Dhruva Sarja Daughter New Video: ಮೊನ್ನೆಯಷ್ಟೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಗಳೇ ಮಾತಾನಾಡಿರುವಂತೆ ಕ್ಯಾಪ್ಶನ್ ಬರೆದು ಕೆಲವೊಂದಷ್ಟು ಹಳೆಯ ಫೋಟೋಗಳನ್ನ ಹಂಚಿಕೊಂಡಿದ್ರು. ಆ ಕ್ಯಾಪ್ಶನ್ ನಲ್ಲಿ, ಹಲೋ ನನ್ನ ಸ್ನೇಹಿತರೆ ಹಾಗೂ ಕುಟುಂಬದವರೆ, ನನಗೆ ಇನ್ನೂ ಹೆಸರಿಟ್ಟಿಲ್ಲ. ನನಗೆ ಈಗ 7 ತಿಂಗಳು. ನನ್ನ ಪಯಣವನ್ನು ಹಂಚಿಕೊಳ್ಳಲು ಖುಷಿ ಆಗುತ್ತದೆ. ಒಂದು ತಿಂಗಳ ಮಗುವಾಗಿದ್ದಾಗ ಕ್ಲಿಕ್ ಮಾಡಿದ ಕೆಲವು ಫೋಟೋಗಳನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ, ಅಲ್ದೇ ನಾನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಫೋಟೋಗಳು ಮತ್ತು ಅಪ್ಡೇಟ್ ಹಂಚಿಕೊಳ್ಳುತ್ತೇನೆ. ನಿಮ್ಮ ಆಶೀರ್ವಾದ ಇರಲಿ. ಜೈ ಹನುಮಾನ್ ಅಂತ ನಟ ಧ್ರುವ ಸರ್ಜಾ ಮಗಳೇ ಮಾತನಾಡಿರುವಂತೆ ಬರೆದುಕೊಂಡಿದ್ರು. ಇದನ್ನ ನೋಡಿದ ಧ್ರುವ ಮತ್ತು ಸರ್ಜಾ ಕುಟುಂಬದ ಅಭಿಮಾನಿಗಳು ಈಗ ನಿಮ್ಮ ಮಗಳು ಹೇಗಿದ್ದಾಳೆ ಅಂತ ನೋಡಲು ಕಾಯುತ್ತೇದ್ದೇವೆ ಅಂತೇಳಿ ಕಮೆಂಟ್ಸ್ ಮಾಡಿದ್ರು, ಇದೀಗ ಅದೇ ದಿನ ಬಂದೆ ಬಿಟ್ಟಿದೆ. ಮೊದಲ ಬಾರಿಗೆ 7ತಿಂಗಳ ನಂತರ ಧ್ರುವ ಸರ್ಜಾ ತಮ್ಮ ಪುಟ್ಟ ರಾಜಕುಮಾರಿಯ ರೀಸೆಂಟ್ ಫೋಟೋಗಳನ್ನ ರಿವಿಲ್ ಮಾಡಿದ್ದು, ಅಭಿಮಾನಿಗಳಿಗೆ ತಮ್ಮ ಮಗಳ ಮುದ್ದು ಮುಖದ ದರ್ಶನ ಮಾಡಿಸಿದ್ದಾರೆ. ಹಾಗಾದ್ರೆ ಹೇಗಿದ್ದಾಳೆ ಸರ್ಜಾ ಕುಟುಂಬದ ಪುಟ್ಟ ರಾಜಕುಮಾರಿ, ಅಭಿಮಾನಿಗಳು ಹೇಳಿದ್ದೇನು ಎಲ್ಲವನ್ನ ನೋಡೋಣ ಬನ್ನಿ..
ಹೌದು ಕಳೆದ ವರ್ಷ ಧ್ರುವ ಸರ್ಜಾ ಪತ್ನಿ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕ್ಷನ್ ಪ್ರಿನ್ಸ್‌ಗೆ ಮಗಳು ಜನಿಸಿದ್ದಾಳೆ ಎಂದು ತಿಳಿದ ಅಭಿಮಾನಿಗಳು, ಸೆಲೆಬ್ರಿಟಿಗಳು ದಂಪತಿಗೆ ಶುಭ ಕೋರಿದ್ದರು. ಹಾಗೇ ಮಗುವನ್ನು ನೋಡಲು ಕಾಯುತ್ತಿದ್ದೇವೆ ಎಂದು ಕಮೆಂಟ್ ಮಾಡಿದ್ದರು. ಆದ್ರೆ ಧ್ರುವ ಸರ್ಜಾ ಆಗ್ಲಿ ಪತ್ನಿ ಪ್ರೇರಣಾ ಆಗ್ಲಿ ಎಲ್ಲಿಯೂ ಮಗಳ ಫೋಟೋವನ್ನ ರಿವಿಲ್ ಮಾಡಿರಲಿಲ್ಲ. ಆದರೆ 4ತಿಂಗಳ ನಂತರ ಪತ್ನಿ ಪ್ರೇರಣಾ ಮಗುವಿನ ಮುಖ ಕಾಣದ ಫೋಟೋ ಹಂಚಿಕೊಂಡಿದ್ರು, ಈ ಪೋಟೋಗೆ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಲೈಕ್ಸ್, ಕಮೆಂಟ್ ಮಾಡುತ್ತಾ, ಸರ್ಜಾ ವಂಶದ ಪುಟ್ಟ ರಾಜಕುಮಾರಿ’ ‘ಮಗುವಿನ ಮುಖ ತೋರಿಸಿ’ ‘ಮಗುವಿನ ಹೆಸರೇನು.. ಎಂದೆಲ್ಲಾ ಕೇಳಿದ್ರು ಆಗಲು ಮಗುವಿನ ಫೋಟೋ ರಿವಿಲ್ ಆಗಿರಲಿಲ್ಲ. 7ತಿಂಗಳ ನಂತರ ಧ್ರುವ ಸರ್ಜಾ ಮಗಳಿಗೆ 1ತಿಂಗಳಿದ್ದಾಗ ತೆಗೆದ ಫೋಟೋಗಳನ್ನ ಶೇರ್ ಮಾಡಿಕೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ಫೋಟೋಗಳನ್ನ ಶೇರ್ ಮಾಡೋದಾಗಿ ತಿಳಿಸಿದ್ರು, ಆಗಲು ಕೂಡ ಎಲ್ಲರು ಈಗ ಧ್ರುವ ಅವ್ರ ಮಗಳು ಹೇಗಿರಬಹುದು ಅನ್ನೋ ಲೆಕ್ಕಾಚಾರದಲ್ಲಿದ್ರೂ, ಕೊನೆಗೂ ಧ್ರುವ ತಮ್ಮ ಮುದ್ದು ರಾಜಕುಮಾರಿಯ ಕೆಲವೊಂದಷ್ಟು ಈಗೀನ ಫೋಟೋಗಳನ್ನೇ ಶೇರ್ ಮಾಡಿಕೊಂಡಿದ್ದಾರೆ.
ಮಗಳ ಹೊಸ ವಿಡಿಯೋ ಹಂಚಿಕೊಂಡ ಧ್ರುವ ಸರ್ಜಾ
ಹೌದು ಕನ್ನಡದ ದಯಮಾಡಿ ಮುಗಿಲಾಚೆ ಸ್ವಲ್ಪ ನೋಡಿ ಎಲ್ಲರು ಎನ್ನುವ ಸಾಂಗ್ ನ್ನ ಹಾಕಿ ತಮ್ಮ ಮಗಳ ಅದ್ಭುತ ಕ್ಷಣಗಳ ಫೋಟೋಗಳನ್ನ ಹಾಕಿ ಎಡಿಟ್ ಮಾಡಿರುವ ಬ್ಯೂಟಿಫುಲ್ ವಿಡಿಯೋ ಒಂದನ್ನ ಧ್ರುವ ಸರ್ಜಾ ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ಈಗ ತಮ್ಮ ಮಗಳು ಹೇಗಿದ್ದಾಳೆ ಅನ್ನೋದನ್ನ ಒಂದೊಳ್ಳೆ ವಿಡಿಯೋ ಮೂಲಕ ಅಭಿಮಾನಿಗಳಿಗೆ ಧ್ರುವ ತೋರಿಸಿದ್ದಾರೆ. ಇನ್ನು ಈ ವಿಡಿಯೋ ನೋಡುತ್ತಿದ್ದಂತೆ ಅಭಿಮಾನಿಗಳು ತರೆವರಿ ಕಮೆಂಟ್ಸ್ ಗಳನ್ನ ಮಾಡ್ತಾ ಫುಲ್ ಥ್ರಿಲ್ ಆಗಿದ್ದಾರೆ. ಹೌದು ನಿಮ್ಮ ಮಗಳು ತುಂಬಾ ಮುದ್ದಾಗಿದ್ದಾಳೆ, ಸರ್ಜಾ ಕುಟುಂಬದ ಪುಟ್ಟ ದೇವತೆ, ರಾಜಕುಮಾರಿ, ಧ್ರುವ ಸರ್ಜಾ ಲಿಟಲ್ ಪ್ರಿನ್ಸೆಸ್ ಅಂತ ಹೇಳಿ ಹಾರ್ಟ್ ಮತ್ತೆ ಕಿಸ್ಸಿಂಗ್ ಎಮೋಜಿಗಳನ್ನ ಹಾಕಿ ತುಂಬಾ ಖುಷಿ ಪಡುತ್ತಿದ್ದಾರೆ.
ಇನ್ನು ಧ್ರುವ ಸರ್ಜಾ ಮಗಳು ಹುಟ್ಟಿದ ದಿನವೇ ಬಹಳ ಖುಷಿಯಿಂದ ನನಗೆ ಮೊದಲಿನಿಂದಲೂ ಹೆಣ್ಣುಮಕ್ಕಳು ಎಂದರೆ ಬಹಳ ಗೌರವ. ಆದರೆ ಇದೀಗ ಅದು ದುಪ್ಪಟ್ಟಾಗಿದೆ. ಎಲ್ಲರ ಜೀವನದಲ್ಲೂ ಏನಾದರೂ ಸಮಸ್ಯೆಗಳಿರುತ್ತವೆ. ನಮ್ಮ ಜೀವನದಲ್ಲಿ ಕೂಡಾ ಅಂತಹ ಕಷ್ಟ ಎದುರಾಗಿತ್ತು. ವೈದ್ಯರ ಸಲಹೆಯಿಂದ ಮುದ್ದಾದ ಮಗುವಿಗೆ ನಾವು ತಂದೆ-ತಾಯಿಯಾಗಿದ್ದೇವೆ. ಇಷ್ಟು ದಿನ ನಮ್ಮ ಕುಟುಂಬಕ್ಕೆ ಹೇಗೆ ಪ್ರೀತಿ, ಆಶಿರ್ವಾದ ನೀಡಿದಿರೋ ಇನ್ಮುಂದೆ ನನ್ನ ಮಗುವಿಗೆ ಕೂಡಾ ಆ ಪ್ರೀತಿ, ಆಶಿರ್ವಾದ ಇರಲಿ” ಎಂದು ಧ್ರುವ ಅಭಿಮಾನಿಗಳ ಬಳಿ ಮನವಿ ಮಾಡಿದ್ದರು. ಅಭಿಮಾನಿಗಳು ಸಹ ಇಂದಿಗೂ ಅದನ್ನ ಉಳಿಸಿಕೊಂಡು ಬಂದಿದ್ದು, ಮಗು ಹುಟ್ಟಿದ ದಿನದಿಂದ 7ತಿಂಗಳವರೆಗೂ ಕಾದು ಕೊನೆಗೆ ಮಗುವಿನ ಮುಖವನ್ನ ನೋಡಿ ಖುಷಿ ಪಟ್ಟು, ಹರಸಿ ಆರೈಸಿದ್ದಾರೆ. ಧ್ರುವ ಸರ್ಜಾ ಪ್ರೇರಣಾ ದಂಪತಿಯ ಮುದ್ದು ಮಗಳು ಹೇಗಿದ್ದಾಳೆ ನೀವು ಸಹ ಕಮೆಂಟ್ಸ್ ಮಾಡಿ.
View this post on Instagram
ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ನಾದಬ್ರಹ್ಮ ಯಾಕ್ ಬರ್ತಿಲ್ಲ? ಪ್ರತಿಯೊಂದು ಸೀಸನ್ ನಿಂದಲೂ ಹಂಶಲೇಖ ದೂರ ಉಳಿದಿರೋದ್ಯಾಕೆ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram