ಡಿಜಿಟಲ್ ವ್ಯವಸ್ಥೆ ಬಂದಾಗಿನಿಂದ ಎಲ್ಲಾ ಕಡೆಯಲ್ಲಿ ಕ್ಯಾಶ್ ಬಳಸುವವರ ಸಂಖ್ಯೆ ತೀರಾ ಕಡಿಮೆ ಆಗಿದೆ. ಆದರೆ ಕೆಲವು ಕಡೆಯಲ್ಲಿ ಈಗಲೂ ಸಹ ಕ್ಯಾಶ್ ತೆಗೆದುಕೊಳ್ಳುತ್ತಾರೆ. ನಾವು ಡಿಜಿಟಲ್ ಪೇಮೆಂಟ್ ಮಾಡಬೇಕು ಎಂದರೆ ಕೆಲವು ಕಡೆಗಳಲ್ಲಿ ಡಿಜಿಟಲ್ ವ್ಯವಸ್ಥೆ ಇರುವುದಿಲ್ಲ. ಅದರಲ್ಲೂ ಮುಖ್ಯವಾಗಿ ಬಸ್ ನಲ್ಲಿ ಮತ್ತು ರೈಲ್ವೆ ಜನರಲ್ ಬೋಗಿಯಲ್ಲಿ. ನೀವು ರೈಲ್ವೆಯಲ್ಲಿ ಜನರಲ್ ಬೋಗಿಯಲ್ಲಿ ಪ್ರಯಾಣ ಮಾಡುತ್ತಾ ಇದ್ದರೆ ನೀವು ಟಿಕೆಟ್ ಕೌಂಟರ್ ನಲ್ಲಿ ಹಣ ನೀಡಿ ನಂತರ ನೀವು ರೈಲ್ವೆ ಹತ್ತಬೇಕು. ಆದರೆ ಈಗ ಹೊಸದಾಗಿ ರೈಲ್ವೆ ಇಲಾಖೆಯು ಜನರಲ್ ಬೋಗಿಯಲ್ಲಿ ಹೋಗುವ ಪ್ರಯಾಣಿಕರಿಗೆ ಡಿಜಿಟಲ್ ಪಾವತಿ ವ್ಯವಸ್ಥೆ ಕಲ್ಪಿಸುತ್ತಿದೆ. ನೀವು ಇನ್ನೂ ಆನ್ಲೈನ್ ಮೂಲಕವೂ ಸಹ ಜನರಲ್ ಟಿಕೆಟ್ ಪಡೆಯುವ ವ್ಯವಸ್ಥೆಯನ್ನು ಸಹ ರೈಲ್ವೆ ಇಲಾಖೆ ಪರಿಚಯಿಸಿದೆ.
QR code ಬಳಸಿ ಹಣ ಪಾವತಿ ಮಾಡಿ:- ನೀವು ಟಿಕೆಟ್ ಕೌಂಟರ್ ಬಳಿಗೆ ಹೋದರೆ ನಿಮಗೆ ಎಲ್ಲ ಅಂಗಡಿಗಳಂತೆ ನಿಮಗೆ QR code ವ್ಯವಸ್ಥೆ ಇರುತ್ತದೆ. ನೀವು ಈ code ಬಳಸುವ ಮೂಲಕ ನಿಮ್ಮ ಫೋನ್ ಪೇ, ಗೂಗಲ್ ಪೇ ಅಂತಹ ಡಿಜಿಟಲ್ ಅಪ್ಲಿಕೇಶನ್ ಗಳ ಮೂಲಕ ನಿಮಿಷಗಳಲ್ಲಿ ಹಣ ವರ್ಗಾವಣೆ ಮಾಡಬಹುದು. ಆದರೆ ನೀವು ಹಣ ಪಾವತಿ ಮಾಡುವ ಮೊದಲು ನಿಮ್ಮ ಅಕೌಂಟ್ ನಲ್ಲಿ ಅಥವಾ wallet ನಲ್ಲಿ ಹಣ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಸೌಲಭ್ಯವೂ ಯಾವಾಗಿನಿಂದ ಜಾರಿಯಾಗಲಿದೆ?
ರೈಲ್ವೆ ಇಲಾಖೆಯ ಈ ಡಿಜಿಟಲ್ ಪಾವತಿ ಸೌಲಭ್ಯವು ಇದೆ ಬರುವ ಏಪ್ರಿಲ್ ಒಂದರಿಂದ ಆರಂಭ ಆಗಲಿದೆ ಏಪ್ರಿಲ್ ಒಂದರಿಂದ ನೀವು ನಿಮ್ಮ ಮೊಬೈಲ್ ನಿಂದಾ ಜನರಲ್ ಟಿಕೆಟ್ ದರವನ್ನು ಆನ್ಲೈನ್ ಮೂಲಕ ಪಾವತಿ ಮಾಡಬಹುದು. ದೇಶದಾದ್ಯಂತ ಈ ವ್ಯವಸ್ಥೆಯು ಜಾರಿಗೆ ಬರಲಿದ್ದು ನಿಮ್ಮ ಹತ್ತಿರದ ರೈಲ್ವೆ ನಿಲ್ದಾಣದಲ್ಲಿ ಸಹ ಈ ವ್ಯವಸ್ಥೆ ಲಭ್ಯವಿರುತ್ತದೆ.
ಡಿಜಿಟಲ್ ಪಾವತಿ ವ್ಯವಸ್ಥೆಯಿಂದ ಏನು ಉಪಯೋಗ?
1) ಚಿಲ್ಲರೆ ಸಮಸ್ಯೆ ನಿವಾರಣೆ:- ಸಾಮಾನ್ಯವಾಗಿ ಜನರಲ್ ಬೋಗಿಯ ದರವು ಕಡಿಮೆ ಇರುತ್ತದೆ. ನಾವು ಕೌಂಟರ್ ನಲ್ಲಿ 500 ರೂಪಾಯಿ ಅಥವಾ 200 ರೂಪಾಯಿ ಕೊಟ್ಟರೆ ಕೌಂಟರ್ ನಲ್ಲಿ ಇರುವವರು ನಮಗೆ ಚಿಲ್ಲರೆ ನೀಡಿ ಎಂದು ಹೇಳುತ್ತಾರೆ. ಆದರೆ ಅವರಿಗೂ ಬರುವ ಎಲ್ಲಾ ಪ್ರಯಾಣಿಕರಿಗೂ ಚಿಲ್ಲರೆ ಕೊಡಲು ಸಾಧ್ಯವಿಲ್ಲ ಹಾಗೆಯೇ ನಮಗೆ ಸಹ ಎಲ್ಲಾ ಸಲವು ಚಿಲ್ಲರೆ ಇರುವುದಿಲ್ಲ. ಡಿಜಿಟಲ್ ವ್ಯವಸ್ಥೆಯಿಂದ ನಮಗೆ ಚಿಲ್ಲರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.
2) ಸಮಯ ಉಳಿತಾಯ:- ನಿಮ್ಮ ಹಣವನ್ನು ಪಾವತಿಸಿ ನೀವು ticket ಪಡೆಯಬೇಕು ಎಂದರೆ ನೀವು ಕ್ಯು ನಲ್ಲಿ ನಿಲ್ಲಬೇಕು. ಆದರೆ ಡಿಜಿಟಲ್ ಪಾವತಿ ವ್ಯವಸ್ಥೆ ಯಿಂದ ತುಂಬಾ ಸಮಯದ ವರೆಗೆ ಕ್ಯು ನಲ್ಲಿ ನಿಲ್ಲುವುದು ತಪ್ಪುತ್ತದೆ.
3) ರೈಲು ತಪ್ಪುವ ಸಾಧ್ಯತೆ ಕಡಿಮೆ:- ನೀವು ticket ಕೌಂಟರ್ ನಲ್ಲಿ ಇರುವಾಗ ನಿಮಗೆ ಕೆಲವು ಸಾಲ ರೈಲು ತಪ್ಪುವ ಸಾಧ್ಯತೆ ಇರುತ್ತದೆ. ಇದರಿಂದ ನಿಮ್ಮ ಕೆಲಸಗಳು ಅಥವಾ ನೀವು ತಲುಪಬೇಕಾದ ಸ್ಥಳವನ್ನು ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗದೇ ಇರಬಹುದು. ಡಿಜಿಟಲ್ ವ್ಯವಸ್ಥೆಯ ನಿಮಗೆ ಸಹಾಯ ಆಗುತ್ತದೆ.
ಡಿಜಿಟಲ್ ಪಾವತಿಯ ವ್ಯವಸ್ಥೆ ಇದ್ದರೂ ಇದನ್ನು ಬಳಸಲು ತಿಳಿಯದೆ ಇದ್ದವರು ಅಥವಾ ಡಿಜಿಟಲ್ ಪಾವತಿ ವ್ಯವಸ್ಥೆ ಹೊಂದಿರದೆ ಇದ್ದವರು ಕ್ಯಾಶ್ ಪಾವತಿಸಿ ಮೊದಲಿನಂತೆ ಟಿಕೆಟ್ ಪಡೆಯುವ ವ್ಯವಸ್ಥೆಯು ಇರಲಿದೆ.
ಇದನ್ನೂ ಓದಿ: ಬ್ಯಾಂಕ್ ನಿಯಮಗಳಲ್ಲಿ ಬದಲಾವಣೆ, ಇನ್ನು ಮುಂದೆ ಕಾರು ಖರೀದಿಸುವುದು ಅಷ್ಟು ಸುಲಭವಲ್ಲ