ವರ್ಷ ಕಳೆದಂತೆ ಅಕ್ಟೋಬರ್ ತಿಂಗಳ ರಜೆಯಲ್ಲಿ ಕಡಿತವಾಗುತ್ತಿದ್ದು ಇದು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬೇಸರವನ್ನುಂಟು ಮಾಡಿದೆ. ಸಹಿಸಿಕೊಳ್ಳಲಾರದೆ ಶಿಕ್ಷಕರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಾಲಾ ರಜೆಯನ್ನು ವಿಸ್ತರಿಸುವಂತೆ ಪತ್ರವನ್ನು ಬರೆದಿದೆ. ಈಗಾಗಲೇ ದಸರಾ ರಜೆಯನ್ನು ನೀಡಲಾಗಿದ್ದು, ದಸರಾ ಮರುದಿನ ಶಾಲೆ ಪುನರಾರಂಭವಾಗುವುದರಲ್ಲಿತ್ತು. ಇದರಿಂದ ಶಾಲಾ ಮಕ್ಕಳಿಗೆ ಒತ್ತಡ ಉಂಟಾಗುವುದರಿಂದ ಶಿಕ್ಷಕರ ಸಂಘವು ಸಿದ್ದರಾಮಯ್ಯನವರಿಗೆ ಪತ್ರ ಒಂದನ್ನು ಕಳುಹಿಸಿದೆ. ಅಕ್ಟೋಬರ್ 24ರ ವರೆಗೆ ದಸರಾ ನಡೆಯಲಿದ್ದು, 25 ರಿಂದ ಶಾಲೆ ಪುನರಾರಂಭವಾಗುವುದರಲ್ಲಿತ್ತು. ಇದು ವಿದ್ಯಾರ್ಥಿಗಳಿಗೆ ಒತ್ತಡವನ್ನುಂಟು ಮಾಡಲಿದೆ ಆದ್ದರಿಂದ ರಜೆಯನ್ನು ವಿಸ್ತರಿಸಬೇಕು ಎಂದು ಶಿಕ್ಷಕರ ಸಂಘವು ಆಕ್ಷೇಪ ವ್ಯಕ್ತಪಡಿಸಿದೆ. ಹಾಗೆ ಮುಖ್ಯಮಂತ್ರಿ ಅವರಿಗೆ ಪತ್ರವನ್ನುಕೂಡ ಬರೆದಿತ್ತು. ಮಕ್ಕಳು ದಸರಾ ರಜೆಯ ಪ್ರಯುಕ್ತ ಖುಷಿಯನ್ನ ಆಚರಿಸುತ್ತಿದ್ದಾರೆ. ದಸರಾದ ಮರುದಿನವೇ ಶಾಲೆ ಪ್ರಾರಂಭವಾಗುವುದು ಸರಿಯಲ್ಲ. ಮೊದಲೆಲ್ಲಾ ಒಂದು ತಿಂಗಳುಗಳ ಕಾಲ ಇರುವ ರಜೆಯನ್ನ 15 ದಿನಕ್ಕೆ ಕಡಿತಗೊಳಿಸಲಾಗಿದೆ ಎಂದು ಶಿಕ್ಷಕರು ಆರೋಪವನ್ನು ವ್ಯಕ್ತಪಡಿಸಿದ್ದಾರೆ.
ಹಾಗೆ ಶಿಕ್ಷಕರ ರಜೆಯಲ್ಲೂ ಕೂಡ ಕಡಿತಗೊಳಿಸಲಾಗಿದೆ ವರ್ಷದಲ್ಲಿ ಕೇವಲ ಹತ್ತು ದಿನದ ರಜೆಯನ್ನು ಮಾತ್ರ ಶಿಕ್ಷಕರು ಪಡೆಯಬಹುದಾಗಿದೆ. ಆದ್ದರಿಂದ ಬೇಸತ್ತ ಗ್ರಾಮೀಣ ಶಿಕ್ಷಕರು ವಾದವನ್ನು ಮಂಡಿಸಿದ್ದಾರೆ. ಒಂದು ತಿಂಗಳುಗಳ ಕಾಲ ಇದ್ದ ರಜೆಯನ್ನ 15 ದಿನಕ್ಕೆ ಮುಟಕುಗೊಳಿಸಲಾಗಿದೆ, ಹಾಗೆ ಶಿಕ್ಷಕರ ರಜೆಯಲ್ಲಿಯೂ ಕೂಡ ಕಡಿತವನ್ನು ಮಾಡಲಾಗಿದೆ. ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೊದಲೆಲ್ಲ ನವರಾತ್ರಿ ಬಂತೆಂದರೆ ವಿದ್ಯಾರ್ಥಿಗಳಿಗೆ ಖುಷಿಯೋ ಖುಷಿ ಹಬ್ಬದ ಜೊತೆಗೆ ರಜೆಯ ಮಜವನ್ನು ಕೂಡ ಅನುಭವಿಸಬಹುದು ಎಂದು, ಆದರೆ ಬರ ಬರುತ್ತಾ ಈ ಯಾಕೋ ರಜೆಯಲ್ಲಿ ಕಡಿತವಾಗಿದೆ ಒಂದು ತಿಂಗಳುಗಳ ಕಾಲ ಇದ್ದ ರಜೆಯನ್ನು 15 ದಿನಕ್ಕೆ ಇಳಿಸಲಾಗಿದೆ. ಎಲ್ಲರಿಗೂ ಬೇಸರವನ್ನು ತಂದಿದೆ. ದಸರಾದಲ್ಲಿ ಖುಷಿಯಿಂದ ಕುಣಿದು ಕುಪ್ಪಳಿಸುವ ಮಕ್ಕಳಿಗಂತೂ ಇದು ಬೇಸರದ ಸಂಗತಿಗೆ ಸರಿ. ದಸರಾದ ಮಾರನೇ ದಿನವೇ ಶಾಲೆ ಆರಂಭವಾದರೆ ಹೋಗುವ ಮನಸ್ಸನ್ನು ಕೂಡ ಮಾಡುವುದೆಲ್ಲ ವಿದ್ಯಾರ್ಥಿಗಳು.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಸಭಾಪತಿಯಿಂದಲೂ ಕೂಡ ಆಗ್ರಹ
ಇದರ ಬಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಕೂಡ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಮೊದಲು 31 ದಿನಗಳ ಕಾಲ ಇರುವ ರಜೆ ಅವೈಜ್ಞಾನಿಕವಾಗಿ 15 ದಿನಕ್ಕೆ ಇಳಿದಿದೆ. ಇದು ಸರಿಯಲ್ಲ ಪುನಃ ಹಿಂದಿನ ಪದ್ಧತಿಯನ್ನೇ ಅನುಸರಿಸುವುದು ಒಳಿತು, ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕರೆಯ ಮೂಲಕ ಸಲಹೆಯನ್ನ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಇಲಾಖೆ ಸಂಘದ ಅಧ್ಯಕ್ಷರು ಕೂಡ ರಜೆ ವಿಸ್ತರಿಸಬೇಕೆಂದು ಪತ್ರವನ್ನು ಬರೆದಿದ್ದಾರೆ. 230 ದಿನಗಳ ಕಾಲ ಇರುವ ರಜೆಯನ್ನ 260 ದಿನಕ್ಕೆ ಇರಿಸಲಾಗಿದೆ. ಇದು ಮಕ್ಕಳಿಗೆ ಒತ್ತಡವನ್ನ ಉಂಟುಮಾಡುತ್ತದೆ ಮಕ್ಕಳ ಮಾನಸಿಕ ಬೆಳವಣಿಗೆಗೆ ಹೊಡೆತವನ್ನು ಕೊಡುತ್ತದೆ. ಎಂದು ಆರೋಪ ಮಾಡಿದ್ದಾರೆ. ಮಕ್ಕಳ ಹಿತ ದೃಷ್ಟಿಯಿಂದ ನವೆಂಬರ್ 1 ರವರೆಗೂ ಕೂಡ ರಜೆಯನ್ನು ವಿಸ್ತರಿಸಬೇಕೆಂದು ಕೇಳಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ವಿದ್ಯಾಭ್ಯಾಸವು ಕೂಡ ಅಷ್ಟೇ ಒತ್ತಡದಿಂದ ಕೂಡಿದೆ ಹಾಗಾಗಿ ಅವರಿಗೆ ಒಂದು ತಿಂಗಳುಗಳ ಕಾಲ ಮಧ್ಯ ಬಿಡುವನ್ನು ಕೊಡಬೇಕು. ಇದು ಮಕ್ಕಳ ಮಾನಸಿಕತೆಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ರಜೆಯನ್ನು ವಿಸ್ತರಿಸಬೇಕೆಂದು ಹಲವು ಮೂಲಗಳಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಸಂದೇಶ ಹೋಗಿದೆ, ಇನ್ನು ಅವರು ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ದಸರಾದ ಮರು ದಿನವೇ ಶಾಲೆಗೆ ಹೋಗುವಂತಹ ಮನಸ್ಸು ಮಕ್ಕಳಿಗಂತೂ ಇಲ್ಲವೇ ಇಲ್ಲ. ಆದರೆ ಶಿಕ್ಷಣ ಇಲಾಖೆಯಿಂದ ಯಾವ ರೀತಿ ಬೆಂಬಲ ಸಿಗುತ್ತದೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ನನ್ನ ಗಂಡನನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದ ಸಂತು ಪತ್ನಿ ಮಾನಸ
ಇದನ್ನೂ ಓದಿ: 500 ರೂಪಾಯಿ ನೋಟು ಉಪಯೋಗಿಸುವವರಿಗೆ RBI ನಿಂದ ಹೊಸ ಎಚ್ಚರಿಕೆ! ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ RBI
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram