ಅಮೇರಿಕಾದಲ್ಲಿ ಮೃತಪಟ್ಟವರ ಮೃತ ದೇಹ ಕರ್ನಾಟಕಕ್ಕೆ ಬರ್ಲೆ ಇಲ್ಲ; ಕುಟುಂಬದವರಿಗೆ ಅಂತಿಮ ದರ್ಶನವು ಸಿಗಲಿಲ್ಲ

ಜೀವನ ಹೇಗೆ ಅಂದ್ರೆ ಹೇಗೇಗೋ ಬದುಕಬೇಕು ಅಂದುಕೊಳ್ಳೋರು ಹೇಗೆ ದುರಂತ ಅಂತ್ಯ ಕಾಣ್ತಾರೆ ಅಂದ್ರೆ ಊಹಿಸೋಕು ಅಸಾಧ್ಯ… ಜೀವನದಲ್ಲಿ ಆಗಿರಬೇಕು ಹೀಗಿರಬೇಕು ಅಂತ ರಾಶಿ ಕನಸ್ಸು ಕಂಡು ಕಷ್ಟ ಪಟ್ಟು ಬಹಳ ಶ್ರಮ ಪಟ್ಟು ಜೀವನವನ್ನ ಕಟ್ಟಿಕೊಂಡು ನೆಮ್ಮದಿಯಾಗಿ ಬದುಕೋಣ ಅಂದುಕೊಳ್ಳೋವಷ್ಟ್ರಲ್ಲಿ ವಿಧಿ ಆಟಕ್ಕೆ ಬಲಿಯಾಗೋದು ಅದ್ರಲ್ಲಿ ತನ್ನ ಕುಟುಂಬವನ್ನ ತಾನೇ ಬಲಿಪಡೆದು ತಾನು ಆತ್ಮಹತ್ಯೆ ಮಾಡಿಕೊಳ್ಳೋದು ಯಪ್ಪಾ ಆ ಘೋರ ಶಿಕ್ಷೆ ಎಂತವರಿಗೂ ಬೇಡ…. ಪುಟ್ಟ ಮಗುವನ್ನ ಕೊಲ್ಲುವಾಗ ಅಪ್ಪನಿಗೆ ದೇವರು ಕೊಟ್ಟ ಮತ್ತೆಂತದ್ದು ಇರಬೇಕು ಒಂದು ಕ್ಷಣ ನೆನಸಿಕೊಂಡರೆ ಮೈ ಜುಮ್ಮಾನ್ನುತ್ತೆ. ಹೌದು ಅಮೇರಿಕಾಕ್ಕೆ ಹೋಗಿ ಅಲ್ಲಿ ಚೆಂದದ ಸಂಸಾರ ಕಟ್ಟಿಕೊಂಡು ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದ್ದ ಸಂಸಾರಕ್ಕೆ ಯಾರ ಕಣ್ಣು ಬಿತ್ತೊ ಗೊತ್ತಿಲ್ಲ ಪತ್ನಿ, ಮಗುವನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಪತಿಯು ಕೂಡ ಶರಣಾಗಿ ಹೋಗ್ತಾನೆ. ಇದಾದ ನಂತರ ಮೃತದೇಹಗಳನ್ನ ನಮಗೆ ಕೊಟ್ಟುಬಿಡಿ ಕರ್ನಾಟಕಕ್ಕೆ ತರಿಸುವ ಕೆಲಸ ಮಾಡಿ ಅಂತ ಕುಟುಂಬ ಅಂಗಲಾಚಿತ್ತು ಆದ್ರೆ ಅದು ಕೂಡ ಈಡೇರಲಿಲ್ಲ..

WhatsApp Group Join Now
Telegram Group Join Now

ಹೌದು ದಾವಣಗೆರೆ ಮೂಲದ ಕುಟುಂಬಸ್ಥರ ಮೃತದೇಹಗಳು ಕೊನೆಗೂ ಕನ್ನಡ ನಾಡಿಗೆ ಬರಲಿಲ್ಲ. ಹೌದು ಅಮೇರಿಕಾದ ಬಾಲ್ಟಿಮೋರ್‌ನಲ್ಲಿ ಇಂಜಿನಿಯರಿಂಗ್‌ ಕೆಲಸ ಮಾಡುತ್ತಾ ನೆಲೆಸಿದ್ದ ದಾವಣಗೆರೆ ಮೂಲದ ಕನ್ನಡಿಗರ ಕುಟುಂಬದಲ್ಲಿ ತಂದೆಯೇ ತನ್ನ ಹೆಂಡತಿ, ಮಗುವನ್ನು ಶೂಟ್‌ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದನು. ಇನ್ನು ಕೊನೆಗೆ ಮೃತದೇಹವನ್ನಾದರೂ ಕನ್ನಡ ನಾಡಿಗೆ ಕಳಿಸಿಕೊಡಿ ಎಂದು ಅಮೇರಿಕಾಗೆ ಎಷ್ಟೇ ಮನವಿ ಮಾಡಿದರೂ, ಇದಕ್ಕೊಪ್ಪದ ಹಿನ್ನೆಲೆಯಲ್ಲಿ ತಂದೆ, ತಾಯಿಯನ್ನು ಬಿಟ್ಟು, ಅಮೇರಿಕಾದಲ್ಲಿರುವ ಸಂಬಂಧಿಕರೇ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಾರೆ.

ಹೌದು ದಾವಣಗೆರೆ ಮೂಲದ ಇಂಜಿನಿಯರ್ ಕುಟುಂಬವೊಂದು ಅಮೇರಿಕಾಗೆ ಹೋಗಿ 9 ವರ್ಷಗಳ ಕಾಲ ವಾಸವಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಕುಟುಂಬದಲ್ಲಿ ತಂದೆ, ತಾಯಿ ಹಾಗೂ ಮಗು ಸಾವನ್ನಪ್ಪಿದ್ದರು. ಹೇಗೆ ಸಾವನ್ನಪ್ಪಿದ್ರು ಕಾರಣ ಏನು ಅನ್ನೋದು ಗುಪ್ತವಾಗಿಯೇ ಉಳಿದಿತ್ತು ಆ ನಂತರ ಸಾವಿನ ಬಗ್ಗೆ ಪೊಲೀಸರು ಪರಿಶೀಲನೆ ಮಾಡಿದಾಗ ಮೂವರ ತಲೆಯಲ್ಲಿಯೂ ಬಂದೂಕಿನ ಬುಲೆಟ್‌ಗಳು ಪತ್ತೆಯಾಗಿದ್ದವು. ಜೊತೆಗೆ, ಮನೆಯಲ್ಲಿ ಡೆತ್‌ನೋಟ್‌ ಬರೆದಿಟ್ಟು, ಕುಟುಂಬದ ಯಜಮಾನ ಅಂದ್ರೆ ಪತಿ ಯೋಗೇಶ್‌ ಹೊನ್ನಾಳ್‌, ತನ್ನ ಪತ್ನಿ ಹಾಗೂ ಮಗನನ್ನು ಬಂದೂಕಿನಿಂದ ಶೂಟ್‌ ಮಾಡಿ ಕೊಲೆಗೈದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಅಮೇರಿಕಾದ ಪೊಲೀಸರು ಮಾಹಿತಿ ನೀಡಿದ್ದರು. ಅಲ್ದೇ ಮರಣೋತ್ತರ ಪರೀಕ್ಷೆ ಹಾಗೂ ಇತರೆ ಪೊಲೀಸ್‌ ತನಿಖೆ ಪೂರ್ಣಗೊಳಿಸಿ ಮೃದೇಹಗಳನ್ನು ಕರ್ನಾಟಕಕ್ಕೆ ಕಳುಹಿಸಿ ಕೊಡಲಾಗುತ್ತದೆ ಎಂದು ಕುಟುಂಬ ಸದಸ್ಯರು ನಂಬಿಕೊಂಡಿದ್ದರು.

ಅದರಂತೆ ಅಂಗಲಾಚಿ ಬೇಡಿಕೊಂಡಿದ್ರು.. ಆದ್ರೆ ಕೊನೆಗೆ ಕುಟುಂಬಸ್ಥರ ಬೇಡಿಕೆ ಈಡೇರಲಿಲ್ಲ. ಮೃತದೇಹಗಳನ್ನ ಕರ್ನಾಟಕಕ್ಕೆ ಕಳುಹಿಸದೆ ಅಮೇರಿಕಾದಲ್ಲಿಯೇ ಅಂತ್ಯ ಸಂಸ್ಕಾರ ಮಾಡಲು ಇದೀಗ ನಿರ್ಧಾರ ಮಾಡಲಾಗಿದ್ದು. ತಂದೆ ತಾಯಿಯರು ಕೂಡ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಸಾಧ್ಯವಾಗದ ಶೋಚನಿಯ ಸ್ಥಿತಿ ಇದ್ದು ನಿಜಕ್ಕೂ ಕೂಡ ಇಂತ ಪರಿಸ್ಥಿತಿ ಮತ್ಯಾರಿಗು ಬೇಡವೇ ಬೇಡ ಅಂತಿದ್ದಾರೆ.

ಇದನ್ನೂ ಓದಿ: ಧೋನಿಗೆ ಧನಸಹಾಯ ನೀಡಿದ್ದ ಕಲಿಯುಗದ ಕರ್ಣ ಅಂಬರೀಶ್! ಹಳೆ ಫೋಟೋ ಹಂಚಿಕೊಂಡು ಸುಮಲತಾ ಹೇಳಿದ್ದೇನು?

12 ದಿನ ಕಳೆದರೂ ಭಾರತಕ್ಕೆ ಬರದ ಯೋಗೇಶ್ ಕುಟುಂಬದ ಮೃತದೇಹಗಳು

ಹೌದು ಆಗಸ್ಟ್ 15ರಂದು ಯೋಗೇಶ್ ಹೊನ್ನಾಳ, ಪ್ರತಿಭಾ ಹೊನ್ನಾಳ್, ಯಶ್ ಹೊನ್ನಾಳ್, ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಹೀಗಾಗಿ ಮೃತಪಟ್ಟ ಪಾರ್ಥಿವ ಶರೀರಗಳನ್ನು ಭಾರತಕ್ಕೆ ತರಲು ಕುಟುಂಬಸ್ಥರಿಂದ ಶತಪ್ರಯತ್ನ ಮಾಡಲಾಯಿತು. ಈ ಬಗ್ಗೆ ದಾವಣಗೆರೆ ಜಿಲ್ಲಾಡಳಿತವು ಅಮೇರಿಕಾವನ್ನು ಕೂಡ ಸಂಪರ್ಕ ಮಾಡಿತ್ತು. ಜೊತೆಗೆ, ಮೃತ ಮಹಿಳೆ ಸಂಬಂಧಿಕರಾದ ಶ್ರೀನಿವಾಸ್ ಎನ್ನುವವರು ಅಮೇರಿಕಾದಲ್ಲಿದ್ದು, ಅವರೇ ದಾವಣಗೆರೆಗೆ ಮೃತದೇಹ ತರುವುದಾಗಿ ಭರವಸೆ ನೀಡಿದ್ದರು. ಆದರೆ, 12 ದಿನಗಳಾದರೂ ಇನ್ನೂ ಪೊಲೀಸರು ಮೃತದೇಹ ಕೊಡಲು ನಿರಾಕರಣೆ ಮಾಡಿದ್ದರಿಂದ, ಅಮೇರಿಕಾದಲ್ಲಿಯೇ ಅಂತ್ಯಕ್ರಿಯೆ ನಡೆಸುವಂತೆ ಮೃತರ ಪೋಷಕರು ತಿಳಿಸಿದ್ದಾರೆ. ಇದರಿಂದಾಗಿ ಕೊನೆಯ ಬಾರಿಗೆ ಸತ್ತವರ ಮುಖವನ್ನೂ ನೋಡಲಾಗದೇ ದಾವಣಗೆರೆಯಲ್ಲಿರುವ ತಂದೆ-ತಾಯಿ ಕಣ್ಣೀರಿಡುತ್ತಿದ್ದೂ, ನಿಜಕ್ಕೂ ಇಂತವರಿಗೂ ಈ ಶಿಕ್ಷೆ ಬೇಡವೇ ಬೇಡ.

ಹೌದು ಮೃತ ಯೋಗೇಶ್‌ ಹೊನ್ನಾಳ್‌ ಅವರ ತಾಯಿ ಶೋಭ, ಸಹೋದರ ಪುನೀತ್, ಸಂಬಂಧಿ ಸೋಮಶೇಖರ್ ಹಾಗೂ ಆತನ ಪತ್ನಿ ಪ್ರತಿಭಾ ಹೊನ್ನಾಳ್‌ ಪಾಲಕರು ಅಮೇರಿಕಾದಲ್ಲಿಯೇ ಅಂತ್ಯಕ್ರಿಯೆ ಮಾಡುವುದಕ್ಕೆ ಒಪ್ಪಿಕೊಂಡದ್ದಾರೆ. ಇನ್ನು ಅಮೇರಿಕಾದಲ್ಲಿರುವ ಮೃತರ ಸಂಬಂಧಿಕರಾದ ಶ್ರೀನಿವಾಸ್‌ ಅವರ ನೇತೃತ್ವದಲ್ಲಿ ಕೆಲವು ಭಾರತೀಯ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲು ತಯಾರಿ ಮಾಡುತ್ತಿದ್ದಾರೆ. ಇನ್ನು ಯೋಗೇಶ್‌ ಸೇರಿ ಆತನ ಕುಟುಂಬದ ಯಾವುದೇ ಮೃತ ದೇಹಗಳನ್ನು 12 ದಿನಗಳಾದರೂ ಶವ ನೋಡುವುದಕ್ಕೂ ಅಲ್ಲಿನ ಪೊಲೀಸರು ಬಿಡುತ್ತಿಲ್ಲ. ಆದ್ದರಿಂದ ಶವಗಳು ಭಾರತಕ್ಕೆ ಕೊಂಡೊಯ್ಯಲಾಗದ ಸ್ಥಿತಿಯನ್ನು ತಲುಪಿವೆಯಂತೆ.

ಹೀಗಾಗಿ, ಅಮೇರಿಕಾದ ವೈದ್ಯರ ಸಲಹೆ ಮೇರೆಗೆ ಬಾಲ್ಟಿಮೋರ್‌ನಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬ ಸದಸ್ಯರು ನಿರ್ಧರಿಸಿ ಒಪ್ಪಿಕೊಂಡಿದ್ದಾರಂತೆ. ಹೀಗಾಗಿ ಮೃತ ದೇಹಗಳನ್ನ ಭಾರತಕ್ಕೆ ತರುವ ಎಲ್ಲ ಪ್ರಯತ್ನಗಳು ಕೂಡ ಮುರಿದು ಬಿದ್ದಿವೆ. ಕೊನೆಗೂ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗೋದಿರಲಿ ಕೊನೆ ಪಕ್ಷ ಮಗ ಹಾಗೂ ಮಗಳ ಮುಖ ನೋಡಲಾಗದೆ ಆ ಕುಟುಂಬಸ್ಥರ ಗೋಳು ಯಾರಿಗೂ ಬೇಡ ಅದರಲ್ಲೂ 6ವರ್ಷದ ಪುಟ್ಟ ಕಂದನ ಸಾವು ಯಾರಿಗೂ ಕೂಡ ಅರಗಿಸಿಕೊಳ್ಳೋದು ಕೂಡ ಆಗ್ತಿಲ್ಲ.. ಇನ್ನು ಕೊನೆಯದಾಗಿ ಮುಖ ನೋಡಲು ಆಗದಿರುವ ಪರಿಸ್ಥಿತಿ ಶತ್ರುವಿಗೂ ಬೇಡ ಅಂತಿದ್ದಾರೆ ಕುಟುಂಬದವರು.

ಇದನ್ನೂ ಓದಿ: ನಮ್ಮ ಸ್ಯಾಂಡಲ್ ವುಡ್ ನಟ ನಟಿಯರ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಹೇಗಿತ್ತು ನೋಡಿ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram