Dhruva Sarja Daughter: ಸ್ಯಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫಸ್ಟ್ ಟೈಮ್ ತಮ್ಮ ಮಗಳ ಫೋಟೋಗಳನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಮಗಳ ಮಾತನಾಡುವ ರೀತಿಯಲ್ಲಿ ಕೆಲವೊಂದಷ್ಟು ಸಾಲುಗಳನ್ನ ಬರೆದುಕೊಂಡಿದ್ದಾರೆ. ಬರೋಬ್ಬರಿ ಮಗಳು ಹುಟ್ಟಿದ 7ತಿಂಗಳ ಬಳಿಕ ಮಗುವಿನ ಮುಖವನ್ನ ಧ್ರುವ ರಿವಿಲ್ ಮಾಡಿದ್ದಾರೆ. ಅದರಲ್ಲೂ ಕೂಡ ಧ್ರುವ ಸರ್ಜಾ ಜಾಣ್ಮೆಯನ್ನ ತೋರಿದ್ದು ತಮ್ಮ ಮಗಳು ಒಂದು ತಿಂಗಳ ಮಗುವಾಗಿದ್ದಾಗ ತೆಗೆಸಿರುವಂತಹ ಫೋಟೋಗಳನ್ನೇ ಶೇರ್ ಮಾಡಿಕೊಂಡಿದ್ದಾರೆ. ಹಾಗಾದ್ರೆ ಧ್ರುವ ಪ್ರೇರಣಾ ದಂಪತಿ ಮಗಳು ಹೇಗಿದ್ದಾಳೆ. ಹೇಗೆಲ್ಲ ಫೋಟೋಶೂಟ್ ಮಾಡಿಸಿದ್ರು ಧ್ರುವ ಎಲ್ಲವನ್ನ ನೋಡೋಣ ಬನ್ನಿ.
ಮುದ್ದು ಮಗಳಿಗೆ ಭರ್ಜರಿ ಫೋಟೋಶೂಟ್ ಮಾಡಿಸಿರುವ ಧ್ರುವ ದಂಪತಿ
ಹೌದು ನಮ್ಮ ಸ್ಯಾಂಡಲ್ವುಡ್ ಆಕ್ಷನ್ ಪ್ರಿನ್ಸ್ ಅಂತಾನೆ ಕರೆಸಿಕೊಳ್ಳುವ ಧ್ರುವ ಸರ್ಜಾ ಅವ್ರ ಪ್ರಿನ್ಸೆಸ್ ಹೇಗಿದ್ದಾಳೆ ಅಂತ ನೋಡುವ ಕುತೂಹಲ ಎಲ್ಲರಿಗೂ ಇದಿದಂತೂ ಸತ್ಯ ಅದ್ರಲ್ಲೂ ಧ್ರುವ ಅವ್ರ ಮಗಳು ಹೇಗಿದ್ದಾಳೆ ಅಂತ ನೋಡಲು ಅಭಿಮಾನಿಗಳು ಕಾಯ್ತಿದ್ರು. ಇದೀಗ ಅಭಿಮಾನಿಗಳ ಆಶೆಯನ್ನ ನಟ ಧ್ರುವ ಸರ್ಜಾ ಈಡೇರಿಸಿದ್ದು, ತಮ್ಮ ಮಗಳ ಮುಖ ರಿವೀಲ್ ಮಾಡಿದ್ದಾರೆ. ಈ ಮೂಲಕ ಆಕ್ಷನ್ ಪ್ರಿನ್ಸ್ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಂತಾಗಿದೆ. ಧ್ರುವ ಸರ್ಜಾ ಅವ್ರ ಮಗಳು ಹುಟ್ಟಿ ಇದೀಗ 7 ತಿಂಗಳು ಕಳೆದಿದೆ. ಇದೀಗ ನಟ ಧೃವ ಮೊದಲ ಬಾರಿಗೆ ಮಗಳ ಮುಖವನ್ನ ರಿವೀಲ್ ಮಾಡಿದ್ದಾರೆ. ಮುದ್ದು ಮಗಳಿಗೆ ಫೋಟೋಶೂಟ್ ಮಾಡಿಸಿದ್ದ ಫೋಟೋಗಳನ್ನೇ ನಟ ಧ್ರುವ ಹಂಚಿಕೊಂಡಿದ್ದು, ಧ್ರುವ ಪ್ರೇರಣಾ ದಂಪತಿಯ ಪುಟ್ಟ ಪೋರಿ ತುಂಬಾ ಮುದ್ದಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋಗಳು ಕೂಡ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ.
ಇನ್ನು ಬಾಲ್ಯದ ಗೆಳತಿ ಪ್ರೇರಣಾರನ್ನ ಪ್ರೀತಿಸಿ ನಟ ಧ್ರುವ ಸರ್ಜಾ, 2019ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ರು, ಮದುವೆಯಾದ ನಂತರ ತಂದೆಯಾಗುತ್ತಿರುವ ಸಿಹಿ ಸುದ್ದಿಯನ್ನು ಧ್ರುವ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ಬಳಿಕ ಮುದ್ದು ಮಗಳು ಜನಿಸಿದ ಗುಡ್ ನ್ಯೂಸ್ ಅನ್ನು ನಟ ಹಂಚಿಕೊಂಡಿದ್ದರು. ಆದರೆ ಎಲ್ಲಿಯೂ ಧ್ರುವ ಸರ್ಜಾ ಮಗಳ ಫೋಟೋಗಳನ್ನ ಹಂಚಿಕೊಂಡಿರಲಿಲ್ಲ. ಇದೀಗ ಬರೋಬ್ಬರಿ ಮಗು ಜನಿಸಿ 7 ತಿಂಗಳು ಕಳೆದಿದೆ. ಈಗ 7 ತಿಂಗಳ ಬಳಿಕ ಮಗಳ ಮೊದಲ ಫೋಟೋವನ್ನು ಶೇರ್ ಮಾಡಿದ್ದಾರೆ. ಅಂದಹಾಗೆ ಇದು 7 ತಿಂಗಳ ಮಗುವಿನ ಫೋಟೋವಲ್ಲ. ಧ್ರುವ ಅವ್ರ ಮಗಳು ಒಂದು ತಿಂಗಳಿದ್ದಾಗ ಕ್ಲಿಕ್ ಮಾಡಿದ ಫೋಟೋ ವನ್ನ ಮಾತ್ರ ಧ್ರುವ ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: ಹೆಣ್ಣು ಮಗುವನ್ನ ದತ್ತು ಪಡೆದ ನಟಿ ಅಭಿರಾಮಿ! ರಕ್ತ ಕಣ್ಣೀರು ಸಿನಿಮಾ ಖ್ಯಾತಿಯ ನಟಿ ಅಭಿರಾಮಿ ಅವ್ರ ಮಾತೃ ಪ್ರೀತಿ
ಮಗಳ ಫೋಟೋ ಹಂಚಿಕೊಂಡು ಹೇಳಿದ್ದೇನು?
ಇನ್ನು ಫೋಟೋಗಳನ್ನ ಶೇರ್ ಮಾಡಿಕೊಂಡಿರುವ ನಟ ಧ್ರುವ ಸರ್ಜಾ ಮಗಳೇ ಮಾತಾನಾಡಿರುವಂತೆ ಕ್ಯಾಪ್ಶನ್ ಕೂಡ ಬರೆದುಕೊಂಡಿದ್ದಾರೆ. ಹೌದು, ಹಲೋ ಸ್ನೇಹಿತರೆ ಹಾಗೂ ಕುಟುಂಬದವರೆ, ನನಗೆ ಇನ್ನೂ ಹೆಸರಿಟ್ಟಿಲ್ಲ. ನನಗೆ ಈಗ 7 ತಿಂಗಳು. ನನ್ನ ಪಯಣವನ್ನು ಹಂಚಿಕೊಳ್ಳಲು ಖುಷಿ ಆಗುತ್ತದೆ. ಒಂದು ತಿಂಗಳ ಮಗುವಾಗಿದ್ದಾಗ ಕ್ಲಿಕ್ ಮಾಡಿದ ಕೆಲವು ಫೋಟೋಗಳನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದು ಬರೆದಿದ್ದಾರೆ. ಅಲ್ದೇ ನಾನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಫೋಟೋಗಳು ಮತ್ತು ಅಪ್ಡೇಟ್ ಹಂಚಿಕೊಳ್ಳುತ್ತೇನೆ. ನಿಮ್ಮ ಆಶೀರ್ವಾದ ಇರಲಿ. ಜೈ ಹನುಮಾನ್ ಅಂತ ನಟ ಧ್ರುವ ಸರ್ಜಾ ಮಗಳೇ ಮಾತನಾಡಿರುವಂತೆ ಬರೆದುಕೊಂಡಿದ್ದಾರೆ.
ಇನ್ನು ಈ ಹಿಂದೆ ನಟ ದ್ರುವ ತಮ್ಮಗೆ ಹೆಣ್ಣು ಮಗುವೇ ಬೇಕು ಅಂತ ಕೇಳಿಕೊಂಡಿದ್ರು ಅದರಂತೆ ಅವ್ರ ಆರಾಧ್ಯ ದೈವ ಭಜರಂಗಿಯ ಕೃಪೆಯಿಂದ ಅಂದುಕೊಂಡಂತೆ ಹೆಣ್ಣು ಮಗುವಿನ ಅಪ್ಪ ಕೂಡ ಆದ್ರೂ. ಹೌದು ನನಗೆ ಈಗಾಗಲೇ ಮಗ ಇದ್ದಾನೆ. ನಮ್ಮ ಅಣ್ಣನ ಮಗನೇ ನನಗೂ ಮಗ. ಮನೆಗೆ ಒಬ್ಬಳು ಮಗಳು ಬೇಕು ಅನ್ನೋ ಆಸೆ ನನಗೂ, ನನ್ನ ಹೆಂಡತಿಗೂ ಇದೆ ಅಂತ ಈ ಹಿಂದೆ ಧ್ರುವ ಸರ್ಜಾ ಹೇಳಿದ್ದರು. ಅಪ್ಪನಿಲ್ಲದ ರಾಯನ್ ರಾಜ್ ಸರ್ಜಾ ನಿಗೆ ಧ್ರುವ ಚಿಕ್ಕಪ್ಪನಾದ್ರೂ ಅಪ್ಪನಷ್ಟೇ ಪ್ರೀತಿಯನ್ನ ಕೊಟ್ಟು ಅತ್ತಿಗೆ ಹಾಗೂ ರಾಯನ್ ಇಬ್ಬರ ಮೇಲು ಬಹಳ ಪ್ರೀತಿ ಇಟ್ಟುಕೊಂಡಿದ್ದಾರೆ. ಇನ್ನು ಈ ಪ್ರೀತಿಗೆ ಯಾರ ದೃಷ್ಠಿ ಬೀಳಬಾರದೇಬಂತೆ ಇದೀಗ ಧ್ರುವ ಅವ್ರಿಗೆ ಹೆಣ್ಣು ಮಗುವನ್ನ ದೇವರೇ ನೀಡಿದಂತಿದೆ. ಒಟ್ಟಿನಲ್ಲಿ ಈ ಕುಟುಂಬಕ್ಕೆ ದೇವರು ಒಳ್ಳೇದನ್ನ ಮಾಡಲಿ.
ಇದನ್ನೂ ಓದಿ: ಕಲರ್ಸ್ ಕನ್ನಡ ಹಾಗೂ ಜೀ ಕನ್ನಡದ ಪ್ರಮುಖ 2 ಧಾರಾವಾಹಿಗಳು ಮುಕ್ತಾಯ!!
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram