ಧ್ರುವ ಸರ್ಜಾ ಮಗಳ ಮೊದಲ ವರ್ಷದ ಬರ್ತಡೇ ಸಂಭ್ರಮ; ಫೋಟೋ ಮತ್ತು ವಿಡಿಯೋ ಇಲ್ಲಿದೆ ನೋಡಿ

ಸರ್ಜಾ ಕುಟುಂಬದಲ್ಲಿ ಇದೀಗ ಸಂತೋಷ ಮನೆ ಮಾಡಿದ್ದು ಅಣ್ಣನನ್ನು ಕಳೆದುಕೊಂಡ ಮೇಲೆ ತುಂಬಾ ನೋವಿನಲ್ಲಿದ್ದ ಧ್ರುವ ಸರ್ಜಾ(Dhruva Sarja) ಬಳಿಕ ಅಣ್ಣನ ಮಗ ರಾಯನ್ ಹುಟ್ಟಿದ ಮೇಲೆ ಸರ್ಜಾ ಕುಟುಂಬದಲ್ಲಿ ಮತ್ತೆ ಚಿರು ಹುಟ್ಟಿ ಬಂದಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರು. ಕಳೆದ ವರ್ಷ ಅಕ್ಟೋಬರ್ ಎರಡನೇ ತಾರೀಖಿನೊಂದು ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗೆ ಹೆಣ್ಣು ಮಗು ಜನಿಸಿತ್ತು ಮಗಳೆಂದರೆ ಧ್ರುವ ಗೆ ಸಕ್ಕತ್ ಇಷ್ಟ ನಿನ್ನೆ ಧ್ರುವ ಸರ್ಜಾ ಮಗಳ ಮೊದಲ ವರ್ಷದ ಹುಟ್ಟುಹಬ್ಬ ನಡೆದಿದ್ದು ಅದ್ದೂರಿಯಾಗಿ ಮಗಳ ಬರ್ತಡೇ ಯನ್ನು ಧ್ರುವ ಮಾಡಿದ್ದಾರೆ.

WhatsApp Group Join Now
Telegram Group Join Now

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಧ್ರುವ ಸರ್ಜಾ ಮಗಳ ಹೆಸರನ್ನು ಇನ್ನೂ ರಿವಿಲ್ ಮಾಡಿಲ್ಲ ಮಗಳಿಗೆ ಪ್ರೀತಿಯಿಂದ ‘ಕಣ್ಮಣಿ’ ಎಂದು ಕರೆಯುತ್ತಾರೆ. ನಿನ್ನೆ ಮೇಘನಾ ರಾಜ್ ಧ್ರುವ ಮಗಳ ವಿಡಿಯೋವನ್ನು ಹಂಚಿಕೊಂಡು ಪುಟಾಣಿಗೆ ವಿಶ್ ಮಾಡಿದ್ದಾರೆ ನಿನ್ನೆ ಬರ್ತಡೇ ಬಹಳ ಸಡಗರ ಸಂಭ್ರಮದಿಂದ ನಡೆದಿದ್ದು ಸಾಕಷ್ಟು ಕನ್ನಡ ನಟ ನಟಿಯರು ಹಾಗೂ ಧ್ರುವ ಸರ್ಜಾ ಅವರ ಸ್ನೇಹಿತರು ಸಂಬಂಧಿಕರು ಬರ್ತಡೆಗೆ ಹೋಗಿ ಪುಟ್ಟ ಕಂದನಿಗೆ ಆಶೀರ್ವಾದ ಮಾಡಿದ್ದಾರೆ. ನಿನ್ನೆ ಮಗಳ ಮುದ್ದಾದ ಫೋಟೋವನ್ನು ಹಂಚಿಕೊಂಡು ಹ್ಯಾಪಿ ಬರ್ತಡೆ ಮಗಳೇ ಎಂದು ಬರೆದುಕೊಂಡಿದ್ದಾರು.

ಗೌರಿ-ಗಣೇಶ ಹಬ್ಬದಂದು ಧ್ರುವ ಸರ್ಜಾ ಅವರಿಗೆ ಗಂಡು ಮಗು ಜನಿಸಿತು. ಮಗನ ಆಗಮದಿಂದ ಧ್ರುವ ಸರ್ಜಾ ಮನೆಯಲ್ಲಿ ಸಂತೋಷ ತುಂಬಿತ್ತು. ಸರ್ಜಾ ಕುಟುಂಬದಲ್ಲಿ ಅಜ್ಜಿಯ ರೂಪದಲ್ಲಿ ದ್ರುವ ಮಗಳು ಬಂದಿದ್ದು, ಚಿರು ರೂಪದಲ್ಲಿ ರಾಯನ್ ಬಂದಿದ್ದಾನೆ. ಧ್ರುವ ಮಗಳ ಮೊದಲ ವರ್ಷದ ಹುಟ್ಟು ಹಬ್ಬದ ಫೋಟೋ ಹಾಗೂ ವಿಡಿಯೋಗಳನ್ನು ನೀವಿಲ್ಲಿ ನೋಡುತ್ತಿರಬಹುದು ಮೇಘನಾ ರಾಜ್ ಕೂಡ Instagram ನಲ್ಲಿ ಕುಟ್ಟಿಮಾ ಮತ್ತು ಕಣ್ಮಣಿ ಎಂದು ಫೋಟೋವೊಂದನ್ನು ಹಂಚಿಕೊಂಡಿದ್ದರು.

ಧ್ರುವ ಸರ್ಜಾ(Dhruva Sarja) ಮಗಳ ನಾಮಕರಣ ಈಗಾಗಲೇ ನಡೆದಿದ್ದು ಆದರೆ ಹೆಸರು ಮಾತ್ರ ಇನ್ನೂ ರಿವೀಲ್ ಮಾಡಿಲ್ಲ ಆಗಾಗ ಮಗಳು ಆಟವಾಡುವ ಫೋಟೋ ಹಾಗು ವಿಡಿಯೋಗಳನ್ನು ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರು ಹಂಚಿಕೊಳ್ಳುತ್ತಿರುತ್ತಾರೆ. ಒಟ್ಟಿನಲ್ಲಿ ಸಾಕಷ್ಟು ದುಃಖ, ನೋವು ತಿಂದ ಸರ್ಜಾ ಕುಟುಂಬ ಈಗ ಮುದ್ದು ಪುಟಾಣಿಗಳ ಆಗಮನದಿಂದ ಸ್ವಲ್ಪ, ಸ್ವಲ್ಪವೇ ಎಲ್ಲಾ ನೋವುಗಳನ್ನು ಮರೆತು ಸಂತೋಷದ ಕಡೆಗೆ ಸಾಗುತ್ತಿದ್ದಾರೆ.

ಇದನ್ನೂ ಓದಿ: ಒಂದೇ ವೇದಿಕೆಯಲ್ಲಿದ್ರೂ ದರ್ಶನ್ ಮತ್ತು ಧ್ರುವ ಸರ್ಜಾ ಮಾತನಾಡಲಿಲ್ಲ ಯಾಕೆ? ಇದರ ಹಿಂದೆ ಬಲವಾದ ಕಾರಣ ಇತ್ತು ಎಂದ ಪ್ರಥಮ್

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗೋರು ಓದಲೇಬೇಕಾದ ಸುದ್ದಿ; ಎರಡು ಮೂರು ದಿನದಿಂದ ಅಲ್ಲಿ ಏನಾಗ್ತಿದೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram