಮಾನಿಗಳು ಹಾಗೂ ಇನ್ನು ಕೆಲವರು ಇದು ಸುಳ್ಳುಸುದ್ದಿ ಅಂತ ಪಾಪ ಪವರ್ ಟಿವಿ ಮಾಧ್ಯಮದವರನ್ನೇ ಬೈದಿದ್ರು. ಹೌದು ಪವರ್ ಟಿವಿ ಯವರು ದರ್ಶನ್ ಅವ್ರ ಪತ್ರದಲ್ಲಿದ್ದ ವಿಷಯವನ್ನ ಉಲ್ಲೇಖಿಸಿಯೇ ಸುದ್ದಿ ಪ್ರಸಾರ ಮಾಡಿದ್ರು.
ಇದನ್ನು ಓದಿ: ಹಿರಿಯ ನಟಿ ಮಾಧವಿ ಅವರು ಈಗ ಹೇಗಿದ್ದಾರೆ ಮತ್ತು ಎಲ್ಲಿದ್ದಾರೆ? ಅವರ ಪತಿ ಮತ್ತು ಮಕ್ಕಳು ಹೇಗಿದ್ದಾರೆ?
ದರ್ಶನ್ ಕ್ಷೆಮೆಯನ್ನು ಒಪ್ಪಿಕೊಂಡ ಎರಡು ಮಾಧ್ಯಮಗಳು
Darshan Letter: ಇನ್ನು ಪವರ್ ಟಿವಿ ಯವರ ಜೊತೆಗೆ ಬಿಟಿವಿ ಯವರು ಕೂಡ ಈ ರೀತಿಯಾಗಿ ದರ್ಶನ್ ಅವ್ರು ಬರೆದ ಪತ್ರ ನಮ್ಮ ಕಚೇರಿಗೂ ತಲುಪಿದೆ ನಾವು ಕೂಡ ಇನ್ಮುಂದೆ ದರ್ಶನ್ ಅವ್ರ ಸುದ್ದಿ ಗಳನ್ನ ಪ್ರಕಟಿಸುತ್ತೇವೆ ದರ್ಶನ್ ಅವ್ರಿಗೆ ನಮ್ಮ ಬೆಂಬಲ ಇದೆ ಅಂತ ಹೇಳಿದ್ರು. ಈ ಹಿಂದೆಯೂ ಕೂಡ ಎಲ್ಲ ಮಾಧ್ಯಮದವರು ದರ್ಶನ್ ಅವ್ರನ್ನ ಬ್ಯಾನ್ ಮಾಡಿದ್ರು ಬಿಟಿವಿ ಅವ್ರು ಮಾತ್ರ ನಾವು ದರ್ಶನ್ ಅವ್ರ ಸಿನಿಮಾ ಸುದ್ದಿ ಗಳನ್ನ ಪ್ರಕಟ ಮಾಡುತ್ತೇವೆ ಅಂತ ಹೇಳಿ ಪ್ರಕಟ ಮಾಡ್ತಿದ್ವು ಆದರೆ ದರ್ಶನ್ ಅವ್ರ ಕ್ರಾಂತಿ ಸಿನಿಮಾ ಬಿಡುಗಡೆಯದಾಗ ದರ್ಶನ್ ಅವ್ರ ಇಂಟರ್ವ್ಯೂವ್ ಕೇಳಿದಾಗ ದರ್ಶನ್ ಕೊಟ್ಟಿಲ್ವಂತೆ ಆಗ ಬಿಟಿವಿ ಯವರು ನಾವು ಕೂಡ ದರ್ಶನ್ ಅವ್ರ ಸುದ್ದಿಯನ್ನ ಇನ್ಮುಂದೆ ಹಾಕೋದಿಲ್ಲ ಅಂತ ಹೇಳಿದ್ರು. ಬಹುಶ ದರ್ಶನ್ ಅವ್ರಿಗೆ ಗೊತ್ತಿತ್ತು ಅನ್ಸುತ್ತೆ ಮಾಧ್ಯಮ ಮಿತ್ರರಿಗೆ ಕೈಕೋಟ್ಟು ನನ್ನ ಸುದ್ದಿ ಪ್ರಸಾರ ಮಾಡಿದೋರೋ ನಾಳೆ ನನಗು ಹಿಂಗೇ ಮಾಡಲ್ಲ ಅಂತ ಏನ್ ಗ್ಯಾರಂಟಿ ಅಂತ ಯೋಚಿಸಿಯೇ ಇವ್ರ ಸಹಾವಾಸವೇ ಬೇಡ ಅಂತ ಸುಮ್ಮನಾಗುತ್ತಾರೆ. ಅಭಿಮಾನಿಗಳೆ ದರ್ಶನ್ ಅವ್ರ ಸಿನಿಮಾಗಳ ಪ್ರಮೋಷನ್ ಮಾಡ್ತಿದ್ದರಿಂದ ದರ್ಶನ್ ಅವ್ರು ಕೂಡ ಸುಮ್ಮನ್ನಗುತ್ತಾರೆ.
ಆದರೆ ಇದ್ದಕ್ಕಿದ್ದಂತೆ ಏನಾಯ್ತೋ ಏನೋ ಗೊತ್ತಿಲ್ಲ ದರ್ಶನ್ ಅವ್ರು ಈ ರೀತಿಯಾದ ಪತ್ರವನ್ನ ಯಾಕೆ ಬರೆದ್ರು ಅಂತ ಗೊತ್ತಾಗ್ತಿಲ್ಲ. ಒಬ್ಬರು ಒಂದೊಂದು ಥರ ಮಾತಾನಾಡಲು ಶುರು ಮಾಡಿದ್ದಾರೆ. ದರ್ಶನ್ ಅವ್ರ ಅಭಿಮಾನಿಗಳು ಇದು ಸುಳ್ಳು ಸುದ್ದಿ ಡೋಂಗಿ ಮಾಧ್ಯಮದವರು ಬಿಲ್ಡಪ್ ತಗೊತ್ತಿದ್ದಾರೆ ಅಂತ ಹೇಳುದ್ರೆ. ಇನ್ನು ಕೆಲವರು ನೀವು ಕ್ಷಮೆ ಕೇಳಬಾರದಿತ್ತು, ನಿಮ್ಮದೇನು ತಪ್ಪಿಲ್ಲ ಅಂದ್ರೆ, ಇನ್ನು ಕೆಲವ್ರು ಮುಂದಿನ ಸಿನಿಮಾ ಪ್ರಮೋಷನ್ ಗೆ ಇವಾಗ್ಲೆ ಬಕೆಟ್ ಹಿಡಿತ್ತಿದ್ದಾರೆ. ಎಲ್ಲಿ ಹಾಕಿದ ಬಂಡವಾಳ ಬರಲ್ವೊ ಅಂತ ಯೋಚಿಸಿ ನಾಟಕ ಅಡ್ತವ್ರೆ. ನಿರ್ಮಾಪಕರು ಮುಂದೆ ಹಣ ಹೂಡಿಕೆ ಮಾಡಲು ಬರಲ್ಲ ಅಂತ ಭಯ ಶುರುವಾಗಿದೆ ಅಂದ್ರೆ ಇನ್ನು ಕೆಲವರು ಇದೆಲ್ಲಾ ಎಲೆಕ್ಷನ್ ಗಿಮಿಕ್ ಅಂತಿದ್ದಾರೆ. ಆದರೆ ಕೇವಲ ಪವರ್ ಟಿವಿ, ಮತ್ತು ಬಿಟಿವಿ ಯವರು ಮಾತ್ರ ಪತ್ರ ಬಂದಿರೋದು ನಿಜಾ ಅದ್ರಲ್ಲಿ ದರ್ಶನ್ ಈ ರೀತಿ ಬರೆದಿರೋದು ನಿಜ, ನಾವಿನ್ಮುಂದೆ ಅವ್ರನ್ನ ಬೆಂಬಲಿಸುತ್ತೇವೆ ಅಂತಲೂ ಹೇಳಿದ್ದಾರೆ.
ಆದ್ರೆ ಕೊನೆಯಲ್ಲಿ ಉಳಿಯೋ ಒಂದೇ ಒಂದು ಪ್ರಶ್ನೆ ಅಂದ್ರೆ ಇನ್ನುಳಿದ ಮಾಧ್ಯಮದವರು ಯಾಕೆ ಏನು ಹೇಳ್ತಿಲ್ಲ ಅನ್ನೋದು ಹಲವರ ಪ್ರಶ್ನೆ. ಇನ್ನು ಕೆಲವರು ಹೇಗೆ ಅಂದ್ರೆ ದೊಡ್ಡ ಮಾಧ್ಯಮಗಳು ಅಂದ್ರೆ ಟಿವಿ 9, ಪಬ್ಲಿಕ್ ಟಿವಿ, ಇಂತ ಮಾಧ್ಯಮದಲ್ಲಿ ಬಂದ್ರೆ ಮಾತ್ರ ನಿಜ ಅಂತ ಭಾವಿಸಿಕೊಳ್ಳುತ್ತಾರೆ. ಹೀಗಾಗಿ ಕೆಲವ್ರು ಎಲೆಕ್ಷನ್ ನ್ಯೂಸ್ ಬ್ಯುಸಿ ಆಗಾಗಿ ಬೇರೆ ಚಾನಲ್ ಅವ್ರು ಈ ಸುದ್ದಿ ಕೊಟ್ಟಿಲ್ಲ ಅಂತ ಹೇಳ್ತಿದ್ದಾರೆ. ಒಟ್ಟಿ ನಲ್ಲಿ ಇದರ ಸತ್ಯಂಶ ಎಷ್ಟು ಅನ್ನೋದು ದರ್ಶನ್ ಅವ್ರು ಹೇಳಿದಾಗಲೇ ಗೊತ್ತಾಗೋದು.
ಇದನ್ನು ಓದಿ: ಸಿನಿಮಾ ಅವಕಾಶವಿಲ್ದೆ ಬದುಕು ನಡೆಸಲು ಸೋಪು ಮಾರ್ತಿದ್ದ ನಟಿ ಲಕ್ಷ್ಮಿ ಮಗಳಿಗೆ ಕಾಮುಕರ ಕಾಟ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram