ಸ್ನೇಹಿತರೆ ಮೊನ್ನೆ ನಡೆದ ಕರ್ನಾಟಕ ಬಂದ್ ದಿನದಿಂದ ಚಂದನವನದಲ್ಲಿ ಅಂತೇ ಕಂತೆ ಸುದ್ದಿಗಳು ಹರಿದಾಡುತ್ತಿವೆ. ದರ್ಶನ್ ಮತ್ತು ದ್ರುವ ನಡುವೆ ಯಾವುದು ಸರಿ ಇಲ್ಲ ಇಬ್ಬರ ಮಧ್ಯೆ ಗಲಾಟೆಗಳಿದೆ ಅಂದ್ರೆ ಮನಸ್ತಾಪ ಇದೆ ಹೀಗಾಗಿಯೇ ಇಬ್ಬರು ಮಾತನಾಡಿಲ್ಲ ಅಂತ ಸಾಕಷ್ಟು ಹಸಿ ಬಿಸಿ ಚರ್ಚೆಯಾಗುತ್ತಿದೆ. ಹೌದು ನಿಮ್ಮೆಲ್ಲರಿಗೂ ಗೊತ್ತಿರುವಂತೆ ಸೆಪ್ಟೆಂಬರ್ 29 ರಂದು ನಡೆದ ಕಾವೇರಿ ಪ್ರತಿಭಟನೆಯಲ್ಲಿ ಚಿತ್ರರಂಗದ ಹಲವಾರು ಗಣ್ಯರು ಭಾಗವಹಿಸಿದ್ದರು. ತಮಿಳು ನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದವು. ಅಂದು ಕಾವೇರಿಗಾಗಿ ಕರುನಾಡು ಸ್ತಬ್ಧವಾಗಿತ್ತು. ಅಲ್ಲದೆ, ಈ ಹೋರಾಟಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಒಂದಾಗಿ ಒಗ್ಗಟ್ಟಿನ ಮಂತ್ರ ಜಪಿಸಿದರು. ತದನಂತರ 11 ಗಂಟೆಯ ವೇಳೆ ಶಿವಣ್ಣ, ಧ್ರುವ ಸರ್ಜಾ, ವಸಿಷ್ಠ ಸಿಂಹ, ದುನಿಯಾ ವಿಜಯ್ ಪ್ರತಿಭಟನೆಯಲ್ಲಿ ಭಾಗಿಯಾದರು.
ಅದ್ರೆ ನಟ ದರ್ಶನ್ ಸ್ವಲ್ಪ ತಡವಾಗಿ ಬಂದರು. ಬರುತ್ತಿದ್ದಂತೆ ಶಿವರಾಜ್‌ಕುಮಾರ್ ಅವರ ಕಾಲಿಗೆ ಬಿದ್ದು ದಚ್ಚು ನಮಸ್ಕರಿಸಿದರು, ಹಾಗೆ ಪಕ್ಕದಲ್ಲಿ ಇದ್ದ ವಸಿಷ್ಠ ದಚ್ಚುಗೆ ಜಾಗ ಮಾಡಿಕೊಟ್ಟರು. ಉಮಾಶ್ರೀ ಸಹ ಎದ್ದು ನಿಂತು ಚಾಲೆಂಜಿಂಗ್ ಸ್ಟಾರ್‌ನನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ನಟ ದರ್ಶನ್ ಹಾಗು ಧ್ರುವ ಸರ್ಜಾ ಒಂದೇ ವೇದಿಕೆ ಮೇಲಿದ್ದರೂ ಸಹ ಒಬ್ಬರನೊಬ್ಬರು ಮಾತನಾಡಿಸೋದು ಇರಲಿ ನೋಡುವ ಗೋಜಿಗೂ ಹೋಗಲಿಲ್ಲ, ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಇವರ ಮಧ್ಯ ಎಲ್ಲವೂ ಸರಿಯಾಗಿಲ್ಲ ಎನ್ನುವ ಊಹಾಪೋಹಗಳು ಹರಿದಾಡುತ್ತಿತ್ತು. ಅಲ್ದೇ ಈ ಬಗ್ಗೆ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಮಾತನಾಡಿ ಅದ್ಕಕೆ ಕಾರಣ ಇತ್ತು, ದ್ರುವ ಅವರ ಆಪ್ತರು ತೀರಿಕೊಂದಿದ್ರು ಆಗಾಗಿ ಅವ್ರಿಗೆ ಲವ ಲವಿಕೆ ಇಲ್ಲದೆ ಕೂತಿದ್ರು ಅಂತ ಹೇಳಿ ವಿಷಯ ಮರೆ ಮಾಚುವ ಕೆಲಸ ಮಾಡಿದ್ರು ಅದ್ರಿಗ ಇದರ ಬಗ್ಗೆ ಸ್ವತಃ ಧ್ರುವ ಸರ್ಜಾ ತುಟಿ ಬಿಚ್ಚಿದ್ದು ಮನಸ್ತಾಪ ಇರೋದು ನಿಜ ಅಂತ ಒಪ್ಪಿಕೊಂಡಿದ್ದಾರೆ.
ಹೌದು ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಉಹಾಪೊಹಗಲು ಆಗಂತೆ ಈಗಂತೆ ಅನ್ನೋ ಚರ್ಚೆಗಳು ಶುರುವಾಗಿದೆ ಹೋಗಿದ್ವು, ಹಾಗಾಗಿ ನಟ ಪ್ರಥಮ್ ತೇಪೆ ಹಾಕುವ ಕೆಲಸ ಮಾಡಿದ್ರು ಆದ್ರೂ ಈ ಬಗ್ಗೆ ಧ್ರುವ ನಾನು ನೇರವಾಗಿ ಮಾತನಾಡುತ್ತೀನಿ ಆಗಿರೋದನ್ನ ಹೇಳ್ತಿನಿ ಅಂತ ಕೆಲವೊಬ್ಬರ ಪ್ರಶ್ನೆಗಳಿಗೆ ಟ್ರೋಲ್ ಗಳಿಗೆ ಬೀಗ ಹಾಕಿದ್ದಾರೆ.
ಇದನ್ನೂ ಓದಿ: ಲಕ್ಷ, ಲಕ್ಷ ಸಾಲ ಮಾಡಿ ಹೆಂಡತಿಯನ್ನು ಓದಿಸಿದ ಗಂಡ, ಆಕೆ ಲವರ್ ಜೊತೆ ಎಸ್ಕೇಪ್
ದರ್ಶನ್ ಸರ್ ನ ಕೇಳೋಕೆ ನನ್ನತ್ರ ಕೆಲ ಪ್ರಶ್ನೆಗಳಿದೆ ಎಂದ ಧ್ರುವ
ಈ ಬಗ್ಗೆ ಮಾತನಾಡಿರುವ ಧ್ರುವ ಸರ್ಜಾ, ದರ್ಶನ್ ಸರ್ ನಮ್ಮ ಸೀನಿಯರ್ ಆಕ್ಟರ್. ಅವರ ಪ್ರಸೆನ್ಸ್, ಆಬ್ಸೆಂಟ್ ಅಲ್ಲೂ ಗೌರವ ಇದೆ. ಆದರೆ, ದರ್ಶನ್ ಅವ್ರಿಗೆ ಒಂದೆರಡು ಪ್ರಶ್ನೆ ಕೇಳಬೇಕಿದೆ. ಆ ಪ್ರಶ್ನೆಗಳನ್ನ ಕ್ಲಿಯರ್ ಮಾಡಿಕೊಳ್ಳದೇ ಮನಸ್ಸಲ್ಲೊಂದು, ಎದುರು ಒಂದು ಮಾತಾಡೋಕ್ ಆಗಲ್ಲ. ಮನಸ್ಸಲ್ಲಿ ಒಂದ್ ಇಟ್ಕೊಂಡು ಯಾರನ್ನೋ ಮೆಚ್ಚಿಸಲು ನಾಟಕ ಆಡುವ ಅವಶ್ಯಕತೆ ನನಗೆ ಇಲ್ಲ. ಆರ್ಟಿಫಿಸಿಯಲ್ ಆಗಿ ಫೇಕ್ ಆಗಿ ಇರೋಕ್ ನನಗೆ ಬರಲ್ಲ. ನಮ್ಗೂ ಸೆಲ್ಫ್ ರೆಸ್ಪೆಕ್ಟ್, ಸ್ವಾಭಿಮಾನ ಇದೆ ಅಲ್ವಾ. ದರ್ಶನ್ ಸರ್ ಸೀನಿಯರ್ ಆಕ್ಟರ್. ಅವರ ಬಗ್ಗೆ ಗೌರವ ಇದ್ದೇ ಇರುತ್ತೆ’ ಎಂದು ಹೇಳುವ ಮೂಲಕ ಮತ್ತಷ್ಟು ಅನುಮಾನ ಮೂಡಿಸಿದ್ದಾರೆ ಧ್ರುವ. ಅಲ್ದೇ ಧ್ರುವ ಮತ್ತು ದರ್ಶನ್ ಅವರ ಮನಸ್ತಾಪಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅವರ ಮಧ್ಯ ಮತ್ತಷ್ಟು ಮನಸ್ತಾಪ ಆಗುವಂತೆ ಕೆಲವರು ಕುತಂತ್ರ ನಡೆಸಿದ್ದಾರಂತೆ. ಅವರಿಗೆ ಧ್ರುವ ಖಡಕ್ ವಾರ್ನಿಂಗ್ ನೀಡಿದ್ದಾರೆ. ಈ ಬೆಳವಣಿಗೆ ಆದ್ಮೇಲೆ ನನ್ನ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಆಗಿವೆ. ನಮ್ಮ ನಮ್ಮಲ್ಲೇ ವೈರಿಂಗ್ ಮಾಡ್ತಿದ್ದಾರೆ. ಈ ರೀತಿ ಮಾಡುವವರಿಗೆ ಒಂದು ರಿಕ್ವೆಸ್ಟ್. ದಯವಿಟ್ಟು ನನ್ನ ಹತ್ರ ತಗಲಾಕ್ಕೊಬೇಡಿ. ಫೇಕ್ ಆಕೌಂಟ್ ಕ್ರಿಯೇಟ್ ಮಾಡ್ತಿರೋರು ಎಚ್ಚರವಾಗಿರಿ ಅಂತ ಮಧ್ಯೆ ಕಡ್ಡಿ ಅಲ್ಲಾಡಿಸುವ ಕೆಲಸ ಮಾಡ್ತಿರೋರಿಗೆ ಸರಿಯಾಗಿಯೇ ಧ್ರುವ ಎಚ್ಚರಿಕೆಯನ್ನು ನೀಡಿದ್ದಾರೆ.
ದರ್ಶನ್ ಹಾಗೂ ಧ್ರುವ ನಡುವೆ ಕೋಲ್ಡ್ ವಾರ್ ನಡೀತಾ ಇದೆ ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕಾವೇರಿ ಹೋರಾಟ ಸಂದರ್ಭದಲ್ಲಿ ಧ್ರುವ ಮತ್ತು ದರ್ಶನ್ ಹತ್ತಿರದಲ್ಲೇ ಕುಳಿತುಕೊಂಡಿದ್ದರೂ ಇಬ್ಬರೂ ಮಾತನಾಡಲಿಲ್ಲ ಎನ್ನುವುದು ಇದಕ್ಕೆ ಸಾಕ್ಷಿಯಾಗಿತ್ತು. ಇನ್ನು ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಬತ್ತಿ ಇಡೋದಕ್ಕೆ ಶುರು ಮಾಡಿದ್ರು, ಅದರ ಜೊತೆಗೆ ಧ್ರುವ ಮತ್ತು ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆರೋಪ ಪ್ರತ್ಯಾರೋಪವನ್ನೂ ಮಾಡುತ್ತಿದ್ದರು. ಇದಾದ್ರೂ ಒಂದು ಪಕ್ಷ ನೇರವಾದ ಹೋರಾಟ ಅನ್ನಬಹುದು ಆದ್ರೆ ಮತ್ತು ಕೆಲವರಂತೂ ಧ್ರುವ ಅವ್ರ ಹೆಸರಿನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿ ದರ್ಶನ್ ಹಾಗೂ ಧ್ರುವ ಅವ್ರಿಗೆ ಇನ್ನು ಆಗದಂತೆ ಮಾಡಲು ಹೊಂಚು ಹಾಕಿ ಕುತ್ತಿದ್ರು.
ಹೀಗಾಗಿ ಇದೆಲ್ಲವನ್ನ ಮನಗಂಡ ಧ್ರುವ ಸರ್ಜಾ ಇದೀಗ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿ, ಇರೋದನ್ನ ಇದ್ದ ಹಾಗೆ ಹೇಳಿದ್ದಾರೆ. ಅಲ್ದೇ ದರ್ಶನ್ ಅವ್ರ ಬಗ್ಗೆ ಮತ್ತಷ್ಟು ಮಾತನಾಡಿರುವ ಧ್ರುವ ನಮ್ಮ ಸಿನಿಮಾಗಳಿಗೆ ಅವ್ರು ಡಬ್ಬಿಂಗ್ ಮಾಡಿಕೊಟ್ಟಿದ್ದಾರೆ. ಹೀಗಾಗಿ ಮನಸ್ಸಲ್ಲಿ ಒಂದು ಇಟ್ಕೊಂಡು ಹೊರಗೊಂದು ಇಟ್ಕೊಂಡು ನಾಟಕ ಆಡೋಕ್ ನನ್ಗೆ ಬರಲ್ಲ. ಅದು ನಾನಲ್ಲ ಅನ್ಸುತ್ತೆ. ನನಗೆ ದರ್ಶನ್ ಅವ್ರ ಬಳಿ ಕೇಳಲು ಕೆಲ ಪ್ರಶ್ನೆಗಳಿವೆ. ನಾನು ಅವರ ಬಳಿ ಮಾತನಾಡಿ ನೋಡ್ತೀನಿ. ಮನಸ್ತಾಪ ಕ್ಲಿಯರ್ ಆಗಬಹುದು, ಇಲ್ಲ ಆಗದೇ ಇರಬಹುದು. ಅದು ನಮ್ಮ ವೈಯಕ್ತಿಕ ಅಂತ ಹೇಳುವ ಮೂಲಕ ಮನಸ್ತಾಪ ಇರುವುದನ್ನು ಪರೋಕ್ಷವಾಗಿ ಧ್ರುವ ಒಪ್ಪಿಕೊಂಡಿದ್ದಾರೆ. ಆದ್ರೆ ಮುಂದೆ ಮತ್ತೆಲ್ಲಿ ಹೋಗಿ ನಿಲ್ಲುತ್ತೋ ಕಾದು ನೋಡಬೇಕು.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram