Dhruva Sarja: ಸ್ಯಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೇವಲ ನಟನೆಯಿಂದ ಮಾತ್ರವಲ್ಲ ತಮ್ಮ ವ್ಯಕ್ತಿತ್ವದಿಂದಲೂ ಆಗಾಗ ಸುದ್ದಿ ಆಗ್ತಿರ್ತಾರೆ. ಹೌದು ತನ್ನ ಅಣ್ಣ ಚಿರಂಜೀವಿ ಸರ್ಜಾ ಅವ್ರನ್ನ ಅಪ್ಪ ಅಮ್ಮನಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಧ್ರುವ ಬಹಳ ಬೇಗ ತನ್ನ ಅಣ್ಣನ ಕಳೆದುಕೊಳ್ಳುತ್ತಾರೆ. ಅಣ್ಣ ಇಲ್ಲದ ಪ್ರಪಂಚ ಶೂನ್ಯ ಅನ್ನುವಷ್ಟು ದುಃಖಕ್ಕೆ ಜಾರುತ್ತಾರೆ. ಆದರೆ ಅಣ್ಣನ ಪ್ರೀತಿಯ ಮಡದಿ ತನ್ನ ಅತ್ತಿಗೆ ಹಾಗೂ ಅವ್ರ ಹೊಟ್ಟೆಯಲ್ಲಿದ್ದ ಅಣ್ಣ ನ ಕುಡಿಗಾಗಿ ಗಟ್ಟಿ ಮನಸ್ಸು ಮಾಡ್ತಾರೆ. ಅತ್ತಿಗೆ ಹಾಗೂ ಮಗುವನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತ ಅಂದೇ ಶಪಥ ಕೂಡ ಮಾಡ್ತಾರೆ.
ಅದೇ ರೀತಿ ಚಿರು ಮಗ ರಾಯನ್ ನನ್ನ ತಮ್ಮ ಮಗನಂತೆ ಧ್ರುವ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ಮಗ ಇದ್ದಾನೆ ತನಗೆ ಮಗಳು ಹುಟ್ಟಲಿ ಅಂತ ಕೇಳಿಕೊಂಡಿದ್ರು ಇದೀಗ ಮಗಳು ಕೂಡ ಧ್ರುವ ಅವ್ರ ಮನೆ ಮನಸ್ಸು ತುಂಬಿದ್ದು, ಆರತಿಗೊಬ್ಬ ಮಗಳು ಕೀರ್ತಿಗೊಬ್ಬ ಮಗ ಎಂಬಂತೆ ಚಿರು ಇಲ್ಲ ಅನ್ನೋ ನೋವು ಬಿಟ್ರೆ ಧ್ರುವ ಅವ್ರ ಮನೆ ನಂದಗೋಕುಲ ಅಂತಲೇ ಹೇಳಬಹುದು. ಇನ್ನು ಧ್ರುವ ಸರ್ಜಾ ಸಂಬಂಧಗಳಿಗೆ ಎಷ್ಟು ಬೆಲೆ ಕೊಡ್ತಾರೋ ಅಷ್ಟೇ ಸ್ನೇಹಕ್ಕೂ ಬೆಲೆ ಕೊಡ್ತಾರೆ. ಹೌದು ಸದ್ಯ ಈಗ ವೈರಲ್ ಆಗಿರುವಂತಹ ಒಂದು ವಿಡಿಯೋ ಧ್ರುವ ಅವ್ರ ಸ್ನೇಹ ಸಂಪಾದಿಸಿರೋ ಆ ವ್ಯಕ್ತಿ ಎಷ್ಟು ಪುಣ್ಯ ಮಾಡಿರಬೇಕು ಅಂತ ಎಲ್ಲರು ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಸ್ನೇಹಿತನ ಬರ್ತ್ಡೇ ಗೆ ಧ್ರುವ ಕೊಟ್ಟಿರೋ ಭರ್ಜರಿ ಉಡುಗೊರೆ.
ಸ್ನೇಹಿತನಿಗೆ ಸರ್ಪ್ರೈಸ್ ಆಗಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ
ಹೌದು ಧ್ರುವ ಸರ್ಜಾ(Dhruva Sarja) ಅವ್ರು ತಮ್ಮ ಸ್ನೇಹಿತ ಅದರಲ್ಲೂ ಪ್ರಾಣ ಸ್ನೇಹಿತ ಅಶ್ವಿನ್ ಕುಮಾರ್ ಅವ್ರ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ಜೊತೆಗೆ ದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ. ಸದ್ಯ ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಇದೀಗ ವೈರೆಲ್ ಆಗ್ತಿದೆ. ಹೌದು ಸ್ನೇಹಿತ ಅಶ್ವಿನ್ ಜೊತೆಗೆ ಶೋ ರೂಮ್ ಒಂದಕ್ಕೆ ಬರುವ ಧ್ರುವ ಅವ್ರಿಗೆ ದೊಡ್ಡ ಉಡುಗೊರೆಯನ್ನೇ ಕೊಟ್ಟಿದ್ದಾರೆ. ಆದ್ರೆ ಅಶ್ವಿನ್ ಅದನ್ನ ನಿರೀಕ್ಷೆ ಕೂಡ ಮಾಡಿರಲಿಲ್ಲ. ಶೋ ರೂಮ್ ಗೆ ಬಂದ ಸ್ನೇಹಿತನನ್ನ ಕಾರ್ ಮುಂದೆ ನಿಲ್ಲಿಸಿ ಅದು ನಿನಗೆ ಅಂತ ಹೇಳಿ ಹಗ್ ಮಾಡಿ ಧ್ರುವ ವಿಶ್ ಮಾಡ್ತಾರೆ. ಆಗ ಅಶ್ವಿನ್ ಒಂದು ಕ್ಷಣ ಶಾಕ್ ಆಗಿ ಭಾವುಕರಾಗುತ್ತಾರೆ. ನಂತರ ಒಳಗಡೆ ಕರೆದುಕೊಂಡು ಹೋಗಿ ಕೇಕ್ ಕಟ್ ಮಾಡಿಸಿದ್ದಾರೆ. ಸದ್ಯ ಈ ವೀಡಿಯೋನ ಅಶ್ವಿನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ಕೆಲವೊಂದಷ್ಟು ಸಾಲುಗಳನ್ನ ಬರೆದುಕೊಂಡಿದ್ದಾರೆ. ಇದನ್ನ ನೋಡಿ ಪ್ರತಿಯೊಬ್ಬರೂ ಖುಷಿಯಾಗಿದ್ದು ಧ್ರುವ ಅವ್ರು ಕೊಟ್ಟ ಉಡುಗೊರೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಶ್ವಿನ್ ಬರ್ತ್ ಡೇ ಗೆ ವಿಶ್ ಮಾಡ್ತಿದ್ದಾರೆ.
ಹೌದು ಉಡುಗೊರೆ ನೋಡೀ ಭಾವುಕರಾದ ಅಶ್ವಿನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ಸಾಲುಗಳನ್ನ ಬರೆದುಕೊಂಡಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲಿ ಹುಟ್ಟುಹಬ್ಬಗಳು ತುಂಬಾ ವಿಶೇಷ, ನಮ್ಮ ಜೀವನದ ಸ್ಪೆಷಲ್ ವ್ಯಕ್ತಿಗಳು ನಮ್ಮ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸುತ್ತಾರೆ. ಅದೇ ಅದೃಷ್ಟ ನನಗು ಸಿಕ್ಕಿದೆ.. ಇಂತ ಜನಗಳ ಮಧ್ಯೆ ನಾನಿದೀನಿ ಅಂತ ಹೇಳೋಕೆ ಖುಷಿ ಪಡ್ತೀನಿ. ಆದ್ರೆ ಇವತ್ತಿನ ಈ ಜನುಮ ದಿನದ ಸಂಭ್ರಮ ದುಪ್ಪಟ್ಟಾಗಿದೆ. ಅಣ್ಣನಾಗಿ ಸ್ನೇಹಿತನ್ನಾಗಿ ಸದಾ ಜೊತೆಗಿರುವ ಧ್ರುವ ಸರ್ಜಾ ಅವ್ರಿಗೆ ನಾನು ಅಭಾರಿ ಇವತ್ತಿನ ದಿನನ ತುಂಬಾ ವಿಶೇಷವನ್ನಗಿಸಿದ್ದೀರಿ ನನ್ನ ಮನಸು ತುಂಬಿ ಕಣ್ಣು ಒದ್ದೆಯಾಯ್ತು, ತುಂಬಾ ಖುಷಿಯಾಯ್ತು, ಧನ್ಯವಾದಗಳು. ಎಲ್ಲರಿಗೂ ಕೂಡ ಧನ್ಯವಾದಗಳು ಅಂತ ಅಶ್ವಿನ್ ಬರೆದುಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: ಮತ್ತೆ ತೂಕ ಇಳಿಸಿಕೊಂಡ ಗುಂಡಮ್ಮ! ಗುರುತೆ ಸಿಗದಷ್ಟು ತೆಳ್ಳಗಾಗಿದ್ದಾರೆ ಗೀತಾ ಭಾರತಿ ಭಟ್
ಇದನ್ನೂ ಓದಿ: ಗಟ್ಟಿಮೇಳ ವಿಕ್ಕಿ ಪಾತ್ರ ಅಂತ್ಯ! ಕೊನೆಯ ದಿನದ ಶೂಟಿಂಗ್ ಸೆಟ್ ನಲ್ಲಿ ಕಣ್ಣೀರಿಟ್ಟ ವಿಕ್ರಾಂತ್ ಪಾತ್ರಧಾರಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram