ಕೈಲೊಂದು ಕೆಲಸ ಮುತ್ತಿನಂಥ ಮಡದಿ ಚಿನ್ನದಂತ ಮಗು ಚಿಕ್ಕದಾದ ಒಂದು ಮನೆಯಿದ್ರೆ ಸಾಕು ಸುಖ ಸಂಸಾರಕ್ಕೆ ಇನ್ನೇನು ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚು ಅಂತ ತಿಳಿದವರು ಹೇಳ್ತಾರೆ ಆದ್ರೆ ಇಲ್ಲೊಬ್ಬ ವ್ಯಕ್ತಿ ಎಲ್ಲವು ಇದ್ರೂ ದುಡುಕಿನ ತಾಳ್ಮೆಯಿಲ್ಲದ ಮನಸ್ಸಿಗೆ ಬುದ್ದಿ ಕೊಟ್ಟು ತನ್ನ ಜೊತೆಗೆ ತನ್ನ ಇಡೀ ಸಂಸಾರದ ಕಥೆಯನ್ನೇ ಮುಗಿಸಿಕೊಂಡಿದ್ದಾರೆ. ಹೌದು ದೇಶದಿಂದ ವಿದೇಶಕ್ಕೆ ಹೋಗಿ ಅಲ್ಲಿ ಸುಂದರ ಬದುಕು ಕಟ್ಟಿಕೊಂಡ ವ್ಯಕ್ತಿ ಯೊಬ್ಬ ತನ್ನ ಪುಟ್ಟದಾದ ಗೂಡಿನಲ್ಲೇ ಸಾವಿರಾರು ಕನಸು ಕಂಡಿದ್ದ ಆ ಮನೆಯಲ್ಲೇ ಪತ್ನಿ ಹಾಗೂ ಮಗನಿಗೆ ಗುಂಡು ಹಾರಿಸಿ ಕೊಂಡು ತಾನು ಕೂಡ ತಲೆಗೆ ಗುಂಡು ಹೊಡೆದುಕೊಂಡು ಸಾವಿಗಿಡಾಗಿರುವ ಘಟನೆ ಅಮೇರಿಕಾದಲ್ಲಿ ನಡೆದಿದೆ.
ಮನೆಯಲ್ಲಿ ಮೂವರು ಕೂಡ ಶವವಾಗಿ ಪತ್ತೆಯಾಗಿದ್ದು ಪ್ರಾಥಮಿಕ ತನಿಖೆಯಲ್ಲಿ ಇದು ಪತಿಯೇ ಹೆಂಡತಿ ಮಗನನ್ನ ಕೊಂದು ತಾನು ಆತ್ಮಹತ್ಯೆಗೆ ಶರಣಾಗಿರೋದು ಅಂತ ಹೇಳಲಾಗಿದ್ದು, ಭಾರತದಲ್ಲಿರುವ ಕುಟುಂಬಸ್ಥರಿಗೆ ಈ ವಿಷಯ ಮುಟ್ಟಿಸಿದ್ದು, ಇಲ್ಲಿ ಕುಟುಂಬಸ್ಥರ ರೋಧನೆ ಯಾರಿಗೂ ಬೇಡ. ಚೆನ್ನಾಗಿದ್ದವರು ಯಾಕೆ ಹೀಗೆ ಮಾಡಿಕೊಂಡ್ರು ಇದರಲ್ಲಿ ಏನೋ ಇದೆ ತನಿಖೆ ಮಾಡಿ, ಮೃತ ದೇಹಗಳನ್ನ ಸಾಧ್ಯವಾದಷ್ಟು ಬೇಗ ನಮ್ಮೂರಿಗೆ ತರಿಸಿ ಅಂತ ಅಂಗಲಾಚುತ್ತಿದ್ದಾರೆ. ಅಷ್ಟಕ್ಕೂ ಆ ಸುಂದರ ಕುಟುಂಬಕ್ಕೆ ಏನಾಯ್ತು, ಮೃತದೇಹಗಳನ್ನ ತರೋದು ಎಷ್ಟು ಕಷ್ಟ ಎಲ್ಲವನ್ನ ನೋಡ್ತಾ ಹೋಗೋಣ.
ಚಂದನದ ಸಂಸಾರ ಕೊನೆಯಾದ ರೀತಿ ಮಾತ್ರ ಘೋರ
ಅಮೇರಿಕದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್‌ನಲ್ಲಿ ಕರ್ನಾಟಕದ ದಂಪತಿಗಳಾದ 37ವರ್ಷದ ಯೋಗೀಶ್ ಹೊನ್ನಾಳ 35ವರ್ಷದ ಪ್ರತಿಭಾ ಹೊನ್ನಾಳ ಮತ್ತು ಅವರ ಮಗ 6ವರ್ಷದ ಯಶ್ ವಾಸ ಮಾಡ್ತಿದ್ರು. ದಾವಣಗೆರೆ ಮೂಲದ ದಂಪತಿ, ಒಂಬತ್ತು ವರ್ಷಗಳಿಂದ ಅಮೇರಿಕದಲ್ಲಿ ನೆಲೆಸಿದ್ದು, ಮೇರಿಲ್ಯಾಂಡ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಇಬ್ಬರು ಕೂಡ ಕೆಲಸ ಮಾಡುತ್ತಿದ್ದರು. ಮಗ ಶಾಲೆಗೆ ಹೋಗ್ತಿದ್ದ. ಸುಖ ಸಂಸಾರಕ್ಕೆ ಯಾವುದೇ ತೊಂದರೆ ತಪಾತ್ರಯ ಅನ್ನೋದು ಇರಲಿಲ್ಲ. ಯಾಕಂದ್ರೆ ಇಲ್ಲಿಂದ ಹೋಗಿ ಅಮೇರಿಕಾದಲ್ಲಿ ಸ್ವಂತ ಮನೆ ಕಟ್ಟಿಸೋದು ಅಂದ್ರೆ ಸುಮ್ಮನೆ ಅಲ್ಲ ಸುಲಭದ ವಿಚಾರವು ಅಲ್ಲ. ಆದ್ರೆ ಈ ದಂಪತಿ ಅಮೇರಿಕಾದಲ್ಲಿ ಸ್ವಂತ ಮನೆಯನ್ನ ಕೂಡ ಕಟ್ಟಿಕೊಂಡಿದ್ರು. ಸಾಲದಕ್ಕೆ ಬೇಜಾರದಾಗ ಮಗನ ಮುಖ ನೋಡಿ ಕಾಲ ಕಳೆಯೋಕೆ ಮುದ್ದು ಮಗನಿದ್ದ ಅವ್ನಿಗೆ ಇನ್ನು ಕೇವಲ 6ವರ್ಷ. ಆದ್ರೆ ದಂಪತಿ ನಡುವೆ ಏನು ಸಮಸ್ಯೆ ಇತ್ತೋ ಏನೋ ಅದು ಯಾರಿಗೂ ಗೊತ್ತಿಲ್ಲ.
ಕೋಪದ ಕೈಗೆ ಯೋಗೀಶ್ ಹೊನ್ನಾಳ ಬುದ್ದಿ ಕೊಟ್ರೋ ಅಥವಾ ತಾಳ್ಮೆ ಕಳೆದುಕೊಂಡಿದ್ರೋ ಅಥವಾ ಮತ್ತೇನಾಯಿತೋ ಇನ್ನು ಸ್ಪಷ್ಟವಾಗಿ ಗೊತ್ತಾಗಿಲ ಆದ್ರೆ ಮಡದಿ ಹಾಗೂ ಮಗನಿಗೆ ಗುಂಡು ಹಾರಿಸಿ ಕೊಂಡಿದ್ದಾರೆ. ನಂತರ ಅದೇ ಗನ್ ನಿಂದ ತಾನು ಕೂಡ ತಲೆಗೆ ಶೂಟ್ ಮಾಡಿಕೊಂಡು ಅವ್ರು ಕೂಡ ಅಲ್ಲಿಯೇ ಪ್ರಾಣ ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಪೋಲೀಸರ ಪ್ರಾಥಮಿಕ ತನಿಖೆಯ ವರದಿ.. ಇದರಲ್ಲಿ ಕೌಟುಂಬಿಕ ಕಲಹಕ್ಕೆ ಬೇಸತ್ತು ಪತಿ ಯೋಗೇಶ್ ಹೊನ್ನಾಳ ಈ ರೀತಿ ಮಾಡಿಕೊಂಡಿದ್ದಾರೆ ಅಂತ ತಿಳಿದು ಬಂದಿದೆ. ಆದ್ರೆ ಯೋಗೇಶ್ ಕುಟುಂಬದವರು ಇದು ಸಾಧ್ಯವಿಲ್ಲ ಮಗ ಸೊಸೆ ಚೆನ್ನಾಗಿದ್ರು, ಬಹಳ ಕಷ್ಟಪಟ್ಟು ಜೀವನ ಕಟ್ಟಿಕೊಂಡಿದ್ರು ಹೀಗೆ ಮಾಡಿಕೊಳ್ಳಲಿಕ್ಕೆ ಸಾಧ್ಯ ಇಲ್ಲ ದಯವಿಟ್ಟು ತನಿಖೆ ಮಾಡಿ ಅಂತಿದ್ದಾರೆ.
ಇದನ್ನೂ ಓದಿ: ಅತಿ ಶ್ರೀಘದಲ್ಲೇ ಶುರುವಾಗಲಿದೆ ಬಿಗ್ ಬಾಸ್ ಸೀಸನ್ 10; ಸ್ಪರ್ಧಿಗಳ ಪಕ್ಕ ಲಿಸ್ಟ್ ಇಲ್ಲಿದೆ ನೋಡಿ
ಯಾವಾಗ ಬರುತ್ತೆ ಯೋಗೇಶ್ ಕುಟುಂಬದ ಮೃತದೇಹಗಳು?
ಇನ್ನು ಹೊರದೇಶದಲ್ಲಿ ಒಂದಷ್ಟು ಸಂಪಾದನೆ ಮಾಡಿ ಮರಳಿ ಭಾರತಕ್ಕೆ ಬರುವ ಆಶಯ ಇಟ್ಟುಕೊಂಡಿದ್ದ ದಂಪತಿ ಈಗ ಈ ರೀತಿ ನಿಗೂಢವಾಗಿ ಸಾವನ್ನಪ್ಪಿರುವುದು ಕುಟುಂಬದವರಿಗೆ ದುಃಖ ಮಡುಗಟ್ಟುವಂತೆ ಮಾಡಿದೆ. ಇನ್ನು ಯೋಗೇಶ್ ಗುಂಡು ಹಾರಿಸಿ ಪತ್ನಿ ಹಾಗೂ ಮಗುವನ್ನು ಕೊಂದು, ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ತನಿಖೆಯಿಂದ ಹೊರಬೀಳಬೇಕಿದೆ. ಇತ್ತ ಕುಟುಂಬದವರು ಮೃತರನ್ನು ಸ್ವದೇಶಕ್ಕೆ ಕರೆತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇನ್ನು ಜಿಲ್ಲಾಧಿಕಾರಿ ಡಾ.ಎಂವಿ ವೆಂಕಟೇಶ್ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದು, ಕುಟುಂಬದ ಕೋರಿಕೆ ಮೇರೆಗೆ ಅಮೆರಿಕದಲ್ಲಿರುವ ಕನ್ಸುಲ್ ಜನರಲ್ ಮಂಜುನಾಥ್, ಡೆಪ್ಯೂಟಿ ಜನರಲ್ ವರುಣ್ ಅವರನ್ನು ಆನ್‌ಲೈನ್ ಮುಖಾಂತರ ಸಂಪರ್ಕ ಮಾಡಿದ್ದೇವೆ. ಮೃತ ದೇಹಗಳನ್ನು ದಾವಣಗೆರೆಗೆ ತರುವ ಕುರಿತು ಚರ್ಚೆ ನಡೆಯುತ್ತಿದೆ ಅಂತ ತಿಳಿಸಿದ್ದು, ಸ್ಥಳಿಯ ಪೊಲೀಸರು ಅಸ್ವಾಭಾವಿಕ ಸಾವು ಅಂತ ಮಾಹಿತಿ ನೀಡಿದ್ದಾರೆ. ತನಿಖೆ ಪೂರ್ಣಗೊಳಿಸಿದ ನಂತರ ಮೃತದೇಹಗಳನ್ನು ತವರಿಗೆ ತರಬೇಕಾ ಅಥವಾ ಅಲ್ಲಿಯೇ ಅಂತ್ಯಕ್ರಿಯೆ ಮಾಡಬೇಕಾ ಎಂಬ ಕುರಿತು ಕುಟುಂಬಸ್ಥರ ಜೊತೆ ಚರ್ಚೆ ನಡೆಯುತ್ತಿದೆ. ಕುಟುಂಬಸ್ಥರ ಕೋರಿಕೆಯಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗಾಗಲೇ ಪ್ರತಿ ಎರಡು ಗಂಟೆಗೊಮ್ಮೆ ಅಮೆರಿಕ ಕನ್ಸುಲ್ ಸಂಪರ್ಕ ಮಾಡಲಾಗುತ್ತಿದೆ ಸಾಧ್ಯವಾದಷ್ಟು ಬೇಗ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಒಂದು ನಿರ್ಧಾರಕ್ಕೆ ಬರುತ್ತೇವೆ ಅಂತ ಹೇಳ್ತಿದ್ದಾರೆ. ಒಟ್ಟಿನಲ್ಲಿ ಈ ಸಾವು ಇಂದಿಗೂ ಕೂಡ ನಿಗೂಢವೆ ಎನಬಹುದು
.
ಇದನ್ನೂ ಓದಿ: ದರ್ಶನ್ ಮಗು ಥರ ಆದ್ರೆ ಕೆಣಕುದ್ರೆ ಬೆಂಕಿ! ಡಿ. ಬಾಸ್ ಬಗ್ಗೆ ರವಿಚಂದ್ರನ್ ಅವ್ರು ಹೇಳಿದ್ದೇನು ಗೊತ್ತಾ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram