2ನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ದಂಪತಿ; ಸೀಮಂತ ಶಾಸ್ತ್ರದ ಫೋಟೋ ಹಂಚಿಕೊಂಡು ಸಂಭ್ರಮಿಸಿದ ಪ್ರೇರಣಾ

ಸ್ಯಾಂಡಲ್‌ವುಡ್‌ನ ಬಹದ್ದೂರ್ ಗಂಡು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕುಟುಂಬದಲ್ಲಿ ಮತ್ತೊಂದು ಸಡಗರ ಶುರುವಾಗಿದೆ. ಕೆಲವೇ ಕೆಲವು ದಿನಗಳಲ್ಲಿ ದ್ರುವ ಮನೆಗೆ ಮತ್ತೊಂದು ಹೊಸ ಅತಿಥಿಯ ಆಗಮನವಾಗಿಲಿದೆ. ಸ್ವತಃ ಈ ವಿಷಯವನ್ನ ದ್ರುವ ಸರ್ಜಾ ವಿಭಿನ್ನ ಜಂಗಲ್ ಥೀಮ್ ನಾ ವಿಡಿಯೋ ಹಂಚಿಕೊಂಡಿದ್ರೆ, ಇತ್ತ ಕಡೆ ಪ್ರೇರಣಾ ಕೂಡ ತಮ್ಮ ಸೀಮಂತ ಶಾಸ್ತ್ರದ ಫೋಟೋವನ್ನ ಹಂಚಿಕೊಂಡು ವಿಷ್ಯವನ್ನ ಬಹಿರಂಗ ಪಡಿಸಿದ್ದಾರೆ. ಹೌದು ಧ್ರುವ ಪತ್ನಿ ಪ್ರೇರಣಾ ಮತ್ತೆ ಗರ್ಭಿಣಿ ಆಗಿದ್ದು, ಧ್ರುವ ದಂಪತಿ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹಾಗಾದ್ರೆ ಪ್ರೇರಣಾಗೆ ಈಗ ಎಷ್ಟು ತಿಂಗಳು ಮೊದಲ ಮಗುವಿಗೆ ಎಷ್ಟು ವರ್ಷ ಹೇಗೆಲ್ಲ ಆಯಿತು ಸೀಮಂತ ಶಾಸ್ತ್ರ, ಸುದ್ದಿ ತಿಳಿದ ಅಭಿಮಾನಿಗಳ ರಿಯಾಕ್ಷನ್ ಹೇಗಿತ್ತು ನೋಡೋಣ.

WhatsApp Group Join Now
Telegram Group Join Now

ಹೌದು ಪ್ರೇರಣಾ ಶಂಕರ್ ಈಗ ಎಂಟು ತಿಂಗಳು ತುಂಬು ಗರ್ಭಿಣಿ ಅಂತ ಹೇಳಲಾಗ್ತಿದ್ದು, ಇದೆ ತಿಂಗಳಲ್ಲಿ ಧ್ರುವ ದಂಪತಿ ಎರಡನೇ ಮಗುವಿನ ತಂದೆ ತಾಯಿಯಾಗಿ, ಮತ್ತೊಂದು ಮಗುವನ್ನ ವೆಲ್ ಕಮ್ ಮಾಡಲಿದ್ದಾರೆ. ಇನ್ನು ಇದೇ ಕಾರಣಕ್ಕಾಗಿ ಆಕ್ಷನ್ ಪ್ರಿನ್ಸ್ ಮನೆಯಲ್ಲಿ ಖುಷಿ ಹೆಚ್ಚಾಗಿ. ಹೊಸ ಅತಿಥಿ ಆಗಮನಕ್ಕೆ ಕಾಯ್ತಾ ಇದ್ದಾರೆ.ಇನ್ನು ಒಂದು ವರ್ಷದ ಹಿಂದೆ ಮಹಾಲಕ್ಷ್ಮಿಯನ್ನ ಮನೆತುಂಬಿಸಿಕೊಂಡಿದ್ದ ಧ್ರುವ ಫ್ಯಾಮಿಲಿ ಈ ಭಾರಿ ರಾಜಕುಮಾರನ ಆಗಮನ ನಿರೀಕ್ಷೆಯಲ್ಲಿದ್ದಾರೆ. ಹೌದು 2ನೇ ಮಗುವಿನ ನಿರೀಕ್ಷೆಯಲ್ಲಿರೋ ಸರ್ಜಾ ಕುಟುಂಬಕ್ಕೆ ಸೆಪ್ಟೆಂಬರ್ ನಲ್ಲಿ ಅಂದ್ರೆ ಇದೆ ತಿಂಗಳು ರಾಜಕುಮಾರ ಅಥವಾ ರಾಜಕುಮಾರಿಯ ಆಗಮನ ಆಗುತ್ತೆ.

ಇದನ್ನೂ ಓದಿ: ಕೆಲಸಕ್ಕೆಂದು ವಿದೇಶಕ್ಕೆ ಹೋದವರ ಪಾಡು ಏನಾಯ್ತು ಗೊತ್ತಾ? ಕಂಪನಿಯಲ್ಲಿ ಕೆಲಸಕ್ಕೆಂದು ಕರೆಸಿ ಅಲ್ಲಿ ಏನೆಲ್ಲಾ ಮಾಡಿಸ್ತಾರೆ ನೋಡಿ?

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ವಿಭಿನ್ನ ಥೀಮ್ ಮೂಲಕ ವಿಷಯ ಹಂಚಿಕೊಂಡ ಆಕ್ಷನ್ ಪ್ರಿನ್ಸ್

ಹೀಗಾಗಿ ಈ ವಿಚಾರವನ್ನ ಬಹಳ ವಿಭಿನ್ನವಾಗಿ ತಿಳಿಸಲು ಪ್ಲಾನ್ ಮಾಡಿದ್ದ ಧ್ರುವ ಜಂಗಲ್ ಥೀಮ್ ನಲ್ಲಿ ವಿಚಾರವನ್ನ ಶೇರ್ ಮಾಡಿಕೊಂಡಿದ್ದಾರೆ. ಹೌದು ತನ್ನ ಪತ್ನಿ ಪ್ರೇರಣಾ ಹಾಗು ಮಗಳ ಜೊತೆ ಧ್ರುವ ಸ್ಪೆಷಲ್ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ. ವಿಭಿನ್ನವಾದ ಜಂಗಲ್ ಥೀಮ್ ಇದಾಗಿದ್ದು, ಹಾಟ್ ಏರ್ ಬಲೂನ್ ಏರಿ ಫೋಟೋ ಶೂಟ್ ಮಾಡಿ ನಮ್ಮನೆಯಲ್ಲಿ ಮತ್ತೊಂದು ಸಂಭ್ರಮ ಶುರುವಾಗುತ್ತಿದೆ ಅಂತ ಸರ್ಪ್ರೈಸ್ ಸುದ್ದಿ ಹೇಳಿದ್ದಾರೆ. ಹೌದು ಈ ವಿಡಿಯೋ ಬಹಳ ವಿಶೇಷವಾಗಿದ್ದು, ವಿಡಿಯೋ ನೋಡಲು ಶುರು ಮಾಡಿದವರು ಕುತೂಹಲದಿಂದಲೇ ವಿಡಿಯೋವನ್ನ ನೋಡುವಂತೆ ಥೀಮ್ ರೆಡಿ ಮಾಡಿ ವಿಭಿನ್ನವಾಗಿ ತಮ್ಮ ಖುಷಿಯನ್ನ ಅನಾವರಣ ಮಾಡಿದ್ದಾರೆ. ಅಲ್ದೇ ಈ ವೀಡಿಯೋವನ್ನ ಆ್ಯಕ್ಷನ್ ಪ್ರಿನ್ಸ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಧ್ರುವ ದಂಪತಿಗೆ ಶುಭಾಷಯಗಳ ಮಹಾಪೂರವೇ ಹರಿದು ಬರ್ತಿದೆ.

 

View this post on Instagram

 

A post shared by Dhruva Sarja (@dhruva_sarjaa)

ಸದ್ಯ ಮಾರ್ಟಿನ್ ಹಾಗೂ ಕೆಡಿ ಸಿನಿಮಾದ ಸರ್ಪ್ರೈಸ್ಗೆ ಕಾಯುತ್ತಿದ್ದ ಫ್ಯಾನ್ಸ್ಗೆ ಈ ಸುದ್ದಿ ಕೇಳಿ ದಿಲ್ ಖುಷ್ ಆಗಿದೆ. ಅದ್ರಲ್ಲೂ ವಿಭಿನ್ನವಾಗಿ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಬಗ್ಗೆ ದ್ರುವ ಹೇಳಿರೋದು ಮತ್ತಷ್ಟು ಖುಷಿಯನ್ನ ಹೆಚ್ಚಿಸಿದೆ. ಒಂಡು ಕಡೆ ಧ್ರುವ ವಿಡಿಯೋ ಹಂಚಿಕೊಂಡ್ರೆ ಇತ್ತ ಕಡೆ ಪತ್ನಿ ಪ್ರೇರಣಾ ತಮ್ಮ ಸೀಮಂತ ಶಾಸ್ತ್ರದ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಒಟ್ಟಿನಲ್ಲಿ ಧ್ರುವ ದಂಪತಿ ಹಂಚಿಕೊಂಡಿರುವ ಈ ಖುಷಿಯ ವಿಚಾರವನ್ನ ಅಭಿಮಾನಿಗಳು ಕೇಳಿ ಫುಲ್ ಖುಷ್ ಆಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಯಾವ ಮಗುವಿನ ಆಗಮನ ಆಗುತ್ತೆ ಅಂತ ತಿಳಿಯಲು ಅಭಿಮಾನಿಗಳು ಉತ್ಸಕರಾಗಿದ್ದಾರೆ. ಅಲ್ದೇ ಕೆಲವರಂತು ಈಗಾಗ್ಲೇ ಮನೆಯಲ್ಲಿ ರಾಜಕುಮಾರಿ ಇದ್ದಾಳೆ ಅವಳ ಜೊತೆಗೆ ಯುವ ರಾಜ ಬರಲಿ ಅಂತಿದ್ದಾರೆ. ಇನ್ನು ಕೆಲವ್ರು ಯಾವ ಮಗುವಾದ್ರೂ ಪರ್ವಾಗಿಲ್ಲ ತಾಯಿ ಮಗು ಅರೋಗ್ಯವಾಗಿದ್ರೆ ಸಾಕು ಅಂತ ತರೆವರಿ ಕಮೆಂಟ್ಸ್ ಮಾಡ್ತಿದ್ದಾರೆ. 

ಇದನ್ನೂ ಓದಿ: ತನ್ನ ಫ್ಯಾನ್ಸ್ ಗಾಗಿ ಒಂದು ಕೋಟಿ ದಾನ ಮಾಡಿದ ವಿಜಯ್ ದೇವರಕೊಂಡ; ಕಷ್ಟದಲ್ಲಿರುವ 100ಅಭಿಮಾನಿಗಳ ನ್ನ ಹುಡುಕಲು ಶುರು

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram