NHM ಯೋಜನೆಯಲ್ಲಿ ಒಟ್ಟು 38 ನರ್ಸಿಂಗ್ ಅಧಿಕಾರಿ, ಪ್ರಾಥಮಿಕ ಆರೋಗ್ಯ ಅಧಿಕಾರಿ ಹಾಗೂ ಇನ್ನಿತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈಗಲೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಫೆಬ್ರವರಿ 16 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಉದ್ಯೋಗದ ಬಗ್ಗೆ ಪೂರ್ಣ ವಿವರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕೊಪ್ಪಳ ( DHFWS ) ಇಲಾಖೆಯಿಂದ 38 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಕೊಪ್ಪಳ ದಲ್ಲಿ ಮಾತ್ರ ಉದ್ಯೋಗ ಮಾಡಬೇಕಾಗುತ್ತದೆ. ನರ್ಸಿಂಗ್ ಅಧಿಕಾರಿ ಮತ್ತು ಪ್ರಾಥಮಿಕ ಆರೋಗ್ಯ ಅಧಿಕಾರಿ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಮಾಸಿಕ ವೇತನ ರೂ.13,200 ರೂಪಾಯಿ ಇಂದ 15,939 ಎಂದು ನಿಗದಿ ಪಡಿಸಲಾಗಿದೆ. ಒಟ್ಟು 18 ವಿಭಾಗದಲ್ಲಿ ಕಾರ್ಯನಿರ್ವಹಣೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ವಯಸ್ಸಿನ ಮಿತಿ 18 ರಿಂದ 45 ವರ್ಷ. ಯಾವುದೇ ಅರ್ಜಿ ಶುಲ್ಕವಿಲ್ಲ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಯ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಿಭಾಗದ ಹೆಸರು ಮತ್ತು ಹುದ್ದೆಗಳ ಸಂಖ್ಯೆ :- 3 ಪ್ರಾಥಮಿಕ ಆರೋಗ್ಯ ಅಧಿಕಾರಿ ಹುದ್ದೆ, ತಲಾ 1 ತಾಲೂಕಾ ಕಾರ್ಯಕ್ರಮ ನಿರ್ವಾಹಕ , DEIC ಮ್ಯಾನೇಜರ್, NRC ಡಯಟ್ ಕೌನ್ಸಿಲರ್, NRC ಡಯಟ್ ಕೌನ್ಸಿಲರ್, ಫಾರ್ಮಾಸಿಸ್ಟ್, ವ್ಯಾಕ್ಸಿನೇಷನ್ ಫೀಲ್ಡ್ ವರ್ಕರ್ ಹಾಗೂ ಆಡಿಯೊಮೆಟ್ರಿಕ್ ಸಹಾಯಕ, ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕರು ಮತ್ತು ಆಡಳಿತ ಮತ್ತು ಕಾರ್ಯಕ್ರಮ ಸಹಾಯಕ ಹುದ್ದೆಗಳು ಹಾಗೂ 17 ನರ್ಸಿಂಗ್ ಅಧಿಕಾರಿ ಹುದ್ದೆ, ಎರಡು ಪ್ರಯೋಗಾಲಯ ತಂತ್ರಜ್ಞ, ಎರಡು LHV, NUHM, ಎರಡು ಒಟಿ ತಂತ್ರಜ್ಞ ಹಾಗೂ ಎರಡು ಸಲಹೆಗಾರ ಹುದ್ದೆಗಳ ಭರ್ತಿಗೆ ಇಲಾಖೆಯು ಅರ್ಜಿ ಆಹ್ವಾನ ಮಾಡಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿ ಹುದ್ದೆಗೂ ಬೇರೆ ಬೇರೆ ರೀತಿಯ ವಿದ್ಯಾರ್ಹತೆ ಪಟ್ಟಿಯನ್ನು ಇಲಾಖೆ ಬಿಡುಗಡೆ ಮಾಡಿದೆ.
ಬಿಬಿಎಂ, ಎಂಬಿಎ ಮುಗಿಸಿದ ಅಭ್ಯರ್ಥಿಗಳು ತಾಲೂಕಾ ಕಾರ್ಯಕ್ರಮ ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಸ್ನಾತಕೋತ್ತರ ಪದವಿ, ಎಂಬಿಎ ಮುಗಿಸಿದ ಅಭ್ಯರ್ಥಿಗಳು DEIC ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಡಿಪ್ಲೊಮಾ, ಬಿ.ಎಸ್ಸಿ ಮುಗಿಸಿದ ಅಭ್ಯರ್ಥಿಗಳು NRC ಡಯಟ್ ಕೌನ್ಸಿಲರ್ ಗೆ ಅರ್ಜಿ ಸಲ್ಲಿಸಬಹುದು. ಎಸ್ ಎಸ್ ಎಲ್ ಸಿ, ಪಿಯುಸಿ, ಡಿಪ್ಲೊಮಾ ಮುಗಿಸಿದವರು ಪ್ರಯೋಗಾಲಯ ತಂತ್ರಜ್ಞ ಹುದ್ದೆಗೆ ಅರ್ಜಿ ಸಲ್ಲಿಸುಬಹುದು. ಆಪ್ಟೋಮೆಟ್ರಿಯಲ್ಲಿ ಡಿಪ್ಲೊಮಾ ಓದಿದವರು RBSK ನೇತ್ರ ಸಹಾಯಕ/ಫಾರ್ಮಸಿಸ್ಟ್ ಹುದ್ದೆ ಅರ್ಜಿ ಸಲ್ಲಿಸಬಹುದು. ಸಲಹೆಗಾರ ಹುದ್ದೆಗೆ ಬಿ.ಎಸ್ಸಿ complete ಆಗಿರಬೇಕು. ವ್ಯಾಕ್ಸಿನೇಷನ್ ಫೀಲ್ಡ್ ವರ್ಕರ್ ಹುದ್ದೆಗೆ ಪದವಿ ಮುಗಿಸಿರಬೇಕು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಕ್ರಮ: ಕೊಪ್ಪಳ ಜಿಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತ ಜಾಲತಾಣ koppal.nic.in ಗೆ ಹೋಗಿ ನಿಮಗೆ ಮೊದಲ ಪುಟದಲ್ಲಿ ಅರ್ಜಿಯ ಅಧಿಸೂಚನೆ ಬಗ್ಗೆ ಮಾಹಿತಿ ಪಡೆಯಬಹುದು. ಅಲ್ಲಿ ಹೊಸದು ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ ಅರ್ಜಿ ನಮೂನೆ ಓಪನ್ ಆಗುತ್ತದೆ. ನಿಮ್ಮ ಹೆಸರು, ವಿಳಾಸ, ಲಿಂಗ, ಶೈಕ್ಷಣಿಕ ಅರ್ಹತೆ, ವಯಸ್ಸು, ಮೊಬೈಲ್ ಸಂಖ್ಯೆ ಎಲ್ಲವನ್ನೂ ಭರ್ತಿ ಮಾಡಿ. ನಂತರ ನಿಮ್ಮ ಎಸೆಸೆಲ್ಸಿ ಪಿಯುಸಿ ಮತ್ತು ಉನ್ನತ ವಿಧ್ಯಾಭ್ಯಾಸದ ಪ್ರತಿಯನ್ನು ಸ್ಕ್ಯಾನ್ ಮಾಡಿ ಹಾಕಬೇಕು. ನಂತರ ನೀವು ಯಾವ ಹುದ್ದೆ ಅರ್ಜಿ ಹಾಕಲು ಬಯಸುತ್ತೀರಾ ಎಂಬ ಆಪ್ಷನ್ ಕ್ಲಿಕ್ ಮಾಡಿ ಹುದ್ದೆಯ ಹೆಸರನ್ನು ಆಯ್ಕೆ ಮಾಡಿ. word verification ಕೇಳುತ್ತದೆ ಅದನ್ನು ಭರ್ತಿ ಮಾಡಿ ಒಮ್ಮೆ ನೀವು ಸಲ್ಲಿಸಿದ ಎಲ್ಲಾ ಮಾಹಿತಿಗಳು ಸರಿ ಇವೆಯೇ ಎಂದು ಪರೀಕ್ಷಿಸಿ submit ಬಟನ್ ಕ್ಲಿಕ್ ಮಾಡಿ. ನೇಮಕಾತಿ ಅಧಿಸೂಚನೆ PDF ಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: KSRTC ಅಶ್ವಮೇಧ ಕ್ಲಾಸಿಕ್ ಎಕ್ಸ್ ಪ್ರೆಸ್ ಬಸ್ ನ ವಿಶೇಷತೆಗಳು ಏನು?
ಇದನ್ನೂ ಓದಿ: ಯಾವುದೇ ಕ್ಯಾಬ್ ಬುಕ್ ಮಾಡಿದರೂ ಒಂದೇ ದರ! ಓಲಾ ಉಬರ್ ಒಂದೇ ರೀತಿಯ ದರವನ್ನು ನಿಗದಿ ಮಾಡಿದ ರಾಜ್ಯ ಸರ್ಕಾರ