ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆಯು ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು ಎಂದು ಸದುದ್ದೇಶದಿಂದ ಹುಟ್ಟಿಕೊಂಡ ಒಂದು ಸಂಸ್ಥೆಯಾಗಿದೆ. ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಹಲವಾರು ಕಾರ್ಯಕ್ರಮಗಳನ್ನು ಈಗಾಗಲೇ ಈ ಸಂಸ್ಥೆ ಮಾಡಿದ್ದಾರೆ. ಜನರಲ್ಲಿ ಬಾಲಕಾರ್ಮಿಕ ಪದ್ಧತಿಯ ಬಗ್ಗೆ ಜಾಗೃತಿಯನ್ನು ಮೂಡಿಸಿದೆ. ಈಗ ಅದೇ ಸಂಸ್ಥೆಯಲ್ಲಿ ಅಕೌಂಟೆಂಟ್ ಹುದ್ದೆ ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಆಫ್ಲೈನ್ ಹಾಗೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಅರ್ಜಿ ಸಲ್ಲಿಸುವ ಮೊದಲು ಗಮನಿಸಬೇಕಾದ ಅಂಶಗಳು:- ಅರ್ಜಿ ಹಾಕುವಾಗ ಹುದ್ದೆಯ ಬಗ್ಗೆ ಪೂರ್ತಿ ಮಾಹಿತಿಯನ್ನು ಪಡೆದುಕೊಳ್ಳಬೇಕು. ವಿದ್ಯಾರ್ಹತೆ ಹಾಗೂ ಸ್ಟಾರ್ಟಿಂಗ್ salary, ಅರ್ಜಿ ಸಲ್ಲಿಸುವ ವಯಸ್ಸು, ಅರ್ಜಿಗೆ ನೀಡಬೇಕಾದ ಶುಲ್ಕ ಹಾಗೂ ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತದೆ ಎಂಬುದರ ಪೂರ್ಣ ಜ್ಞಾನ ಇರಬೇಕು. ಹಾಗಾದರೆ ಹುದ್ದೆಯ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿಯೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗೆ ಅರ್ಜಿ ಸಲ್ಲಿಸುವವರು ಶೈಕ್ಷಣಿಕ ಅರ್ಹತೆ ಏನಿರಬೇಕು?: ಧಾರವಾಡ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆಯ ನೇಮಕಾತಿ ಅಧಿಸೂಚನೆಯಲ್ಲಿ ಹೇಳಿರುವಂತೆ, ಅರ್ಜಿ ಸಲ್ಲಿಸುವವರು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ಬಿ.ಕಾಂ ಪದವಿಯನ್ನು ಮುಗಿಸಿರಬೇಕು.
ಅರ್ಜಿ ಸಲ್ಲಿಸುವವರ ವಯಸ್ಸಿನ ಮಿತಿ: ಬಾಲ ಕಾರ್ಮಿಕ ಪದ್ದತಿಯನ್ನು ವಿರೋಧಿಸುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಕನಿಷ್ಠ 21ವರ್ಷ ಪೂರ್ಣವಾಗಿರಬೇಕು. ಹಾಗೆ ಗರಿಷ್ಠ 40 ವರ್ಷಕ್ಕು ಹೆಚ್ಚಿನ ವಯಸ್ಸು ಆಗಿರಬಾರದು. ಮೀಸಲಾತಿ ನಿಯಮದ ಪ್ರಕಾರ ಈ ಹುದ್ದೆಗೆ ವಯಸ್ಸಿನ ಸಡಿಲಿಕೆ ಇದೆ.
ಇದನ್ನೂ ಓದಿ: ನೀಟ್ ಪರೀಕ್ಷೆ ಮತ್ತು ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ..
ಅರ್ಹತೆಗಳು:-
ಅಭ್ಯರ್ಥಿಯು ಕಡ್ಡಾಯವಾಗಿ b. com ಪದವಿ ಮುಗಿಸಿರಬೇಕೂ. accountant ಹುದ್ದೆಯಲ್ಲಿ ಕನಿಷ್ಠ 5 ವರ್ಷ ಅನುಭವ ಇರಬೇಕು. ಸರ್ಕಾರಿ ಲೆಕ್ಕ ಪತ್ರಗಳು ಮತ್ತು ಬ್ಯಾಂಕ್ ವ್ಯವಹಾರಗಳಿಗೆ ಸಂಬಂಧ ಪಟ್ಟ ಮಾಹಿತಿಯನ್ನು ಪಡೆದಿರಬೇಕು. ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಮಾತನಾಡಲಿ ಮತ್ತು ಬರೆಯಲು ಬರಬೇಕು. ಕಂಪ್ಯೂಟರ್ ಜ್ಞಾನ ಇರಬೇಕು. ಹಾಗೂ tally software ಉಪಯೋಗಿಸುವ ಕೌಶಲ್ಯ ಹೊಂದಿರಬೇಕು. ಕಂಪ್ಯೂಟರ್ ನಲ್ಲಿ ಲೆಕ್ಕಪತ್ರಗಳನ್ನು ಸರಿಯಾಗಿ ಜೋಡಿಸಿ ಇಡುವ ಕೆಲಸದ ಬಗ್ಗೆ ಪೂರ್ಣ ಮಾಹಿತಿ ಇರಬೇಕು.
ಈ ಉದ್ಯೋಗಕ್ಕೆ ಮಾಸಿಕ ₹19,917 ವೇತನ ನೀಡಲಾಗುವುದು. ಉದ್ಯೋಗದ ಸ್ಥಳ ಧಾರವಾಡ. ಅಭ್ಯರ್ಥಿಗಳ ಮೆರಿಟ್ ಪಟ್ಟಿ ಮತ್ತು ಅವರ ಅನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಯನ್ನು ಒಂದು ವರ್ಷದ ಕರಾರಿನ ಮೇಲೆ ನೆಮಿಸಿಕೊಳ್ಳಲಾಗುವುದು. ಒಂದು ವರ್ಷದ ಕರಾರಿಗೆ ಒಪ್ಪಿಗೆ ಇರುವವರು ಮಾತ್ರ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ವಿಧಾನ :- ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಯೋಜನಾ ನಿರ್ದೇಶಕರ ಕಚೇರಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ ,ಕಾರ್ಮಿಕ ಭವನ, ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಧಾರವಾಡ ವಿಭಾಗ, ಹುಬ್ಬಳ್ಳಿ 1ನೇ ಮಹಡಿ, ಅಕ್ಷಯ ಪಾರ್ಕ್, ಪ್ರಿಯದರ್ಶಿನಿ ಕಾಲೋನಿ, ಮಹೇಶ ಪಿ.ಯು. ಕಾಲೇಜು ರಸ್ತೆ ಹುಬ್ಬಳ್ಳಿ ಈ ವಿಳಾಸಕ್ಕೆ 28-02-2024 ನೇ ತಾರೀಖಿನಂದು 5 ಗಂಟೆಯ ಒಳಗೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಧಾರವಾಡ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆಯನ್ನು ಸಂಪರ್ಕ ಮಾಡಬೇಕು ಇಲ್ಲವೇ ಇಲಾಖೆಯ ಅಧಿಕೃತ ವೆಬ್ಸೈಟ್ http://dharwad.nic.in ಗೆ ಭೇಟಿನೀಡಿ ಹುದ್ದೆಯ ಬಗ್ಗೆ ಪೂರ್ಣ ಮಾಹಿತಿ ಪಡೆಯಬಹುದು. ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ