Deepa katte marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರೀರಸ್ತು ಶುಭಮಸ್ತು ಖ್ಯಾತಿಯ ನಟಿ ದೀಪಾ ಕಟ್ಟೆ. ಮದುವೆ ವೀಡಿಯೋ ನೋಡಿ?

Deepa katte marriage: ಇಂಜಿನಿಯರ್ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ದೀಪಾ ಕಟ್ಟೆ ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದರಿಂದ ಕಂಪನಿಗೆ ವಿದಾಯ ಹೇಳಿ ಬಳಿಕ ನಟನೇ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಚಿತ್ರರಂಗಕ್ಕೆ ದೀಪಾ ಅವರು ಎಂಟ್ರಿ ಕೊಟ್ಟರು. ಮೊದಲು ನಿರೂಪಕಿಯಾಗಿ ಕಿರುತರೆಗೆ ಕಾಲಿಟ್ಟ ದೀಪಾ ಕಟ್ಟೆ ಅವರು ಇಂದು ಸಾಕಷ್ಟು ಸೀರಿಯಲ್ ನಲ್ಲಿ ನಟನೆ ಮಾಡುತ್ತಿದ್ದಾರೆ. ಇಂಚರ ಟಿವಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತರೆ ಪ್ರಯಾಣ ಶುರು ಮಾಡಿದ್ದರು ಮುಂದೆ ನಟಿಯಾಗಬೇಕು ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ ನಿರ್ಧಾರ ಮಾಡಿದರು ದೀಪಾ ಕಟ್ಟೆ. ಇದೀಗ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಕಳೆದ ಮೂರು ದಿನಗಳಿಂದ ತಮ್ಮ ಮದುವೆಯ ಶಾಸ್ತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು ದೀಪಾ. ಅರಿಶಿನ ಶಾಸ್ತ್ರ, ಮೆಹೆಂದಿ ಶಾಸ್ತ್ರದ, ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ದೀಪಾ ಕಟ್ಟೆ ಅವರು ಹಂಚಿಕೊಂಡಿದ್ದಾರೆ .

WhatsApp Group Join Now
Telegram Group Join Now

 

ದೀಪಾ ಅವರ ಮದುವೆಗೆ ಯಾರೆಲ್ಲಾ ಬಂದಿದ್ರು ಹಾಗೂ ಮದುವೆ ವಿಡಿಯೋ ನೋಡಿ

ಈ ಮದುವೆಗೆ ‘ಜೀವ ಹೂವಾಗಿದೆ’, ‘ಮಿಥುನ ರಾಶಿ’ ಮತ್ತು ಜೀ ಕನ್ನಡದ ‘ಹಿಟ್ಲರ್ ಕಲ್ಯಾಣ’ ಮತ್ತು ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಕಲಾವಿದರು ಆಗಮಿಸಿದ್ದರು. ದೀಪಾ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೀವ ಹೂವಾಗಿದೆ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದರು. ಈ ಧಾರಾವಾಹಿಯಿಂದ ದೀಪ ಅವರಿಗೆ ಕಲಾವಿದರ ಪರಿಚಯವಾಗಿತ್ತು. ಇನ್ನು ಈ ಸೀರಿಯಲ್ ಸಾಕಷ್ಟು ನಟ ನಟಿಯರು ದೀಪಾ ಕಟ್ಟೆ ಮದುವೆಯ(Deepa katte marriage) ಸಂಭ್ರಮಕ್ಕೆ ಬಂದು ಸಾಕ್ಷಿಯಾದರು. ದೀಪಾ ಅವರು ಮದುವೆ ಇಂದು ಭಾನುವಾರ ಕುಟುಂಬಸ್ಥರ ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆಯಿತು. ದೀಪ ಅವರ ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ. ಅವರ ಅಭಿಮಾನಿಗಳು ‘Happy marriage Life’ ನಿಮ್ಮ ಮುಂದಿನ ಜೀವನ ಚೆನ್ನಾಗಿರಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ . ಇನ್ನು ದೀಪ ಮದುವೆಯಾಗಿರುವ ಹುಡುಗ, ಯಾರು ಏನು ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿಲ್ಲ. ಒಟ್ಟಿನಲ್ಲಿ ನಿರೂಪಕಿಯಾಗಿ ಕಿರುತರೆಗೆ ಎಂಟ್ರಿ ಕೊಟ್ಟ ದೀಪ ಇಂದು ಹಲವು ದಾರವಾಹಿಗಳ ಮೂಲಕ ಜನರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಇನ್ನು ಇವರ ಮುಂದಿನ ವೈವಾಹಿಕ ಜೀವನ ಚೆನ್ನಾಗಿರಲಿ ಎಂದು ನಾವು ನೀವೆಲ್ಲ ಶುಭಕೋರೋಣ.

ಇದನ್ನೂ ಓದಿ: ಮಗಳ ಹುಟ್ಟುಹಬ್ಬ ಕುಟುಂಬದ ಜೊತೆ ಕಾಲ ಕಳೆದ ಸುದೀಪ್.. ಸುದೀಪ್ ಮಗಳಿಗೆ ಈಗ ಎಷ್ಟು ವರ್ಷ? ಬರ್ತ್ಡೇ ಸೆಲೆಬ್ರೇಶನ್ ಹೇಗಿತ್ತು

ಇದನ್ನೂ ಓದಿ: ಸತತ ಮೂರು ದಿನಗಳಿಂದ ಇಳಿದಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ದಿಡೀರ್ ಏರಿಕೆ, ಎಷ್ಟಿದೆ ಇಂದಿನ ಚಿನ್ನದ ಬೆಲೆ ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram